Breaking News

Breaking News

ಕ್ಯಾಂಟರ್-ಕಾರು ನಡುವೆ ಭೀಕರ ಅಪಘಾತ: ಒಂದೇ‌ ಕುಟುಂಬದ ನಾಲ್ವರು ಸಾವು!

ರಾಮನಗರ ಜಿಲ್ಲೆ ಮಾಗಡಿ‌ ಪಟ್ಟಣದ ನಟರಾಜ ಬಡಾವಣೆ ನಿವಾಸಿ ಭಾರತ್ ಕೋಪರೇಟಿವ್ ಬ್ಯಾಂಕ್ ನಿರ್ದೇಶಕ ಸೀಬೆಗೌಡ (45) ಪತ್ನಿ ಶೋಭಾ (36) ಮಕ್ಕಳಾದ ದುಂಬಿಶ್ರೀ, ಭಾನುಕಿರಣ್ ಗೌಡ ಮೃತ ದುರ್ದೈವಿಗಳು. ಕ್ಯಾಂಟರ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75 ಬಿದನಗೆರೆ ಬೈಪಾಸ್ ಬಳಿ ಭಾನುವಾರ ಸಂಭವಿಸಿದೆ.

Read More »

ವರದಕ್ಷಿಣೆ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ!!

ಮದುವೆಯಾದ ಕೇವಲ ಎರಡು ತಿಂಗಳ ನಂತರ ವರದಕ್ಷಿಣೆಗಾಗಿ ಅತ್ತೆ-ಮಾವ ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಯುವತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ದುರಂತ ಘಟನೆ ತಿರುಪ್ಪೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.ತಿರುಪ್ಪೂರಿನ ಜವಳಿ ವ್ಯಾಪಾರಿ ಅಣ್ಣಾದೊರೈ ಅವರ ಪುತ್ರಿ ರಿಧಾನ್ಯ (27) ಈ ವರ್ಷದ ಏಪ್ರಿಲ್‌ನಲ್ಲಿ ಕವಿನ್ ಕುಮಾರ್ (28) ಎಂಬ ಯುವಕನನ್ನು ವಿವಾಹವಾದರು.

Read More »

ಐದು ಹುಲಿಗಳ ಸಾವಿಗೆ ಕಾರಣರಾದ ಮೂವರ ಬಂಧನ!

ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ಮೂವರನ್ನು ಅರಣ್ಯ ಇಲಾಖೆ ದಸ್ತಗಿರಿ ಮಾಡಿದ್ದಾರೆ. ವಿಷ ಪ್ರಾಶನ ಮಾಡಿದ್ದ ಹಸುವಿನ ಮಾಲೀಕನೂ ಪತ್ತೆಯಾಗಿದ್ದಾನೆ. ಕೊಪ್ಪ ಗ್ರಾಮದ ಕೂನಪ್ಪ, ಮಾದರಾಜ, ನಾಗರಾಜ ಬಂಧಿತರಾಗಿದ್ದಾರೆಂದು ಅರಣ್ಯ ಇಲಾಖೆ ಅಧಿಕೃತವಾಗಿ ಧೃಡಪಡಿಸಿದೆ.ಅರಣ್ಯದೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಹಸು ಸಮೀಪದ ಕೊಪ್ಪ ಗ್ರಾಮದ ಕೋನಪ್ಪ , ಹಸುವಿಗೆ ವಿಷ ಪ್ರಷಾಣ ಮಾಡಿಸಿದ ಮಾದರಾಜ ಬಿನ್ ಶಿವಣ್ಣಗೌಡ ಕೊಪ್ಪ ಗ್ರಾಮ, ಹಾಗೂ ನಾಗರಾಜ ಬಿನ್ ಪೂಜಾರಿಗೌಡ ಕಳ್ಗೋಬೆದೊಡ್ಡಿ (ಕೊಪ್ಪ ಗ್ರಾಮ …

Read More »

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸದೇ ಸಾವು!

ರಾತ್ರಿಯ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಕರೆ ತರುವಾಗ ಅಪಘಾತ ಸಂಭವಿಸಿದೆ. ಜೂನ್ 24 ರಾತ್ರಿ ಅತ್ತಿಬೆಲೆಯಿಂದ ಪಿಎಸ್‌ಐ ಮಹಿಬೂಬ್ ಹೊರಟಿದ್ದಾರೆ ಅತಿ ಬೆಲೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಕಾರಿನ ಬ್ರೇಕ್ ಡೌನ್ ಆಗುತ್ತದೆ. ಈ ವೇಳೆ ಕಾರು ಪರೀಕ್ಷೆ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದಂತಹ ಲಾರಿ ಕಾರಿಗೆ ಗುದ್ದಿದ್ದರಿಂದ ಮೆಹಬೂಬ್ ಗಾಯಗೊಂಡಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಮೆಹಬೂಬ್ ಸಾವನಪ್ಪಿದ್ದಾರೆ.

Read More »

ದಾವಣಗೆರೆ :ಪೆಟ್ರೋಲ್ ಸುರಿದು ‘ATM’ ಮಷೀನ್ ಕಳ್ಳತನಕ್ಕೆ ಯತ್ನ!

ಕಬ್ಬಿಣದ ಸರಳು ಬಳಸಿಕೊಂಡು ಕದೀಮರು ಎಟಿಎಂ ಮಷೀನ್ ಒಡೆಯಲು ಯತ್ನಿಸಿದ್ದಾರೆ. ಇದು ಸಾಧ್ಯವಾಗದೆ ಇದ್ದಾಗ ಪೆಟ್ರೋಲ್ ಸುರದಿದ್ದಾರೆ. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ದಟ್ಟ ಆವರಿಸುತ್ತಿದ್ದಂತೆ ಸುತ್ತಿದಂತೆ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.ಘಟನೆಯ ಸಂಪೂರ್ಣ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಕುರಿತು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತಾಯಿಯಿಂದಲೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ!

9ನೇ ತರಗತಿ ಓದುತ್ತಿರುವ ಸಂತ್ರಸ್ತೆ ಇತ್ತೀಚೆಗೆ ಶಾಲೆಗೆ ಆಗಮಿಸಿದ್ದ ಆಪ್ತ ಸಮಾಲೋಚಕರ ಬಳಿ ತನ್ನ ತಾಯಿಯಿಂದ ಲೈಂಗಿಕ ದೌರ್ಜನ್ಯ ಆಗುತ್ತಿರುವುದನ್ನು ವಿವರಿಸಿದ್ದಾಳೆ.ಮದುವೆ ಆದ ಬಳಿಕ ಗಂಡನ ಜತೆ ಹೇಗಿರಬೇಕೆಂದು ತನ್ನ ಅಂಗಾಂಗಗಳನ್ನು ಮುಟ್ಟಿ ತಾಯಿ ಹೇಳುತ್ತಿರುವುದಾಗಿ ಬಾಲಕಿ ತಿಳಿಸಿದ್ದಳು ಎನ್ನಲಾಗಿದೆ.ಪ್ರಕರಣದ ಗಂಭೀರತೆ ಅರಿತ ಆಪ್ತ ಸಮಾಲೋಚಕರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪ್ರಾಥಮಿಕ ವಿಚಾರಣೆ ನಡೆಸಿ ಬಾಲಕಿ ತಾಯಿ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿಕೊಳ್ಳಲಾಗಿದೆ.

Read More »

ಹಾವೇರಿ : ಅಂತರ್ ಜಿಲ್ಲಾ ಕಳ್ಳರ ಬಂಧನ!!

ಬಂಕಾಪುರ ಠಾಣಾ ವ್ಯಾಪ್ತಿಯಲ್ಲಿ, ಶಿವಮೂರ್ತಪ್ಪ ಎಂಬುವರು ತಮ್ಮ ಮಣೆಯಲ್ಲಿ ಕಳ್ಳತನವಾದ ಬಗ್ಗೆ ದೂರನ್ನು ಸಲ್ಲಿಸಿದ್ದು ರಾತ್ರಿ ಮನೆ ಕೀಲಿ ಒಡೆದು ಕಳ್ಳರು ಆಭರಣಗಳು ಮತ್ತು ನಗದನ್ನು ಕದ್ದುಪರಾರಿಯಾಗಿದ್ದಾರೆ ಎಂದು ದೂರ ಸಲ್ಲಿಸಿದ್ದರು. ಪೊಲೀಸರ ದೂರನ್ನು ದಾಖಲಿಸಿಕೊಂಡಿದ್ದು ಕಳ್ಳರ ಬಗ್ಗೆ ತನಿಖೆ ನಡೆಸಿದ್ದು ಆರೋಪಿಗಳಾದ ನವೀನ್, ಅಭಿಷೇಕ್, ಸಂಜಯ್ ಎಂಬುವವರನ್ನು ಬಂಧಿಸಿದ್ದು ಅವರಿಂದ 5 ಗ್ರಾಂ ಬಂಗಾರ ಹಾಗೂ ಎಪ್ಪತ್ತು ಸಾವಿರ ನಗರದನ್ನು ವಶಪಡಿಸಿಕೊಂಡಿದ್ದು ಕಳ್ಳತನಕ್ಕೆ ಉಪಯೋಗಿಸಿದ್ದ ವಸ್ತುಗಳನ್ನು ಹಾಗೂ ಸ್ವಿಫ್ಟ್ …

Read More »

ಹುಬ್ಬಳ್ಳಿ :ಮಾರುವೇಶದಲ್ಲಿ ಕಳ್ಳನನ್ನು ಹೆಡಮುರಿ ಕಟ್ಟಿದ ಹುಬ್ಬಳ್ಳಿ ಗ್ರಾಮೀಣ ಕ್ರೈಂ ಟೀಮ್…!

ಹುಬ್ಬಳ್ಳಿ:-ಗೋವಾ ಸೇರಿದಂತೆ ಹಲವು ಪೋಲೀಸ ಠಾಣೆಗಳಿಗೆ ಬೇಕಾದ ಅಂತರಾಜ್ಯ ಕಳ್ಳನನ್ನು ಲುಂಗಿ,ಟವಲ್ ಹಾಕಿಕೊಂಡು ಮಾರುವೇಶದಲ್ಲಿ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಗೋವಾ ರಾಜ್ಯದ ಹಲವು ಪೋಲೀಸ ಠಾಣೆ ಹಾಗೂ ಅಂಕಲಗಿ, ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಗೋವಾ ಮೂಲದ ಗ್ಯಾಬಿಪೌಲ್ ಫರ್ನಾಂಡಿಯಾ ಎಂಬಾತನನ್ನೇ ಬಂಧಿಸಿದ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಆತನಿಂದ ಬಂಗಾರ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.ಡಿವೈಎಸ್ಪಿ ವಿನೋದ ಮುಕ್ತೇದಾರ ನೇತೃದಲ್ಲಿ ಇನ್ಸ್ಪೆಕ್ಟರ್ ಬಿ …

Read More »

ಬೆಳಗಾವಿ : ಗುಂಡು ಹಾರಿಸಿ ಬರ್ತಡೆ ಆಚರಣೆ! FIR ದಾಖಲು.

ಬೆಳಗಾವಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಗೂಂಡಾ ವರ್ತನೆ ತೋರಿಸಿದ್ದು, ಬಂದೂಕಿನಿಂದ ಗುಂಡು ಹಾರಿಸಿ ಬರ್ತಡೆ ಆಚರಣೆ ಮಾಡಿಕೊಂಡಿದ್ದಾನೆ. ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಗ್ರಾಮ ಪಂಚಾಯಿತಿ ಸದಸ್ಯನನ್ನು ಅರೆಸ್ಟ್ ಮಾಡಲಾಗಿದೆ. ರಸ್ತೆಯಲ್ಲಿಯೇ ಗುಂಡು ಹಾರಿಸಿದ್ದು ಆತನ ಸುತ್ತಮುತ್ತ ಇರುವ ಯುವಕರು ಕೈಯಲ್ಲಿ ಚಾಕು ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ. ವಿಡಿಯೋ ಬಳಿಕ ಬಾಬಾ ಜಾನ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಡ್ಸಿ ಪೊಲೀಸ್ ಠಾಣೆಯಲ್ಲಿ ಆತನ …

Read More »

ಮಕ್ಕಳಲ್ಲಿ `ಹೃದಯಾಘಾತ’ ಹೆಚ್ಚಳಕ್ಕೆ `ಮೊಬೈಲ್’ ಬಳಕೆ ಕಾರಣ!

ಹುಬ್ಬಳ್ಳಿ :ಧಾರವಾಡ ಜಿಲ್ಲೆಯ ಆರು ಗ್ರಾಮೀಣ ಮತ್ತು ನಗರ ಶಾಲೆಗಳ 8 ಮತ್ತು 9 ನೇ ತರಗತಿಯ 30 ಲಕ್ಷಣರಹಿತ, ಅಧಿಕ ತೂಕದ ವಿದ್ಯಾರ್ಥಿಗಳ ಮೇಲೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಕೆಎಂಸಿಆರ್‌ಐ) ಬಹು-ಶಿಸ್ತಿನ ಸಂಶೋಧನಾ ಘಟಕ (ಎಂಆರ್ಯು) ಈ ಅಧ್ಯಯನವನ್ನು ನಡೆಸಿತು.ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಸುಮಾರು 26 ವಿದ್ಯಾರ್ಥಿಗಳು ಹೃದಯ ಸಂಬಂಧಿ ಕಾಯಿಲೆಯ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಇದು ದಿನಕ್ಕೆ …

Read More »