Breaking News

Breaking News

ಚಿತ್ರದುರ್ಗ :ಹಣ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಚೇಸ್ ಮಾಡಿ ಹಿಡಿದು ಹಣದ ಮಾಲೀಕನಿಗೆ ವಾಪಾಸ್ಸು..

ಚಳ್ಳಕೆರೆ ಹಾಲುಗೊಂಡನಹಳ್ಳಿ ಇದ್ದಲು ವ್ಯಾಪಾರಿ ತಿಪ್ಪೇಸ್ವಾಮಿ ಇಂದು ಬೆಳಗ್ಗೆ ಕೆನರಾ ಬ್ಯಾಂಕಿನಲ್ಲಿ ಎರಡು ಲಕ್ಷ ಹಣ ಡ್ರಾ ಮಾಡಿಕೊಂಡು, ಬೈಕ್ ನಲ್ಲಿಟ್ಟು ಬೈಕ್ ಹತ್ತುವ ವೇಳೆ ಕಳ್ಳನೊಬ್ಬ ಹಣ ದೋಚಿ ಪರಾರಿಯಾಗುತ್ತಿದ್ದ.ಇದನ್ನು ಗಮನಿಸಿದ ಕಾಟಪ್ಪನಹಟ್ಟಿ ಯುವಕ ಮಂಜುನಾಥ್ ಅಪ್ರಾಪ್ತ ಕಳ್ಳನನ್ನು ಹಿಡಿದು ಹಣ ವಾಪಾಸ್ಸು ಕೊಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪ್ರಾಪ್ತ ಕಳ್ಳ ಸೊಲ್ಲಾಪುರದ ನಿವಾಸಿ ಎಂದು ತಿಳಿದು ಬಂದಿದ್ದು, ಪೋಲಿಸರು ತನಿಖೆ ಆರಂಭಿಸಿದ್ದಾರೆ.

Read More »

ಮಧ್ಯಪ್ರದೇಶ: ಪಿಕಪ್ ವ್ಯಾನ್ ಪಲ್ಟಿ, ನಾಲ್ವರ ಸಾವು!

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಬರಾಟಿಗಳನ್ನು ಕರೆದೊಯ್ಯುತ್ತಿದ್ದ ಪಿಕಪ್ ವ್ಯಾನ್ ಪಲ್ಟಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 12 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲ್ಯಾಟೆರಿ ಪೊಲೀಸ್ ಠಾಣೆ ವ್ಯಾಪ್ತಿಯ ಆರಿ ಘಾಟ್ ಬಳಿ ಈ ಅಪಘಾತ ಸಂಭವಿಸಿದೆ. ಇಂದೋರ್ ಜಿಲ್ಲೆಯ ಸಿರೋಂಜ್‍ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಮೋವ್‍ನಿಂದ ಬಂದಿದ್ದ ಹದಿನಾರು ಜನರು ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಇಲ್ಲಿಂದ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಮುಂಬೈ : ಬಸ್ ಡಿಕ್ಕಿ ಅಪಘಾತದಲ್ಲಿ ಎಡಗೈಯನ್ನೇ ಕಳೆದುಕೊಂಡ ಬೈಕ್‌ ಸವಾರ!!

ಇಸ್ಮಾಯಿಲ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಸ್‍ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಅವನ ಎಡಗೈ ಚಕ್ರದ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗಿ ತುಂಡಾಗಿದೆ. ತಕ್ಷಣ ಆತನನ್ನು ಹೋಲಿ ಸ್ಪಿರಿಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಎಡಗೈ ತೀವ್ರವಾಗಿ ಹಾನಿಗೊಳಗಾದ ಕಾರಣ ಅದನ್ನು ಕತ್ತರಿಸಲಾಗಿದೆ.ಪೊಲೀಸರು ಬಸ್‍ ಅನ್ನು ವಶಪಡಿಸಿಕೊಂಡು ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದಾರೆ. ಹಾಗೂ ಈ ಘಟನೆಗೆ ಸಂಬಂಧಿಸಿದಂತೆ ಎಂಐಡಿಸಿ ಪೊಲೀಸರು ವಿಖ್ರೋಲಿ ನಿವಾಸಿ ಬಸ್ ಚಾಲಕ ವಿಜಯ್ ಪಾಟೀಲ್ (33) ವಿರುದ್ಧ ರಾಶ್ …

Read More »

ಬೆಂಗಳೂರು :ಬಾಲಕಿಗೆ ಖಾಸಗಿ ಅಂಗ ತೋರಿಸಿದ ಯುವಕನ ಬಂಧನ!

ಬಾಡಿಗೆ ಮನೆಯಲ್ಲಿ ವಾಸವಿದ್ದ 19 ವರ್ಷದ ಯುವಕ ಚಂದು ಎಂಬುವವನು, 8 ವರ್ಷದ ಬಾಲಕಿಗೆ ತನ್ನ ಖಾಸಗಿ ಅಂಗ ತೋರಿಸಿ ಮುಟ್ಟುವಂತೆ ಹೇಳಿದ ಎಂಬ ಆರೋಪದ ಮೇಲೆ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಕ್ಷಣವೇ ತಾಯಿಗೆ ಬಾಲಕಿ ತಿಳಿಸಿದ್ದಳು. ಅಮ್ಮಾ, ಚಂದು ಅಣ್ಣ ನನ್ನನ್ನು ರೂಮಿನ ಹತ್ತಿರ ಕರೆದು ಪ್ಯಾಂಟ್ ಬಿಚ್ಚಿ ತೋರಿಸಿದ್ರು, ಅದನ್ನ ಮುಟ್ಟು ಅಂತ ಹೇಳಿದ್ರು,’ ಎಂದು ಬಾಲಕಿ ತನ್ನ ತಾಯಿಗೆ ಹೇಳಿದ್ರು ಎಂದು ಬಾಲಕಿ ಪೊಲೀಸರಿಗೆ ನೀಡಿದ …

Read More »

ಕಾರು ಪಲ್ಟಿ ತಿರುಪತಿಗೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಇಬ್ಬರು ಸಾವು, ನಾಲ್ವರಿಗೆ ಗಾಯ!

ತಿರುಮಲದ ತಿರುಪತಿಗೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಒಂದೇ ಕುಟುಂಬದ ಆರು ಮಂದಿ ತೆರಳುತ್ತಿದ್ದ ಕಾರು ಕಾಶಿಪೆಂಟ್ಲಾ ಹೆರಿಟೇಜ್ ಬಳಿ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.ಚಂದ್ರಗಿರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಕಾರಣ ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

Read More »
Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಹಶೀಲ್ದಾರ ಕಲಗೌಡ ಪಾಟೀಲ ಹೇಳಿದರು. ಅಂತ್ಯಕ್ರಿಯೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೋರ್ಟ್ ನಿರ್ದೇಶನದ ಮೇಲೆ ಮಣ್ಣು ಮಾಡಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಹೆಚ್ಚಿಗೆ ಏನನ್ನೂ ಹೇಳಲು ಆಗುವುದಿಲ್ಲ ಎಂದರು. ಸಿಐಡಿ ಎಸ್.ಪಿ, ಎಸಿಪಿ, ಪಾಲಿಕೆ ಅಧಿಕಾರಿಗಳು ಸೇರಿದಂತೆ ಇನ್ನಿತರ ಸಮ್ಮುಖದಲ್ಲಿ …

Read More »

ಹುಬ್ಬಳ್ಳಿ : ಬಾಲಕಿ ಅತ್ಯಾಚಾರ,ಹತ್ಯೆ ಆರೋಪಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ಹಂತಕ ರಿತೇಶಕುಮಾರ್..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಜನರಿಗೆ ಮಾತ್ರವಲ್ಲದೇ ದೇಶಕ್ಕೆ ದೇಶವೇ ಕಣ್ಣೀರು ಹಾಕಿದ್ದ ಬಾಲಕಿ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಯ ಶವವನ್ನು ಮಣ್ಣು ಮಾಡಲಾಗಿದೆ. ಐದು ವರ್ಷದ ಬಾಲಕಿ ರೇಪ್ ಆಂಡ್ ಮರ್ಡರ್ ಕೇಸ್ ನಲ್ಲಿ ಎನ್‌ಕೌಂಟರ್ ಗೆ ಬಲಿಯಾದ ಅನಾಥ ಶವಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಪೊಲೀಸರ ಗುಂಡಿಗೆ ಬಲಿಯಾದ ಹಂತಕ ರಿತೇಶಕುಮಾರನ ಅಂತ್ಯಸಂಸ್ಕಾರ. ತಹಶಿಲ್ದಾರರ ಹಾಗೂ ಸಿಐಡಿ ಅಧಿಕಾರಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ. ಹೌದು.. ಹುಬ್ಬಳ್ಳಿಯ ಬಿಡ್ನಾಳದ ರುದ್ರಭೂಮಿಯಲ್ಲಿ ಹಂತಕ …

Read More »

ಗೋವಾ: ದೇವಸ್ಥಾನದಲ್ಲಿ ಕಾಲ್ತುಳಿತ, ಏಳು ಜನರ ಸಾವು!!

ಉತ್ತರ ಗೋವಾದ ಶಿರ್ಗಾವ್ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ೭ ಜನರು ದುರ್ಮರಣ ಹೊಂದಿದ್ದು, 30ಕ್ಕೂ ಅಧಿಕ ಜನ ಗಾಯಗೊಂಡಿರುವ ಘಟನೆ ನಡೆದಿದೆ. ತಕ್ಷಣ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಕಲಿಸಲಾಗಿದೆ. ಪೊಲೀಸರು ಘಟನೆಯನ್ನು ಹತೋಟಿ ತೆಗೆದುಕೊಳ್ಳಲು ಕಾರ್ಯಾಚರಣೆ ನಡೆಸಿದ್ದಾರೆ.

Read More »

ಹಾವೇರಿ : ಚಾಲಕ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ ; ಪ್ರಯಾಣಿಕನ ಕಾಲು ಕಟ್!

ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಖಾಸಗಿ ಬಸ್ ಪಲ್ಟಿಯಾಗಿದ್ದು, 7 ಕ್ಕೂ ಅಧಿಕ ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಈ ಅವಘಡದಲ್ಲಿ ಓರ್ವ ಪ್ರಯಾಣಿಕನ ಕಾಲು ಕಟ್ ಆಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟ್ಟಿತ್ತು. ಚಾಲಕನ ನಿದ್ರೆಯ ಮಂಪರಿನಲ್ಲಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇನ್ನೂ ಗಾಯಾಳುಗಳನ್ನು ರಾಣೇಬೆನ್ನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾಡಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಸ್ ನಲ್ಲಿದ್ದ 23 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read More »

ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾ*ಚಾರ ಪ್ರಕರಣ: ಸಂತ್ರಸ್ತೆ ಕೋರ್ಟ್‌ಗೆ ಹಾಜರು..

ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಸಂತ್ರಸ್ತೆಯು ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದಿದ್ದಾರೆ. ಪ್ರಜ್ವಲ್‌ ರೇವಣ್ಣ ಕೂಡ ವಿಚಾರಣೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.ಹಾಸನದ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಪ್ರಜ್ವಲ್‌ ರೇವಣ್ಣ ಮನೆಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಅತ್ಯಾಚಾರಕ್ಕೆ ಒಳಗಾಗಿದ್ದರು ಎನ್ನಲಾದ …

Read More »