BigTv News
May 13, 2025
Breaking News, Crime, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಹದಿಮೂರು ವರ್ಷದ ಅಪ್ರಾಪ್ತ ಬಾಲಕ , ತನ್ನ ಮನೆ ಮುಂದೆಯೇ ಇರೋ ತನ್ನ ಸ್ನೇಹಿತನಾಗಿದ್ದ ಹದಿನೈದು ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.. ಸಂಜೆ ಏಳು ಗಂಟೆ ಸಮಯದಲ್ಲಿ ಮನೆಯಿಂದ ಚಾಕುತಂದು, ಚೇತನ್ ನ ಹೊಟ್ಟೆಯ ಎಡಬಾಗದಲ್ಲಿ ಇರದಿದ್ದಾನೆ. ಚಾಕು ಇರಿಯುತ್ತಿದ್ದಂತೆ ಚೇತನ್ ಕುಸಿದು ಬಿದ್ದಿದ್ದಾನೆ. ಮಕ್ಕಳೆಲ್ಲರು ಚೀರುತ್ತಿದ್ದಂತೆ, ಕೊಲೆ ಮಾಡಿದ ಬಾಲಕನ ತಾಯಿ ಓಡಿ ಬಂದು, ಚೇತನ ನೆರವಿಗೆ ಬಂದಿದ್ದಾರೆ. ಕೂಡಲೇ ಚೇತನ್ ನನ್ನು, ಕೊಲೆ …
Read More »
BigTv News
May 13, 2025
Breaking News, Crime
ಕೊಡಗಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮರಕ್ಕೆ ಕಾರು ಡಿಕ್ಕಿಯಾಗಿ ಯೋಧ ಹುತಾತ್ಮರಾಗಿದ್ದಾರೆ. ರಜೆ ನಿಮಿತ್ತ ಮನೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ವಿವಾಹ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಆಗುವಾಗ ಯೋಧ ಬಿಪಿನ್ ಭೀಮಯ್ಯ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.ಗಂಭೀರವಾಗಿ ಗಾಯಗೊಂಡಿದ್ದ ಯೋಧ ಬಿಪಿನ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Read More »
BigTv News
May 13, 2025
Breaking News, Crime
ಗ್ರಾಮದ ಕಾವೇರಿ ನದಿ ತೀರದಲ್ಲಿ 20ರಿಂದ 30 ದಿನದ ಹೆಣ್ಣು ಮಗುವಿನ ಶವವೊಂದು ಸೋಮವಾರ ತೇಲಿ ಬಂದಿದೆ.ಬೆಳಿಗ್ಗೆ ಗ್ರಾಮದ ಮಹಿಳೆಯರು ಕಾವೇರಿ ನದಿಯ ಸಮೀಪ ಬಟ್ಟೆ ತೊಳೆಯಲು ಹೋಗಿದ್ದಾಗ ಶವ ಪತ್ತೆಯಾಗಿದೆ.ಸಿಡಿಪಿಒ ಕಚೇರಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಶಿಶುವಿನ ಶವವನ್ನು ನೀರಿನಿಂದ ಮೇಲಕ್ಕೆತ್ತಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಿಡಿಪಿಒ ಮೇಲ್ವಿಚಾರಕಿ ಪ್ರೇಮಲತಾ ದೂರು ನೀಡಿದ್ದಾರೆ.
Read More »
BigTv News
May 13, 2025
Breaking News
ಅಣ್ಣ- ತಮ್ಮಂದಿರೊಂದಿಗೆ ಸ್ನೇಹಿತರು ಈಜಲು ಹೋಗಿದ್ದ ಸಂದರ್ಭ ಯುವಕನೋರ್ವ ಈಜು ಬಾರದೆ ಮುಳುಗಿ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈಜಲು ಹೋಗಿ ಮುಳುಗಿದ್ದ ಹೇಮಂತನನ್ನು ಹುಡುಕಲು ಎಷ್ಟೇ ಪ್ರಯತ್ನಿಸಿದರೂ ಸುಳಿವು ಸಿಗದೆ ನಂತರ ಸಾರ್ವಜನಿಕರ ಸಹಕಾರದಿಂದ ಹೊರ ತೆಗೆದರಾದರೂ ಅಷ್ಟರಲ್ಲಾಗಲೇ ಉಸಿರು ಕಟ್ಟಿ ಸಾವಿಗೀಡಾಗಿದ್ದ ಎನ್ನಲಾಗಿದೆ.ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್ ಹಾಗೂ ಪಿ ಎಸ್‌ಐ ಅಭಿಷೇಕ್ …
Read More »
BigTv News
May 13, 2025
Breaking News, Crime
ಕಳೆದ 10 ವರ್ಷಗಳಿಂದ ತನ್ನ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್ ಎಂಬಾತ, ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಮಾಲೀಕ ತೋಟ ಪ್ರಸಾದ್ ಅವರ 1.51 ಕೋಟಿ ರೂಪಾಯಿಯನ್ನು ಎಗರಿಸಿದ್ದಾನೆ.ಬ್ಯಾಂಕ್‌ನಲ್ಲಿ ಠೇವಣಿ ಮಾಡಲು 1.51 ಕೋಟಿ ರೂ. ನಗದು ಡ್ರೈವರ್ ರಾಜೇಶ್ ಗೆ ನೀಡಿದ್ದರು. ಈ ಹಣವನ್ನು ನೀಡಿದ ಬಳಿಕ, ರಾಜೇಶ್ ತನ್ನ ಕಾರನ್ನು ಪಾರ್ಕ್ ಮಾಡುವ ನೆಪದಲ್ಲಿ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದನು. ಆಂಧ್ರಪ್ರದೇಶದ ಗುಂಟೂರಿನ ಮೂಲ ಹೊಂದಿರುವ ರಾಜೇಶ್, …
Read More »
BigTv News
May 13, 2025
Breaking News, Crime
ಪ್ರವಾಸಕ್ಕೆಂದು ಕರೆಸಿಕೊಂಡ ಮಹಿಳೆಯೊಬ್ಬಳು ಚಾಲಕನಿಗೆ ಯಾಮಾರಿಸಿ ಕಾರು ಹಾಗೂ ಆತನ ಮೊಬೈಲ್ ಕಳವು ಮಾಡಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.15 ದಿನಗಳ ಹಿಂದೆ ಅನಂತಕುಮಾರ್ ಕಾರವಾರಕ್ಕೆ ಬಾಡಿಗೆಗೆ ಹೋಗಿದ್ದರು. ಆಗ ಮೋನಿಕಾ, ಬೆಂಗಳೂರು ಹಾಗೂ ಮೈಸೂರು ಪ್ರವಾಸಕ್ಕೆ ಹೋಗಬೇಕೆಂದು ದೂರುದಾರನ ಮೊಬೈಲ್ ನಂಬರ್ ಪಡೆದುಕೊಂಡಿದ್ದಾಳೆ. ಶೌಚಾಲಯದ ಕಿಟಕಿಯಿಂದ ಸ್ಥಳೀಯರನ್ನು ಕೂಗಿ ಬಳಿಕ ಬಾತ್ ರೂಮ್ ಬಾಗಿಲು ತೆರೆಸಿಕೊಂಡು ಹೊರಬಂದು ಠಾಣೆಗೆ ದೂರು ನೀಡಿದ್ದಾಗಿ ಅನಂತ್‌ಕುಮಾರ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
Read More »
BigTv News
May 13, 2025
Breaking News, Crime
ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿದ್ದ ವೃದ್ಧೆ ತಾಯಿ ಸಾವಿಗೀಡಾಗಿ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಭವಿಸಿದೆ.ತಾಯಿ ಮಲಗಿದ ಜಾಗದಲ್ಲಿ ಜಯರಾಂ ಅವರು ಬರೆದಿರುವ ನಾಲ್ಕು ಪುಟ ಗಳ ಪತ್ರ ಲಭಿಸಿದ್ದು ಅದರಲ್ಲಿ ಸಾಲದ ಸಮಸ್ಯೆ, ತನ್ನ ಅನಾರೋಗ್ಯದ ಕಾರಣ ದಿಂದ ನಾವು ನಿದ್ರೆ ಮಾತ್ರೆ ಸೇವಿಸಿರುತ್ತೇವೆ. ನಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂದು ಬರೆಯಲಾಗಿದೆ. ತಾಯಿ ಕಳೆದ ನಾಲ್ಕು ವರ್ಷಗಳಿಂದ ವಯೋ …
Read More »
BigTv News
May 12, 2025
Breaking News, Crime
ಶ್ರೀಲಂಕಾದಲ್ಲಿ ಭಾನುವಾರ ಬೆಳಿಗ್ಗೆ ಸರ್ಕಾರಿ ಬಸ್ ಬೆಟ್ಟದಿಂದ ಜಾರಿ ಬಂಡೆಯಿಂದ ಬಿದ್ದ ಪರಿಣಾಮ ಕನಿಷ್ಠ 21 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಸ್ ದಕ್ಷಿಣದ ಯಾತ್ರಾ ಪಟ್ಟಣವಾದ ಕಾತರಗಾಮದಿಂದ ವಾಯುವ್ಯದ ಕುರುನಾಗಾಲಕ್ಕೆ 75 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.ಅಪಘಾತದಲ್ಲಿ 35 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇಬ್ಬರು ಮಕ್ಕಳು ಸೇರಿದಂತೆ 15 ಜನರ ಸ್ಥಿತಿ ಗಂಭೀರವಾಗಿದೆ.ಅಧಿಕಾರಿಗಳು ಗಾಯಾಳುಗಳನ್ನು ನುವಾರಾ ಎಲಿಯಾ, ಕಂಬಲೈ ಮತ್ತು ನವಲಪಟ್ಟಿಯ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. ಗಂಭೀರ ಪ್ರಕರಣಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನುವಾರಾ ಎಲಿಯಾ …
Read More »
BigTv News
May 12, 2025
Breaking News, Crime
ಬೋವಿಕ್ಕಾನ ತೇಜಸ್ ಹೌಸಿಂಗ್ ಕಾಲೊಮಿ ನಿವಾಸಿ ಚೋಮು (80) ಎಂಬುವರು ಮನೆ ಬಳಿಯ ಮಾವಿನಮರದ ಗೆಲ್ಲಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಕಾರಡ್ಕ ಶಾಂತಿನಗರ ನಿವಾಸಿ ಸಿ.ಎಚ್.ಶಶಿ (58) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಸಿಪಿಎಂ ಶಾಖಾ ಕಾರ್ಯದರ್ಶಿಯಾಗಿದ್ದರು.
Read More »
BigTv News
May 12, 2025
Breaking News, Crime
ಶಿರಿಯ ಒಳಯಂ ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 12.087 ಗ್ರಾಂ ಎಂಡಿಎಂಎಯನ್ನು ಅಬಕಾರಿ ದಳ ಪತ್ತೆಮಾಡಿದೆ.ಇನ್ನೊಂದು ಪ್ರಕರಣದಲ್ಲಿ ಕುಂಬಳೆ ಬದ್ರಿಯಾನಗರದಲ್ಲಿ 10 ಗ್ರಾಂ ಗಾಂಜಾ ಸಹಿತ ಸ್ಥಳೀಯ ನೀರಾಳಿ ನಿವಾಸಿ ಅಫ್ಝಲ್ (28) ಎಂಬಾತನನ್ನು ಅಬಕಾರಿ ದಳ ಬಂಧಿಸಿದೆ.
Read More »