Breaking News

Breaking News

ಚಿಕ್ಕಜಾಜೂರು: ಕರಡಿ ಹಾವಳಿ; ರೈತರಲ್ಲಿ ಹೆಚ್ಚಿದ ಆತಂಕ.

ಚಿಕ್ಕಜಾಜೂರಿನ ಮಾರುತಿನಗರ ಬಡಾವಣೆ ಹಾಗೂ ಕಾವಲುಹಟ್ಟಿ ಗ್ರಾಮಗಳ ಮಧ್ಯದಲ್ಲಿ ಕಡಿದಾದ ಬೆಟ್ಟದ ಇಳಿಜಾರು ಪ್ರದೇಶ ಹಾಗೂ ಹಳ್ಳದಲ್ಲಿ ಕರಡಿವಾಸಿಸುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.ರೈತರು ಜಾನುವಾರುಗಳಿಗೆ ಮೇವು ತರಲು ಜಮೀನುಗಳಿಗೆ ಹೋಗುವಾಗ ಅಲ್ಲಿನ ರೈಲ್ವೆ ಹಳಿಯನ್ನು ಕರಡಿ ದಾಟುತ್ತಿದ್ದು, ಆ ದೃಶ್ಯವನ್ನು ರೈತರೊಬ್ಬರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

Read More »

ಕುಟುಂಬ ಸಮೇತರಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ನಟ ಕಿಚ್ಚ ಸುದೀಪ್.

ನಟ ಕಿಚ್ಚ ಸುದೀಪ್ ಪತ್ನಿ ಸಮೇತರಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.ಸುದೀಪ್ ದಂಪತಿ ಜೊತೆ ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ, ಪತ್ನಿ ಅಕ್ಷತಾ ಹಾಗೂ ಪುತ್ರ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.ಇತ್ತೀಚೆಗಷ್ಟೆ ಅಗಲಿದ್ದ ತಾಯಿಯ ಹುಟ್ಟುಹಬ್ಬವನ್ನು ಶನಿವಾರ ಗಿಡ ನೆಡುವ ಮೂಲಕ ಸುದೀಪ್ ವಿಶೇಷವಾಗಿ ಆಚರಿಸಿದ್ದರು.ಅಲ್ಲದೇ ಇದೇ ಸೆಪ್ಟೆಂಬರ್ 2 ರಂದು ಸುದೀಪ್ ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

Read More »

ಕನ್ನಡ ನಿರ್ದೇಶಕನ ಹಿಂದಿ ಸಿನಿಮಾ ಟ್ರೈಲರ್ ಬಿಡುಗಡೆ.

ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರು ಹಿಂದಿ ಚಿತ್ರರಂಗದ ಸ್ಟಾರ್ ನಟರುಗಳಿಗೆ ಸಿನಿಮಾ ಮಾಡುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ಶಾರುಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್ ಅವರುಗಳಿಗೆ ಒಬ್ಬರಾದ ಮೇಲೆ ಒಬ್ಬರಂತೆ ದಕ್ಷಿಣದ ನಿರ್ದೇಶಕರು ಸಿನಿಮಾ ಮಾಡಿದ್ದು ಮಾತ್ರವಲ್ಲದೆ ಹಿಟ್ ಸಹ ನೀಡಿದ್ದಾರೆ.ಬಾಲಿವುಡ್​ನ ಸ್ಟಾರ್ ಯುವನಟನಿಗಾಗಿ ಸಿನಿಮಾ ಮಾಡಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿ ಸಖತ್ ಗಮನ ಸೆಳೆಯುತ್ತಿದೆ.ಸಿನಿಮಾನಲ್ಲಿ ಭರ್ಜರಿ ಆಕ್ಷನ್ ಜೊತೆಗೆ ಒಂದು ಥ್ರಿಲ್ಲರ್ ಕತೆಯನ್ನು ಸಹ ಕಟ್ಟಿರುವುದು …

Read More »

ಬೆಂಗಳೂರು ಗ್ರಾಮಾಂತರ: ಕ್ರಾಕ್ಸ್ ಚಪ್ಪಲಿ ಧರಿಸಿ ಪ್ರಾಣ ಕಳೆದುಕೊಂಡ ದುರ್ದೈವಿ!

ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಭಾನುವಾರ ನಡೆದ ದುರ್ಘಟನೆ ಒಂದು ಕುಟುಂಬವನ್ನು ಕಂಗಾಲು ಮಾಡಿದೆ. ಮನೆಯಲ್ಲೇ ನಿರಾಳವಾಗಿ ಬದುಕುತ್ತಿದ್ದ ಮಂಜು ಪ್ರಕಾಶ್ (41) ಎಂಬ ನಿವಾಸಿ, ಚಪ್ಪಲಿಯೊಳಗೆ ಅಡಗಿಕೊಂಡಿದ್ದ ಕೊಳಕು ಮಂಡಲ ಹಾವು ಕಚ್ಚಿದ ಪರಿಣಾಮ ದುರಂತವಾಗಿ ಸಾವನ್ನಪ್ಪಿದ್ದಾರೆ.

Read More »

ನೂರಾರು ರೋಗಗ್ರಸ್ಥ ಹಂದಿಗಳನ್ನು ಕೆರೆಗೆ ಎಸೆದ ಮಾಲೀಕ.!

ಚಿಕ್ಕಬಳ್ಳಾಪುರದ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ನೂರಾರು ಹಂದಿಗಳು ಮೃತಪಟ್ಟಿವೆ. ಈ ನಡುವೆ ರೋಗಗ್ರಸ್ತ ಹಂದಿಗಳನ್ನು ಮಾಲೀಕ ಕೆರೆಗೆ ಬಿಸಾಕಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.ಮುನ್ನೆಚ್ಚರಿಕಾ ಕ್ರಮವಾಗಿ ಫಾರ್ಮ್ ನಲ್ಲಿರುವ ಹಂದಿಗಳನ್ನು ಸಾಯಿಸಲು ನಿರ್ಧರಿಸಲಾಗಿದೆ. ಈಗಾಗಲೇ ಮೃತಪಟ್ಟಿರುವ ಹಿಂದಿಗಳನ್ನು ಮಾಲೀಕ ಕೆರೆಗೆ ಬಿಸಾಕಿದ್ದಾರೆ. ಇದರಿಂದ ಇಡೀ ಕೆರೆಯ ನೀರು ಮಲಿನವಾಗಿದೆ.

Read More »

ಅನ್ಯಜಾತಿ ಯುವಕನನ್ನು ಲವ್ ಮಾಡಿದ್ದಕ್ಕೆ ಮಗಳನ್ನೇ ಕೊಂದು ಸುಟ್ಟುಹಾಕಿದ ತಂದೆ.

ರಾಜ್ಯದಲ್ಲಿ ಮತ್ತೆ ಮರ್ಯಾದೆ ಹತ್ಯೆ ಸದ್ದು ಮಾಡಿದೆ.ಅನ್ಯಜಾತಿ ಹುಡಗನನ್ನ ಲವ್ ಮಾಡಿದ್ದಕ್ಕೆ ತಂದೆ ತನ್ನ ಸ್ವಂತ 18 ವರ್ಷದ ಮಗಳನ್ನು ಕೊಂದು ಸುಟ್ಟು ಹಾಕಿರುವಂತಹ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ ‌ನಡೆದಿದೆ.ಜಮೀನಿನಲ್ಲಿ ದೇಹವನ್ನು ಸುಟ್ಟು ಹಾಕಿದ್ದಾರೆ. ಆದರೆ ಪೊಲೀಸರ ತನೀಖೆಯ ವೇಳೆ ಈ ಘನಘೋರ ಕೃತ್ಯ ಬಯಲಾಗಿದೆ.ಸದ್ಯ ಫರಹತಾಬಾದ್ ಪೊಲೀಸ್​ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

Read More »

ಲವರ್’ ಜೊತೆ ಸೇರಿ ಗಂಡನನ್ನು ಕೊಂದ ಪಾಪಿ ಪತ್ನಿ.!

ಪತ್ನಿ ತನ್ನ ಗೆಳೆಯನೊಂದಿಗೆ ಸೇರಿ ಪತಿಯನ್ನು ಕೊಂದು, ಕೊಲೆಯನ್ನು ಹೃದಯಾಘಾತವನ್ನಾಗಿ ಪರಿವರ್ತಿಸಲು ಯತ್ನಿಸಿದ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪೊಲೀಸರು ಶೇಖರ್ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು. ಪತ್ನಿ ಚಿಟ್ಟಿಯನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಗೆಳೆಯನೊಂದಿಗೆ ಅವನನ್ನು ಕೊಂದಿದ್ದಾಗಿ ಒಪ್ಪಿಕೊಂಡಳು. ಏತನ್ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಲೆಮರೆಸಿಕೊಂಡಿರುವ ಗೆಳೆಯ ಹರೀಶ್ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Read More »

ಬಾಗಲಕೋಟೆ: ಪ್ರತ್ಯೇಕ ಒಳಮೀಸಲಾತಿಗೆ ಆಗ್ರಹ.

ಅಲೆಮಾರಿ, ಅರೆ ಅಲೆಮಾರಿಗಳಿಗೆ ಪರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಅಲೆಮಾರಿ ವಿವಿಧ ಸಮುದಾಯಗಳ ಜನರು ಬಾಗಲಕೋಟೆಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಿದರು.ಅಲೆಮಾರಿ ಸಮುದಾಯದವರು ಮಾಡುತ್ತಿದ್ದ ಭಿಕ್ಷಾಟನೆ, ಬೇಟೆ ಆಡುವುದನ್ನು ನಿಷೇಧಿಸಲಾಗಿದೆ. ಇದರಿಂದ ಉದ್ಯೋಗವಿಲ್ಲದಂತಾಗಿದೆ. ಶಿಕ್ಷಣ, ಉದ್ಯೋಗಕ್ಕಾಗಿ ಮುಂದುವರೆದವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಒಳಮೀಸಲಾತಿ ಪ್ರತ್ಯೇಕವಾಗಿ ನೀಡಿ, ಇಲ್ಲವೇ ವಿಷ ಕೊಟ್ಟು ಸಾಯಿಸಿರಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Read More »

ಚಿಂಚೋಳಿ: ಹುಚ್ಚು ನಾಯಿ ಕಡಿತ ಅಸ್ವಸ್ಥ ಹಸುವಿಗೆ ಮತ್ತೆ ಕಚ್ಚಿದ ನಾಯಿಗಳು!

ಪಾಲ್ತ್ಯಾ ತಾಂಡಾದಲ್ಲಿ ಹುಚ್ಚು ನಾಯಿ ಕಡಿತಕ್ಕೆ‌ ಒಳಗಾಗಿದ್ದ ಹಸುವಿನಲ್ಲಿ‌ ಈಗ ಹುಚ್ಚು ಕಾಣಿಸಿಕೊಂಡಿದೆ.ಅಸ್ವಸ್ಥ ಹಸು ತಾಂಡಾದ ತುಂಬೆಲ್ಲಾ ಎಲ್ಲೆಂದರಲ್ಲಿ‌ ಓಡಾಡಿ ಗೋಡೆಗೆ ಹಣೆ ಗುದ್ದಿಕೊಂಡಿದೆ. ಇದರಿಂದ ಕೊಂಬು‌ಮುರಿದುಕೊಂಡಿದ್ದು ರಕ್ತಸ್ರಾವವಾಗಿದೆ.ದನ‌ಕರುಗಳು‌ ಮನೆ ಮನೆ ಮುಂದೆಯೇ ಕಟ್ಟುತ್ತೇವೆ. ಅಸ್ವಸ್ಥ ನಾಯಿಗಳು‌ ದನಗಳಿಗೆ ಕಚ್ಚಿದರೆ ಮತ್ತು‌ ಜನರಿಗೆ ಕಚ್ಚಿದರೆ ಏನು‌ ಮಾಡಬೇಕು. ವಿಷಯ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Read More »

ಗುಂಡ್ಲುಪೇಟೆ | ಹೆದ್ದಾರಿಯಲ್ಲಿ ಕಾಡಾನೆ ಉಪಟಳ ಭೀತಿ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿಂತು ಕಾಡಾನೆ ಉಪಟಳ ನೀಡುತ್ತಿದ್ದು, ವಾಹನ ಸವಾರರು ಭೀತಿಗೊಳಗಾಗಿದ್ದಾರೆ.ಆನೆ ದಾಳಿ ಮಾಡಬಹುದು ಎಂಬ ಭಯದಲ್ಲಿ ವಾಹನದೊಳಗಿದ್ದವರು ಚೀರಿಕೊಳ್ಳುವ ವಿಡಿಯೊ ಜಾಲತಾಣಗಳಲ್ಲಿ ಸುದ್ದಿಯಾಗಿದೆ.ಆಹಾರ ಪದಾರ್ಥ ಸಾಗಿಸುವ ವಾಹನಗಳನ್ನು ಕಾಡಾನೆ ಅಡ್ಡಗಟ್ಟುತ್ತಿದ್ದು ಅರಣ್ಯದೊಳಗೆ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಡಿಎಫ್‌ಒ ಪ್ರಭಾಕರನ್ ತಿಳಿಸಿದ್ದಾರೆ.

Read More »