Breaking News

Breaking News

ಬಾಗಲಕೋಟೆ: ಪಂಚಮಸಾಲಿ ಪೀಠದ ಕಟ್ಟಡಕ್ಕೆ ಬೀಗ!!

ಕೂಡಲಸಂಗಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ಗೆ ಸೇರಿದ ಪಂಚಮಸಾಲಿ ಪೀಠ ಬಸವ ಜಯಮೃತ್ಯುಂಜಯ ಸ್ವಾಮಿ ಇರುವ ಪೀಠದ ಕಟ್ಟಡದ ಗೇಟಿಗೆ ಭಾನುವಾರ ರಾತ್ರಿ ಬೀಗ ಹಾಕಲಾಗಿದೆ. ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಪೀಠದ ಕಟ್ಟಡದ ಪ್ರವೇಶ, ಹಿಂಬದಿ ದ್ವಾರ ಮತ್ತು ಮೇಲ್ಭಾಗದ ಕೊಠಡಿಗೆ ತೆರಳಲು ಇದ್ದ ದಾರಿಯಲ್ಲಿ ಗೇಟ್‌ ಅಳವಡಿಸಿ, ಬೀಗ ಹಾಕಲಾಗಿದೆ.ಮಠದಲ್ಲಿ ಅಹಿತಕರ ಚಟುವಟಿಕೆಗಳು ನಡೆಯದಿರಲಿ ಎಂಬ ಉದ್ದೇಶದಿಂದ ಗೇಟ್ ಮಾಡಿಸಿ, ಬೀಗ ಹಾಕಲಾಗಿದೆ. ಮಠದ ಟ್ರಸ್ಟ್ ಅಧ್ಯಕ್ಷನಾಗಿರುವ …

Read More »

ದಾವಣಗೆರೆ: ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ!!

ಹೊನ್ನಾಳಿ ತಾಲ್ಲೂಕಿನ ನೆಲಹೊನ್ನೆ ಗ್ರಾಮದ ಜಗದೀಶ (64) ಹಾಗೂ ಗಂಗಮ್ಮ (54) ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಪತಿಯನ್ನು ಕೊಂದು ಮನೆಯ ದೇವರ ಕೋಣೆಯಲ್ಲಿ ಹೂತು ಹಾಕಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹ 55 ಸಾವಿರ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

Read More »

ಪತಿ ಹತ್ಯೆ ಪ್ರಕರಣದಲ್ಲಿ ರಿಂಗ್ ರೋಡ್‌ ಶುಭಾಗೆ ಜೀವಾವಧಿ ಕಾಯಂ!!

2003ರಲ್ಲಿ ಬಾವಿ ಪತಿ ಸಾಫ್ಟ್‌ವೇರ್ ಎಂಜಿನಿಯರ್ ಬಿ.ವಿ.ಗಿರೀಶ್ ಹತ್ಯೆ ಪ್ರಕರಣದಲ್ಲಿ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಸುಪ್ರಿಂ ಕೋರ್ಟ್‌ ಸೋಮವಾರ ಅಂತಿಮ ತೀರ್ಪು ನೀಡಿದೆ.ಕ್ರಿಮಿನಲ್‌ ಮೇಲ್ಮನವಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್‌ ಮತ್ತು ನ್ಯಾಯಮೂರ್ತಿ ಎನ್‌.ಕೆ. ಸಿಂಗ್‌ ಅವರಿದ್ದ ವಿಭಾಗೀಯ ಪೀಠ ಸೋಮವಾರ ಆದೇಶಿಸಿದೆ. ಶುಭಾ ಹಾಗೂ ಪ್ರಕರಣ ಇತರೆ ಮೂವರು ಆರೋಪಿಗಳು ಸಂಚು ರೂಪಿಸಿ ಗಿರೀಶ್‌ ಅವರನ್ನು ಕೊಲೆ ಮಾಡಿರುವುದು …

Read More »

ಹುಬ್ಬಳ್ಳಿ :ಕಾಂಗ್ರೆಸ್ ಸರ್ಕಾರ ನುಡಿದಂತೆಯೇ ನಡೆದಿದೆ: ಸಚಿವ ಸಂತೋಷ ಲಾಡ್ ಹೇಳಿಕೆ.

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಏನೆಲ್ಲಾ ಭರವಸೆಯನ್ನು ಕೊಟ್ಟಿತ್ತು. ಅದನ್ನು ನಾವು ಈಡೇರಿಸಿದ್ದೇವೆ. ಕಾಂಗ್ರೆಸ್ ಇತಿಹಾಸದಲಿಯೇ 500 ಕೋಟಿ ಮಹಿಳೆಯರ ಉಚಿತ ಪ್ರಯಾಣ ಮಾಡಿರುವುದು ವಿಶೇಷವಾಗಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಕೋಟ್ಯಾಂತರ ಮಹಿಳೆಯರಿಗೆ ಉಚಿತ ಪ್ರಯಾಣದ ಜೊತೆಗೆ ಸಾಕಷ್ಟು ಉದ್ಯೋಗ ತುಂಬಿಕೊಳ್ಳುವ ಕಾರ್ಯವನ್ನು ಮಾಡಿದೆ. ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದರು. ಶಕ್ತಿ …

Read More »

ಮೋದಿ ವಿರುದ್ಧ ಮಾತನಾಡಿದ್ರೆ ದೇಶ ದ್ರೋಹಿಗಳ ಪಟ್ಟ:ಸಂತೋಷ ಲಾಡ್ ಆಕ್ರೋಶ….

ಹುಬ್ಬಳ್ಳಿ: ಬಿಜೆಪಿ ಕೇಂದ್ರ ಸಚಿವರು ಪ್ರಪಂಚದ ಎಲ್ಲರ ಬಗ್ಗೆಯೂ ಮಾತನಾಡಬಹುದು. ನಾವು ಕೇಂದ್ರ ಸಚಿವರ ಬಗ್ಗೆ ಮೋದಿಯವರ ಬಗ್ಗೆ ಮಾತನಾಡಬಾರದು. ಏನಾದರೂ ಮಾತನಾಡಿದರೇ ಸಂತೋಷ ಲಾಡ್ ಹಂಗೇ ಹಿಂಗೇ ಅಂತ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವರ ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಟ್ರಂಪ್ 25 ಬಾರಿ ಹೇಳಿದ್ದಾರೆ ಯುದ್ಧ ನಿಲ್ಲಿಸಿದ್ದು, ನಾನೇ ಅಂತ. ಆದರೆ ಯಾವುದೇ ಕೇಂದ್ರ ಸಚಿವರು ಈ ಬಗ್ಗೆ …

Read More »

Hubli:ಶಕ್ತಿ ಯೋಜನೆ ಯಶಸ್ವಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ: ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಆಚರಣೆ..!

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಶಕ್ತಿ ಯೋಜನೆಯು ಈಗ ಕೋಟ್ಯಾಂತರ ಮಹಿಳೆಯರನ್ನು ತಲುಪಿದ್ದು, ಈ ನಿಟ್ಟಿನಲ್ಲಿ ಶಕ್ತಿ ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಸಚಿವರು ಬಸ್ಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ 500 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿ, ಯೋಜನೆ ಯಶಸ್ವಿಯಾಗಿಸಿದ ಹಿನ್ನೆಲೆಯಲ್ಲಿ ಸರಕಾರಿ ಬಸ್ ಪೂಜಾ ಹಾಗೂ ಸಿಹಿ ವಿತರಣೆ ಕಾರ್ಯಕ್ರಮ …

Read More »

4 ವರ್ಷ ಗಂಡನ ಶವದೊಂದಿಗೆ ನಿದ್ರಿಸಿದ ಮಹಿಳೆ ; ಪ್ರಶ್ನಿಸಿದ ಮಕ್ಕಳಿಗೆ ಅನಾಥಾಶ್ರಮಕ್ಕೆ ಕಳುಹಿಸುವ ಬೆದರಿಕೆ !

ಮಹಿಳೆಯೊಬ್ಬಳು ತನ್ನ ಗಂಡನ ಶವದೊಂದಿಗೆ ಸುಮಾರು 4 ವರ್ಷಗಳ ಕಾಲ ವಾಸಿಸುತ್ತಿದ್ದಾಳೆ.ಮಹಿಳೆ ತನ್ನ ಮಕ್ಕಳನ್ನೂ ತನ್ನೊಂದಿಗೆ ಇರಿಸಿಕೊಂಡಿದ್ದಳು. ತನ್ನ ಗಂಡನ ಮಮ್ಮಿ ಮಾಡಿದ ದೇಹದೊಂದಿಗೆ ಅದೇ ಹಾಸಿಗೆಯಲ್ಲಿ ಮಲಗುತ್ತಿದ್ದಳು ಎಂದು ತಿಳಿದುಬಂದಿದೆ.ಸ್ವೆಟ್ಲಾನಾ ತನ್ನ ಕುಟುಂಬದ ಆರು ಮಲಗುವ ಕೋಣೆಗಳ ಮನೆಯಲ್ಲಿ ಮಮ್ಮಿ ಮಾಡಿದ ಅವಶೇಷಗಳೊಂದಿಗೆ ಕೆಲವು ವಿಧಿಗಳನ್ನು ನಡೆಸಿದ್ದಳು ಎಂದು ಮೂಲವೊಂದು ಇಜ್ವೆಸ್ಟಿಯಾ ಪತ್ರಿಕೆಗೆ ತಿಳಿಸಿದೆ. ಅವಳು ಮತ್ತು ಅವಳ ಗಂಡ ಈ ಹಿಂದೆ ಇಂತಹ ಆಚರಣೆಗಳಲ್ಲಿ ತೊಡಗಿಸಿಕೊಂಡಿದ್ದರು. ಮಹಿಳೆ …

Read More »

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ:ಮಹಜರು ವೇಳೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಆರೋಪಿ ಯತ್ನ!

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಾಲ್ವರು ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗಳ ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಲು ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ಯನ್ನು ಪೊಲೀ ಸರು ಲಾಠಿ ಏಟು ಕೊಟ್ಟು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜು. 8ರಂದು 8 ವರ್ಷದ ಬಾಲಕಿ ಮೇಲೆ ಆರೋಪಿ ಗಳು ಲೈಂಗಿಕ ದೌರ್ಜನ್ಯ ಎಸಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಜು. 11ರಂದು ಮಹಿಳಾ ಪೊಲೀಸ್‌ ಠಾಣೆಯಲ್ಲಿ …

Read More »

ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿ.. ಕುಟುಂಬಸ್ಥರಿಂದ ಕೊಲೆ ಆರೋಪ!

ಸಿಂಧನೂರಿನ ಸಿ.ಎಸ್ .ಎಫ್ ಕ್ಯಾಂಪ್ ನಲ್ಲಿ ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮತ್ಯೆಯಲ್ಲ ಕೊಲೆ ಎಂದು ಮಹಿಕೆಯರ ಕುಟುಂಬಸ್ಥರು ಆರೋಪಿಸಿದ್ದಾರೆ.ವರದಕ್ಷಿಣೆ ಕಿರುಕುಳದ ಹಿನ್ನೆಲೆ ಕೊಲೆಯಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಪತಿ ಹುಸೇನಭಾಷ, ಮಾವ ನಬೀಸಾಬ್ ಹಾಗೂ ಮೈದುನ ಹುಸೇನ್ ಬಾಷಾ ವಿರುದ್ಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Read More »

ಹಿಂದೂ ಎಂದು ಯುವತಿ ಜತೆ ಮದುವೆಗೆ ಯತ್ನ, ಮುಸ್ಲಿಂ ಯುವಕ ಅರೆಸ್ಟ್‌!

ಹಿಂದೂ ಎಂದು ಸುಳ್ಳು ಹೇಳಿಕೊಂಡು ದೇವಸ್ಥಾನವೊಂದರಲ್ಲಿ ಹಿಂದೂ ಯುವತಿಯನ್ನು ಮದುವೆಯಾಗುತ್ತಿದ್ದ ಮುಸ್ಲಿಂ ವ್ಯಕ್ಯಿಯನ್ನು ಬಂಧಿಸಲಾಗಿದೆ.ಬೆಳ್ಹಾ ಮಾಯ್ ದೇವಾಲಯದ ಪ್ರಧಾನ ಅರ್ಚಕ ಮಂಗಳ ಪ್ರಸಾದ್ ಅವರ ಮಾಹಿತಿಯ ಮೇರೆಗೆ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಲಾಲ್ ತಿಳಿಸಿದ್ದಾರೆ.

Read More »