ವಿಜಯಪುರ ನಗರದ ಆಲಕುಂಟೆ ನಗರದ ವೀರಭದ್ರ ಹಾಗೂ ಬಾಗಮ್ಮ ಹಡಪದ ದಂಪತಿಗೆ ಇಳಿವಯಸ್ಸಿನಲ್ಲಿ ಮಕ್ಕಳೇ ವಿಲನ್ ಆಗಿದ್ಧಾರೆ.5 ವರ್ಷದ ಹಿಂದೆ ಬಸವರಾಜಗೆ ಹೇರ್ ಕಟಿಂಗ್ ಸಲೂನ್ ಹಾಕಲು ಜೀವನಕ್ಕೆ ಆಸರೆಯಾಗಿದ್ದ ಮನೆಯ ಮೇಲೆ ನಗರದ ಜನ ಸ್ಮಾಲ್ ಫೈನಾನ್ಸ್ ನಲ್ಲಿ 5 ಲಕ್ಷ ಸಾಲ ಪಡೆದುಕೊಟ್ಟಿದ್ದರು. ಈ ಹಣ ಪಡೆದ ಬಸವರಾಜ ಸಲೂಲ್ ಶಾಪ್ ಹಾಕಿದ್ದ. ನಂತರ ಸಾಲದ ಕಂತು ಕಟ್ಟದೇ ತಂದೆ-ತಾಯಿ ಬಿಟ್ಟು ಬೇರೆಯಾಗಿದ್ದಾನೆ. ಇನ್ನು ಕಿರಿಯ ಮಗನೂ ಸಹ ತಂದೆ ತಾಯಿಯನ್ನು ಬಿಟ್ಟು ಬೇರೆ ಮನೆ ಮಾಡಿಕೊಂಡಿದ್ದಾನೆ.ಈ ಬಗ್ಗೆ ಜಿಲ್ಲಾಡಳಿತ ವೃದ್ಧ ದಂಪತಿಯ ನೆರವಿಗೆ ಧಾವಿಸಿ ಇದಕ್ಕೊಂದು ಪರಿಹಾರ ಹುಡುಕಿಕೊಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

