BigTv News
May 21, 2025
Breaking News
ನಾರಾಯಣ್ ಪುರ-ಬಿಜಾಪುರ್ ಗಡಿಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಕನಿಷ್ಠ 27 ನಕ್ಸಲರು ಮೃತಪಟ್ಟಿದ್ದಾರೆ.ರಾಜ್ಯ ಪೊಲೀಸರು ದೊಡ್ಡ ಪ್ರಮಾಣದ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ದಟ್ಟ ಅರಣ್ಯ ಅಭುಜ್‌ಮದ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಪೊಲೀಸರ ಬೆಂಬಲಿಗ ಮೃತಪಟ್ಟಿದ್ದಾರೆ ಮತ್ತು ಒಬ್ಬರು ಪೊಲೀಸರಿಗೆ ಗಾಯವಾಗಿದೆ ಎಂದು ಪೊಲೀಸರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಇಂದು ನಸುಕಿನ ಜಾವ ಆರಂಭವಾದ ಎನ್‌ಕೌಂಟರ್ ಇನ್ನೂ …
Read More »
BigTv News
May 21, 2025
Breaking News
ಕೆಎಚ್‌ಬಿ ಕಾಲೊನಿಯ ಸೂರ್ಯ ನಗರದ ಮನೆಯೊಂದರಲ್ಲಿ ಶಾರ್ಟ್ ಸರ್ಕಿಟ್‌ನಿಂದಾಗಿ ಸಿಲಿಂಡರ್ ಸ್ಫೋಟಗೊಂಡ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ. ಸ್ಫೋಟದಿಂದಾಗಿ ಅಡುಗೆ ಮನೆಯಲ್ಲಿದ್ದ ರೆಫ್ರಿಜರೇಟರ್, ವಾಟರ್ ಪ್ಯೂರಿಫೈಯರ್ ಸೇರಿದಂತೆ ಗೃಹಬಳಕೆಯ ವಸ್ತುಗಳಿಗೆ ಹಾನಿಯಾಗಿದೆ.ಹೆಚ್ಚಿನ ಹಾನಿ ಸಂಭವಿಸದಂತೆ ತಕ್ಷಣವೇ ಬೆಂಕಿ ನಂದಿಸಲಾಗಿದೆ. ಮನೆಯಲ್ಲಿದ್ದ ಮೂವರು ಅಪಾಯದಿಂದ ಪಾರಾಗಿದ್ದಾರೆ’ ಎಂದು ಗದಗ ಅಗ್ನಿಶಾಮಕದಳ ಠಾಣಾಧಿಕಾರಿ ಲೋಕೇಶ್ ಜಿ.ಕೆ. ತಿಳಿಸಿದ್ದಾರೆ.ಪ್ರಮುಖ ಅಗ್ನಿಶಾಮಕ ರಾಮಣ್ಣ ಬಿ ಹಲಗಿ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು
Read More »
BigTv News
May 21, 2025
Breaking News, Crime
ತಾನು ವಾಸಿಸುತ್ತಿದ್ದ ಸ್ಥಳದಲ್ಲಿ ತನ್ನ ಸ್ನೇಹಿತರು ಅವರ ಮಕ್ಕಳಿಗಾಗಿ ಶಾಲಾ, ಕಾಲೇಜು ಶುಲ್ಕವನ್ನು ಕಟ್ಟಲು ಪರದಾಡುತ್ತಿರುವುದನ್ನು ನೋಡಿದ್ದ. ಕಳ್ಳತನ ಮಾಡಿ 20 ಮಕ್ಕಳ ಶಾಲಾ, ಕಾಲೇಜು ಶುಲ್ಕ ಪಾವತಿಸಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಚಿನ್ನ ಮಾರಾಟ ಮಾಡಿಸಿದ್ದ ಶಿವು ಬಂದ ಹಣದಲ್ಲಿ ವಿವೇಕ್‍ಗೆ 4 ಲಕ್ಷ ರೂ., ಅನಿಲ್‍ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದ. ಉಳಿದ 14 …
Read More »
BigTv News
May 21, 2025
Breaking News, Crime
ಗಂಡ ತನ್ನ ಪತ್ನಿಯಿಂದ ಹಿಂಸೆಗೊಳಗಾಗಿರುವುದಾಗಿ ಆರೋಪಿಸಿ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಮುಂದೆ ಕಣ್ಣೀರು ಹಾಕಿದ್ದಾನೆ.ನನ್ನ ಹೆಂಡತಿ ದಿನಂಪ್ರತಿ ನನ್ನನ್ನು ಹೊಡೆಯುತ್ತಾಳೆ, ಕಿರುಕುಳ ಕೊಡುತ್ತಾಳೆ’ ಎಂದು ಕಮಿಷನರ್ ಶಶಿಕುಮಾರ್ ಅವರ ಎದುರು ಕಣ್ಣೀರಿಟ್ಟಿದ್ದಾನೆ. ಈ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.ಪತ್ನಿಯ ಆರೋಪದಂತೆ, ಗಂಡ ಆಗಾಗ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದನಂತೆ. ಇದರಿಂದ ಬೇಸತ್ತ ಪತ್ನಿ, ಕಾನೂನಿನ ರಕ್ಷಣೆಗಾಗಿ ಸಬ್ ಅರ್ಬನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ. ಆದರೆ, ಈ ದೂರಿಗೆ ಪ್ರತಿಯಾಗಿ, …
Read More »
BigTv News
May 21, 2025
Breaking News, Crime
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ದಲಿತ ಬಿ.ಟೆಕ್ ವಿದ್ಯಾರ್ಥಿಯನ್ನು ಅಪಹರಿಸಿ, ಥಳಿಸಿ ಮೂತ್ರ ಕುಡಿಸಿರುವಂತಹ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಜೇಮ್ಸ್, ತನ್ನ ಜೂನಿಯರ್ ವಿದ್ಯಾರ್ಥಿಗಳು ಮತ್ತು ಕ್ರಿಮಿನಲ್‌ಗಳ ಗುಂಪೊಂದು ತನ್ನನ್ನು ಅಪಹರಿಸಿ ಕ್ರೂರ ಚಿತ್ರಹಿಂಸೆ ನೀಡಿದ್ದಾಗಿ ಆರೋಪಿಸಿದ್ದಾರೆ. ಜಾತಿ ಆಧಾರಿತ ದ್ವೇಷದಿಂದ ಈ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಈ ಹಿಂದೆ ಜೇಮ್ಸ್ ಜಾತಿ ನಿಂದನೆಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದು, ತನ್ನನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಪದೇ ಪದೇ ವಿನಂತಿಸಿಕೊಂಡರೂ …
Read More »
BigTv News
May 21, 2025
Breaking News, SPECIAL NEWS
ಕನ್ನಡದ ಪ್ರಮುಖ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಗರಿಮೆ ಸಂದಿದೆ. ಸಣ್ಣ ಕತೆಗಳ ಅನುವಾದಿತ ಸಂಕಲನವಾಗಿರುವ “ಹಾರ್ಟ್ ಲ್ಯಾಂಪ್”ಗೆ ಈ ಪ್ರಶಸ್ತಿ ಸಂದಿದೆ. ಕನ್ನಡದ ಕೃತಿಯೊಂದಿಗೆ ಈ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು. ಹೀಗಾಗಿ, ಈ ಪ್ರಶಸ್ತಿ ಕನ್ನಡಿಗರಲ್ಲಿ ಪುಳಕವನ್ನುಂಟು ಮಾಡಿದೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾರೀ ಪೈಪೋಟಿ ಹಾಗೂ ಸ್ಪರ್ಧೆ ಇರುತ್ತದೆ. ಇಷ್ಟೊಂದು ಸ್ಪರ್ಧೆಗಳ ನಡುವೆ ಪ್ರಶಸ್ತಿ ಕನ್ನಡತಿಗೆ ಸಂದಿದೆ.ಕೆಲವೇ ದಿನಗಳ ಹಿಂದೆ …
Read More »
BigTv News
May 21, 2025
Breaking News
ಆಕಳ ಮೈ ತೊಳೆಯಲು ಕೆರೆಗೆ ಹೋದ ಸಮಯದಲ್ಲಿ ಸಿಡಿಲು ಬಡಿದು ಯುವಕನೋರ್ವ ಸಾವಿಗೀಡಾಗಿರುವ ಘಟನೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ಸಂಭವಿಸಿದೆ.ಮೈಲಾರಪ್ಪ ಬಸಪ್ಪ ಉಣಕಲ್ ಎಂಬಾತನೇ ಸಾವಿಗೀಡಾದ ದುರ್ಧೈವಿಯಾಗಿದ್ದು, ಮೂಲತಃ ಹಿರೇಹರಕುಣಿ ಗ್ರಾಮದವನೆಂದು ಗೊತ್ತಾಗಿದೆ.ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
Read More »
BigTv News
May 21, 2025
Breaking News
ದಿನಗಳ ಹಿಂದೆ ನಗರದ ಕಲ್ಕುಣಿಕೆ ಬಡಾವಣೆಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಬದಲಾಯಿಸುವ ವೇಳೆ ಬೆಂಕಿ ತಗುಲಿ ತೀವ್ರ ಗಾಯಗೊಂಡಿದ್ದ ಐವರ ಪೈಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.ಹುಣಸೂರಿನ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಪ್ರಯೋಜನವಾಗದೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯ ವಿಭಾಗಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜ್ಯೋತಿ ಹಾಗೂ ನಾಗಮ್ಮ ಸಾವನ್ನಪ್ಪಿದ್ದಾರೆ.ನಿಂಗರಾಜ್, ರಾಣಿಯಮ್ಮ, ಶೀಲ ಸೇರಿದಂತೆ ಮೂವರು ಕೆ.ಆರ್.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ …
Read More »
BigTv News
May 21, 2025
Breaking News
ರಾಯಚೂರಿನಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಲಿಂಗದಹಳ್ಳಿ ಗ್ರಾಮದ ಜಮೀನಿನಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದು ದೇವಕಿ ಮ್ಯಾಗೇರಿ (40)ಸಾವನ್ನಪ್ಪಿದ್ದಾರೆ.ಮಳೆ ನಿಂತ ನಂತರ ಗ್ರಾಮಸ್ಥರು ಸ್ಥಳಕ್ಕೆ ಓಡಿ ಹೋಗಿ ನೋಡಿದಾಗ ಸಿಡಿಲು ಬಡಿದು ದೇವಕಿ ಮೃತಪಟ್ಟಿರುವುದು ತಿಳಿದುಬಂದಿದೆ.
Read More »
BigTv News
May 21, 2025
Breaking News, Crime
ಶಿಬಾಜೆ ಗ್ರಾಮದ ಬರ್ಗುಳ ಸಮೀಪ, ಶೀನ ಎಂಬವರ ಮನೆಯ ಪಕ್ಕ ಹರಿಯುತ್ತಿರುವ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು.ಇದು ಪತ್ತಿಮಾರು ನಿವಾಸಿ ಪ್ರಸಾದ್ ಪೂಜಾರಿ ಅವರದ್ದು ಎಂದು ಆತನ ಮನೆಯವರು ಶವದ ಗುರುತು ಹಿಡಿದ ಬಳಿಕ ತಿಳಿದು ಬಂದಿದೆ.ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದವರಾದ ಅವಿನಾಶ್ ಭಿಡೆ, ಕಿರಣ್, ಕೃಷ್ಣಪ್ಪ, ಬೇಬಿ ಪೆರ್ಲ, ಸಚಿನ್ ಭಿಡೆ, ರವೀಂದ್ರ ರವರು ಸ್ಥಳಕ್ಕೆ ಆಗಮಿಸಿ ಶವ ಮೇಲೆ ತೆಗೆಯುವ ಕೆಲಸ ಮಾಡಿದ್ದಾರೆ.ಧರ್ಮಸ್ಥಳ ಠಾಣಾ …
Read More »