BigTv News
September 11, 2026
Breaking News
ವಿಜಯಪುರ ತಾಲೂಕಿನ ಗೋಳಸಂಗಿ ಗ್ರಾಮದಲ್ಲಿ ನಡೆದಿದ್ದ ಎಸ್‌ಬಿಐ ಎಟಿಎಂ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹19 ಲಕ್ಷಕ್ಕೂ ಅಧಿಕ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ಮುಸುಕುಧಾರಿ ಕಳ್ಳರು ಎಟಿಎಂ ಕೇಂದ್ರಕ್ಕೆ ನುಗ್ಗಿ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನೇ ಕತ್ತರಿಸಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ …
Read More »
BigTv News
September 11, 2026
Breaking News
ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರ ಶಿವರಾಜು ಅವರಿಂದ ಲಂಚ ಪಡೆಯುವಂತೆ ಹೊರಗುತ್ತಿಗೆ ನೌಕರ ಶೌಕತ್‌ಗೆ ಸೂಚಿಸಿದ್ದರು ಎನ್ನಲಾಗಿದೆ. ಅರಣ್ಯ ಇಲಾಖೆಯ ಕಾಮಗಾರಿಗೆ ಮಂಜೂರಾದ ಮೊತ್ತದ ಶೇ.30ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸತೀಶ್ ಚಂದ್ರ, ಈಗಾಗಲೇ ₹50 ಸಾವಿರ ಪಡೆದಿದ್ದರು. ಉಳಿದ ₹2.50 ಲಕ್ಷಕ್ಕಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಲೋಕಾಯುಕ್ತರಿಗೆ …
Read More »
BigTv News
September 11, 2026
Breaking News
ಬೆಂಗಳೂರು : ಸಿಗ್ನಲ್‌ನಲ್ಲಿ ಹಾರ್ನ್ ಹೊಡೆದ ವಿಚಾರಕ್ಕೆ ಇಬ್ಬರು ಬೈಕ್ ಸವಾರರು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಕೂಡ್ಲು ಗೇಟ್ ಬಳಿ ನಡೆದಿದೆ. ನಿನ್ನೆ ಸಂಜೆ ಸುಮಾರು 7 ಗಂಟೆ ವೇಳೆಗೆ ಘಟನೆ ನಡೆದಿದ್ದು, ಇಬ್ಬರು ಯುವಕರು ಕ್ಯಾಬ್ ಚಾಲಕನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಸಿಗ್ನಲ್‌ನಲ್ಲಿ ಹಾರ್ನ್ ಹೊಡೆದಿದ್ದಕ್ಕೆ ಕ್ಯಾಬ್ ಚಾಲಕ ಹಾಗೂ ಬೈಕ್ ಸವಾರರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಇಬ್ಬರು ಯುವಕರು …
Read More »
BigTv News
September 11, 2026
Breaking News
ತಾವರೆಕೆರೆ ನಕಲಿ ಮೆಡಿಸಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಎಸ್‌ಐಟಿ ಹಾಗೂ ಡ್ರಗ್ಸ್ ಕಂಟ್ರೋಲ್ ಇಲಾಖೆ ಅಧಿಕಾರಿಗಳು ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆ ಹಾಗೂ ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಕಲಿ ಔಷಧಿ ಸರಬರಾಜು ಮಾಡುತ್ತಿದ್ದ ಫಾರ್ಮ್‌ಗಳು ಮತ್ತು ಕಂಪನಿಗಳ ಮೇಲೆ ಶೋಧ ನಡೆಸಲಾಗಿದೆ. ನಕಲಿ ಬಾಟಲ್, ಲೇಬಲ್ ಬಳಸಿ ಔಷಧಿ ತಯಾರಿಸಿ ಸರಬರಾಜು …
Read More »
BigTv News
September 11, 2026
Breaking News
ಬೀದರ್‌ನಲ್ಲಿ ಅನ್ಯ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ. ಚಿಟಗುಪ್ಪದ ಶಿವಾಜಿ ವೃತ್ತದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಪಡಿತರ ಅಕ್ಕಿಯನ್ನು ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯಗಳ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಘಟನೆ ಸಂಬಂಧ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಸಾಗಾಟದ …
Read More »
BigTv News
September 11, 2026
Breaking News
ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಮ್ಮತಾ ಸೇನಾ ಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಲು ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿ ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು. ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು, ಪ್ರತಿಭಟನಾ ವೇದಿಕೆ ಹಾಗೂ ಶಾಮಿಯಾನ ತೆರವುಗೊಳಿಸಿದರು.
Read More »
BigTv News
September 11, 2026
Breaking News
ಖಾನಾಪುರದ ಕಣಕುಂಬಿ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 400 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಗೋವಾದಿಂದ ಬೆಳಗಾವಿಗೆ ಬರುತ್ತಿದ್ದ ಭಾರತ್ ಬೆಂಜ್ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಿದಾಗ, ವಾಹನದ ಹಿಂಭಾಗದಲ್ಲಿ ಪಾರ್ಟಿಷನ್ ಮಾಡಿ ಮದ್ಯವನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಪ್ಪ ಮಾರುತಿ ಬೆಳ್ಳಿಕುಂಪಿ ಹಾಗೂ ಮಂಜುನಾಥ ಹನಮಂತಪ್ಪ ದೇಸಾಯಿ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಮದ್ಯ ಹಾಗೂ ವಾಹನದ ಒಟ್ಟು ಅಂದಾಜು ಮೌಲ್ಯ ₹10.40 ಲಕ್ಷ ಎಂದು …
Read More »
BigTv News
September 11, 2026
Breaking News
ಬೆಂಗಳೂರು: ಪತಿಯ ಕಿರುಕುಳದಿಂದ ಮನನೊಂದು ಪ್ರೀತಿ (20) ಎಂಬಾಕೆ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿ, ಭರತ್ ಎಂಬಾತನನ್ನು ಪ್ರೀತಿಸಿ ಇತ್ತೀಚೆಗೆ ಮದುವೆಯಾಗಿದ್ದರು. ದಂಪತಿ ಲಗ್ಗೆರೆಯ ಭೈರವೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕ್ಯಾಬ್ ಚಾಲಕನಾದ ಭರತ್, ಪತ್ನಿಯ ಶೀಲ ಶಂಕಿಸಿ ಪ್ರತಿನಿತ್ಯ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಪತಿಯ ಕಿರುಕುಳದಿಂದ ಬೇಸತ್ತಿದ್ದ ಪತ್ನಿ, ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಮಗಳ ಸಾವಿಗೆ ಅಳಿಯ ಭರತ್ ಕಾರಣ ಎಂದು ಪ್ರೀತಿ ಪೋಷಕರು ದೂರು ಕೊಟ್ಟಿದ್ದಾರೆ.
Read More »
BigTv News
September 11, 2026
Breaking News
ತುಮಕೂರು: ನಗರದ ಉಪ್ಪಾರಹಳ್ಳಿ ಬಳಿ ಗುರುವಾರ ಮಧ್ಯಾಹ್ನ ಮನೆಗೆ ನುಗ್ಗಿದ ಕಳ್ಳ, ಇಬ್ಬರು ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಗೇಟ್ ಮತ್ತು ಮನೆಯ ಬಾಗಿಲು ತೆರೆದಿತ್ತು. ಒಳಗೆ ಹೋದ ಕಳ್ಳ ಮನೆಯಲ್ಲಿ ಮಲಗಿದ್ದ ವೆಂಕಟಲಕ್ಷ್ಮಮ್ಮ ಅವರ ಮೇಲೆ ಹಲ್ಲೆ ನಡೆಸಿ, ಸುಮಾರು 60 ಗ್ರಾಂ ಚಿನ್ನದ ಸರ ಕಿತ್ತಿದ್ದಾನೆ. ವೆಂಕಟಲಕ್ಷ್ಮಮ್ಮ ಅವರ ಸೊಸೆ ನಂದಿನಿ ಕಳ್ಳನನ್ನು ತಡೆಯಲು ಮುಂದಾಗಿದ್ದು, ಅವರ ಕೊರಳಿನಲ್ಲಿದ್ದ 40 ಗ್ರಾಂ ಸರವನ್ನೂ ಕಿತ್ತುಕೊಂಡು ಹೋಗಿದ್ದಾನೆ.ಜಯನಗರ ಠಾಣೆಯಲ್ಲಿ …
Read More »
BigTv News
September 11, 2026
Breaking News
ಚಿತ್ರದುರ್ಗ: ಹಸು ಮೇಯಿಸುತ್ತಿದ್ದ ಮಹಿಳೆ ಮೇಲೆ ಅಸಭ್ಯವಾಗಿ ವರ್ತಿಸಿದ ಅಪ್ರಾಪ್ತ ಬಾಲಕನನ್ನು ಮಹಿಳೆ ವಿರೋಧಿಸಿದ್ದಕ್ಕೆ, ವಿಷಯ ಬಹಿರಂಗವಾಗುವ ಭಯದಲ್ಲಿ ಆಕೆಯನ್ನು ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪದಡಿ ನಾಲ್ವರನ್ನು ಹಿರಿಯೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಆದಿವಾಲ ಭೋವಿ ಕಾಲೋನಿ ಗ್ರಾಮದ ಗಂಗಮ್ಮ ಸೆ.6ರಂದು ಹಸು ಮೇಯಿಸುತ್ತಿದ್ದ ವೇಳೆ ಅಪ್ರಾಪ್ತ ಬಾಲಕ ಬಲವಂತವಾಗಿ ಹಿಡಿದುಕೊಳ್ಳಲು ಯತ್ನಿಸಿದ್ದಾನೆ. ಇದನ್ನು ವಿರೋಧಿಸಿ ಗಂಗಮ್ಮ ಕೂಗಿಕೊಂಡಾಗ, ಬಾಲಕನ ತಂದೆ ಲವ ಹಾಗೂ ಚಿಕ್ಕಪ್ಪಂದಿರಾದ ಕುಶ, ತಿಪ್ಪೇಸ್ವಾಮಿ …
Read More »