Breaking News

Breaking News

ಬಾಗಲಕೋಟೆ: ಮನೆ ಬಾಗಿಲೆದುರು ಹಚ್ಚಿದ್ದ ದೀಪದಿಂದ ಅವಘಡ; 7 ಜನರಿಗೆ ಗಾಯ, ಮನೆ ಸುಟ್ಟು ಕರಕಲು!

ದೇಶಾದ್ಯಂತ ದೀಪಾವಳ ಹಬ್ಬದ ಸಂಭ್ರಮ ಮನೆ ಮಾಡಿದೆ.  ಆದರೆ ಈ ವೇಳೆ ಇತ್ತ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್​​​ನಲ್ಲಿರುವ ಮನೆಯೊಂದರ ಬಾಗಿಲು ಎದುರು ಹಚ್ಚಿದ್ದ ದೀಪದಿಂದ ಅವಾಂತರ ಸಂಭವಿಸಿದೆ. ಪರಿಣಾಮ ಬೆಂಕಿಯ ಜಳ ತಗುಲಿ ಏಳು ಜನರಿಗೆ ಗಾಯಗಳಾಗಿವೆ.ಅದೃಷ್ಟವಶಾತ್​​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More »

ಅಣ್ಣ ತಂಗಿ ನೇಣಿಗೆ ಶರಣು-ಕಾರಣ ನಿಗೂಢ

ಅಣ್ಣ-ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಲೇಬರ್ ಕಾಲೋನಿಯ ಜೋಪಡಿಯಲ್ಲಿ ನಡೆದಿದೆ. ಮಲ್ಲೇಶ್ (23) ಮತ್ತು ಪವಿತ್ರಾ (17) ಮೃತರಾಗಿದ್ದು, ಪವಿತ್ರಾ ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗಿದೆ.ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು ಅಕ್ಕ ಮತ್ತು ತಂಗಿಯರ ಮಕ್ಕಳಾಗಿರೋ ಇವರಿಬ್ಬರು ಯಾಕೆ ಇಂತಹ ನಿರ್ಧಾರ ತೆಗೆದುಕೊಂಡರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.ಬೇರೊಂದು ಮನೆಯಲ್ಲಿ ಕೆಲಸ ಮಾಡಿ, ಉಡುಪಿಯ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಪವಿತ್ರಾ ಪ್ರಥಮ ಪಿಯುಸಿ …

Read More »

ಚಾಲಕನ ಮೇಲೆ ಹಲ್ಲೆ ಮಾಡಿದ ಇಬ್ಬರು ಟ್ರಾಫಿಕ್ ಪೊಲೀಸ್ ಸಸ್ಪೆಂಡ್…

ಚಾಲಕನ ಜೊತೆ ಟ್ರಾಫಿಕ್ ಪೊಲೀಸರ ಗೂಂಡಾ ವರ್ತನೆ ಆಟೋ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಇಬ್ಬರು ಟ್ರಾಫಿಕ್ ಪೊಲೀಸರನ್ನು ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ನಿನ್ನೆ ಸಂಜೆ ಆಟೋ ಚಾಲಕ ಬಶೀರ್ ಎಂಬವರು ಸಮವಸ್ತ್ರ ಧರಿಸಿದೇ ಆಟೋ ಚಲಾಯಿಸಿಕೊಂಡು ಬಂದಿದ್ದಾರೆ. ಈ ವೇಳೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್‌ ಠಾಣಾ ಎಎಸ್‌ಐ ಚಿದಾನಂದ ರೈ, ಮತ್ತು ,ಸಿಪಿಸಿ ಶ್ರೀ ಶೈಲ ಎಂ ಕೆ …

Read More »

ಪ್ರೇಯಸಿ ಜೊತೆ ಬೆಂಗಳೂರಿಗೆ ಬಂದಿದ್ದ ಯುವಕ ಲಾಡ್ಜ್’ ನಲ್ಲಿ ಶವವಾಗಿ ಪತ್ತೆ.!

ಪುತ್ತೂರಿನಿಂದ ಬಂದಿದ್ದ ಯುವಕ ತಕ್ಷಿತ್ ವಿರಾಜಪೇಟೆಯ ಯುವತಿ ರಕ್ಷಿತಾ ಜೊತೆ ಲಾಡ್ಜ್ ಮಾಡಿಕೊಂಡಿದ್ದನು. ಯುವಕನ ಸಾವಿಗೂ ಮುನ್ನ ಯುವತಿ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾಳೆ ಎನ್ನಲಾಗಿದೆ.ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿದ ಪ್ರೇಮಿಗಳು ಒಟ್ಟಿಗೆ ಊಟ ಮಾಡಿದ್ದರು. ನಂತರ ಇಬ್ಬರಿಗೆ ಫುಡ್ ಪಾಯ್ಸಿನ್ ಆಗಿ ಮಾತ್ರೆಗಳನ್ನು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಬಳಿಕ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾರೆ. ಆದರೆ ಯುವಕ ತಕ್ಷಿತ್ ಮಾತ್ರ ಮೃತಪಟ್ಟಿದ್ದಾನೆ.8 ದಿನವೂ ಊಟ ತರಿಸಿಕೊಂಡು …

Read More »

ನಗರ ಪೊಲೀಸ್ ವಿರುದ್ಧ ಅರ್ಭಟಿಸಿದ ರೌಡಿಶೀಟರ್ ಗಳ ವಿರುದ್ಧ ಕ್ರಮ ಒತ್ತಾಯ!!

ಮನೆಮುರಕರ ಕೂಟದಿಂದ ಸಿಪಿಐ ಹಾಗು ಪೊಲೀಸ್ ಇಲಾಖೆಗೆ ಕಳಂಕ ತರಲು ನಡಿತಾ ಸಂಚು? ಕೋರ್ಟ್ ನಲ್ಲಿ ಕೇಸ್ ಇದ್ದರು ಮಾಧ್ಯಮಗಳ ಮುಂದೆ ತಂದು ತಮ್ಮ ಬೆಳೆ ಬೆಯಿಸಿಕೊಳ್ಳಲು ಪ್ರಯತ್ನ ಆಯ್ತಾ..? ಅಚ್ಚಾ ,ಸಚ್ಚಾ,ಔರ ಲುಚ್ಚಾ ,ಅಂತಿರೋ ಮಹಾನುಭಾವರ ಹಿಸ್ಟರಿ ತೆಗೆದು ನೋಡಿ ಅಂತಿದಿ ಜನತೆ!!!! ಹುಬ್ಬಳ್ಳಿ: ನವನಗರ ಪೊಲೀಸ್ ಠಾಣೆಯಲ್ಲಿ ಸಿಪಿಐ ಶ್ರೀ ಸಮೀ ಉಲ್ಲಾ ಹಾಗೂ ನವನಗರ ಪೊಲೀಸ್ ಠಾಣೆಯ ಸಿಬ್ಬಂದಿಯ ಮೇಲೆ ಹುಬ್ಬಳ್ಳಿ ನಗರದ ರೌಡಿಶೀಟರ್ ಗಳು …

Read More »
Featured Video Play Icon

ಬ್ರೇಕಿಂಗ್ : ಆರ್.ಎಸ್.ಎಸ್ ಕಚೇರಿ ಮುತ್ತಿಗೆಗೆ ಯತ್ನ – ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು!!

ಹುಬ್ಬಳ್ಳಿ: ಸಚಿವ ಪ್ರಿಯಾಂಗ್ ಖರ್ಗೆ ಬೆದರಿಕೆ ಹಿನ್ನೆಲೆ ಆ‌ರ್ ಎಸ್ ಎಸ್ ಕಚೇರಿ ಎದುರು ಪ್ರತಿಭಟನೆಗೆ ಯತ್ನಿಸದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹುಬ್ಬಳ್ಳಿಯ ಕೇಶವಕುಂಜದ ಎದುರು ಕಾಂಗ್ರೆಸ್‌ ಪ್ರತಿಭಟನೆಗೆ ಯತ್ನಿಸಿದ್ದು, ಹುಬ್ಬಳ್ಳಿಯಲ್ಲಿ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲು ಮುಂದಾಗಿದ್ದು, ನಗರದ ಗೋಕುಲ ರಸ್ತೆಯಲ್ಲಿ ಪ್ರತಿಭಟನೆಗಿಳಿದ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಮಾರ್ಗ ಮಧ್ಯದಲ್ಲೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.50ಕ್ಕೂ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಿದ್ದು, …

Read More »

ಬಿಯರ್ ಬಾಟಲ್‌ನಿಂದ ಶುರುವಾದ ಮುಗಿಯದ ಜಗಳ!

ಡಬಲ್ ಮರ್ಡರ್ ಹಿಂದಿನ ರೋಚಕ ಕಥೆ ಹೊರಬಿದ್ದಿದೆ. ಕನ್ನೂರು ಗ್ರಾಮದ ಈರನಗೌಡ ಎಂಬುವವರ ಹತ್ಯೆಯೇ ಇಂದಿನ ಡಬಲ್ ಮರ್ಡರ್‌ಗೆ ಮುಖ್ಯ ಕಾರಣವಾಗಿದೆ. ಸಾಗರ್ ಮತ್ತು ಇಸಾಕ್ ಎಂಬ ಇಬ್ಬರು ಕುಚುಕು ಗೆಳೆಯರು ಈರನಗೌಡರ ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳಾಗಿದ್ದರು. ಈರನಗೌಡರನ್ನು ಅವರು ಬಿಯರ್ ಬಾಟಲ್‌ನಿಂದ ಹೊಡೆದು** ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಇತ್ತೀಚೆಗೆ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ನಂತರವೂ ಸಾಗರ್ ಮತ್ತು ಇಸಾಕ್ ಇಬ್ಬರೂ …

Read More »

ದೊಡ್ಡಪ್ಪನ ಕೊಲೆಗೆ ಸೇಡು- ಇಬ್ಬರು ಸ್ನೇಹಿತರ ಭೀಕರ ಡಬಲ್ ಮರ್ಡರ್!

ಸೇಡಿನ ಕಿಚ್ಚಿಗೆ ವಿಜಯಪುರ ಜಿಲ್ಲೆಯ ಶಾಂತವಾಗಿದ್ದ ಕನ್ನೂರು ಗ್ರಾಮದಲ್ಲಿ ಭೀಕರ ಡಬಲ್ ಮರ್ಡರ್ ನಡೆದಿದೆ. ದೊಡ್ಡಪ್ಪನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಇಬ್ಬರು ಸಹೋದರರು, ಹಂತಕರು ಎನ್ನಲಾದ ಕುಚುಕು ಗೆಳೆಯರನ್ನು ಕಲ್ಲುಗಳಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ.ಹತ್ಯೆಯ ನಂತರ, ಸೇಡಿನ ಸಂಕೇತವಾಗಿ ಮೃತದೇಹಗಳ ಪಕ್ಕದಲ್ಲೇ ಬಿಯರ್ ಬಾಟಲ್‌ಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಈ ಭೀಕರ ದ್ವಂದ್ವ ಕೊಲೆ ಪ್ರಕರಣ ವಿಜಯಪುರ ಜಿಲ್ಲೆಯಾದ್ಯಂತ ಭೀತಿ ಹುಟ್ಟಿಸಿದೆ. ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸಿದ ಇಬ್ಬರು …

Read More »

ಜೋಧಪುರ ಪೇಂಟ್ ಅಂಗಡಿಯಲ್ಲಿ ಭಾರಿ ಬೆಂಕಿ: ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವಾಯುಪಡೆ

ಚೋಪಾಸ್ನಿ ಹೌಸಿಂಗ್ ಬೋರ್ಡ್ ಪ್ರದೇಶದ ಪ್ರಕೃತಿ ಚಿಕಿತ್ಸೆ ಕೇಂದ್ರದ ಬಳಿ ಇರುವ ರಂಗ ಸಾಗರ್ ಎಂಬ ಅಂಗಡಿ ಮತ್ತು ಗೋದಾಮಿನಲ್ಲಿ ಗುರುವಾರ ರಾತ್ರಿ 9:45 ರ ಸುಮಾರಿಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ತೀವ್ರಗೊಳ್ಳುತ್ತಿದ್ದಂತೆ, ಮಧ್ಯಂತರ ಸ್ಫೋಟಗಳು ಅಗ್ನಿಶಾಮಕವನ್ನು ಅತ್ಯಂತ ಅಪಾಯಕಾರಿಯನ್ನಾಗಿ ಮಾಡಿತು. ಶಾಖ ಮತ್ತು ರಚನಾತ್ಮಕ ಹಾನಿಯಿಂದಾಗಿ ಕಟ್ಟಡದ ಮೇಲಿನ ಮಹಡಿಗಳು ಭಾಗಶಃ ಕುಸಿದಿವೆ. ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪಕ್ಕದ ಪ್ರಕೃತಿ ಚಿಕಿತ್ಸೆ ಕೇಂದ್ರದ ರೋಗಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ …

Read More »

ಮೊಬೈಲ್‌ ಸ್ಫೋಟ: ಯುವಕನಿಗೆ ಗಂಭೀರ ಗಾಯ!

ಮೊಬೈಲ್‌ ಸ್ಫೋಟದಿಂದಾಗಿ ಗಂಭೀರ ಗಾಯಗೊಂಡಿದ್ದ ನಗರದ 19 ವರ್ಷದ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಸ್ಪರ್ಶ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.ಮೊಬೈಲ್ ಸ್ಫೋಟದಿಂದ ಸುಟ್ಟ ಗಾಯಗಳ ಜತೆಗೆ ಶ್ವಾಸಕೋಶಕ್ಕೂ ತೀವ್ರ ತರದ ಹಾನಿಯಾಗಿತ್ತು. ಮಧುಮೇಹದಿಂದಾಗಿ ಚಯಾಪಚಯ ಪ್ರಕ್ರಿಯೆಗೆ ತೊಂದರೆ ಉಂಟಾಗಿತ್ತು. ಮಧುಮೇಹ ಇರುವುದರಿಂದ ದೇಹದ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿರುವುದನ್ನು ಮೊದಲೇ ಖಚಿತಪಡಿಸಿಕೊಂಡು, ಸೂಕ್ತ ಚಿಕಿತ್ಸಾ ಕ್ರಮ ಅನುಸರಿಸಲಾಯಿತು. ಇದರಿಂದ ಬಹುಅಂಗಾಂಗ ವೈಫಲ್ಯ ತಪ್ಪಿಸಲು ಸಾಧ್ಯವಾಯಿತು’ ಎಂದು ಆಸ್ಪತ್ರೆಯ ತುರ್ತು …

Read More »