BigTv News
September 20, 2025
Breaking News
ಹಾಂಗ್ ಕಾಂಗ್ನಲ್ಲಿ ಸುಮಾರು 100 ವರ್ಷ ಹಳೆಯದಾದ ಎರಡನೇ ಮಹಾಯುದ್ಧದ ಬಾಂಬ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಯಿತು. ಕಟ್ಟಡ ನಿರ್ಮಾಣದ ಸಮಯದಲ್ಲಿ ಪತ್ತೆಯಾದ ಮಾಹಿತಿಗೆ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಿದರು, ಇದರಿಂದಾಗಿ ಇಡೀ ಪ್ರದೇಶವನ್ನೇ ಸ್ಥಳಾಂತರಿಸಲಾಯಿತು.ಬಾಂಬ್ನಿಂದ ಉಂಟಾದ ಆತಂಕದ ನಡುವೆ, ಸುಮಾರು 6,000 ಜನರನ್ನು ಪ್ರದೇಶದಿಂದ ಸ್ಥಳಾಂತರಿಸಲಾಯಿತು. ವರದಿಗಳ ಪ್ರಕಾರ, ಬಾಂಬ್ ಸುಮಾರು 450 ಕಿಲೋಗ್ರಾಂಗಳಷ್ಟು ತೂಗುತ್ತದೆ ಮತ್ತು 1.5 ಮೀಟರ್ ಉದ್ದವಿದೆ. ಬಾಂಬ್ ಅತ್ಯಂತ ಅಪಾಯಕಾರಿ ಮತ್ತು ವಿಲೇವಾರಿ ಸಮಯದಲ್ಲಿಯೂ ಅದು …
Read More »
BigTv News
September 20, 2025
Breaking News
ಬೆಂಗಳೂರು ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಇವರು ಉಪನ್ಯಾಸಕರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.FIR ದಾಖಲಾದ ಬೆನ್ನಲ್ಲೇ ಉಪನ್ಯಾಸಕರ ಹಲವು ವಿಡಿಯೋಗಳು ವೈರಲ್ ಆಗಿವೆ. ಮಕ್ಕಳಿಗೆ ಪಾಠ ಮಾಡುವ ಉಪನ್ಯಾಸಕರಿಂದಲೇ ಕುಡಿದು ಡ್ಯಾನ್ಸ್ ಮಾಡುವ ವಿಡಿಯೋ ವೈರಲ್ ಆಗಿವೆ . ಇಂಟರ್ನಲ್ ಮಾರ್ಕ್ಸ್ ನೀಡಲು ಹಣಕ್ಕೆ ಬೇಡಿಕೆ ಇಟ್ಟ ಆರೋಪ, ಕಣ್ಣು ಕಾಣದ ವಿದ್ಯಾರ್ಥಿಗೆ ಇಂಟರ್ನಲ್ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನೇತ್ರಾನಂದ …
Read More »
BigTv News
September 20, 2025
Breaking News
ಕೊಯ್ಯೂರು ಗ್ರಾಮದ ಪಾಂಬೇಲು ಎಂಬಲ್ಲಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಆರೋಪಿ ಉಮೇಶ್ ಗೌಡ ಚಿನ್ನದ ಸರವನ್ನು ಎಳೆದು ತುಂಡರಿಸಿ ಸರದೊಂದಿಗೆ ತಪ್ಪಿಸಿಕೊಂಡಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು.ಆರೋಪಿಯನ್ನು ಅದೇ ದಿನ ಬಂಧಿಸಲಾಗಿತ್ತು. ತನಿಖಾಧಿಕಾರಿಯಾದ ಬೆಳ್ತಂಗಡಿ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುಬ್ಬಾಪುರ ಮಠ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 126(2),309(5), 309(6) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಆರೋಪಿಗೆ …
Read More »
BigTv News
September 20, 2025
Breaking News
ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆಯ ಬಳಿಯ ಎನ್‌ಸಿ ರಸ್ತೆಯ ಬಳಿ, ಕೆಎಸ್‌ಆರ್‌ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರನೊಬ್ಬ ಮೃತಪಟ್ಟದ್ದಾನೆ..ಮೃತನನ್ನು ಬೆಳ್ತಂಗಡಿ ತಾಲೂಕಿನ ಬಜಿರೆ ಕ್ರಾಸ್ ಕಟ್ಟೆ ನಿವಾಸಿ ರಾಜೇಶ್ (36) ಎಂದು ಗುರುತಿಸಲಾಗಿದೆ.ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಧರ್ಮಸ್ಥಳದಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವಗ್ಗದಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
Read More »
BigTv News
September 20, 2025
Breaking News
ಹುಬ್ಬಳ್ಳಿಯಲ್ಲಿ ನಡೆದ ವೀರಶೈವ-ಲಿಂಗಾಯತ ಏಕತಾ ಸಮಾವೇಶವು ಒಗ್ಗಟ್ಟಿನ ಕರೆ ನೀಡಿದರೂ, ವೇದಿಕೆಯಲ್ಲೇ ಗೊಂದಲಕ್ಕೆ ಸಾಕ್ಷಿಯಾಯಿತು. ಜಾತಿ ಸಮೀಕ್ಷೆ ಮತ್ತು ಪ್ರತ್ಯೇಕ ಧರ್ಮದ ವಿಚಾರವಾಗಿ ಮುಖಂಡರ ನಡುವೆ ಭಿನ್ನಾಭಿಪ್ರಾಯ, ಬಸವರಾಜ ಬೊಮ್ಮಾಯಿ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದರು.ನೆಹರೂ ಮೈದಾನದಲ್ಲಿ ಭವ್ಯವಾಗಿ ಆಯೋಜಿಸಲಾಗಿದ್ದ ವೀರಶೈವ-ಲಿಂಗಾಯತ ಏಕತಾ ಸಮಾವೇಶವು ಹಲವು ಬಣ್ಣಗಳನ್ನು ತಳೆದಿತ್ತು. ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಈ ಸಮಾವೇಶದಲ್ಲಿ ಒಗ್ಗಟ್ಟು, ಏಕತೆ, ಪ್ರತ್ಯೇಕ ಧರ್ಮದ ಹಕ್ಕು, ಜಾತಿ ಸಮೀಕ್ಷೆ ಹಾಗೂ ಸಮಾಜದ …
Read More »
Shaikh BigTv
September 19, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಧಾರವಾಡ ಜಿಲ್ಲೆಯ ಬಡ್ರಸಂಗಿ ಗ್ರಾಮದ ಪ್ರಕಾಶ್ ಎಂಬ ವ್ಯಕ್ತಿಯು ಪಕ್ಕದ ಮನೆಯವರ ಮೇಲಿನ ವೈಮನಸ್ಸಿನಿಂದ ಹಲ್ಲೆ ನಡೆಸಿದ್ದು ಹಾಗೂ ಕುಡಿಯು ನೀರಿನ ನೆಪ ಮಾಡಿ ಭೀಮಬಾವಿ ಎಂಬುವರ ಕೊಳಲಿದ್ದ ಸರವನ್ನು ಕೊಳತನ ಮಾಡಿದ್ದು ಹೀಗೆ ಅನೇಕ ಕೇಸ್ ಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಇಂದು ಹಳೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾತ್ಗುಡಿ ಎಂಬ ಸ್ಥಳದಲ್ಲಿ ಸಿನಿಮಾ ರೀತಿಯಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಲೋ ಬಳ್ಳಿ ಗ್ರಾಮೀಣ ಪೊಲೀಸ್ …
Read More »
BigTv News
September 19, 2025
Breaking News
ಶ್ರೀಲಂಕಾದ ಆಲ್‌ರೌಂಡರ್ ಡುನಿತ್ ವೆಲ್ಲಾಲಗೆ ಅವರ ತಂದೆ ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ನಡೆಯುತ್ತಿರುವಾಗ ನಿಧನರಾದರು. ಪಂದ್ಯದ ವೇಳೆಯೇ ಈ ವಿಷಯವನ್ನು ವೆಲ್ಲಾಲಗೆಗೆ ತಿಳಿಸಲಾಗಿತ್ತು. ಶ್ರೀಲಂಕಾದ ಮಾಧ್ಯಮ ವರದಿಗಳ ಪ್ರಕಾರ, ಡುನಿತ್ ಅವರ ತಂದೆ ಸುರಂಗ ವೆಲ್ಲಾಲಗೆ ಅವರಿಗೆ ಹೃದಯಾಘಾತವಾಯಿತು.ಗುರುವಾರ ಇವರಿಗೆ ಎಷ್ಟು ಕೆಟ್ಟ ದಿನವಾಗಿತ್ತು ಎಂದರೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವೂ ನಿರಾಶಾದಾಯಕವಾಗಿತ್ತು. ಅವರು ನಾಲ್ಕು ಓವರ್‌ಗಳಲ್ಲಿ 49 ರನ್ ಬಿಟ್ಟುಕೊಟ್ಟು ಕೇವಲ ಒಂದು ವಿಕೆಟ್ ಪಡೆದರು.
Read More »
BigTv News
September 19, 2025
Breaking News
ಹೆಚ್‌ಡಿ ಕೋಟೆಯಲ್ಲಿ ಚಿರತೆ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಅಲ್ಲಿ ಬೋನ್ ಇಟ್ಟಿದ್ದು, ಬೋನಿಗೆ ಪುಟ್ಟ ಕರುವೊಂದನ್ನು ಕಟ್ಟಿದ್ದರು. ಆದರೆ ಬೋನಿಗೆ ಬಿದ್ದ ಚಿರತೆ ಕರುವನ್ನು ತಿನ್ನದೇ ಹಾಗೆಯೇ ಸುಮ್ಮನೆ ಕುಳಿತು ಗುರಾಯಿಸುತ್ತಾ ಗುರುಗುರುಡುತ್ತಿದ್ದ ದೃಶ್ಯ ಈಗ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಬೋನಿನಲ್ಲಿ ಕರುವನ್ನು ಕಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಡಿನಿಂದ ನಾಡಿಗೆ ಬಂದು ಜನರಲ್ಲಿ …
Read More »
BigTv News
September 19, 2025
Breaking News
ನಿನ್ನೆ ಒಂದೇ ದಿನದಲ್ಲಿ ಸಿಂದಗಿ ಪಟ್ಟಣದ ಸುತ್ತಮುತ್ತ 4 ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ. ಮಧ್ಯಾಹ್ನ 3 ಗಂಟೆ, ರಾತ್ರಿ 10:11, ಮತ್ತೆ ರಾತ್ರಿ 10:25, ಮತ್ತೊಮ್ಮೆ ರಾತ್ರಿ 10:47 ಒಟ್ಟು 4 ಬಾರಿ ಭೂಮಿ ಕಂಪನಿಸಿದಂತೆ ಭಾಸವಾಗಿದೆ.ಹೀಗಾಗಿಸಿಂದಗಿ ಜನರಲ್ಲಿ ಆತಂಕ ಮೂಡಿದ್ದು, ಮನೆ ಬಿಟ್ಟು ಅನೇಕರು ಹೊರಬಂದಿದ್ದಾರೆ.
Read More »
BigTv News
September 19, 2025
Breaking News
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪದ ಮೇಲೆ ಸಕಲೇಶಪುರದ ನಿವೃತ್ತ ಯೋಧ ವಸಂತ್ ಕುಮಾರ್ (40) ಅವರನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕ ವ್ಯಕ್ತಿಗಳ ವಿರುದ್ಧ ಅವಹೇಳನಾತ್ಮಕ ಬರಹಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ
Read More »