Breaking News

Breaking News

ಹುಣಸನಹಳ್ಳಿ ಬಾರ್ ಬಳಿ‌ ಭೀಕರ ಕೊಲೆ!12 ಮಂದಿಗೆ ಜೀವಾವಧಿ ಶಿಕ್ಷೆ.

ತಮಿಳುನಾಡು ಮೂಲದ ಶಂಕರ ಎಂಬಾತನನ್ನ ಬಾರ್ ಮುಂದೆ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಜಮೀನು ವಿಚಾರವಾಗಿ ದಾಯಾದಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.ಪ್ರಕರಣ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ 17 ಜನರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಅಂದಿನ ಸರ್ಕಲ್ ಇನ್ಸ್​ಪೆಕ್ಟರ್ ಟಿಟಿ ಕೃಷ್ಣ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 5 ಜನ ಆರೋಪಿಗಳು ಪರಾರಿಯಾಗಿದ್ದು, ಉಳಿದ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ 2ನೇ ಅಪರ ಜಿಲ್ಲಾ …

Read More »

ಹೆಂಡತಿಯನ್ನು ಕೊಂದು ಚರಂಡಿಗೆ ಎಸೆದ ಗಂಡ!!

ದೆಹಲಿಯ ಉದ್ಯಮಿಯೊಬ್ಬ ಬಹಳ ಪ್ಲಾನ್ ಮಾಡಿ ತನ್ನ ಹೆಂಡತಿಯನ್ನು ಕೊಂದಿದ್ದ. ಯಾರಿಗೂ ಗೊತ್ತಾಗಬಾರದೆಂದು ಮುನ್ನೆಚ್ಚರಿಕಾ ಕ್ರಮವನ್ನು ಕೂಡ ತೆಗೆದುಕೊಂಡಿದ್ದ.ಆತ ತನ್ನ ಹೆಂಡತಿಯನ್ನು ಕೊಂದಿದ್ದ. ತಮ್ಮ ಮಗಳೆಲ್ಲಿ ಎಂದು ಆಕೆಯ ಪೋಷಕರು ಕೇಳಿದಾಗ ಮಾತು ಮರೆಸುತ್ತಿದ್ದ. ಇದರಿಂದ ಅವರಿಗೆ ಅನುಮಾನ ಮೂಡಿತ್ತು. ಪೊಲೀಸರು ಅವರನ್ನು ಸಂಪರ್ಕಿಸಿ ನಿಮ್ಮ ಮಗಳ ಶವ ಪತ್ತೆಯಾಗಿದೆ ಎಂದು ಹೇಳುವವರೆಗೂ ಆ ಕುಟುಂಬಕ್ಕೆ ತಮ್ಮ ಮಗಳು ಬದುಕಿಲ್ಲವೆಂಬ ವಿಷಯವೇ ಗೊತ್ತಿರಲಿಲ್ಲ.ವಿಚಾರಿಸಿದಾಗ ತಾವು ತಮ್ಮ ಮಗಳೊಂದಿಗೆ ಒಂದು ತಿಂಗಳಿನಿಂದ …

Read More »

ಮಗಳ ಪ್ರೇಮ ವಿವಾಹ ಅಪ್ಪನ ಹೆಣದ ಮೇಲೆ!!

ಮಗಳ ಪ್ರೇಮ ವಿವಾಹದಿಂದ ನೊಂದ ತಂದೆಯೊಬ್ಬರು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಮೃತನನ್ನು ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್ ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಿಷಿರಾಜ್ ಜೈಸ್ವಾಲ್ ಅವರ ಮಗಳು ಹರ್ಷಿತಾ ಆನಂದ್ ಎಂಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಸ್ವಲ್ಪ ದಿನಗಳ ಹಿಂದೆ ಅವಳು ತನ್ನ ಪ್ರಿಯಕರ ಆನಂದ್ ಜೊತೆ ಓಡಿಹೋದಳು.ಮಾನಸಿಕವಾಗಿ ನೊಂದಿದ್ದ ರಿಷಿರಾಜ್ ನಿನ್ನೆ ರಾತ್ರಿ, ಮನೆಯಲ್ಲಿ ಒಬ್ಬರೇ ಇದ್ದಾಗ, ತಮ್ಮ …

Read More »

ಮಿಲ್ ಸಮೀಪ ಲಾರಿ ಹಾಗೂ ಬೈಕ್ ಮಧ್ಯೆ ಅಪಘಾತದಲ್ಲಿ ಯುವಕ ಸಾವು!!

ಭದ್ರಾವತಿಯ ಮೀನಾ ನರ್ಸಿಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಗುರುವಾರ ರಾತ್ರಿ ಕೆಲಸ ಮುಗಿಸಿ ಮಾರಶೆಟ್ಟಿಹಳ್ಳಿಗೆ ವಾಪಸಾಗುವಾಗಿ ಅವಘಡ ನಡೆದಿದೆ. ಗಾಯಗೊಂಡ ಅವರಿಗೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟರು.

Read More »

ಪಂಚಮಸಾಲಿ ಮೀಸಲಾತಿ ಹೆಸರಲ್ಲಿ ಯತ್ನಾಳ, ಸ್ವಾಮೀಜಿ ದೊಡ್ಡ ಡೀಲ್!!

ಹುಬ್ಬಳ್ಳಿ: ಯತ್ನಾಳ ಜೊತೆ ಸೇರಿ ಚುನಾವಣೆ ಸ್ಪರ್ಧಿಸಲು ಜಯ ಮೃತ್ಯುಂಜಯ ಸ್ವಾಮೀಜಿ ತಯಾರಿ ನಡೆಸಿದ್ದಾರೆ.2D, 2C. ಡಿಲ್ ಮಾಡಿಕೊಂಡಿದಕ್ಕೆ ಸ್ವಾಮೀಜಿ ವೈಯಕ್ತಿಕ ಆಸ್ತಿ ಮಾಡಿಕೊಂಡಿದ್ದಾರೆ. ದಾವಣಗೆರೆಯಲ್ಲಿ ವೈಯಕ್ತಿಕ ಶಿಕ್ಷಣ ಸಂಸ್ಥೆ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿ‌ ಮಾಡಿಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಯತ್ನಾಳ ಹಾಗೂ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ನಡೆಸಿದರು. ಸಂಸ್ಥಾಪಕ ಅಧ್ಯಕ್ಷರ ಬಗ್ಗೆ ಅತ್ಯಂತ ಬಹಳ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಹಂದಿ, ನಾಯಿ‌ …

Read More »

ಶಿಥಿಲಗೊಂಡ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ: ತಪ್ಪಿದ ದುರಂತ.!!

ಹುಬ್ಬಳ್ಳಿ: ಪೊಲೀಸ್ ಠಾಣೆಯಲ್ಲಿ ದೊಡ್ಡ ಅವಘಡ ತಪ್ಪಿದಂತಾಗಿದೆ. ಆರೋಪಿಗಳನ್ನು ವಿಚಾರಣೆ ಮಾಡುತ್ತಿರುವಾಗಲೇ ಮೇಲ್ಚಾವಣಿಯಿಂದ ಶಿಥಿಲಗೊಂಡಿದ್ದ ಕಾಂಕ್ರೀಟ್ ಕುಸಿದು ಬಿದ್ದಿರುವ ಘಟನೆ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಯಲ್ಲಿ ನಡೆದಿದೆ. ಸಂಪೂರ್ಣವಾಗಿ ಶಿಥಿಲವಾಗಿರುವ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಕಟ್ಟಡದಲ್ಲಿ ಸಂಭವಿಸಬಹುದಾಗಿದ್ದ ಅಪಘಾತ ತಪ್ಪಿದಂತಾಗಿದೆ. ಇನ್ನೂ ಸಮಾಜವನ್ನು ಕಾಯುವ ಪೊಲೀಸರಿಗಿಲ್ಲ ರಕ್ಷಣೆ ಎಂಬುವಂತಾಗಿದ್ದು, ಗೃಹ ಸಚಿವರೇ ಹೇಗಿವೆ ಪೊಲೀಸ್ ಠಾಣೆ ಗಳು ಒಮ್ಮೆ ನೋಡಿ ಹೇಗೆ ಕರ್ತವ್ಯ ಮಾಡಬೇಕು ಒಮ್ಮೆ ನೋಡಿ …

Read More »

ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರ; ತಿಹಾರ್‌ ಜೈಲಿಗೆ ಶಿಫ್ಟ್‌ ಸಾಧ್ಯತೆ!!

ರಾಣಾ ಭಾರತಕ್ಕೆ ತಲುಪಿದಾಗ ದೆಹಲಿಯ ತಿಹಾರ್ ಜೈಲಿನಲ್ಲಿರುವ ಹೆಚ್ಚಿನ ಭದ್ರತೆಯ ವಾರ್ಡ್‌ನಲ್ಲಿ ಇರಿಸಲಾಗುವುದು ಎಂದು ತಿಳಿದು ಬಂದಿದೆ. ನಂತರ ದೆಹಲಿಯ ಪಟಿಯಾಲ ಹೌಸ್‌ನಲ್ಲಿರುವ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ದೆಹಲಿ ಕಾರಾಗೃಹ ಇಲಾಖೆಯು ತಿಹಾರ್ ಜೈಲಿನಲ್ಲಿ ಆತನನ್ನು ಇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆತ ಇರುವ ಸೆಲ್‌ಗೆ ಹೆಚ್ಚಿನ ಭದ್ರತೆ ಒದಗಿ, ಸಿಸಿಟಿವಿಯನ್ನು ಅಳವಡಿಸಲಾಗುತ್ತದೆ. ಸದಾ ಆತನ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಸೆಲ್‌ನಲ್ಲಿಯೇ ಆತನಿಗೆ …

Read More »

ಸಿಡಿಲು, ಬಿರುಗಾಳಿ ನಿನ್ನೆ ಒಂದೇ ದಿನದಲ್ಲಿ 50ಕ್ಕೂ ಹೆಚ್ಚು ಮಂದಿ ಸಾವು!

ಬಿಹಾರ, ಉತ್ತರ ಪ್ರದೇಶ ಹಾಗೂ ಊತ್ತರಾಖಂಡದಲ್ಲಿ ಸಂಭವಿಸಿದ ಭಾರೀ ಸಿಡಿಲು ಮತ್ತು ಆಲಿಕಲ್ಲು ಮಳೆಗೆ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇಂತಹ ಕೆಟ್ಟ ಹವಾಮಾನದ ಸಮಯದಲ್ಲಿ ಎಲ್ಲರೂ ಸಂಪೂರ್ಣವಾಗಿ ಜಾಗರೂಕರಾಗಿರಬೇಕು ಮತ್ತು ವಿಪತ್ತು ನಿರ್ವಹಣಾ ಇಲಾಖೆಯಿಂದ ಕಾಲಕಾಲಕ್ಕೆ ನೀಡಲಾಗುವ ಸಲಹೆಗಳನ್ನು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಜನರಿಗೆ ಮನವಿ ಮಾಡಿದ್ದಾರೆ.

Read More »

ಸಣ್ಣ ವಿಚಾರಕ್ಕೆ ಎರಡು ಗ್ರಾಮಗಳ ಯುವಕರ ನಡುವೆ ಗಲಾಟೆ ಹೊಡೆದಾಟ!!

ದ್ವೇಷದ ಕಾರಣಕ್ಕೆ ಎರಡು ಗ್ರಾಮಗಳ ಯುವಕರು ಮಚ್ಚು, ಲಾಂಗು ಹಿಡಿದು ಗಲಾಟೆ ನಡೆಸಿ, ಹೊಡೆದಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.ಸಾರ್ವಜನಿಕವಾಗಿ ಕೈಯಲ್ಲಿ ಲಾಂಗ್ ಹಿಡಿದು ಯುವಕರ ಗ್ಯಾಂಗ್ ಓಡಾಡಿದೆ. ಇನ್ನೊಂದು ಯುವಕರ ಗುಂಪಿನ ಮೇಲೆ ಹಲ್ಲೆಗೆ ಮುಂದಾಗುತ್ತಿದಂತೆ ಇದನ್ನು ಕಂಡ ಸಾರ್ವಜನಿಕರು ತಪ್ಪಿಸಲು ಮುಂದಾಗಿದಾರೆ. ಗಲಾಟೆ ಬಿಡಿಸಲು ಬಂದ ಜನರ ಕೈಗೆ ಗಾಯಗಳಾಗಿವೆ. ಲಾಂಗು ಹಿಡಿದು ಝಳಪಿಸುತ್ತಿರುವ ಯುವಕರನ್ನು ಹಿಡಿದು ಸರವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. …

Read More »

ಡಿವೈಡರ್​​​​​​​ಗೆ ಕಾರು ಡಿಕ್ಕಿ,ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು..!

ರಸ್ತೆಯ ಡಿವೈಡರ್​​​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ನೆಲಮಂಗಲದ ದಾಬಸ್​​ಪೇಟೆಯ ಅಂಚೆಮನೆ ಕ್ರಾಸ್ ಬಳಿ​ ಇಂದು ಸಂಭವಿಸಿದೆ.ಎಲ್ಲರೂ ಮಲ್ಲೇಶ್ವರ ಮೂಲದವರೆಂದು ತಿಳಿದುಬಂದಿದ್ದು, ಬೆಂಗಳೂರಿನಿಂದ ತುಮಕೂರು ಕಡೆಗೆ ನಾಮಕರಣ ಕಾರ್ಯಕ್ರಮಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಅಂಚೆಮನೆ ಕ್ರಾಸ್​ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾಗಿ ಅಪಘಾತವಾಗಿದ್ದು, ಕಾರು ಜಖಂಗೊಂಡಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್​​​​ಪಿ ಸಿ.ಕೆ.ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Read More »