Breaking News

Breaking News

ಆನೇಕಲ್ : ಸೂಟ್‌ಕೇಸ್‌ನಲ್ಲಿ 16 ವರ್ಷದ ಬಾಲಕಿಯ ಶವ ಪತ್ತೆ!

ಚಂದಾಪುರದ ರೈಲ್ವೆ ಸೇತುವೆ ಬಳಿ ಬುಧವಾರ ಅನಾಥವಾಗಿ ಬಿದ್ದಿದ್ದ ಸೂಟ್‌ಕೇಸ್‌ನಲ್ಲಿ ಸುಮಾರು 16 ವಯಸ್ಸಿನ ಬಾಲಕಿಯ ಶವ ಪತ್ತೆಯಾಗಿದೆ.ಬಾಲಕಿಯ ಕೈಕಾಲು ಮಡಚಿ ಸೂಟ್‌ಕೇಸ್‌ನಲ್ಲಿ ತುಂಬಲಾಗಿದ್ದು, ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿರುವ ಕುರುಹುಗಳಿವೆ.ಬಾಲಕಿಯನ್ನು ಬೇರೆಡೆ ಕೊಲೆ ಮಾಡಿದ ನಂತರ ಶವವನ್ನು ಸೂಟ್‌ಕೇಸ್‌ನಲ್ಲಿಟ್ಟು ರೈಲಿನಿಂದ ಎಸೆದಿರಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಮತ್ತು ಸೂರ್ಯ ಸಿಟಿ ಪೊಲೀಸರು ಶಂಕಿಸಿದ್ದಾರೆ. ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ನೀಲಿ ಬಣ್ಣದ ಸೂಟ್‌ಕೇಸ್‌ ತೆರೆದುಕೊಂಡಿತ್ತು. …

Read More »

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ರೇಪ್ ಕೇಸ್!

ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಇದೀಗ 40 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅನ್ವಯ ಆರ್‌ಎಮ್‌ಸಿ ಯಾರ್ಡ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.ಅಪರಿಚಿತ ವ್ಯಕ್ತಿಯಿಂದ ಇಂಜೆಕ್ಷನ್ ತರಿಸಿ ಇಂಜೆಕ್ಟ್ ಮಾಡಿಸಿದ್ದರೆಂದು ದೂರಿನಲ್ಲಿ ದಾಖಲಾಗಿದೆ.ಅತ್ಯಾಚಾರಕ್ಕೂ ಮುನ್ನ ನೀಡಿದ ಇಂಜೆಕ್ಷನ್​ನಿಂದ ಈಗ ನನಗೆ ಇಡಿಆರ್ ಎಂಬ ಕಾಯಿಲೆ ಬಂದಿದೆ. ಇದ್ರಿಂದ ಮನನೊಂದ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.ಈ …

Read More »

ನರೇಗಲ್: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್, ವಿದ್ಯಾರ್ಥಿ ಆತ್ಮಹತ್ಯೆ!

ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌‌ಸಿ ಪರೀಕ್ಷೆ-1 ರಲ್ಲಿ ಅನುತ್ತೀರ್ಣ ಆದ ಕಾರಣಕ್ಕೆ ಪಟ್ಟಣದ ಅನ್ನದಾನೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ರಾಕೇಶ್ ನಾಗೇಶಪ್ಪ ಮಣ್ಣೋಡ್ಡರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.ಫಲಿತಾಂಶ ಪ್ರಕಟವಾದ ದಿನದಿಂದ ಮನಸ್ಸಿಗೆ ತೆಗೆದುಕೊಂಡಿದ್ದ ವಿದ್ಯಾರ್ಥಿಯು ಅದನ್ನೇ ಹೆಚ್ಚಾಗಿ ವಿಚಾರ ಮಾಡುತ್ತಿದ್ದ. ಇದೇ ವಿಷಯಕ್ಕೆ ಮನನೊಂದು ನರೇಗಲ್ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಶಾಲೆಯ ಆವರಣದಲ್ಲಿನ ಗಿಡಕ್ಕೆ ನೇಣು ಬಿಗಿದುಕೊಂಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ರಾಕೇಶ್ ಉತ್ತಮ ಕಬಡ್ಡಿ ಆಟಗಾರನಾಗಿದ್ದು ಮುಕ್ತ …

Read More »

ಚಾಮರಾಜನಗರ : ಸಾಮಾಜಿಕ ಬಹಿಷ್ಕಾರ, ಕಿರುಕುಳಕ್ಕೆ ಸೋತು ವ್ಯಕ್ತಿ ನೇಣಿಗೆ ಶರಣು!

ಸಾಮಾಜಿಕ ಬಹಿಷ್ಕಾರದ ಪಿಡುಗು ಇನ್ನೂ ಜೀವಂತವಿದ್ದು ಅದೆಷ್ಟೋ ಕುಟುಂಬಗಳು ನಲುಗಿ ಹೋಗಿವೆ. ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಬಹಿಷ್ಕಾರದಿಂದ ಬೇಸತ್ತು ನೇಣಿಗೆ ಕೊರಳೊಡ್ಡಿದ್ದಾನೆ.ಮೂರು ವರ್ಷಗಳ ಹಿಂದೆ ಅಗರ ಗ್ರಾಮದ ಉಗ್ರಾಣ ಬೀದಿಗೆ ರಂಗಸ್ವಾಮಿ ಯಜಮಾನನಾಗಿದ್ದ.ಈ ವೇಳೆ ಕುಲಕ್ಕೆ ಸಂಬಂಧಿಸಿದ 12 ಲಕ್ಷ ರೂಪಾಯಿಗಳನ್ನು ಈತ ವೈಯಕ್ತಿಕವಾಗಿ ಬಳಸಿಕೊಂಡಿದ್ದ. ಇದು ಗೊತ್ತಾದ ನಂತರ ಈತನನ್ನು ಯಜಮಾನ ಸ್ಥಾನದಿಂದ ಕೆಳಗಿಳಿಸಿದ ಗ್ರಾಮಸ್ಥರು 12 ಲಕ್ಷ ರೂಪಾಯಿ ಕಟ್ಟುವಂತೆ ತಾಖೀತು ಮಾಡಿದ್ದರು. ಆದರೆ ಗಾರೆ ಕೆಲಸ …

Read More »

ಪಾಕಿಸ್ತಾನದಲ್ಲಿ ಮದುವೆಯಾಗುವ ಪ್ಲ್ಯಾನ್ ಮಾಡಿದ್ದ ದೇಶದ್ರೋಹಿ ಯೂಟ್ಯೂಬರ್ ಜ್ಯೋತಿ!

ಜ್ಯೋತಿ ಮೂಲತಃ ಭಾರತದವಳಾಗಿ, ಭಾರತದ ವಾತಾವರಣದಲ್ಲಿ ಬೆಳೆದು, ಭಾರತದ ಅನ್ನುವನ್ನು ತಿಂದು, ಪಾಪಿ ಪಾಕಿಸ್ತಾನದ ಜೊತೆ ಕೈ ಜೋಡಿಸಿದ್ದ ಮಹಿಳೆ. ಟ್ರಾವೆಲ್ ವಿತ್ ಜೋ ಎಂಬ ಯೂಟ್ಯೂಬ್ ಚಾನೆಲ್‌ ಹೆಸರಿನಲ್ಲಿ ಮಣ್ಣು ತಿನ್ನುವ ಕೆಲಸವನ್ನು ಮಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.ಐಎಸ್‌ಐ ಏಜೆಂಟ್‌ ಅಲಿ ಹಸನ್‌ ಜೊತೆಗಿನ ಜ್ಯೋತಿ ಮಲ್ಹೋತ್ರಾ ಮಾಡಿದ್ದ ವಾಟ್ಸಾಪ್ ಚಾಟ್‌ಗಳು ಪೊಲೀಸ್ ತನಿಖೆ ವೇಳೆ ಬಯಲಾಗಿದ್ದು, ಪಾಕಿಸ್ತಾನದಲ್ಲಿ ಮದುವೆಯಾಗಬೇಕೆನ್ನುವ ಕನಸನ್ನು ಜ್ಯೋತಿ ಕಂಡಿದ್ದರು ಎನ್ನುವುದು ಬಹಿರಂಗವಾಗಿದೆ.ಒಟ್ಟು ನಾಲ್ಕು …

Read More »

ತುಮಕೂರು: ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು!!

ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವಂತ ಲೋರಸ್ ಬಯೋ ಕಂಪನಿಯಲ್ಲಿ ಸಂಪ್ ಕ್ಲೀನ್ ಮಾಡುವ ಉಸಿರುಗಟ್ಟಿ ವೆಂಕಟೇಶ್(32), ಪ್ರತಾಪ್(23) ಸಾವನ್ನಪ್ಪಿದ್ದಾರೆ.ವೆಂಕಟೇಶ್ ಜೊತೆಗೆ ಫ್ಯಾಕ್ಟರಿಯ ಸಂಪ್ ಅನ್ನು ನಾಲ್ವರು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆಯಲ್ಲಿ ಕಾರ್ಮಿಕ ವೆಂಕಟೇಶ್, ಸೆಕ್ಯೂರಿಟಿ ಗಾರ್ಡ್ ಪ್ರತಾಪ್, ಮಂಜುನಾಥ್, ಯುವರಾಜ್ ಉಸಿರುಗಟ್ಟಿ ಅಸ್ವಸ್ಥರಾಗಿದ್ದಾರೆ. ಸ್ಥಳದಲ್ಲಿದ್ದಂತ ಇತರೆ ಕಾರ್ಮಿಕರು ಅವರನ್ನು ರಕ್ಷಿಸಿದ್ದಾರೆ.ಕೂಡಲೇ ಅವರನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗಾಗಿ ಕರೆದೊಯ್ದಿದ್ದರು. ಆದರೇ ಮಾರ್ಗ ಮಧ್ಯೆ ಸೆಕ್ಯೂರಿಟಿ ಗಾರ್ಡ್ ಪ್ರತಾಪ್ ಹಾಗೂ …

Read More »

ದೇಶದಾದ್ಯಂತ ಬ್ಯಾಂಕ್‌ ಸಿಬ್ಬಂದಿಗೆ ಭಾಷಾ ಸಂವೇದನಾ ತರಬೇತಿ ನೀಡಿ, ಸಿಎಂ ಸಿದ್ದರಾಮಯ್ಯ ಆಗ್ರಹ!

ಆನೇಕಲ್‌ ತಾಲೂಕಿನ ಸೂರ್ಯ ನಗರದಲ್ಲಿರುವ ಎಸ್‌ ಬಿ ಐ ಶಾಖೆಯ ಮಹಿಳಾ ವ್ಯವಸ್ಥಾಪಕರೊಬ್ಬರು, ಇಲ್ಲಿರುವ ವರೆಗೆ ನಾನು ಕನ್ನಡ ಮಾತನಾಡುವುದಿಲ್ಲ ಎಂದು ಹೇಳಿದ್ದ ವೀಡಿಯೊ ವೈರಲ್ ಆಗಿತ್ತು.ಇದರಿಂದ ದೇಶದಾದ್ಯಂತ ಬ್ಯಾಂಕ್‌ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ವಿತ್ತ ಸಚಿವರನ್ನು ಆಗ್ರಹಿಸಿದ್ದಾರೆ. ಎಲ್ಲಾ ಬ್ಯಾಂಕ್ ಉದ್ಯೋಗಿಗಳು, ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು . ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು” …

Read More »

ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ, ನಟ ದರ್ಶನ್‌ ಜಾಮೀನು ರದ್ದಾಗುತ್ತಾ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ತೂಗುದೀಪ ಹಾಗೂ ಇನ್ನಿತರ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ದರ್ಶನ್ ಸೇರಿದಂತೆ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಪೊಲೀಸರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಕೈಗೆತ್ತಿಕೊಂಡಿದೆ.ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ದರ್ಶನ್‌ ಹಾಗೂ ಪ್ರಕರಣದ ಆರೋಪಿಗಳಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.ಈ ಕೇಸ್‌ ಕುರಿತಂತೆ ಮೊದಲ ದೋಷಾರೋಪ ಪಟ್ಟಿಯಲ್ಲಿ 262 ಸಾಕ್ಷಿಗಳನ್ನು ಉಲ್ಲೇಖಿಸಲಾಗಿತ್ತು. ಈಗ 10 …

Read More »

ಬೆಂಗಳೂರು : ಎಸ್‌ಬಿಐ ಮ್ಯಾನೇಜರ್ ದುರ್ವರ್ತನೆಗೆ ಸಿಎಂ ಸಿದ್ದರಾಮಯ್ಯ ಖಂಡನೆ!

ಆನೇಕಲ್ ತಾಲೂಕಿನ ಸೂರ್ಯನಗರದ SBI ಬ್ಯಾಂಕ್‌ನಲ್ಲಿ ನಡೆದ ಒಂದು ಘಟನೆಯು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಹಕರೊಬ್ಬರು ಕನ್ನಡದಲ್ಲಿ ಮಾತನಾಡಲು ಕೋರಿದಾಗ, ಬ್ಯಾಂಕ್ ವ್ಯವಸ್ಥಾಪಕರು ಉದ್ಧಟತನದಿಂದ ವರ್ತಿಸಿ, ‘ನಾನು ಕನ್ನಡ ಮಾತಾಡಲ್ಲ, ಇದು ಭಾರತ, ಹಿಂದಿಯಲ್ಲೇ ಮಾತಾಡುತ್ತೇನೆ,’ ಎಂದು ದರ್ಪದಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.ಸರ್ಜಾಪುರದ ಎಸ್‌ಬಿಐ ಶಾಖೆಗೆ ಭೇಟಿ ನೀಡಿದ ಗ್ರಾಹಕರೊಬ್ಬರು ಕನ್ನಡದಲ್ಲಿ ಸಂವಹನ ನಡೆಸಲು ಕೋರಿದಾಗ, ಬ್ಯಾಂಕ್ ಮ್ಯಾನೇಜರ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ನಿರಾಕರಿಸಿ, ಹಿಂದಿಯನ್ನೇ ಬಳಸುವುದಾಗಿ …

Read More »

ಮೈಸೂರು: ಯುವತಿಯ ಮೃತದೇಹ ಪತ್ತೆ ಕೇಸ್ ಗೆ ಟ್ವಿಸ್ಟ್, ಅತ್ಯಾಚಾರ ಎಸಗಿ ಹತ್ಯೆಗೈದಿರುವ ಶಂಕೆ!

ಮೈಸೂರಿನಲ್ಲಿ ಯುವತಿಯ ಮೃತದೇಹ ಮತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂದು ಇದೀಗ ಯುವತಿಯ ಸಂಬಂಧಿ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಯುವತಿಯ ಸೋದರ ಮಾವನ ಮಗ ವೆಂಕಟೇಶ್ ಈ ಕುರಿತು ಗಂಭೀರವಾದ ಆರೋಪ ಮಾಡಿದ್ದಾರೆ.ಆಸ್ಪತ್ರೆಗೆ ಹೊರಡುವ ಮುನ್ನ ತಂದೆಗೆ ಯುವತಿ ಕರೆ ಮಾಡಿದ್ದಾಳೆ. ಮಳೆ ಬರುತ್ತಿದೆ ಆಟೋದಲ್ಲಿ ಹೋಗುವಂತೆ ತಂದೆ ತಿಳಿಸಿದ್ದರು. ಆದರೆ ಬೆಳಿಗ್ಗೆ ಕುತ್ತಿಗೆಗೆ ವೇಲ್ನಿಂದ ಬಿಗಿದು ಹತ್ಯೆ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದರೆ …

Read More »