Breaking News

Breaking News

ಲೋಕಾಯುಕ್ತ ಭರ್ಜರಿ ಬೇಟೆ: ಚಿನ್ನದ ಬಿಸ್ಕತ್, ಚಿನ್ನಾಭರಣ ರಾಶಿ, ಕಂತೆ ಕಂತೆ ನಗದು, ಲಕ್ಷಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ!

ಪ್ಯಾಕೆಟ್​ಗಳಲ್ಲಿ ಚಿನ್ನದ ಬಿಸ್ಕತ್, 15ಕ್ಕೂ ಹೆಚ್ಚು ಚಿನ್ನದ ಕಿವಿಯೋಲೆಗಳು, ಸಾಲು ಸಾಲು ಚಿನ್ನದ ಸರಗಳು, ಬೆಳ್ಳಿಯ ಆಭರಣಗಳು, ಬೆಳ್ಳಿಯ ಬಟ್ಟಲು, ಬೆಳ್ಳಿ ತಟ್ಟೆ, ಬೆಳ್ಳಿಯ ದೀಪ, ಕಂತೆ ಕಂತೆ ನಗದು ಹಣ! ಇವೆಲ್ಲ ರಾಜ್ಯದ ವಿವಿಧೆಡೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕ ಅಕ್ರಮ ಸಂಪತ್ತು.ಬೆಂಗಳೂರು, ಬಳ್ಳಾರಿ, ಮೈಸೂರು, ಕೊಪ್ಪಳ, ಬೀದರ್, ತುಮಕೂರು, ಹುಬ್ಬಳ್ಳಿ ಸೇರಿ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಬೆಂಗಳೂರು, ಮೈಸೂರು, ಕೊಪ್ಪಳ ಸೇರಿದಂತೆ ಅನೇಕ ಕಡೆಗಳಲ್ಲಿ …

Read More »

ಉಡುಪಿ ಸರಕಾರಿ ವಸತಿ ಗೃಹಗಳಲ್ಲಿ ಕಳ್ಳತನ , ಇಬ್ಬರು ಮಧ್ಯಪ್ರದೇಶದ ಕಳ್ಳರ ಬಂಧನ!

ಉಡುಪಿಯಲ್ಲಿ ಸರಕಾರಿ ವಸತಿ ಗೃಹಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ ಬೆಳ್ಳಿಯ ಆಭರಣಗಳಾದ ಕಾಲು ಗೆಜ್ಜೆ, ಸೊಂಟದ ನೇವಳ, ಕೈಬಳೆ, ಕಾಲುಂಗುರ, ಸೊಂಟದ ಪಟ್ಟಿ, ಬಟ್ಟಲು, ಕಡಗ ಮತ್ತು ಬ್ರಾಸ್ಲೈಟ್ ಸೇರಿ ಒಟ್ಟು 80,970ರೂ. ಮೌಲ್ಯದ 681.830 ಮಿಲಿ ಗ್ರಾಂ ಬೆಳ್ಳಿಯ ಸೊತ್ತು, 4,250ರೂ. ಮೌಲ್ಯದ 470 ಮಿಲಿಗ್ರಾಂ ಚಿನ್ನ ಹಾಗೂ 1700ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತರನ್ನು ಮಧ್ಯಪ್ರದೇಶದ ಬಂಗಡ ಯಾನೆ ಬಾಂಗು ಯಾನೆ …

Read More »

10ನೇ ತರಗತಿ ಫೇಲ್ ಆದ ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ ; ಜೀವನವನ್ನೇ ಬದಲಿಸಿದ ಪ್ರೇಮ ಕಥೆ !

ರಾಜ್ 16ನೇ ವಯಸ್ಸಿನಲ್ಲಿ ಜೈಪುರದಲ್ಲಿ ಆಟೋ ರಿಕ್ಷಾ ಓಡಿಸಲು ಪ್ರಾರಂಭಿಸಿದರು ಮತ್ತು ಹಲವು ವರ್ಷಗಳ ಕಾಲ ಅದನ್ನು ಮುಂದುವರೆಸಿದರು. ಇದು 2008ನೇ ಇಸವಿ, ಆಗ ಹಲವು ಆಟೋ ಚಾಲಕರು ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್ ಭಾಷೆಗಳಲ್ಲಿ ಮಾತನಾಡುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರು. ಆಗ ರಾಜ್ ಕೂಡ ಇಂಗ್ಲಿಷ್ ಕಲಿಯಲು ಪ್ರಯತ್ನಿಸಿದರು. ಈ ಸಮಯದಲ್ಲಿ, ರಾಜ್ ಪ್ರವಾಸಿ ವ್ಯವಹಾರವನ್ನು ಪ್ರಾರಂಭಿಸಿದರು, ಅದರ ಮೂಲಕ ಅವರು ವಿದೇಶಿಯರನ್ನು ರಾಜಸ್ಥಾನದ ಸುತ್ತಮುತ್ತ ಕರೆದುಕೊಂಡು ಹೋಗುತ್ತಿದ್ದರು. ಇಲ್ಲಿಯೇ ಅವರು …

Read More »

ನಾಪತ್ತೆಯಾಗಿ ಪತ್ತೆಯಾಗಿದ್ದ ಯುವತಿ ಧರ್ಮಸ್ಥಳದ ಸನಿಹ ಅನುಮಾನಸ್ಪದ ಸಾವು!

ಧರ್ಮಸ್ಥಳದ ಸನಿಹ ಬೆಳಾಲು ಗ್ರಾಮದ ಕುಕ್ಕೊಟ್ಟುವಿನ ವೀಣಾ(19 ವರ್ಷ) ಎನ್ನುವ ಯುವತಿ ಅನುಮಾನಸ್ಪದವಾಗಿ ಸಾವು ಕಂಡಿರುವ ಘಟನೆ ನಡೆದಿದೆ. ಕಳೆದ ಜುಲೈ 11 ರಂದು ವೀಣಾ ಮೃತದೇಹ ಮನೆಯ ಪಕ್ಕದ ಕೆರೆಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ.ನಾಗೇಶ್‌ ದೂರು ನೀಡಲು ಧರ್ಮಸ್ಥಳ ಪೊಲೀಸ್‌ ಠಾಣೆಗೆ ಹೋಗಿದ್ದರು. ಮನೆಯವರು ಅಷ್ಟರಲ್ಲಿ ಹುಡುಕಾಟ ನಡೆಸಿದಾಗ ಕೆರೆಯ ನೀರಿನ ಆಳವಾದ ಭಾಗದಲ್ಲಿ ವೀಣಾಳ ಮೃತದೇಹ ಪತ್ತೆಯಾಗಿದೆ ಎಂದು ನಾಗೇಶ್‌ ಅವರಿಗೆ ಕರೆ ಮಾಡಿ ತಿಳಿಸಿದ್ದರು.ಬಳಿಕ ಅಗ್ನಿಶಾಮಕ …

Read More »

ಗೂಂಡಾ ಕಾಯ್ದೆ ಅಡಿ ಬಂಧನದ ಆದೇಶವನ್ನು ಎತ್ತಿ ಹಿಡಿದ ಮಾನ್ಯ ಉಚ್ಛ ನ್ಯಾಯಾಲಯದ ಸಲಹಾ ಮಂಡಳಿ…

ನಾನೇ.. ನಂದೇ ಹವಾ ಅಂತ ಮೇರೆದವರು ಕಂಬಿ ಹಿಂದೆ ಕಮೀಷನರ್ ಈ ಕ್ರಮಕೆ ಸೈ ಎಂದ ಉಚ್ಚ ನ್ಯಾಯಾಲಯ ಕಮೀಷನರ್ ಗೆ ಶಬ್ಬಾಶ್ ಎಂದ ಮಹಾ ನಿರೀಕ್ಷಕರು ಹುಬ್ಬಳ್ಳಿ ಧಾರವಾಡ ಅವಳಿ ನಗರದ ರೌಡಿ ಶೀಟರ್ ಗಳಾದ 1.ಸಾಗರ್ ಲಕ್ಕುಂಡಿ, 28 ವರ್ಷ, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ 2.ಲಕ್ಷ್ಮಣ್ ಗಭ್ಯಾ ಬಳ್ಳಾರಿ, 30 ವರ್ಷ, ಬೆಂಡಿಗೇರಿ ಪೊಲೀಸ್ ಠಾಣೆ 3.ಮಂಜುನಾಥ್ ಸೈಂಟಿಸ್ಟ್ ಮಂಜ ಭಂಡಾರಿ 36 ವರ್ಷ ಕೇಶ್ವಾಪುರ …

Read More »

ಮದ್ದೂರಿನ ಆಹಾರ ಇಲಾಖೆಯ ಗೋದಾಮಿನ ಬೀಗ ಒಡೆದು ಲಕ್ಷಾಂತರ ರೂ ಮೌಲ್ಯದ ಪಡಿತರ ಅಕ್ಕಿ ಕಳ್ಳತನ!

ಗುಂಪೊಂದು ಪಟ್ಟಣದ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋದಾಮಿನ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಪಡಿತರ ಅಕ್ಕಿಯನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಜರುಗಿದೆ.ಮಳವಳ್ಳಿ ರಸ್ತೆಯಲ್ಲಿರುವ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಪ್ರತಿಮೆ ಬಳಿಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಪಡಿತರ ದಾಸ್ತಾನು ಗೋದಾಮಿನಲ್ಲಿ ಈ ಕೃತ್ಯ ನಡೆದಿದೆ.

Read More »

ಬೆಂಗಳೂರು | 2 ಕೋಟಿ ರೂ. ದರೋಡೆ ಪ್ರಕರಣ : 15 ಆರೋಪಿಗಳ ಬಂಧನ, 1.11 ಕೋಟಿ ರೂ. ನಗದು ವಶ!

ನಗದು ಹಣವನ್ನು ಡಿಜಿಟಲ್ ಕರೆನ್ಸಿಯಾಗಿ ಬದಲಾವಣೆ ಮಾಡಿಕೊಡುವುದಾಗಿ ಉದ್ಯಮಿಯನ್ನು ನಂಬಿಸಿ 2 ಕೋಟಿ ರೂ. ಹಣ ಪಡೆದು ಬಳಿಕ ಅಪರಿಚಿತ ವ್ಯಕ್ತಿಗಳಿಂದ ದರೋಡೆಯಾಗಿದೆ ಎಂದು ಸುಳ್ಳು ದೂರು ನೀಡಿದ್ದ ವ್ಯಕ್ತಿ ಸೇರಿ ಒಟ್ಟು 15 ಮಂದಿ ಆರೋಪಿಗಳನ್ನು ಇಲ್ಲಿನ ವಿದ್ಯಾರಣಪುರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.ಸುಳ್ಳು ದೂರು ನೀಡಿದ್ದ ಶ್ರೀಹರ್ಷ ಹಾಗೂ ಆತನ ಸಹಚರರಾದ ರಕ್ಷಿತ್, ಚಂದ್ರಶೇಖರ, ರಾಕೇಶ್, ಬೆಂಜಮಿನ್ ಸಹಿತ ಒಟ್ಟು 15 ಮಂದಿ ಆರೋಪಿಗಳನ್ನು ಬಂಧಿಸಿ 1.11 …

Read More »

ಅಣ್ಣನ ಮೇಲಿನ ಸೇಡಿಗೆ ಮಗನನ್ನೇ ಬಲಿ ಪಡೆದ: 3 ವರ್ಷದ ಬಾಲಕನ ಕತ್ತು ಕೊಯ್ದ ಚಿಕ್ಕಪ್ಪ!

ಅಂಗನವಾಡಿಗೆ ಹೋಗಿದ್ದ 3 ವರ್ಷದ ಮಗುವಿಗೆ ಜಾಕು ಇರಿದು ಸ್ವಂತ ಚಿಕ್ಕಪ್ಪನೇ ಜೀವ ತೆಗೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ. ಅಣ್ಣ ಬೈದು ಬುದ್ಧಿವಾದ ಹೇಳಿದ್ದಕ್ಕೆ ತಮ್ಮ ಈ ಕೃತ್ಯ ಎಸಗಿದ್ದಾನೆ.ಆಡವಾಡುತ್ತಿದ್ದ ಒಟ್ಟು ನಾಲ್ಕು ಮಕ್ಕಳನ್ನು ಭೀಮಪ್ಪ ತನ್ನ ಮನೆಗೆ ಕರೆದೊಯ್ದಿದ್ದ.ಮಕ್ಕಳನ್ನು‌ ಮನೆಯಲ್ಲಿ ಹಾಸಿಗೆ ಮೇಲೆ‌ ಮಲಗಿಸಿ ಸಾಮೂಹಿಕ ಕೊಲೆಗೆ ಮುಂದಾಗಿದ್ದ ಎಂಬ ಸಂಶಯವಿದೆ.ಮಗು ಮದುಕುಮಾರ ಕತ್ತಿಗೆ ಚಾಕು ಇರಿಯುತ್ತಲೇ ಚೀರಾಟ ಕೇಳಿ ಉಳಿದ …

Read More »

ಕೊಡಕ್ಕೆನೆ ಹೊಟೇಲ್ ಮಾಲೀಕ ನಿತಿನ್ ಪೂಜಾರಿ ಆತ್ಮಹತ್ಯೆ!!

ನಗರದಲ್ಲಿ ಆಘಾತಕಾರಿ ಸುದ್ದಿ – ಯುವ ಉದ್ಯಮಿ ಹಾಗೂ ಕೊಡಕ್ಕೆನೆ ಹೊಟೇಲ್ ಮಾಲೀಕ ನಿತಿನ್ ಪೂಜಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಕಾರಣವಾಗಿ ಆರ್ಥಿಕ ಸಂಕಷ್ಟವನ್ನೇ ಶಂಕಿಸಲಾಗಿದೆ. ವಿಷ ಸೇವಿಸಿದ ನಿತಿನ್, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ರೂ ಚಿಕಿತ್ಸೆ ಫಲಕಾರಿಯಾಗದೆ ನಸುಕಿನಲ್ಲಿ ಮೃತಪಟ್ಟರು.ಮಂಗಳೂರು ಕದ್ರಿ ಕಂಬ ಬಳಿ “ಕೊಡಕ್ಕೆನೆ” ಹೆಸರಿನ ಹೋಟೆಲ್ ನಡೆಸುತ್ತಿದ್ದ ನಿತಿನ್ ಪೂಜಾರಿ (41) ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದರು.

Read More »

ಬ್ರೇಕ್‌ ಫೈಲ್ಯೂರ್‌ : ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್‌!

ಕೆಎಸ್‌ಆರ್‌ಟಿಸಿ ಬಸ್‌ವೊಂದರ ಬ್ರೇಕ್‌ ಪೈಲ್ಯೂರ್‌ ಆಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಕಲ್ಮಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಈ ವೇಳೆ ಪಕ್ಕದಲ್ಲೇ ಇದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »