Breaking News

Breaking News

ರನ್‌ವೇನಿಂದ ಟೇಕ್ ಆಫ್ ಬೆನ್ನಲ್ಲೇ ಪತನಗೊಂಡ PA-31T1 ವಿಮಾನ,

PA-31T1 ವಿಮಾನ ರನ್‌ವೇನಿಂದ ಮೇಲಕ್ಕೆ ಹಾರಿದ ಬೆನ್ನಲ್ಲೇ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಕೆಲವೇ ಕ್ಷಣದಲ್ಲಿ ವಿಮಾನ ಪತನಗೊಂಡಿದೆ.ವಿಮಾನ ನಿಲ್ದಾಣದ ಕೆಲ ದೂರದಲ್ಲಿ ನಿಂತಿರುವ ಹಲವರು ವಿಮಾನ ಟೇಕ್ ಆಫ್ ವಿಡಿಯೋ ಸೆರೆ ಹಿಡಿದ್ದಾರೆ. ಆದರೆ ಈ ವಿಮಾನ ಈ ರೀತಿ ಪತನಗೊಳ್ಳಲಿದೆ ಅನ್ನೋದು ಊಹಿಸಿರಲಿಲ್ಲ. ವಿಮಾನ ನೇರವಾಗಿ ದೂರದಲ್ಲಿ ನಿಂತಿದ್ದವರತ್ತ ತಿರುಗಿದೆ. ಈ ವೇಳೆ ಹಲವರು ಚೀರಾಡಿದ್ದಾರೆ. ಕೆಲವೇ ಕ್ಷಣದಲ್ಲಿ ವಿಮಾನವೇ ಭಸ್ಮವಾಗಿದೆ. ಸಿವಿಲ್ ಏರೋನಾಟಿಕ್ಸ್ ವಿಮಾನ ನಿಲ್ದಾಣದಲ್ಲಿ ತುರ್ತು …

Read More »

ಪೊಲೀಸ್​​​​ ಪೇದೆಗಳ ಟೋಪಿ,ಬದಲಾವಣೆ ಅ.28ರಂದು ಹೊಸ ಕ್ಯಾಪ್​​​​ ವಿತರಣೆ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್‌ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ‘ಸ್ಲೋಚ್ ಕ್ಯಾಪ್’ಗೆ ಪರ್ಯಾಯವಾಗಿ ತೆಲಂಗಾಣ ಪೊಲೀಸರ ಮಾದರಿಯ ತೆಳುವಾದ ಟೋಪಿಯನ್ನು ಆಯ್ಕೆ ಮಾಡಲಾಗಿದ್ದು, ಅ.28 ರಂದು ಪಿ-ಕ್ಯಾಪ್ ವಿತರಣೆಗೆ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ.ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಾಗಿ ದಿನಾಂಕ 28-10-2025 ರಂದು ಬೆಂಗಳೂರು, ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರವರ ಸಮ್ಮುಖದಲ್ಲಿ ಪಿ-ಕ್ಯಾಪ್ ಘೋಷಣೆ ಮತ್ತು ವಿತರಣಾ …

Read More »

ಪೆಟ್ರೋಲ್ ಬಂಕ್ ಸಿಬ್ಬಂದಿ ಕೆನ್ನೆಗೆ ಹೊಡೆದ ರಾಜಸ್ಥಾನದ ಅಧಿಕಾರಿಗೆ ವಾಪಾಸ್ ಕಪಾಳಮೋಕ್ಷ

ರಾಜಸ್ಥಾನದ ಭಿಲ್ವಾರದಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಒಬ್ಬ ಉದ್ಯೋಗಿಗೆ ಕಪಾಳಮೋಕ್ಷ ಮಾಡಿದ ನಂತರ ಉಂಟಾದ ವಾಗ್ವಾದವು ಹೊಡೆದಾಟಕ್ಕೆ ಕಾರಣವಾಯಿತು.ಇದರಿಂದಾಗಿ ಅಲ್ಲಿದ್ದ ಸಿಬ್ಬಂದಿ ಆ ಅಧಿಕಾರಿಗೆ ಕಪಾಳಮೋಕ್ಷ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಪೋಲಿಸರು ಮಧ್ಯಪ್ರವೇಶಿಸಿ ಮೂವರು ಪೆಟ್ರೋಲ್ ಪಂಪ್ ನೌಕರರನ್ನು ಬಂಧಿಸಿದ್ದಾರೆ. ಪ್ರಸ್ತುತ ಪ್ರತಾಪ್‌ಗಢದ ಎಸ್‌ಡಿಎಂ ಛೋಟು ಲಾಲ್ ಶರ್ಮಾ ತಮ್ಮ ಪತ್ನಿ ದೀಪಿಕಾ ವ್ಯಾಸ್ ಅವರೊಂದಿಗೆ ಪೆಟ್ರೋಲ್ ಪಂಪ್‌ಗೆ ಭೇಟಿ ನೀಡಿದಾಗ ವಾಗ್ವಾದ ಪ್ರಾರಂಭವಾಯಿತು. ಪೆಟ್ರೋಲ್ …

Read More »

ಶಿಕ್ಷಕಿಯ ಮೃತದೇಹ ಬಾವಿಯಲ್ಲಿ ಪತ್ತೆ

ಬೆಳ್ತಂಗಡಿ ಶಾಲಾ ಶಿಕ್ಷಕಿಯೊಬ್ಬರ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಅರಸಿನಮಕ್ಕಿಯ ಬೂಡುಮುಗೇರು ಎಂಬಲ್ಲಿ ನಡೆದಿದೆ.ಮೃತರನ್ನು ಅರಸಿನಮಕ್ಕಿ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ತೇಜಸ್ವಿನಿ (23) ಎಂದು ಗುರುತಿಸಲಾಗಿದೆ.ಇವರು ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಕಾಲು ಜಾರಿ ಬಾವಿಗೆ ಬಿದ್ದರೇ ಎನ್ನುವ ಮಾಹಿತಿ ಇನ್ನೂ ತಿಳಿದು ಬಂದಿಲ್ಲ, ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ತಾಯಿ ಬಳಿ ಮಲಗಿದ್ದ ಗಂಡು ಮಗು ಕದಿಯೋಕೆ ಯತ್ನಿಸಿದ ಲೇಡಿ ಅಂದರ್‌

ಡೆಸ್ಕ್‌:ಆರು ತಿಂಗಳ ಗಂಡು ಮಗುವನ್ನು ಕದ್ದಯ್ಯುತ್ತಿದ್ದ ಮಹಿಳೆಯನ್ನು ರೈಲ್ವೇ ಪೊಲೀಸರು ಬಂಧಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.ಬುಧವಾರ ರಾತ್ರಿ ಮಗುವಿನೊಂದಿಗೆ ಪೋಷಕರು ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ಬಳಿ ಮಲಗಿದ್ದರು. ಈ ವೇಳೆ ಮಹಿಳೆಯೊಬ್ಬಳು ಮಗುವನ್ನು ಕದ್ದುಕೊಂಡು ಹೋಗಿದ್ದಳು.ನಿದ್ರೆಯಿಂದ ಪೋಷಕರು ಎಚ್ಚರಗೊಂಡ ಮೇಲೆ ಮಗು ಕಾಣೆಯಾಗಿರುವುದು ಗೊತ್ತಾಗಿದೆ. ತಾಯಿ ಆಕ್ರಂದನ ಕಂಡ ರೈಲ್ವೆ ಪೊಲೀಸರು ವಿಚಾರಿಸಿದ್ದಾಗ ಮಗು ಕಾಣೆ ಆಗಿರುವ ವಿಚಾರವನ್ನು ತಿಳಿಸಿದ್ದಾರೆ.ತಕ್ಷಣವೇ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ನಡು ವಯಸ್ಸಿನ …

Read More »

ದೀಪಾವಳಿ ಹಬ್ಬದಂದು ಜೂಜಾಟ ಅಡ್ಡೆಗಳ ಮೇಲೆ ಪೊಲೀಸ್ ದಾಳಿ

ದೀಪಾವಳಿ ಹಬ್ಬದಂದು ಜೂಜಾಟ ಅಡ್ಡೆಗಳ ಮೇಲೆ ದಾಳಿ ನಡೆಸಿದ ಜಿಲ್ಲಾ ಪೊಲೀಸರು 463 ಜೂಜುಕೋರರ ವಿರುದ್ಧ 61 ಪ್ರಕರಣ ದಾಖಲಿಸುವ ಮೂಲಕ ಒಟ್ಟು 5,15,650 ಹಣವನ್ನು ವಶ ಪಡಿಸಿಕೊಂಡಿದ್ದಾರೆ.ಜಿಲ್ಲೆಯ ನಗರ, ಗ್ರಾಮೀಣ ಹಾಗೂ ವಿವಿಧ ತಾಲೂಕು ಸೇರಿ 12 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 463 ಜೂಜುಕೋರರ ವಿರುದ್ಧ 61 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಗೆ ಕ್ರಮ ಜರುಗಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.

Read More »

ಬೆಂಗಳೂರಿನಲ್ಲಿ ಭಾರೀ ಮಳೆಗೆ ಮುರಿದು ಬಿದ್ದ ಕೊಂಬೆ: ಕೂದಲೆಳೆ ಅಂತರದಲ್ಲಿ ಮೂವರು ಪಾರು

ಕರ್ನಾಟಕದಲ್ಲಿ ಹಿಂಗಾರು ಮಳೆಯ ಆರ್ಭಟ ಜೋರಾಗಿದೆ. ನಿರಂತರ ಮಳೆಗೆ ಬೆಂಗಳೂರು ನಗರದಲ್ಲಿ ಹಲವೆಡೆ ಮರಗಳು ಧರೆಗೆ ಉರುಳಿವೆ. ಏಕಾಏಕಿ ಬೃಹತ್ ಮರದ ಕೊಂಬೆ ರಸ್ತೆಗೆ ಉರುಳಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಮೂವರು ಪಾರಾಗಿದ್ದಾರೆ.ನಗರದಲ್ಲಿ ರಾತ್ರಿ ಸುರಿದ ಮಳೆಗೆ ಅಲಿ ಆಸ್ಗರ್ ರಸ್ತೆಯ ಪೊಲೀಸ್ ಕಮಿಷನರ್​​ ಕಚೇರಿ ಹಿಂದಿನ ಗೇಟ್​​ ಬಳಿ ಬೆಳಗ್ಗೆ 7:30 ರ ವೇಳೆಗೆ ಬೃಹತ್ ಮರದ ಕೊಂಬೆ ಏಕಾಏಕಿ ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದೆ. ಓರ್ವ …

Read More »

ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ : `ಹೆಣ್ಣು ಭ್ರೂಣ ಲಿಂಗ’ ಪತ್ತೆ ಹಚ್ಚಿ ಹತ್ಯೆ.!

ಮೈಸೂರು ತಾಲೂಕಿನ ಹುನಗನಹಳ್ಳಿಯಲ್ಲಿ ದಯೆಯಿಲ್ಲದೇ ಗರ್ಭದಲ್ಲೇ ಶಿಶುಗಳನ್ನು ಕೊಲ್ಲುವ ಗ್ಯಾಂಗ್ ಪತ್ತೆಯಾಗಿದ್ದು, ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಸಂಬಂಧ ಇದೀಗ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದೆ.ಮೈಸೂರು ತಾಲೂಕಿನ ಹುನಗನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ಮಾಡಿ ಹೆಣ್ಣು ಭ್ರೂಣ ಲಿಂಗ ಪತ್ತೆಯಾದ್ರೆ ಭ್ರೂಣವನ್ನು ಹತ್ಯೆ ಮಾಡುತ್ತಿದ್ದರು. ಗ್ರಾಮೀಣ ಭಾಗದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸ್ಕ್ಯಾನಿಂಗ್ ಮಾಡುತ್ತಿದ್ದರು. ಸ್ಕ್ಯಾನಿಂಗ್ ಬಂದಿದ್ದ ಇಬ್ಬರು ಗರ್ಭಿಣಿಯರನ್ನು …

Read More »

ಹಾಸ್ಟೆಲ್ ಕಟ್ಟಡದಿಂದ ನಿಗೂಢವಾಗಿ ಬಿದ್ದ ಬಾಲಕಿ: ಶಿಕ್ಷಕರ ವಿರುದ್ಧ ಕೇಸ್ ದಾಖಲು

ತುಮಕೂರು -ಹಾಸ್ಟೆಲ್ ಕಟ್ಟಡದಿಂದ 15 ವರ್ಷದ ಬಾಲಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಇಂಟರ್ ನ್ಯಾಷನಲ್ ಶಾಲೆಯ ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಗಿರಿಗೌಡನಪಾಳ್ಯ ಗ್ರಾಮದಲ್ಲಿರುವ ಅರವಿಂದ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಘಟನೆ ನಡೆದಿದೆ.ಶಿಕ್ಷಕರಾದ ಅಂಥೋನಿ, ಮತ್ತು ಶಿವಕುಮಾರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ಅಕ್ಟೋಬರ್ 13ರಂದು ಕಟ್ಟಡದಿಂದ ನಿಗೂಢವಾಗಿ ಬಾಲಕಿ ಮೋಕ್ಷಾ ಬಿದ್ದಿದ್ದಳು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೋಕ್ಷಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿ ಆರೋಗ್ಯದಲ್ಲಿ ಚೇತರಿಕೆ …

Read More »

ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಕೇಸ್ ದಾಖಲು

ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ನಜೀರ್ ಮಂಗಳೂರು ಮತ್ತು ಗಾಂಧಿಯನ್ ನೆಹರುವಿಯನ್ ಮಗರ್ ಎಂಬ ಎರಡು ಫೇಸ್ಬುಕ್ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ಅಕ್ಟೋಬರ್ 21ರಂದು ಮಧ್ಯಾಹ್ನ 3 ಗಂಟೆಗೆ ಸಾಮಾಜಿಕ ಜಾಲತಾಣ ಮಾನಿಟರಿಂಗ್ ನಿಗಾವಣಿ ಕರ್ತವ್ಯ ಹಿನ್ನೆಲೆಯಲ್ಲಿ ಫೇಸ್ಬುಕ್ ವೀಕ್ಷಿಸುವಾಗ ನಜೀರ್ ಮಂಗಳೂರು ಎಂಬ ಫೇಸ್ಬುಕ್ ಖಾತೆಯಿಂದ ಎರಡು ಖಾತೆಗಳಿಗೆ ಟ್ಯಾಗ್ ಮಾಡಿರುವ ಖಾತೆಯಿಂದ ಎಐ ವಿಡಿಯೋ …

Read More »