Breaking News

Breaking News

ಹುಬ್ಬಳ್ಳಿ, ಧಾರವಾಡದಲ್ಲಿ ಗುಡುಗು ಸಹಿತ ಭಾರಿ ಮಳೆ.!

ಭಾನುವಾರ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಮೇಕೆ ಮೆಯಿಸಲು ಹೋಗಿದ್ದ ವೃದ್ಧರೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಧಾರವಾಡ ತಾಲೂಕಿನ ಮುಗದ ಗ್ರಾಮದ ಬಳಿ ಹೊಲದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ರಸೂಲ್ ಸಾಬ್ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೇಕೆ ಮೇಯಿಸಿಕೊಂಡು ಗ್ರಾಮಕ್ಕೆ ಬರುವಾಗ ಸಿಡಿಲು ಬಡಿದಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಈಜು ಕಲಿಸುವಾಗ ನಿಯಂತ್ರಣ ಸಿಗದೆ ಮಗನ ಸಮೇತ ಅಪ್ಪನೂ ನೀರಿನಲ್ಲಿ ಮುಳುಗಿ ಸಾವು.!

ಮದ್ಯಪಾನ ಮಾಡಿ ತನ್ನ ಮಗನಿಗೆ ಆಳವಾದ ಕೃಷಿ ಹೊಂಡದಲ್ಲಿ ಈಜು ಕಲಿಸಲು ಮುಂದಾಗಿದ್ದಾನೆ. ಇದೀಗ ನೀರಿನಲ್ಲಿ ಮುಳುಗಿ ಇಬ್ಬರೂ ಸಾವಿಗೀಡಾಗಿದ್ದಾರೆ. ಈ ಘಟನೆ ಕರ್ನಾಟಕದ ಗಡಿಭಾಗ ತಮಿಳುನಾಡಿನ ಸೂಳಗಿರಿ ಸಮೀಪದ ನಂಜಾಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮುನಿರತ್ನ ಹಾಗೂ ಸಂತೋಷ್ ಕುಮಾರ್ ಎಂದು ಗುರುತಿಸಲಾಗಿದೆ. ಈಜು ಕಲಿಸುತ್ತಾ ಕೃಷಿ ಹೊಂಡದ ಆಳದ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅಪ್ಪನಿಗೆ ಹೊಂಡದ ತಳಭಾಗದಲ್ಲಿದ್ದ ಕೆಸರು ಕಾಲಿಗೆ ಅಂಟಿದ್ದು, ಮೇಲೆ ಬರಲು ಕಷ್ಟವಾಗಿದೆ. ಆಗ …

Read More »

ತಾಯಿ ಸಾವಿನಿಂದ ಆಘಾತಕ್ಕೊಳಗಾಗಿದ್ದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು.!

ಸಾಲಬಾಧೆಗೆ ನೊಂದು ರಕ್ಷಕ್ ತಾಯಿ ಚಂದ್ರಿಕಾ ಒಂದುವರೆ ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ತಾಯಿ ಸಾವಿನ ಕೊರಗಲ್ಲೇ ಮಾನಸಿಕವಾಗಿ ನೊಂದಿದ್ದ ಯುವಕ ಈಗ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಲ್ಕನೋ : ಹಾಸ್ಟೆಲ್‌ನ 5ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ.!

ಹಾಸ್ಟೆಲ್‌ನ 5ನೇ ಮಹಡಿಯಿಂದ ಹಾರಿ IIIT ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಲಕ್ನೋದಲ್ಲಿ ಜರುಗಿದೆ.ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ರಾಹುಲ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ನಂತರ ಬೇಸರಗೊಂಡಿದ್ದ ಎಂದು ತಿಳಿದುಬಂದಿದೆ

Read More »

ಖಾಸಗಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಇಬ್ಬರು ಬೈಕ್​ ಸವಾರರು ಸಾವು.!

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ಬೈಪಾಸ್​ನಲ್ಲಿ ಖಾಸಗಿ ಶಾಲೆಯ ಬಸ್​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ಮೂಲದ ಉದಯ್ ಕುಮಾರ್, ಜಾರ್ಖಂಡ್​ ಮೂಲದ ಕಾರ್ಮಿಕ ಪ್ರಕಾಶ್ ಮೃತರು. ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More »

11 ವರ್ಷಗಳ ಹಿಂದೆ ಹೆಣ್ಣಿನ ವಿಚಾರಕ್ಕೆ ಶುರುವಾದ ದ್ವೇಷ ಇಬ್ಬರ ಕೊಲೆಯಲ್ಲಿ ಅಂತ್ಯ.

ಶಹಾಪುರ ತಾಲೂಕಿನ ಸಾದ್ಯಾಪುರ ಕ್ರಾಸ್ ಬಳಿ ಡಬಲ್ ಮರ್ಡರ್ ನಡೆದಿತ್ತು. ಕಟಿಂಗ್ ಮಾಡಿಸಿಕೊಂಡು ಹೋಗ್ತಿದ್ದಾಗ ಮಾಪಣ್ಣನನ್ನು ಸುಪಾರಿ ಪಡೆದಿದ್ದ ಗ್ಯಾಂಗ್​ನಿಂದ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ಇದೀಗ ಡಬಲ್​ ಮರ್ಡರ್​ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸದ್ಯ ಮೂವರು ಕೊಲೆ ಆರೋಪಿಗಳಾದ ಶಿವಪ್ಪಗೌಡ, ಹುಸೇನಿ, ಮೊಹಮ್ಮದ್ ರಿಯಾಜ್​ರನ್ನು ಪೊಲೀಸರು ಬಂಧಿಸಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

Read More »

ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ನಾದಿನಿ ಮೇಲೆ ಮಚ್ಚಿನಿಂದ ಹಲ್ಲೆ.!

ತಿಮ್ಮಪ್ಪ ಎನ್ನುವ ವ್ಯಕ್ತಿಯೇ ಈ ರೀತಿ ವಿಕೃತವಾಗಿ ದಾಳಿ ನಡೆಸಿದ್ದಾನೆ. ಆರೋಪಿ ತಿಮ್ಮಪ್ಪ ತನ್ನ ಪತ್ನಿ ಪದ್ಮಾವತಿ, ಪದ್ಮಾವತಿ ತಂಗಿ ಭೂದೇವಿಯನ್ನು ಮಚ್ಚಿನಿಂದ ಹೊಡೆದಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ.ತಿಮ್ಮಪ್ಪ ಪತ್ನಿ ಹಾಗೂ ನಾದಿನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸೋಕೆ ಕಾರಣವೇ ಆಸ್ತಿ. ಘಟನೆಯಲ್ಲಿ ಪದ್ಮಾವತಿಯ ಕೈ ಬೆರಳುಗಳು ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಮತ್ತೊಂದೆಡೆ ಅಕ್ಕನ ಜೊತೆಗಿದ್ದ ತಂಗಿಯ ಮುಂಗೈ …

Read More »

ಬೆಂಗಳೂರಿನ ರೌಡಿಶೀಟರ್​ ಇದೀಗ ಹಾದಿಬೀದಿಯಲ್ಲಿ ಹೆಣ.!

ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಗೊಲ್ಲಹಳ್ಳಿ ಮುಖ್ಯ ರಸ್ತೆಯಲ್ಲಿ ಕುಖ್ಯಾತ ರೌಡಿಶೀಟರ್ ಮಂಜ ಅಲಿಯಾಸ್ ನೇಪಾಳಿ ಮಂಜನ ಕೊಲೆ ನಡೆದಿರುವಂತಹ ಘಟನೆ ನಡೆದಿದೆ.ನಿನ್ನೆ ಯುಗಾದಿ ಹಬ್ಬ ಇದ್ದಿದ್ರಿಂದ ಸ್ನೇಹಿತರು ಕರೆದರೂ ಅಂತಾ ಕುಣಿಗಲ್​ನಿಂದ ಬೆಂಗಳೂರಿಗೆ ರೌಡಿಶೀಟರ್ ಮಂಜ ಬಂದಿದ್ದಾನೆ. ಇಬ್ಬರು ಸ್ನೇಹಿತರ ಜೊತೆ ಆನೇಕಲ್ ತಾಲೂಕಿನ ಗೊಲ್ಲಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ರಾತ್ರಿ ಎಣ್ಣೆ ಪಾರ್ಟಿ ಮಾಡ್ತಿದ್ರಂತೆ. ಈ ವೇಳೆ 2 ಬೈಕ್​ನಲ್ಲಿ ಎಂಟ್ರಿಕೊಟ್ಟಿದ್ದ ಐವರ ಗ್ಯಾಂಗ್ ಲಾಂಗು, …

Read More »

ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಪಹರಣ ; ತಂದೆಯಿಂದ ದೂರು ದಾಖಲು.

ಉಡುಪಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಅಪಹರಣ ನಡೆದಿದ್ದು, ಲವ್‌ ಜಿಹಾದ್‌ ಶಂಕೆ ವ್ಯಕ್ತವಾಗಿದೆ. ಒಂದೆಡೆ ಮುಸ್ಲಿಂ ಸಮುದಾಯದ ಯುವಕನೋರ್ವನ ಯುವತಿಯ ಕರೆದೊಯ್ದಿದ್ದು ಮದುವೆಯಾಗಲು ನೋದಂಣಿ ಮಾಡಿಸಿದ್ದಾನೆ. ಇನ್ನೊಂದೆಡೆ ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ವಿದ್ಯಾರ್ಥಿನಿ ತಂದೆ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಅಕ್ರಮ್ ಮೊಹಮ್ಮದ್ ಎಂಬ ವ್ಯಕ್ತಿ ತನ್ನ ಸ್ಕೂಟರ್ ನಲ್ಲಿ ಆಕೆಯನ್ನು ಅಪಹರಿಸಿದ್ದಾನೆ ಎಂದು ಗಾಡ್ವಿನ್ ದೇವದಾಸ್ ಎಂಬುವವರು, ದೂರು ನೀಡಿದ್ದಾರೆ. …

Read More »

ದೆಹಲಿ : ಹಾಸಿಗೆ ಸಂಗ್ರಹಣಾ ವಿಭಾಗದಲ್ಲಿ ಮಹಿಳೆಯ ಕೊಳೆತ ಶವ ಪತ್ತೆ.!

ಶುಕ್ರವಾರ ವಿವೇಕ್ ವಿಹಾರ್‌ನ ಸತ್ಯಂ ಎನ್‌ಕ್ಲೇವ್‌ನಲ್ಲಿರುವ ಫ್ಲಾಟ್‌ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಅಧಿಕಾರಿಗಳಿಗೆ ಆಘಾತಕಾರಿ ಕರೆ ಬಂದಿತು. ಅಧಿಕಾರಿಗಳು ಸ್ಥಳಕ್ಕೆ ಬಂದಾಗ, ಮನೆ ಹೊರಗಿನಿಂದ ಲಾಕ್ ಆಗಿರುವುದನ್ನು ಕಂಡರು ಆದರೆ ಹಿಂಬಾಗಿಲಿನ ಬಳಿ ರಕ್ತದ ಕಲೆಗಳು ಕಂಡುಬಂದವು.ಶವ ಪತ್ತೆಯಾಗಿ ಒಂದು ದಿನದ ಒಳಗೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಹಾಗೂ ಆತನ ಸಹಚರನೊಬ್ಬನನ್ನು ಬಂಧಿಸಲಾಗಿದೆ.ವಿಚಾರಣೆಯ ಸಮಯದಲ್ಲಿ, ಮಿಶ್ರಾ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆ …

Read More »