Breaking News

Breaking News

ಚಿತ್ರದುರ್ಗ :ಸಾರಿಗೆ ಬಸ್ ಪಲ್ಟಿ, ಓರ್ವ ವ್ಯಕ್ತಿ ಬಲಿ!!!

ಸಾರಿಗೆ ಬಸ್ ವೊಂದು ರಸ್ತೆ ಪಕ್ಕದಲ್ಲಿದ್ದ ನೇಮ್ ಬೋರ್ಡ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, 26ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.ಜಿಲ್ಲೆಯ ಚಳ್ಳಕೆರೆ ತಾಲೂಕಿನ ಖಂಡೆನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕೆಎಸ್ ಆರ್ ಟಿಸಿ ಬಸ್, ರಸ್ತೆ ಪಕ್ಕದಲ್ಲಿನ ಬೋರ್ಡ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಬಸ್ ನಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಸಾರಿಗೆ …

Read More »

ಬೆಂಗಳೂರು :390 ಗ್ರಾಂ ಚಿನ್ನದ ಗಟ್ಟಿ ಜಪ್ತಿ, ಆರೋಪಿಗಳ ಬಂಧನ!!

ಮನೆಯಲ್ಲಿ ಕನ್ನತನ ಹಾಗೂ ದ್ವಿಚಕ್ರ ವಾಹನಗಳ ಕನ್ನ ಮಾಡಿದ್ದ ಇಬ್ಬರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ, 390 ಗ್ರಾಂ ಚಿನ್ನದ ಗಟ್ಟಿ, ಎರಡು ವಾಹನ ವಶಪಡಿಸಿಕೊಂಡಿದ್ದಾರೆ.‌ಕದ್ದ ಬೈಕ್‌ನಲ್ಲಿ ಆರೋಪಿಗಳು ಬಡಾವಣೆಗಳಲ್ಲಿ ಸುತ್ತಾಡಿ ಮನೆಗಳನ್ನು ಗುರುತಿಸಿ, ಕಳ್ಳತನದ ಸಂಚು ರೂಪಿಸಿದ್ದರು. ಚಿನ್ನಾಭರಣ ಕದ್ದು, ಅದನ್ನು ಕರಗಿಸಿ ಚಿನ್ನದ ಗಟ್ಟಿ ಮಾಡಿಸಿ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ಎರಡು ಬೈಕ್, ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮಿಥುನ್ ವಿರುದ್ಧ 9 ಹಾಗೂ ಸತೀಶ್ ವಿರುದ್ಧ …

Read More »

ಉಡುಪಿ :ಕಾಂತಾರ-2 ಸಿನಿಮಾ ಶೂಟಿಂಗ್ ವೇಳೆ ಘೋರ ದುರಂತ, ಓರ್ವ ಕಲಾವಿದ ಸಾವು!

ಕಾಂತಾರ ಸಿನಿಮಾ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ತೀವ್ರ ಆಘಾತವಾಗಿದ್ದು, ಕಾಂತಾರ ಚಿತ್ರದ ಪ್ರೀಕ್ವೆಲ್ ಕಾಂತಾರ-2 ಚಿತ್ರೀಕರಣದ ವೇಳೆ ಘೋರ ದುರಂತ ಇಂದು ಸಂಭವಿಸಿದೆ.ಶೂಟಿಂಗ್ ಸೆಟ್​​​​ನಲ್ಲಿದ್ದ ಓರ್ವ ಜೂನಿಯರ್ ಕಲಾವಿದ ಸಾವನ್ನಪ್ಪಿದ್ದಾರೆ.ಕೇರಳ ಮೂಲದ ಕಪಿಲ್ ಎಂಬ ಜೂನಿಯರ್ ಆರ್ಟಿಸ್ಟ್​​ ಬೈಂದೂರಿನ ಕೊಲ್ಲೂರಿನಲ್ಲಿ, ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಈ ಹಿಂದೊಮ್ಮೆ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಕರೆ ತರಲಾಗುತ್ತಿದ್ದ ಡ್ಯಾನ್ಸರ್ಸ್​ ಗಳಿದ್ದ ವಾಹನವು ಅಪಘಾತಕ್ಕೀಡಾಗಿತ್ತು. ಸಿನಿಮಾ …

Read More »

ಕಡೂರು: ಗ್ಯಾಸ್ ಟ್ಯಾಂಕರ್ ಪಲ್ಟಿ, ಅನಿಲ‌ ಸೋರಿಕೆ!

ಬೀರೂರಿನಿಂದ ಲಿಂಗದಹಳ್ಳಿಗೆ ಹೋಗುವ ರಸ್ತೆಯ ತಿರುವಲ್ಲಿ ಮಂಗಳವಾರ ಸಂಜೆ ಎಚ್.ಪಿ.ಕಂಪನಿಯ ಗ್ಯಾಸ್ ಟ್ಯಾಂಕರ್ ಉರುಳಿಬಿದ್ದು ಆತಂಕಕ್ಕೆ ಕಾರಣವಾಯಿತು. ಟ್ಯಾಂಕರ್‌ನಿಂದ ಅನಿಲ ಸೋರಿಕೆ ಆಗುತ್ತಿದ್ದು, ಸ್ಥಳದಲ್ಲಿ ‌ಅಗ್ನಿ ಶಾಮಕ, ಮೆಸ್ಕಾಂ ಸಿಬ್ಬಂದಿ ಬಿಟ್ಟಿದ್ದಾರೆ. ಆ ಭಾಗದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಬೀರೂರು ಪಿಎಸ್‌ಐ ಸಜಿತ್ ಕುಮಾರ್ ಮತ್ತು ಸಿಬ್ಬಂದಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.ಸ್ಥಳಕ್ಕೆ ಡಿವೈಎಸ್ಪಿ ಹಾಲಮೂರ್ತಿ ರಾವ್, ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಭೇಟಿ ನೀಡಿ ಪರಿಶೀಲಿಸಿದರು. ಹಿಂದೂಸ್ತಾನ್‌ ಪೆಟ್ರೋಲಿಯಂ …

Read More »

ಮಂಡ್ಯ : ಟೈರ್ ಪಂಚರ್, ಜಮೀನಿಗೆ ನುಗ್ಗಿದ KSRTC ಬಸ್, ಹಲವರಿಗೆ ಗಾಯ!

ಟೈರ್ ಪಂಚರ್ ಆಗಿ ರಸ್ತೆ ಪಕ್ಕದ ಜಮೀನಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ನುಗ್ಗಿದ ಘಟನೆ ಮಂಡ್ಯದ ಪಾಂಡವಪುರ ತಾಲೂಕಿನ ನಲ್ಲಹಳ್ಳಿ ಬಳಿ ನಡೆದಿದೆ.ಟೈರ್ ಪಂಚರ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಜಮೀನಿಗೆ ನುಗ್ಗಿದೆ. ಘಟನೆಯಲ್ಲಿ ಬಸ್ ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.ಗಂಭೀರ ಗಾಯಗೊಂಡವರು ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಗಾಯಾಳುಗಳನ್ನ ಚಿಕಿತ್ಸೆಗಾಗಿ ಪಾಂಡವಪುರ ಪಟ್ಟಣದ …

Read More »

ಬೆಂಗಳೂರು : ಹೈಕೋರ್ಟ್‌ ವಕೀಲ ಬಿ. ಬಾಲಕೃಷ್ಣ ನಿಧನ!

‘ಬೆಂಗಳೂರು ವಕೀಲರ ಸಂಘ’ದ ಹೈಕೋರ್ಟ್‌ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ‘ಬೆಂಗಳೂರು ವಕೀಲರ ಸಹಕಾರ ಸಂಘ’ದ ನಿರ್ದೇಶಕರೂ ಆಗಿದ್ದ ಆದ ವಕೀಲ ಬಿ.ಬಾಲಕೃಷ್ಣ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಂಗಳವಾರ ಸಂಜೆ 7.15ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಬಾಲಕೃಷ್ಣ ಅವರಿಗೆ 61 ವರ್ಷವಾಗಿತ್ತು. ನಗರದ ಜೈನ್‌ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿರುವ ಪತ್ನಿ ಗೀತಾ ಮತ್ತು ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಲಂಡನ್‌ನಲ್ಲಿ ಉದ್ಯೋಗಿಯಾಗಿರುವ ಪುತ್ರಿ ಫಾಲ್ಗುಣಿಯನ್ನು ಅವರು ಅಗಲಿದ್ದಾರೆ. …

Read More »

ಬೆಂಗಳೂರು :ಬಸ್ ಸ್ಟ್ಯಾಂಡ್ʼನಲ್ಲಿ ಮಲಗಿದ್ದವರ ಮೊಬೈಲ್ ಕದಿಯುತ್ತಿದ್ದ ರೌಡಿಶೀಟರ್ ಅರೆಸ್ಟ್!

ಬಸ್ ನಿಲ್ದಾಣ & ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದವರನ್ನು ಟಾರ್ಗೆಟ್ ಮಾಡಿ ಮೊಬೈಲ್ ಕದಿಯುತ್ತಿದ್ದ ರೌಡಿಶೀಟರ್ ಗಳನ್ನು ಗೋವಿಂದರಾಜ ನಗರ ಪೊಲೀಸರು ಬಂಧಿಸಿದ್ದಾರೆ. ತುರುವೆಕೆರೆ ರೌಡಿಶೀಟರ್ ನಾಗರಾಜ್ ರಾಕಿ ಹಾಗೂ ಸೋಮನಾಯ್ಕ್ ಬಂಧಿತ ಆರೋಪಿಗಳಾಗಿದ್ದು,ಬೈಕ್ ಕಳ್ಳತನ ಕೇಸ್ ನ ತನಿಖೆ ವೇಳೆ ಮೊಬೈಲ್ ಕಳ್ಳತನ ಪ್ರಕರಣ ಬಯಲಾಗಿದೆ. ಮೆಜೆಸ್ಟಿಕ್ ಬಸ್‌ ನಿಲ್ದಾಣ & ರೇಲ್ವೆ ನಿಲ್ದಾಣದಲ್ಲಿ ಮಲಗಿದ್ದವರ ಮೊಬೈಲ್ ಕಳ್ಳತನ ಮಾಡ್ತಿದ್ದರು.ತುರುವೆಕೆರೆ ರೌಡಿಶೀಟರ್ ನಾಗರಾಜ್ ಅಲಿಯಾಸ್ ರಾಕಿ ಮೇಲೆ 6 ಕೇಸ್ …

Read More »

ದೆಹಲಿ : ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಗೆ ಉಗ್ರ ‘ಮಸೂದ್ ಅಝರ್’ ಕುಟುಂಬದ 14 ಮಂದಿ ಬಲಿ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆ ಪ್ರತೀಕಾರದ ಕ್ರಮ ಕೈಗೊಂಡಿದೆ. ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ, ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶಗಳಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಜಂಟಿ ದಾಳಿ ನಡೆಸಿವೆ.ಭಾರತದ ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿಯಿಡೀ ಆಪರೇಷನ್ ಸಿಂಧೂರ್ ಮೇಲೆ ನಿಗಾ ಇಟ್ಟಿದ್ದರು.ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಗೆ ಉಗ್ರ ಮಸೂದ್ …

Read More »

ಮಲ್ಪೆ :ಮೀನು ಮಾರಾಟದ ವ್ಯವಹಾರ; 90 ಲಕ್ಷ ರೂ. ವಂಚನೆ; ದೂರು ದಾಖಲು

ಮೀನುಗಾರಿಕಾ ಬಂದರಿನಲ್ಲಿ ಹೋಲ್‌ಸೇಲ್‌ ಮೀನು ಮಾರಾಟದ ಸಂಸ್ಥೆಗೆ ಕಮಿಷನ್‌ ಆಧಾರದಲ್ಲಿ ಮೀನು ಮಾರ್ಕೆಟಿಂಗ್‌ ವ್ಯವಹಾರವನ್ನು ನಡೆಸುತ್ತಿರುವ ಪ್ರಶಾಂತ್‌ ಎಂಬಾತ ಸಂಸ್ಥೆಗೆ 90 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.ಪ್ರಶಾಂತ ಕೆಲವು ವರ್ಷಗಳಿಂದ ಕಮಿಷನ್‌ ಆಧಾರದಲ್ಲಿ ಮೀನು ವ್ಯವಹಾರ ನಡೆಸಿ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿ ಸಂಸ್ಥೆಗೆ ನೀಡುತ್ತಿರುವ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ವ್ಯವಹಾರದಿಂದ ಬರಬೇಕಾದ ಹಣವು ಸರಿಯಾಗಿ ಸಂಸ್ಥೆಯ ಖಾತೆಗೆ ಜಮಾ ಅಗದೇ ಇರುವುದು ಕಂಡು …

Read More »

ಆನೇಕಲ್ :ಪ್ರೀತಿಸಿ ಮನೆಬಿಟ್ಟು ಬಂದಿದ್ದ ಯುವತಿಯನ್ನ ಕೊಲೆ ಮಾಡಿದ ಗಂಡ!!

ಹೆತ್ತವರನ್ನು ಧಿಕ್ಕರಿಸಿ ಮನೆಯಿಂದ ಹೊರಬಂದು ಪ್ರೀತಿಸಿದ ಹುಡುಗನನ್ನು ಮದುವೆಯಾಗಿದ್ದ ಒಡಿಶಾ ಮೂಲದ ಗೃಹಿಣಿ ಇದೀಗ ಗಂಡನಿಂದಲೇ ಬೆಂಗಳೂರಿನಲ್ಲಿ ಕೊಲೆಯಾಗಿರುವಂತಹ ಧಾರಣ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನ ವಾಬಸಂದ್ರ ಗ್ರಾಮದಲ್ಲಿ ನಡೆದಿದೆ.ಮೃತಪಟ್ಟ ಯುವತಿಯನ್ನು 21 ವರ್ಷದ ಬರ್ಸಾ ಪ್ರಿಯದರ್ಶಿನಿ ಎಂದು ಗುರುತಿಸಲಾಗಿದೆ.

Read More »