Breaking News

Breaking News

ಮದ್ದೂರು :ವ್ಯಕ್ತಿ ನಾಪತ್ತೆ ದೂರು ದಾಖಲು!

ಭೀಮನಕೆರೆ ಗ್ರಾಮದ ಕೆಂಪಣ್ಣ ನಾಪತ್ತೆಯಾಗಿರುವುದಾಗಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಕಳೆದ ಫೆಬ್ರವರಿ 2ರಂದು ಹೋಗಿದ್ದ ಕೆಂಪಣ್ಣ ಅಂದಿನಿಂದ ನಾಪತ್ತೆಯಾಗಿದ್ದಾರೆ ದೂರು ನೀಡಲಾಗಿದೆ. 47 ವರ್ಷದ ಕೆಂಪಣ್ಣ 5.4 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಮನೆಯಿಂದ ಹೊರಡುವಾಗ ನೀಲಿ ಮಿಶ್ರಿತ ಬಣ್ಣದ ಲುಂಗಿ ಮತ್ತು ಶರ್ಟು ಧರಿಸಿದ್ದಾನೆ. ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರು …

Read More »

ಮದ್ದೂರು :ಪತ್ನಿ ಕಿರುಕುಳ ಪತಿ ನಾಪತ್ತೆ, ದೂರು ದಾಖಲು!

ಪತ್ನಿ ಕಿರುಕುಳದಿಂದ ಬೇಸತ್ತ ತಮ್ಮ ಪುತ್ರ ನಾಪತ್ತೆಯಾಗಿರುವುದಾಗಿ ತಾಯಿ ಪಾರ್ವತಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಪಟ್ಟಣದ ವೈದ್ಯನಾಥಪುರ ರಸ್ತೆ ನಿವಾಸಿ ಮನು (38) ಅವರಿಗೆ ಸೊಸೆ ಜಯಶ್ರೀ ದಿನನಿತ್ಯ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಮನು ಕಳೆದ ಮೇ 5ರಿಂದ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಮನು 5.9 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೊಗುವಾಗ ಈತ ನೀಲಿ ಬಣ್ಣದ ಟಿ-ಶರ್ಟು ಹಾಗೂ ಜೀನ್ಸ್ ಪ್ಯಾಂಟ್ …

Read More »

ಬೆಂಗಳೂರು :ಎರಡು ಬೈಕ್‌ಗಳ ನಡುವೆ ಡಿಕ್ಕಿ, ಜೆಡಿಎಸ್ ಮುಖಂಡ ದುರ್ಮರಣ!

ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಜೆಡಿಎಸ್ ಮುಖಂಡ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸಹೊಳಲು- ಕತ್ತರಘಟ್ಟ ಗೇಟ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ತಾಲೂಕಿನ ಹೊಸಹೊಳಲು ಗ್ರಾಮದ ಜೆಡಿಎಸ್ ಮುಖಂಡ ಬಾಲಕೃಷ್ಣ (55) ಮೃತಪಟ್ಟವರು.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬೆಂಗಳೂರು-ಜಲಸೂರು ಮಾರ್ಗದ ರಾಜ್ಯ ಹೆದ್ದಾರಿ ಬಳಿ ಘಟನೆ ನಡೆದಿದ್ದು, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ದಾವಣಗೆರೆ :ಕಾರು-ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರು ಯುವತಿಯರು ಸಾವು!

ಕಾರು-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಜರುಗಿದೆ.ಸುಮಾ, ಪಲ್ಲವಿ ಮೃತ ದುರ್ದೈವಿಗಳು. ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಬೈಕ್ ಸವಾರ ಸಚಿನ್‌ಗೆ ಗಂಭೀರ ಗಾಯಗಳಾಗಿವೆ.ಸಚಿನ್ ಬುಧವಾರ ಸಂಜೆ ಸಂಬಂಧಿಗಳಾದ ಸುಮಾ ಮತ್ತು ಪಲ್ಲವಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಬರುವಾಗ ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಯುವತಿಯರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಸುಮಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ …

Read More »

ಆರಕ್ಷಕರ ಹಣೆಪಟ್ಟಿಯಲ್ಲಿ ಪಾಪದ ಕೆಲಸಕ್ಕೆ ಕೈ ಹಾಕಿದ ಕಡು ಭ್ರಷ್ಟರು..!!!!

ಬಡ್ಡಿದಂಧೆಯ ಮೊದಲ ಬೇರು ಇಲಾಖೆಯಲ್ಲಿ..???? ಸಮಯ ಕೊಡಿ ಅಂದ್ರೆ ನಾವು ಇನ್ನು ಮುವತ್ತು ವರ್ಷ ಸರ್ವಿಸ್ ಮಾಡ್ತೇವಿ ನೋಡು ಅಂತ ಧಮ್ಕಿ… ಸಲಾಂ ಸಲಾಂ ಅಂದ್ರು ಕರುಣೆ ಇಲ್ಲಿದ ಕಟುಕರು!!! ಕರ್ಮ ರಿಟರ್ನಸ್ ..ಮಾಡಿದ್ದ ಉಣ್ಣೋ ಮಾರಯ್ಯ ಅನ್ನೊ ಮಾತು ನೆನಪಿಗೆ ಬರುವ ದಿನ… ಈ ಸುದ್ದಿ ಪ್ರಸಾರ ಆದ ನಂತರ ಎಷ್ಟು ಮಂದಿ ಅಮಾನತ್ತು ಆಗ್ತಾರೆ ಅಂದ್ರೆ ಉಹಿಸಲು ಆಗದ ಸ್ಟೋರಿ……. ಹುಬ್ಬಳ್ಳಿ: ಅವಳಿ ನಗರದಲ್ಲಿ ಬಡವರ ರಕ್ತ …

Read More »

ತುಮಕೂರು :ಗಾಂಜಾ ಮಾರಾಟ, ಇಬ್ಬರು ಬಂಧನ!!

ಬಟವಾಡಿ ಕೆಳ ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಹೊಸ ಬಡಾವಣೆ ಠಾಣೆ ಪೊಲೀಸರು, ₹1.10 ಲಕ್ಷ ಮೌಲ್ಯದ 1 ಕೆ.ಜಿ 300 ಗ್ರಾಂ ಗಾಂಜಾ ಸೊಪ್ಪು ಜಪ್ತಿ ಮಾಡಿದ್ದಾರೆ.ಇಬ್ಬರು ಪ್ರತಿ ಸೋಮವಾರ ಬಟವಾಡಿ ಬಳಿ ವ್ಯಕ್ತಿಯೊಬ್ಬರಿಂದ ಗಾಂಜಾ ಖರೀದಿಸುತ್ತಿದ್ದರು. ಅದನ್ನು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದರು. ಸೋಮವಾರ ಸಂಜೆ ಬ್ಯಾಗ್‌ನಲ್ಲಿ ಗಾಂಜಾ ಸೊಪ್ಪು ಹಿಡಿದುಕೊಂಡು ನಿಂತಿದ್ದರು.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, …

Read More »

ಬೆಂಗಳೂರು :ಡಿವೈಡರ್‌ಗೆ ಬಸ್‌ ಡಿಕ್ಕಿ, ದೇವನಹಳ್ಳಿ ಏರ್‌ಪೋರ್ಟ್‌ ಸಿಬ್ಬಂದಿ ಸಾವು!

ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 33 ಮಂದಿ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು ಸಿಐಎಸ್‌ಎಫ್ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.ತೀವ್ರವಾಗಿ ಗಾಯಗೊಂಡಿದ್ದ ಸಂತೋಷ್ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ …

Read More »

ಹಾಸನ : ಕಲ್ಲಹಳ್ಳಿ ಪ್ರಪಾತದಲ್ಲಿ ವ್ಯಕ್ತಿಯ ಶವ ಪತ್ತೆ!

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಪ್ರಪಾತದಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಮೃತದೇಹದ ಪರಿಶೀಲನೆ ನಡೆಸಿದಾಗ ಆತ ಕೊಡಗು ಜಿಲ್ಲೆಯ ಸಂಪತ್​ ಎಂದು ತಿಳಿದುಬಂದಿದೆ.ಕಲ್ಲಹಳ್ಳಿ ಗ್ರಾಮದ ಬಳಿ ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತ ಹರಿದಿರುವುದನ್ನು ಗಮನಿಸಿದ್ದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಯಸಳೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಅತ್ತ, ಕುಶಾಲನಗರ ಪೊಲೀಸ್​ ಠಾಣೆಯಲ್ಲಿ ಸಂಪತ್ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.ಮೇಲ್ನೋಟಕ್ಕೆ ಯಾರೋ ಸಂಪತ್​ ಅವರನ್ನು ಬರ್ಬರವಾಗಿ ಕೊಚ್ಚಿ …

Read More »

ಸಾಕಿದ್ದ ಸಿಂಹದಿಂದಲೇ ವ್ಯಕ್ತಿ ಬಲಿ ; ದಾಳಿ ಮಾಡಿ ಕಚ್ಚಿತಿಂದ ಪ್ರಾಣಿ! !

ಅಖಿಲ್ ಫಖರ್ ಅಲ್-ದಿನ್ ಎಂಬ 50 ವರ್ಷದ ವ್ಯಕ್ತಿಯೊಬ್ಬರು ತಾವು ಸಾಕಿದ್ದ ಸಿಂಹದ ದಾಳಿಗೆ ಬಲಿಯಾಗಿದ್ದಾರೆ. ಅಲ್-ಬರಾಕಿಯಾ ಜಿಲ್ಲೆಯ ಜನರು ಈ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.ಹೊಸದಾಗಿ ತಂದಿದ್ದ ಸಿಂಹವನ್ನು ಪಳಗಿಸುವ ಪ್ರಯತ್ನದಲ್ಲಿದ್ದಾಗಲೇ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.ಅಲ್-ಘದ್ ಪತ್ರಿಕೆಯ ವರದಿಗಳ ಪ್ರಕಾರ, ಅಲ್-ದಿನ್ ಸಿಂಹದ ಪಂಜರದ ಬಳಿ ಹೋದಾಗ ಅದು ಹಠಾತ್ ದಾಳಿ ಮಾಡಿದೆ. ಸಿಂಹವು ಅವರ ಕುತ್ತಿಗೆ ಮತ್ತು ಎದೆಗೆ ಕಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿ ತಕ್ಷಣವೇ …

Read More »

ಬಾಗಲಕೋಟ :ಶಿಕ್ಷಕನ ಮೇಲೆ ಬಿಯರ್ ಬಾಟಲನಿಂದ ಹಲ್ಲೆ!!

ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ಶಿಕ್ಷಕರೊಬ್ಬರ ಮೇಲೆ ಬಿಯರ್ ಬಾಟಲನಿಂದ ಮಾರಣಾಂತಿಕ‌ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ‌ ಸಾವಳಗಿ ಗ್ರಾಮದಲ್ಲಿ ಜರುಗಿದೆ.ಶಿಕ್ಷಕನ ಮನೆಯ ಪಕ್ಕದ ಯುವಕ ಪವನ ಜಾಧವ ನಡುವೆ ಕ್ರಿಕೆಟ್ ಬಾಲ್ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ಬಾಲ್‌ ಶಿಕ್ಷಕನ ಮನೆಯ ಒಳಗೆ ಬಿದ್ದಿದ್ದರಿಂದ ಶಿಕ್ಷಕ ಬೈದು ಬುದ್ದಿವಾದ ಹೇಳಿದ್ದರಂತೆ. ಆದರೆ ಶಿಕ್ಷಕ ಬೈದಿರುವ ಬಗ್ಗೆ ಯುವಕ ಪವನ ಮನಸ್ಸಿನಲ್ಲಿ ದ್ವೇಷವನ್ನು ಬೆಳೆಸಿಕೊಂಡಿದ್ದ. ಇದೇ ದ್ವೇಷದ …

Read More »