Breaking News

Breaking News

ಹುಡುಗಿ ವಿಷಯದಲ್ಲಿ ಜಗಳ – ಕೊಲೆ ಮಾಡಲು ಬಂದವನೇ ಕೊಲೆಯಾಗಿ ಹೋದ!

ಪ್ರೇಯಸಿಯ ವಿಷಯದಲ್ಲಿ ಮೂವರು ಸ್ನೇಹಿತರ ನಡುವೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯಕಂಡಿರುವ ಘಟನೆ ಬೆಂಗಳೂರಿನ ಮಹದೇವಪುರದಲ್ಲಿ ನಡೆದಿದೆ. ಬಿಜಾಪುರದ ಇಸ್ಮಾಯಿಲ್‌ (26) ಮೃತ ಯುವಕನಾಗಿದ್ದು, ಚಿತ್ರದುರ್ಗ ಮೂಲದ ಪ್ರತಾಪ್‌ ಆರೋಪಿಯಾಗಿದ್ದಾನೆ.

Read More »

ಪ್ರೇಯಿಸಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಡೆತ್‌ನೋಟ್ ಬರೆದಿಟ್ಟು ಸೂಸೈಡ್.

ಪೇರೇಸಂದ್ರ ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ.ವಯನಾಡು ಮೂಲದ ಮೊಹಮ್ಮದ್ ಶಬ್ಬೀರ್ (26) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಅಲೈಡ್ ಸೈನ್ಸ್ ಕೋರ್ಸ್‌ನ ಫೈನಲ್ ಇಯರ್ ಅಧ್ಯಯ ನ ಮಾಡುತ್ತಿದ್ದನು ಎನ್ನಲಾಗಿದೆ.ಇನ್ನು, ರೂಮ್‌ನ ಕಿಟಕಿಗೆ ಟವೆಲ್‌ ಕಟ್ಟಿ ಅದರಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಪೇರೇಸಂದ್ರ ಠಾಣಾ ಪೊಲೀಸರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ರೂಮ್‌ ಪರಿಶೀಲನೆ ನಡೆಸಿದಾಗ …

Read More »

ತವರು ಮನೆಯಿಂದ ವಾಪಸ್ ಬರಲಿಲ್ಲ ಎಂದು ಪತ್ನಿಗೆ ಚಾಕುವಿನಿಂದ ಇರಿದ ಪತಿ.

ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಚಾಕುವಿನಿಂದ ಇರಿದ ಘಟನೆ ಭಾನುವಾರ ನಡೆದಿದೆ. ಹೇಮಾವತಿ (26) ಇರಿತಕ್ಕೊಳಗಾಗಿ ಗಾಯಗೊಂಡ ಮಹಿಳೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆಯ ಪತಿಯಾದ ಆರೋಪಿ ನಾಗರಾಜು ಅವರನ್ನು ವಶಕ್ಕೆ ಪಡೆದು, ವಿಚಾರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಸೇಡಂನಲ್ಲಿ ಛತ್ತೀಸಗಡದ ಇಬ್ಬರು ಕಾರ್ಮಿಕರ ಹತ್ಯೆ.

ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲ್ಲೂಕಿನ ಕೋಡ್ಲಾ-ಬೆನಕನಹಳ್ಳಿ ಗ್ರಾಮದ ಶ್ರೀ ಸಿಮೆಂಟ್ ಕಂಪನಿಯ ಕಾಲೊನಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮಧ್ಯೆ ಅಡುಗೆ ವಿಷಯಕ್ಕೆ ಸಂಬಂಧಿಸಿದಂತೆ ನಿತ್ಯ ಜಗಳವಾಗುತ್ತಿತ್ತು.ಭಾನುವಾರ ರಾತ್ರಿ ಜಗಳ ತಾರಕ್ಕೇರಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಛತ್ತೀಸಗಡ ರಾಜ್ಯದ ಗೋಪಾಲ ಪಟೇಲ್ (31), ಗೋಪಾಲ‌ ವರ್ಮಾ (29) ಮೃತ ಕಾರ್ಮಿಕರು. ವಿಜಯ ನಶಾದ ಎಂಬ …

Read More »

ಪ್ರೀತಿ ವಿಚಾರಕ್ಕೆ ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯ ಕಣ್ಣಿಗೆ ಖಾರದಪುಡಿ ಎರಚಿ ಚಾಕು ಇರಿದ ಯುವಕ!

ಪ್ರೀತಿ-ಮೇಮ ಎಂದು ಯುವತಿಯೊಂದಿಗೆ ಸುತ್ತಾಡುತ್ತಿದ್ದ ಯುವಕನಿಗೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ಯುವಕ, ವ್ಯಕ್ತಿಗೆ ಖಾರದ ಪುಡಿ ಎರಚಿ ಚಾಕು ಇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ದರ್ಶನ್ ಎಂಬ ಯುವಕ ಮಡಿವಾಳಪ್ಪ ಎಂಬುವವರಿಗೆ ಕಣ್ಣಿಗೆ ಖಾರದಪುಡಿ ಎರಚಿ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾನೆ.ಗಂಭೀರವಾಗಿ ಗಾಯಗೊಂಡಿರುವ ಮಡಿವಾಳಪ್ಪ ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ನೇಪಾಳ ಪ್ರತಿಭಟನೆ: ರಾಷ್ಟ್ರಪತಿ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಸರ್ವಪಕ್ಷ ಸಭೆ ಕರೆದ ಪ್ರಧಾನಿ

ಭ್ರಷ್ಟಾಚಾರದ ವಿರುದ್ಧ ನೇಪಾಳದ ಜನರೇಷನ್ ಝೆಡ್ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮಂಗಳವಾರ ಸರ್ವಪಕ್ಷ ಸಭೆ ಕರೆದಿದ್ದಾರೆ.ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಅರ್ಥಪೂರ್ಣ ತೀರ್ಮಾನವನ್ನು ಕಂಡುಹಿಡಿಯಲು ನಾನು ಸಂಬಂಧಿತ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ.ಕಠ್ಮಂಡು ಪೋಸ್ಟ್ ಪ್ರಕಾರ, ಪ್ರತಿಭಟನಾಕಾರರು ರಾಜಕೀಯ ನಾಯಕರು ಮತ್ತು ಮಂತ್ರಿಗಳ ಹಲವಾರು ನಿವಾಸಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದರು. ಪ್ರತಿಭಟನಾಕಾರರು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ಅವರ ಮನೆಗೆ …

Read More »

ಪ್ರೇಮವೈಫಲ್ಯದಿಂದ ಮನನೊಂದು ನೇಣಿಗೆ ಕೊರಳೊಡ್ಡಿದ ಯುವತಿ.

ಪ್ರೇಮವೈಫಲ್ಯದಿಂದ ಮನನೊಂದು ಯುವತಿಯೊಬ್ಬಳು ಮನೆಯಲ್ಲಿ ನೇಣುಬಿಗಿದು ಸಾವಿಗೆ ಶರಣಾದ ಘಟನೆ ರಾಜಾಜಿನಗರದ ಗಾಯತ್ರಿ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.ಲತಾ(25) ನೇಣುಬಿಗಿದುಕೊಂಡ ಯುವತಿ. ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದವಳು ಮತ್ತು ಮಂಡ್ಯ ಜಿಲ್ಲೆಯ ಮೂಲದ ರಂಜಿತ್ ಎಂಬ ಯುವಕನನ್ನು ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದಳು.ಇಬ್ಬರ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ನಿನ್ನೆ ರಾತ್ರಿಯೂ ಇದೇ ವಿಷಯಕ್ಕೆ ಸಂಬಂಧಿಸಿ ಲತಾ ಮತ್ತು ರಂಜಿತ್ ನಡುವೆ ತೀವ್ರ ಜಗಳವಾಗಿತ್ತು. ಇದರಿಂದ ಮನನೊಂದ ಲತಾ, ಇಂದು …

Read More »

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ; ಕಚೇರಿಯೊಳಗೆ ನುಗ್ಗಿದ ಜೆನ್ Z ಪ್ರತಿಭಟನಾಕಾರರು

ನೂರಾರು ಪ್ರತಿಭಟನಾಕಾರರು ಕಚೇರಿಗೆ ನುಗ್ಗಿದ ನಂತರ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡಿದ್ದಾರೆ. ಸೆಪ್ಟೆಂಬರ್ 4 ರಂದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ ಮತ್ತು ಎಕ್ಸ್ ಸೇರಿದಂತೆ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸರ್ಕಾರ ನಿಷೇಧಿಸಿತ್ತು.ಸರ್ಕಾರದ ಈ ನಿರ್ಧಾರ ಖಂಡಿಸಿ ಜೆನ್ ಝಡ್ ನೇತೃತ್ವದ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಪ್ರತಿಭಟನೆ ಬೆನ್ನಲ್ಲೇ ಸರ್ಕಾರ ನಿಷೇಧ ಹಿಂತೆಗೆದುಕೊಂಡಿತ್ತು. ಈ ವೇಳೆಗಾಗಲೇ ರಾಜಕೀಯ ಮತ್ತು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದವು.

Read More »

ಸ್ಥಳೀಯರ ಎಚ್ಚರಿಕೆ ಅವಗಣಿಸಿ ಮೃತ್ಯು ವಶವಾದ ಬೆಂಗಳೂರಿನ ವಿದ್ಯಾರ್ಥಿಗಳು.

ಧನುಷ್‌ ನೇತೃತ್ವದಲ್ಲಿ ಬೆಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ ಲೋಕೇಶ್‌, ಆಶೀಶ್‌, ಗೌತಮ್‌, ರಾಹುಲ್‌, ಕುಶಲ್‌, ಅನೀಶ್‌, ನಿರೂಪ್‌, ನಿತಿನ್‌ ಹಾಗೂ ಅಂಜನ್‌ ಅವರೊಂದಿಗೆ ಪ್ರವಾಸಿ ತಾಣಗಳ ವೀಕ್ಷಣೆಗೆಂದು ಬೆಂಗಳೂರಿನಿಂದ ರೈಲಿನಲ್ಲಿ ಶುಕ್ರವಾರ ಉಡುಪಿಗೆ ಬಂದಿಳಿದಿದ್ದರು.ಇದು ಅಪಾಯಕಾರಿ ಸ್ಥಳ, ಆಳವಿದೆ. ಇಲ್ಲಿ ಇಳಿಯಬೇಡಿ ಎಂದು ಸ್ಥಳೀಯರು ಎಚ್ಚರಿಸಿದ್ದರು. ಆದರೂ ಇವರಲ್ಲಿ 9 ಮಂದಿ ಈಜಲು ಕಡಲಿಗಿಳಿದಿದ್ದರು.ಆಳವಾದ ಪ್ರದೇಶಕ್ಕೆ ತೆರಳಿದ್ದು, ಅಲ್ಲಿ ಮೊದಲಿಗೆ 7 ಮಂದಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದರು.ಸಂಜೆಯ ವೇಳೆಗೆ …

Read More »

ಮಂಡ್ಯ | ನೋಟಿಸ್ ಕೊಡಲು ಬಂದ ನ್ಯಾಯಾಲಯದ ಅಮೀನ್‌ಗೆ ಖಾರದಪುಡಿ ಎರಚಿದ ಆರೋಪಿ ಪತ್ನಿ.

ನ್ಯಾಯಾಲಯದ ನೋಟಿಸ್ ನೀಡಲು ಮನೆಗೆ ತೆರಳಿದ್ದ ಅಮೀನ್‌ಗೆ ಆರೋಪಿ ಪತ್ನಿ ಖಾರದಪುಡಿ ಎರಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ದೂರು ದಾಖಲಾಗಿದೆ. ಅಪಘಾತ ಪ್ರಕರಣವೊಂದರ ಸಂಬಂಧ ನೋಟಿಸ್‌ ನೀಡಲು ಹೋಬಳಿಯ ಕಾಳೇನಹಳ್ಳಿ ಗ್ರಾಮದ ಚಿಕ್ಕ‌ಈರೇಗೌಡ ಅವರ ಮನೆಗೆ ಶನಿವಾರ ನ್ಯಾಯಾಲಯದ ಅಮೀನ್‌ ಶಂಕರೇಗೌಡ ತೆರಳಿದ್ದರು.

Read More »