Breaking News

Breaking News

ಯಾದಗಿರಿ : ಅಳಿಯನನ್ನೇ ಕೊಚ್ಚಿ ಕೊಲೆ ಮಾಡಿದ ಮಾವ!

ಸಾಲದ ವಿಚಾರಕ್ಕೆ ಮಾವ ಅಳಿಯನನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಣಸಗಿ ತಾಲೂಕಿನ ಶಾಖಾಪುರ(ಎಸ್.ಕೆ) ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣ ಚಿಗರಿಹಾಳ (28) ಮೃತ ದುರ್ದೈವಿ. ಸೋದರ ಮಾವ ಮಾನಪ್ಪ ಕೊಲೆ ಮಾಡಿದ ಆರೋಪಿ.ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಲಕ್ಷ್ಮಣ ಚಿಗರಿಹಾಳ ಮಾವ ಮಾನಪ್ಪಗೆ ಕೇಳಿದ್ದರು. ಇಷ್ಟಕ್ಕೆ ಬಹಿರ್ದೆಸೆಗೆ ತೆರಳುತ್ತಿದ್ದ ಅಳಿಯ ಲಕ್ಷ್ಮಣ ಚಿಗರಿಹಾಳನನ್ನು ಕೊಡಲಿಯಿಂದ ಕೊಚ್ಚಿ ಮಾವ ಮಾನಪ್ಪ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಎಸ್​​ಪಿ ಪೃಥ್ವಿಕ್ ಶಂಕರ್, ಡಿವೈಎಸ್​ಪಿ …

Read More »

ಅಥಣಿ: ಶೆಡ್​ನಲ್ಲಿ ಬಾಲಕನ ಮೇಲೆ ಹಲ್ಲೆ ಮಾಡಿ ಚರಂಡಿಗೆ ಎಸೆದ ಆರೋಪಿಗಳು ಅರೆಸ್ಟ್​!

ಅಥಣಿ ಪಟ್ಟಣದ ಹೊರವಲಯದ ಖಾಲಿ ನಿವೇಶನದಲ್ಲಿ ಮೇ 01 ರಂದು ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಬಾಲಕನ ಶವ ಸಿಕ್ಕಿತ್ತು. ಅನಾಥ ಶವ ಎಂದು ಪೊಲೀಸರು ಶವ ಸಂಸ್ಕಾರ ಮಾಡಿದ್ದರು. ಶವ ಸಂಸ್ಕಾರ ನಡೆದ ಎರಡು ದಿನಗಳ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಬಾಲಕನ ಗುರುತು ಪತ್ತೆಯಾಗಿದೆ.ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬಾಲಕನದ್ದು ಸಹಜ ಸಾವಲ್ಲ, ಕೊಲೆ ಎಂದು ತಿಳಿದಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. …

Read More »

ಡಾಕ್ಟರ್‌ಗೆ ಡ್ರಗ್ಸ್‌ ಚಟ… ಬರೋಬ್ಬರಿ 1 ಕೋಟಿ ರೂ. ಆಸ್ತಿ ನುಂಗಿ ನೀರು ಕುಡಿದ ಕಿʻಲೇಡಿʼ!!

ತೆಲಂಗಾಣ ಮಾದಕ ದ್ರವ್ಯ ವಿರೋಧಿ ಬ್ಯೂರ ಕೊಕೇನ್ ಸೇವನೆ ಮತ್ತು ಖರೀದಿಯ ಆರೋಪದ ಮೇಲೆ ಹೈದರಾಬಾದ್‌ನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಮಾಜಿ ಸಿಇಒ ಆಗಿದ್ದ ವೈದ್ಯೆಯನ್ನು ಬಂಧಿಸಿದೆ.ನಮ್ರತಾ ಚಿಗುರುಪತಿ 53 ಗ್ರಾಂ ಕೊಕೇನ್, ಎರಡು ಮೊಬೈಲ್ ಫೋನ್‌ಗಳು ಮತ್ತು 10,000 ರೂ. ನಗದಿನ ಜೊತೆಗೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.ನಮ್ರತಾ ಒಮೆಗಾ ಆಸ್ಪತ್ರೆಗಳ ಮಾಜಿ ಮುಖ್ಯಸ್ಥರಾಗಿದ್ದು, ಕೊಕೇನ್ ಸೇವನೆಯ ಚಟಕ್ಕೆ ತೀವ್ರವಾಗಿ ಒಳಗಾಗಿದ್ದರು. ಈ ಚಟಕ್ಕಾಗಿ ಆಕೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದಾರೆ. …

Read More »

ಬೆಂಗಳೂರು: ದುಷ್ಟಶಕ್ತಿ ಓಡಿಸುತ್ತೇನೆಂದು ಹೋಟೆಲ್​ನಲ್ಲಿ ಪೂಜೆ, ಮಹಿಳೆಗೆ 5 ಲಕ್ಷ ರೂ. ವಂಚಿಸಿದ ಜ್ಯೋತಿಷಿ!

ದುಷ್ಟಶಕ್ತಿಯನ್ನು ಓಡಿಸುತ್ತೇನೆ ಎಂದು ಜ್ಯೋತಿಷಿ ಬೆಂಗಳೂರಿನ ವಿಭೂತಿಪುರದ ನಿವಾಸಿಯಾಗಿರುವ 33 ವರ್ಷದ ಮಹಿಳೆಯಿಂದ ಐದು ಲಕ್ಷ ರೂ. ಪಡೆದು ವಂಚಿಸಿದ್ದಾನೆ. ವಂಚಕನ ವಿರುದ್ಧ ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.ಜ್ಯೋತಿಷಿ ಮೊದಲಿಗೆ ನಿಂಬೆ ಹಣ್ಣುಗಳನ್ನು ಕತ್ತರಿಸಿ, ಧೂಪ ಹಚ್ಚಿದ್ದಾನೆ. ನಂತರ ಮಹಿಳೆಯ ಮುಖಕ್ಕೆ ಬೂದಿ ಎರಚಿದ್ದಾನೆ. ನಂತರ, ಮಹಿಳೆಗೆ ನವಿಲು ಗರಿಗಳಿಂದ ಹೊಡೆದು, ಅವರ ಕೂದಲನ್ನು ಹಿಡಿದು “ಆತ್ಮ ದೂರ ಹೋಗು” ಎಂದು ಕಿರಿಚಿದ್ದಾನೆ. ಪೂಜೆಗಳೆಲ್ಲ ಮುಗಿದ ನಂತರ ದುಷ್ಟಶಕ್ತಿಗಳು …

Read More »

ಕನಕಪುರ :ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ KSRTC ಚಾಲಕ ಹಾಗೂ ನಿರ್ವಾಹಕರು.

.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ನಗರ ಬಸ್ ಡಿಪ್ಪೋಗೆ ತಂದೊಪ್ಪಿಸಿ ಮಾನವೀಯತೆ ಮೆರೆದ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರ ಪ್ರಶಂಸೆಗೆ ಒಳಗಾಗಿದ್ದಾರೆ.ಬಸ್‌ನಲ್ಲಿ ಪ್ರಾಯಾಣಿಸುತ್ತಿದ್ದ ಒಡವೆ ಮಾಲೀಕರಾದ ಚಿನ್ನಮ್ಮ ಕುಟುಂಬದ ಸದಸ್ಯರು ಘಟಕಕ್ಕೆ ಭೇಟಿ ನೀಡಿ ವಿಚಾರಿಸಿದಾಗ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿದ ಅಧಿಕಾರಿಗಳು ಅವರ ಚಿನ್ನಾಭರಣಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು.75 ಗ್ರಾಂ ತೂಕದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಬ್ಯಾಗನ್ನು ಬಸ್‌ನಲ್ಲಿಯೇ ಬಿಟ್ಟು …

Read More »

ಆಗುಂಬೆ :ವಿದ್ಯುತ್‌ ತಂತಿ ಮೇಲೆ ಬಿದ್ದು ಯುವ ಯಕ್ಷ ಕಲಾವಿದ ಸಾವು!

ಕರೆಂಟ್ ಶಾಕ್ ಹೊಡೆದು ಯುವ ಯಕ್ಷಗಾನ ಕಲಾವಿದ ಸಾವನ್ನಪ್ಪಿದ್ದಾರೆ. ಆಗುಂಬೆ ಸಮೀಪ ವಿದ್ಯುತ್ ತಂತಿ ಮೈ ಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಕಲಾವಿದ ರಂಜಿತ್ ಬನ್ನಾಡಿ ಪ್ರಾಣಬಿಟ್ಟಿದ್ದಾರೆ.ಮರದ ಕೊಂಬೆ ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇದ್ರಿಂದ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ರಂಜಿತ್ ಗಂಭೀರ ವಿದ್ಯುತ್‌ ಶಾಕ್ ge ಒಳಗಾಗಿದ್ದಾರೆ. ಸ್ಥಳಿಯರ ಸಹಕಾರದಿಂದ ಹಿಂಬದಿ ಸವಾರ ವಿನೋದ್ ರಾಜ್ ಪಾರಾಗಿದ್ದಾರೆ.ವಿನೋದ್ ರಾಜ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ …

Read More »

ಮಡಿಕೇರಿ :ದೋಣಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ!

ನಾಪೋಕ್ಲು ಸಮೀಪದ ಕಡಿಯತ್ತೂರು-ಕೂರುಳಿ ಬಳಿಯ ಕಾವೇರಿ ನದಿಯಲ್ಲಿ ದೋಣಿ ಮುಳುಗಿ ನಾಪತ್ತೆಯಾಗಿದ್ದ ಅಯ್ಯಪ್ಪ (18) ಅವರ ಮೃತದೇಹ ಮಂಗಳವಾರ ಪತ್ತೆಯಾಗಿದ್ದು, ಮೃತರ ಸಂಖ್ಯೆ 2ಕ್ಕೆ ಏರಿದೆ.ಸ್ನೇಹಿತರು ಸ್ನಾನಕ್ಕೆಂದು ಬಂದ ವೇಳೆ ದುರ್ಘಟನೆ ನಡೆದಿದೆ. ಗಿರೀಶ್ ಮತ್ತು ಅಯ್ಯಪ್ಪ ನದಿಯ ಮಧ್ಯಭಾಗಕ್ಕೆ ತೆರಳಿದ ವೇಳೆ, ನೀರಿನ ಸೆಳೆತ ಇದ್ದುದ್ದರಿಂದ ದೋಣಿ ಮುಳುಗಿದೆ. ಈಜು ಬಾರದ ಅವರನ್ನು ರಕ್ಷಿಸಲು ದೇವಿಪ್ರಸಾದ್ ಎಂಬುವವರು ಪ್ರಯತ್ನಪಟ್ಟರೂ ಸಫಲವಾಗಲಿಲ್ಲ’ ಎಂದು ಅವರು ಹೇಳಿದ್ದಾರೆ.

Read More »

ಪಾಕಿಸ್ತಾನ ವಶದಲ್ಲಿದ್ದ ಬಿಎಸ್‌ಎಫ್‌ ಯೋಧ ಪೂರ್ಣಂ ಕುಮಾರ್ ಬಿಡುಗಡೆ!

ಪಾಕಿಸ್ತಾನಕ್ಕೆ ಜೀವಂತವಾಗಿ ಸೆರೆಸಿಕ್ಕಿದ್ದ ಬಿಎಸ್‌ಎಫ್‌ ಯೋಧ ಪೂರ್ಣಂ‌ ಕುಮಾರ್‌ ಶಾ ಬಿಡುಗಡೆಯಾಗಿದ್ದಾರೆ. ಪಹಲ್ಗಾಮ್‌ ದಾಳಿಯ ನಂತರ ಭಾರತ ನಡೆಸುತ್ತಿದ್ದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ವೇಳೆ ಪೂರ್ಣಂ ಸಾಹು ಗಡಿ ದಾಟಿ ಹೋಗಿ ಪಾಕ್‌ ಯೋಧರ ಕೈಗೆ ಸೆರೆಸಿಕ್ಕಿದ್ದರು.ಪೂರ್ಣಂ‌ ಬಂಧನದ ಬೆನ್ನಲ್ಲೇ ಭಾರತವೂ ಸಹ ಪಾಕಿಸ್ತಾನದ ಯೋಧನೊಬ್ಬನನ್ನು ಜೀವಂತವಾಗಿ ಸೆರೆಹಿಡಿದಿತ್ತು. ಕೂಡಲೇ ಎಚ್ಚೆತ್ತುಕೊಂಡ ಪಾಕಿಸ್ತಾನವು ಈಗ ತನ್ನ ಯೋಧನ ಬಿಡುಗಡೆಗಾಗಿ ಭಾರತದ ಯೋಧನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.ಗಡಿ ರಕ್ಷಣಾ ಪಡೆ (BSF) …

Read More »

ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: 9 ಅಪರಾಧಿಗಳಿಗೆ ಜೀವವಧಿ ಶಿಕ್ಷೆ!

ಆರು ವರ್ಷಗಳ ಹಿಂದೆ ತಮಿಳುನಾಡಿನ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ಪ್ರಕರಣದಲ್ಲಿ ಬಂಧಿತರಾಗಿದ್ದ 9 ಆರೋಪಿಗಳನ್ನು ಅಪರಾಧಿಗಳು ಎಂದು ಪರಿಗಣಿಸಿದ ಮಹಿಳಾ ನ್ಯಾಯಾಲಯ, ಜೀವ ಇರುವವರೆಗೂ ಕಾರಾಗೃಹ ಶಿಕ್ಷೆ ವಿಧಿಸಿ ಮಂಗಳವಾರ ಆದೇಶಿಸಿದೆ.ನ್ಯಾಯಾಧೀಶೆ ಆರ್. ನಂದಿನಿ ದೇವಿ ಅವರು ಶಿಕ್ಷೆಯ ಆದೇಶ ಪ್ರಕಟಿಸಿ, ಜೀವಾವಧಿ ಶಿಕ್ಷೆಯ ಜತೆಗೆ, ಎಂಟು ಸಂತ್ರಸ್ತರಿಗೆ ₹85 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.ಪ್ರಕರಣದಲ್ಲಿ ಒಟ್ಟು 48 ಸಾಕ್ಷಿಗಳಿದ್ದರು. ಸಂತ್ರಸ್ತ ಮಹಿಳೆಯರು ಚಿಕ್ಕ ವಯಸ್ಸಿನವರು ಮತ್ತು …

Read More »

ಮೈಸೂರು :ಭಾರತಿ ಸಿಮೆಂಟ್ ನಿರ್ದೇಶಕ‌ ಗೋವಿಂದಪ್ಪ ಬಾಲಾಜಿ ಮೈಸೂರಿನಲ್ಲಿ ಅರೆಸ್ಟ್‌!

ಭಾರತಿ ಸಿಮೆಂಟ್‌ ನಿರ್ದೇಶಕ ಗೋವಿಂದಪ್ಪ ಬಾಲಾಜಿಯನ್ನು ಆಂಧ್ರಪ್ರದೇಶ ಅಬಕಾರಿ ಹಗರಣದ ಆರೋಪದಲ್ಲಿ ಮೈಸೂರಿನಲಿ ಬಂಧಿಸಲಾಗಿದೆ ಆಂಧ್ರದಲ್ಲಿ ನಡೆದ ಸಾವಿರಾರು ಕೋಟಿ ರೂ. ಮೊತ್ತದ ಈ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಗೋವಿಂದಪ್ಪ ಬಾಲಾಜಿ, ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದರು.ನಾಪತ್ತೆಯಾಗಿದ್ದ ಗೋವಿಂದಪ್ಪ ಬಾಲಾಜಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲ್ ಆಂ‍ಧ್ರ ಪೊಲೀಸರು ಬೆನ್ನಟ್ಟಿದ್ದರು. ಮೇ 13ಮಂಗಳವಾರ ದಂದು ಗೋವಿಂದಪ್ಪ ಬಾಲಾಜಿಯವರನ್ನು ವಶಕ್ಕೆ ಪಡೆಯಲಾಗಿದ್ದು, ವಿಜಯವಾಡ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗುತ್ತಿದೆ.ಇಂದು …

Read More »