Breaking News

Breaking News

ವಾಟ್ಸಪ್‌ನಲ್ಲಿ ಬಂದ ಲಿಂಕನ್ನು ಕ್ಲಿಕ್ ಮಾಡಿ 10.49 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ನಗರದ ವ್ಯಕ್ತಿಯೊಬ್ಬರಿಗೆ ವಾಟ್ಸಪ್‌ ಗ್ರೂಪ್ ನಲ್ಲಿ ಪಿ.ಎಂ.ಕಿಸಾನ್ ಯೋಜನಾ ಎಪಿಕೆ ಎಂಬ ಹೆಸರಿನಲ್ಲಿ ಪೋಸ್ಟ್ ಲಿಂಕ್ ಬಂದಿದ್ದು, ಲಿಂಕ್ ಡೌನ್ ಲೋಡ್ ಮಾಡಿದ ಕೂಡಲೇ ವ್ಯಕ್ತಿಯ ಗಮನಕ್ಕೆ ಬರುವಷ್ಟರಲ್ಲಿ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ 10.49ಲಕ್ಷ ರೂ.ಕಡಿತಗೊಂಡಿದೆ. ಮಾ.22ರಂದು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

Read More »

ಕೆಕೆಆರ್ ವಿರುದ್ಧ ವಿರಾಟ್‌ ಕೊಹ್ಲಿ ಐತಿಹಾಸಿಕ ದಾಖಲೆ.

ಐಪಿಎಲ್‌ 18ನೇ ಆವೃತ್ತಿಯ ಆರಂಭಿಕ ಪಂದ್ಯ ಮುಕ್ತಾಯವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಆರ್‌ಸಿಬಿ ಸಲಭವಾಗಿ ಮಣಿಸಿದೆ. ಇದೇ ವೇಳೆ ಆರ್ಸಿಬಿ ಪರ ಆಡಿದ ವಿರಾಟ್‌ ಕೊಹ್ಲಿ ಅವರು ಕೊಲ್ಕತ್ತಾ ವಿರುದ್ಧ ವಿಶೇಷ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ.ಐಪಿಎಲ್ 2025ರ ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಆರಂಭಿಕ ಪಂದ್ಯದಲ್ಲಿ ಕಿಂಗ್‌ ಕೊಹ್ಲಿ ಕೆಕೆಆರ್ ವಿರುದ್ಧ 59 ರನ್‌ಗಳನ್ನು ಬಾರಿಸುವ ಮೂಲಕ ಒಟ್ಟು 1,008 ರನ್‌ಗಳನ್ನು ಕಲೆಹಾಕಿದ ಕೀರ್ತಿಗೆ ಪಾತ್ರರಾಗಿದ್ದಾರೆ.

Read More »

ಒಂದೇ ಹಳ್ಳಿಯಲ್ಲಿ 200 ಕ್ಕೂ ಹೆಚ್ಚು ಜನರಿಗೆ ಕ್ಯಾನ್ಸರ್ ಪತ್ತೆ!

ಪೂರ್ವ ಗೋದಾವರಿ ಜಿಲ್ಲೆಯ ಬಿಕ್ಕವೋಲು ಮಂಡಲದ ಬಲಭದ್ರಪುರಂ ಗ್ರಾಮದಲ್ಲಿ ಕ್ಯಾನ್ಸರ್ ಪ್ರಕರಣಗಳ ಏರಿಕೆ ಇಡೀ ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸುತ್ತಿದೆ.ಬಲಭದ್ರಪುರಂ ಗ್ರಾಮದ ಬಳಿ ಇರುವ ಇತರ ಕೈಗಾರಿಕೆಗಳೊಂದಿಗೆ ಗ್ರಾಸಿಮ್ ಇಂಡಸ್ಟ್ರಿಯೂ ಅಲ್ಲಿನ ನೀರು ಮತ್ತು ಗಾಳಿಯನ್ನು ಕಲುಷಿತಗೊಳಿಸುತ್ತಿದೆ, ಇದರಿಂದಾಗಿ ಅನೇಕ ಜನರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇದರೊಂದಿಗೆ, ಹೆಚ್ಚಿನ ಜನರು ಈ ಕ್ಯಾನ್ಸರ್ ಸೋಂಕಿಗೆ ಒಳಗಾಗದಂತೆ ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಹೇಳುತ್ತಿದ್ದಾರೆ. ಆ …

Read More »

ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಢಿಕ್ಕಿ ಹೊಡೆದು ಕಾರ್ ಪಲ್ಟಿ.

ಕಾರು ಮಂಗಳೂರು ಕಡೆಗೆ ತೆರಳುತ್ತಿದ್ದು, ರಾಮಲ್‌ಕಟ್ಟೆ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆ ಹತ್ತಿ ಮಂಗಳೂರು ಕಡೆಯಿಂದ ಆಗಮಿಸುತ್ತಿದ್ದ ಟಿಪ್ಪರ್‌ ಲಾರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆ ಪೊಲೀಸರು ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಪ್ರಸವ ವೇದನೆಯಿಂದ ಬಳತಿದ್ದ ಹಸುವಿನ ಜೀವ ಉಳಿಸಿದ ವೈದ್ಯರು.

ಗರ್ಭ ಧರಿಸಿದ ಹಸಿವಿನ ಹೊಟ್ಟೆಯಲ್ಲಿ ಹಸುಗೂಸಿನ ಕರು ಹೊಟ್ಟೆಯಲ್ಲಿ ಸತ್ತುಹೋಗಿತ್ತು, ಈ ಸುದ್ದಿಯನ್ನು ತಿಳಿದ ಚಿತ್ರದುರ್ಗದ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮುಚ್ಚುಕುಂಟೆ ಇಂದು ಗ್ರಾಮದಲ್ಲಿ ಪ್ರಸವ ವೇದನೆಯಿಂದ ಬಳಲುತ್ತಿದ್ದ ಅಮೃಮಹಲ್ ಹಸುವನ್ನು ಸಿಸೇರಿಯನ್ ಮಾಡಿ ವಿಕೃತ ರೂಪದಲ್ಲಿದ್ದ ಕರುವನ್ನು ಶಸ್ತ್ರ ಚಿಕಿತ್ಸಕರಾದ ಡಾ.ದರ್ಶನ್ ಮತ್ತು ಡಾ.ರಕ್ಷಿತ್ ತಂಡವು ಯಶಸ್ವಿಯಾಗಿ ತೆಗೆದು ಹಸುವಿನ ಜೀವ ರಕ್ಷಣೆ ಮಾಡಿದ್ದಾರೆ. ಚಳ್ಳಕೆರೆ, ತಾಲ್ಲೂಕಿನ ಮುಚ್ಚುಗುಂಟೆ ಗ್ರಾಮದ …

Read More »

ಚಿತ್ರದುರ್ಗ:ಬಸ್ ಡಿಕ್ಕಿ ವಿದ್ಯಾರ್ಥಿಗಳ ಸಾವು

ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಿರಿಯೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಕೆಳಗಿನ ಸರ್ವಿಸ್ ರಸ್ತೆ ವೃತ್ತದಲ್ಲಿ ಇಂದು ಸಂಭವಿಸಿದೆ. ಇದರಲ್ಲಿ ನಬೀಲ್ ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಚಿತ್ರದುರ್ಗದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೇರಳ: ಮಾದಕ ವ್ಯಸನಕ್ಕೆ ದಾಸನಾಗಿದ್ದ ಮಗನನ್ನು ಬೇಸತ್ತು ಪೋಲೀಸರಿಗೆ ಒಪ್ಪಿಸಿದ ತಾಯಿ.

ಚೆಟ್ಟಿಕುಲಂ ಮೂಲದ ರಾಹುಲ್ ಎಂಬ ಯುವಕ ಮಾದಕ ವ್ಯಸನಕ್ಕೆ ದಾಸನಾಗಿದ್ದು, ಇದರಿಂದ ಆತನ ತಾಯಿ ಮಿನಿ ಅವರು ತೀವ್ರವಾಗಿ ನೊಂದಿದ್ದಾರೆ. ರಾಹುಲ್ ನನ್ನು ಈ ವ್ಯಸನದಿಂದ ಹೊರತರಲು ಮಿನಿ ಅವರು ಸಾಕಷ್ಟು ಪ್ರಯತ್ನಪಟ್ಟರೂ ಅದ್ಯಾವುದೂ ಫಲ ನೀಡಲಿಲ್ಲ. ಇದರಿಂದ ಬೇಸತ್ತ ಮಿನಿ, ರಾಹುಲ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಹುಲ್ ತನ್ನ ತಂದೆ, ತಾಯಿ ಮತ್ತು ತಂಗಿಯ ಮೂರುವರೆ ವರ್ಷದ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಕಾರಣ ಮಿನಿ ಅವರು ಪೊಲೀಸರಿಗೆ …

Read More »

ಮಹಿಳೆಗೆ ಕಚ್ಚಿದ ನಾಯಿ ಮರಿ ನಾಪತ್ತೆ, ಮಹಿಳೆಗೆ ರೇಬಿಸ್, ಆತಂಕಕ್ಕೆ ಕಾರಣ.

ತೋಟದ ಕೆಲಸಕ್ಕೆ ತೆರಳಿದ ವೇಳೆ ನಾಯಿಮರಿಯೊಂದು ಅವರಿಗೆ ಕಚ್ಚಿತ್ತು, ಆದರೆ ಮಹಿಳೆ ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ ಹಾಗೂ ಚಿಕಿತ್ಸೆಯನ್ನೂ ಪಡೆದಿರಲಿಲ್ಲ , ಸೋಮವಾರ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆದ್ದರಿಂದ ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ನೀರನ್ನು ನೋಡಿ ಬೊಬ್ಬೆ ಹಾಕುವುದು ಸಹಿತ ವಿಚಿತ್ರ ವರ್ತನೆ ತೋರುತ್ತಿದ್ದ ಆಕೆಯೊಂದಿಗೆ ವೈದ್ಯರು ಪೂರಕ ಮಾಹಿತಿ ಕೇಳಿದಾಗ ನಾಯಿ ಕಚ್ಚಿದ್ದ ಬಗ್ಗೆ ತಿಳಿಸಿದ್ದರು. ನಾಯಿ ಮರಿ ಕಚ್ಚಿದ ಪರಿಣಾಮ …

Read More »

ಮದುವೆಗೆ ಹೊರಟವರು ಮಸಣಕ್ಕೆ,ಕಾರ್ ಡಿಕ್ಕಿ, ನಾಲ್ವರು ಸಾವು.

ಬೇಗುಸರೈನ ಪಹಾರ್‌ಪುರ್ ಗ್ರಾಮದಿಂದ ಕಾರ್ ನಲ್ಲಿದ್ದವರು ಸಂಬಂಧಿ ಅಭಿಷೇಕ್ ಕುಮಾರ್ ಅವರ ಮದುವೆಗೆ ಸಾಹೇಬ್‌ಪುರ್ ಕಮಲ್‌ಗೆ ಹೋಗಿದ್ದರು. ಇಂದು ಮುಂಜಾನೆ ಹಿಂತಿರುಗುವಾಗ ವಾಹನವು ಅತಿ ವೇಗವಾಗಿ ಚಲಿಸುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಡಿಕ್ಕಿ ಎಷ್ಟು ಪ್ರಬಲವಾಗಿತ್ತೆಂದರೆ ಮುರಿದು ವಾಹನ ಉರುಳಿಬಿದ್ದಿದೆ. NH 31 ರ ನಗರ ಪೊಲೀಸ್ ಠಾಣೆ ಪ್ರದೇಶದ ಖಾಟೋಪುರ್ ಚೌಕ್ ಬಳಿ ಈ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ವಾಹನದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ …

Read More »

ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ದಂಪತಿಯ ಬಂಧನ.

‘ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಭಾಗ್ಯ ಗುಡಿಗಾರ ಹಾಗೂ ಅವರ ಪತಿ ರಮೇಶನನ್ನು ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆರೋಪದಡಿ ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 7 ಖಾಲಿ ಚೆಕ್ ಜಪ್ತಿ ಮಾಡಿದ್ದಾರೆ. ಖ್ವಾಜಾಮುದ್ದೀನ್, ಸ್ಥಳೀಯ ಬ್ಯಾಂಕ್‌ವೊಂದರಲ್ಲಿ ಫಿಗ್ಮಿ ಕಲೆಕ್ಟರ್ ಆಗಿದ್ದಾರೆ. ಮದುವೆ ಬಾಸಿಂಗ ತಯಾರಿ ಕೆಲಸ ಮಾಡುತ್ತಿದ್ದ ದಂಪತಿ, ವಿವಿಧ ಸಂಘಗಳಲ್ಲಿ ಸಾಲ ಪಡೆದು ಖ್ವಾಜಾಮುದ್ದೀನ್‌ಗೆ ನೀಡಿದ್ದರೆಂಬ ಮಾಹಿತಿ ಇದೆ. ಇಬ್ಬರ ನಡುವೆಯೂ ಹಲವು ಬಾರಿ ಹಣದ …

Read More »