BigTv News
March 18, 2025
Breaking News, ಅಮೆರಿಕ
ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಅಮೆರಿಕದ ಗಗನಯಾತ್ರಿಗಳನ್ನು ಮಂಗಳವಾರ ಸಂಜೆ ಭೂಮಿಗೆ ಹಿಂತಿರುಗಿಸಲಾಗುವುದು ಎಂದು ನಾಸಾ ತಿಳಿಸಿದೆ. ಕಳೆದ ಗಗನಯಾತ್ರಿಗೆ ಭೂಮಿಗೆ ಬಂದ ಬಳಿಕ ಇಲ್ಲಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಬಾಹ್ಯಾಕಾಶ ಸಂಸ್ಥೆಗಳು ಪುನರ್ವಸತಿ ಕೇಂದ್ರ ತೆರೆಯುತ್ತವೆ. ಅದರ ಅಡಿಯಲ್ಲಿ ಹಿಂದಿರುಗುವ ಗಗನಯಾತ್ರಿಗಳಿಗೆ ಭೂಮಿ ಮೇಲೆ ಒಗ್ಗಿಕೊಳ್ಳಲು ಬೇಕಾದ ರೀತಿ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗಿದೆ. ಅವರಲ್ಲಿ ಆ ಕೇಂದ್ರದಲ್ಲಿ ಇಟ್ಟು, ಆರೋಗ್ಯದ ಮೇಲೆ ಮತ್ತೇ ಅವರನ್ನು ಹೊರತರಲಾಗುತ್ತದೆ ಎಂದು ತಿಳಿದುಬಂದಿದೆ.
Read More »
BigTv News
March 18, 2025
Breaking News, Crime, ಹಾಸನ
ಹಾಸನ ನಗರದ ಪ್ರಮುಖ ವಸತಿ ಪ್ರದೇಶಗಳಲ್ಲಿ ಒಂದಾದ ಕುವೆಂಪುನಗರ ಎಕ್ಸ್ಟೆನ್ಶನ್ನಲ್ಲಿ ನವಜಾತ ಶಿಶುವೊಂದು ಚರಂಡಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆ ಎಂಬುದು ತಿಳಿದಿಲ್ಲ. ನವಜಾತ ಶಿಶುವಿನ ಹೊಕ್ಕುಳಬಳ್ಳಿಯನ್ನು ಸಹ ಕತ್ತರಿಸಲಾಗಿಲ್ಲ.ಅಪರಾಧಿ ನೆರೆಯ ರಾಜ್ಯಗಳಿಂದ ವಲಸೆ ಬಂದ ಕುಟುಂಬಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಶವವನ್ನು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.
Read More »
BigTv News
March 18, 2025
Breaking News, Crime, ಕರ್ನಾಟಕ
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಚಿಕ್ಕದೇವಸ್ಥಾನ ಬೀದಿ ನಿವಾಸಿ ಮಸಣಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೊಳ್ಳೇಗಾಲ ಪಟ್ಟಣದ ಲಿಂಗಾಣಪುರ ಹೊರ ವಲಯದ ಜಮೀನಲ್ಲಿ ಹಾದು ಹೋಗಿರುವ 63 ಕೆವಿ ವಿದ್ಯುತ್ ಟವರ್ ಲೈನ್ ತಂತಿ ಹಿಡಿದು ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಳ್ಳೇಗಾಲ ಪಟ್ಟಣ ಪೊಲೀಸರು ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಸೆಸ್ಕ್ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್ಗಳು, ಅಗ್ನಿ ಶಾಮಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೆಳಗೆ ಇಳಿಯುವಂತೆ …
Read More »
BigTv News
March 18, 2025
Breaking News, Crime, ಕಲಬುರಗಿ
ಲಾರಿಯೊಂದು ಬಾಲಕ ಮೇಲೆ ಹರಿದು ಸ್ಥಳದಲ್ಲೇ 5 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕಲಬುರ್ಗಿಯ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ.ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲೂರ ಗ್ರಾಮದ ಕೂಲಿ ಕಾರ್ಮಿಕನ ಮಗು ಅಯ್ಯಪ್ಪ ಬಸವರಾಜ ಮೃತಪಟ್ಟಿರುವ ಬಾಲಕ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಚಿತ್ತಾಪುರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸುತ್ತಿದ್ದಾರೆ.
Read More »
BigTv News
March 18, 2025
Breaking News
ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಗೀತಿಲಿಪಿ ಗ್ರಾಮದಲ್ಲಿ ಒಣಹುಲ್ಲು ಇದ್ದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ,ಅಲ್ಲೇ ಪಕ್ಕದಲ್ಲಿ ಆಟವಾಡುತ್ತಿದ್ದ 4 ಮಕ್ಕಳು ಸಜೀವ ದಹನವಾಗಿದ್ದಾರೆ.ಮಕ್ಕಳ ಶವಗಳನ್ನು ಹೊರತೆಗೆಯಲಾಗಿದೆ. ಆ ಶವಗಳು ಸಂಪೂರ್ಣವಾಗಿ ಕರಕಲಾಗಿ ಹೋಗಿವೆ. ಪ್ರಸ್ತುತ ಬೆಂಕಿ ದುರಂತಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.ಬೆಂಕಿಯ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.
Read More »
BigTv News
March 18, 2025
Breaking News, Crime, ಹಾವೇರಿ
ಧುಂಡಶಿ ವಲಯದಲ್ಲಿ ಕಾಯ್ದಿಟ್ಟ ಅರಣ್ಯದ ಶ್ರೀಗಂಧ ನೆಡುತೋಪನಲ್ಲಿ ಅಕ್ರಮವಾಗಿ ಗಿಡಗಳನ್ನು ಕಡಿದು ಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು ಒಬ್ಬ ಆರೋಪಿ ನಾಗಪ್ಪ ರಾಮಪ್ಪ ಇಳಿಗೇರ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಶಿಗ್ಗಾಂವ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಪಿ.ಡಿ.ಮಣಕೂರ ಹಾಗೂ ಧುಂಡಶಿ ವಲಯದ ಗಸ್ತು ಅರಣ್ಯ ಪಾಲಕರಾದ ಗಣಪತಿ ಶಿವಣ್ಣನವರ,ಯಂಕಪ್ಪ ಹೊಸುರ, ಮಹೇಶ ಕಲ್ಲಮ್ಮನವರ, ಮೋಹನ ಶಾಮನೂರ, ಪ್ರಕಾಶಕುಮಾರ ಬಂಕಾಪುರ ಭಾಗವಹಿಸಿದ್ದರು.
Read More »
BigTv News
March 18, 2025
Breaking News, Crime, ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರ ಮಾಂಗಲ್ಯ ಸರ ಕದ್ದು, ಪತಿಗೆ ಕಲ್ಲಿನಿಂದ ಜಜ್ಜಿರುವ ಘಟನೆ ವರದಿಯಾಗಿದೆ. ಪತ್ನಿಯ ಸರ ಕದ್ದವನ್ನು ಬೆನ್ನಟ್ಟುತ್ತಿರುವಾಗ ದುಷ್ಕರ್ಮಿಗಳು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಕಲ್ಲಿನಿಂದ ತಲೆಯನ್ನು ಜಜ್ಜಿ ಪರಾರಿಯಾಗಿದ್ದಾರೆ.ಎರಡು ಪಿಸ್ತೂಲ್ಗಳು, 10 ಗುಂಡುಗಳು, ಎರಡು ಚೀಲಗಳಲ್ಲಿ ಲೂಟಿ ಮಾಡಿದ ಆಭರಣಗಳು ಮತ್ತು ಪಲ್ಸರ್ ಮೋಟಾರ್ಸೈಕಲ್ ಅನ್ನು ವಶಪಡಿಸಿಕೊಂಡಿದ್ದೇವೆ. ಇತರ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
Read More »
BigTv News
March 18, 2025
Breaking News, ಯಾದಗಿರಿ
ಯಲ್ಲೇರಿ ಗ್ರಾಮದ ಕುರಿಗಾಹಿನೊರ್ವ ಗ್ರಾಮದಿಂದ ವಿಜಯಪುರ ಕಡೆಗೆ ಇಂದು ಸಾಗಾಣಿಕೆ ಮಾಡುವಾಗ ಗುಂಡುಗುರ್ತಿ ಸಮೀಪ ಉಸಿರು ಗಟ್ಟಿ 30 ಕುರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »
BigTv News
March 18, 2025
Breaking News, Crime, ಉತ್ತರ ಪ್ರದೇಶ
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಡಿಗ್ರಿ ಕಾಲೇಜಿನ ಹಿರಿಯ ಪ್ರಾಧ್ಯಾಪಕನ ವಿರುದ್ಧ ಕಳೆದ 20 ವರ್ಷಗಳಿಂದ ಮಹಿಳಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಕಿರುಕುಳ ಮತ್ತು ಶೋಷಣೆ ಆರೋಪದಡಿ ಎಫ್ಐಆರ್ ದಾಖಲಾಗಿದೆ. ವಿದ್ಯಾರ್ಥಿನಿ ಪ್ರಾಧ್ಯಾಪಕರ ಚೇಷ್ಟೆಯ ವರ್ತನೆಗಳ ಫೋಟೋಗಳು ಮತ್ತು ವೀಡಿಯೊ ತುಣುಕುಗಳನ್ನು ಕಳುಹಿಸಿದಳು.ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಇನ್ನು ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಸಂತ್ರಸ್ತರನ್ನು ಗುರುತಿಸಿ, ಅವರ ಹೇಳಿಕೆ ದಾಖಲಿಸಲು ಪ್ರಯತ್ನಿಸುತ್ತಿದ್ದೇವೆ …
Read More »
BigTv News
March 18, 2025
Breaking News, ಚಾಮರಾಜನಗರ, ಬೆಂಗಳೂರು
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮತಿ ಮತ್ತು ಸೋನಿ ಎಂಬುವವರು ಮೃತಪಟ್ಟಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಜೆಸಿಬಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಜೆಸಿಬಿ ಡಿಕ್ಕಿಯಾಗಿ ವಿದ್ಯುತ್ ಕಂಬ ಮುರಿದುಬಿದ್ದಿದ್ದು, ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಸದ್ದುಗುಂಟೆ ಪಾಳ್ಯದಲ್ಲಿ ನಡೆದಿದೆ.ಇಬ್ಬರು ತಮ್ಮ ಮಕ್ಕಳನ್ನು ಟ್ಯೂಷನ್ ನಿಂದ ಮನೆಗೆ ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬೈಯಪ್ಪನಹಳ್ಳಿ …
Read More »