Shaikh BigTv
April 3, 2023
Breaking News, ಕರ್ನಾಟಕ, ಧಾರವಾಡ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದೆ. ಹಾಲಿ ಶಾಸಕಿಯ ವಿರುದ್ಧ ಕಾಂಗ್ರೆಸ್ ಪಾಳೆಯದಲ್ಲಿಯೇ ಟಿಕೆಟ್ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಆಕಾಂಕ್ಷಿಯೊಬ್ಬರು ಸುದ್ಧಿಗೋಷ್ಟಿಯಲ್ಲಿಯೇ ಅಸಂವಿಧಾನಿಕ ಭಾಷೆ ಬಳಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿಂದು ಶಿವಾನಂದ ಬೆಂತೂರ ನೇತೃತ್ವದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಸಿ.ಜೆ. ಪಾಟೀಲ ಎಂಬುವಂತ ಟಿಕೆಟ್ ಆಕಾಂಕ್ಷಿ, ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿಯವರ ವಿರುದ್ಧವೇ ಅಸಂವಿಧಾನಿಕ ಭಾಷೆ ಬಳಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. …
Read More »
BigTv News
April 2, 2023
ಕರ್ನಾಟಕ, ಧಾರವಾಡ
ಧಾರವಾಡ: ಬಾರಾಕೋಟ್ರಿಯಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮನೆಯ ಮುಂದೆ ಧಾರವಾಡ – 71 ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ, ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಮುಖಂಡರು ಧರಣಿ ನಡೆಸಿದರು. ಧಾರವಾಡ ಕ್ಷೇತ್ರದ ಜೊತೆ ಶಿಗ್ಗಾಂವಿ ಕ್ಷೇತ್ರದ ಲ್ಲಿ ಸ್ಪರ್ಧೆ ಕುರಿತು ಚರ್ಚೆ ನಡೆಯುತ್ತಿದೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತಿದೆ. ಧಾರವಾಡ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೈಕೊಂಡಿದ್ದಾರೆ. …
Read More »
BigTv News
April 2, 2023
ಕರ್ನಾಟಕ, ಧಾರವಾಡ
ಧಾರವಾಡದ :ಹಳಿಯಾಳ ರಸ್ತೆಯಲ್ಲಿ ಪೊಲೀಸ್ ಚೆಕ್ ಪೋಸ್ಟ್ ತೆರೆಯಲಾಗಿದ್ದು, ಜಿಲ್ಲೆಯ ಒಳಬರುವ ಹಾಗೂ ಹೊರ ಹೋಗುವ ಎಲ್ಲಾ ವಾಹನಗಳನ್ನು ಪೊಲೀಸರು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಹಣ, ಸೀರೆ, ಮದ್ಯ ಸೇರಿದಂತೆ ಇತ್ಯಾದಿ ವಸ್ತುಗಳನ್ನು ಸಾಗಾಟ ಮಾಡದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಆ ರೀತಿಯ ವಾಹನಗಳು ಸಂಚರಿಸಿದ್ದೇ ಆದಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುವುದಂತೂ ಗ್ಯಾರಂಟಿ. 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ …
Read More »
Shaikh BigTv
April 1, 2023
Breaking News, ಕರ್ನಾಟಕ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಗ್ರಾಮೀಣ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಹಾಲಿ ಶಾಸಕ ಬಿಜೆಪಿಯ ಅಮೃತ ದೇಸಾಯಿ ವಿರುದ್ಧ ಒಂದಾಗಿದ್ದಾರೆ ಬಿಜೆಪಿ ಟಿಕೇಟ್ ಆಕಾಂಕ್ಷಿಗಳು. ಮಾಜಿ ಶಾಸಕಿ ಸೀಮಾ ಮಸೂತಿ ಮನೆಯಲ್ಲಿ ಗುಪ್ತ ಸಭೆ ನಡೆದಿದ್ದು, ಸಭೆಯಲ್ಲಿ ನಾಲ್ವರು ಬಿಜೆಪಿ ಟಿಕೇಟ ಆಕಾಂಕ್ಷಿಗಳು ತಮ್ಮ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಸೀಮಾ ಮಸೂತಿಯವರಿಗೆ ಟಿಕೇಟ ನೀಡಲು ಪಕ್ಷದ ವರಿಷ್ಟರಿಗೆ ಒತ್ತಡ ಹೆರಲು ತೀರ್ಮಾನಿಸಿದ್ದಾರೆ. ಕಳೆದ ಸಾರಿ, ಅಮೃತ ದೇಸಾಯಿ ಗೆಲುವಿಗೆ ಕಾರಣರಾಗಿದ್ದ ನಾಲ್ವರು …
Read More »
BigTv News
March 31, 2023
ಕರ್ನಾಟಕ, ಧಾರವಾಡ
ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಶ್ರೀಮತಿ ಸ್ವರೂಪ ಟಿ.ಕೆ. ಅವರು ಇಂದು ಅಧಿಕಾರ ವಹಿಸಿಕೊಂಡರು. ಈ ಮೊದಲು ಅವರು ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ (ಸಂಜೀವಿನಿ) ಅಪರ ಅಭಿಯಾನ ನಿರ್ದೇಶಕರಾಗಿದ್ದರು.
Read More »
Shaikh BigTv
March 31, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ನಿನ್ನೆ ಸಂಜೆಯಿಂದ ನಾಪತ್ತೆ ಆಗಿದ್ದ ನದೀಂ ಮನೆಯಿಂದ ಕಾಣೆಯಾದ ಬಾಲಕನೊರ್ವ ಶವವಾಗಿ ಪತ್ತೆಯಾದ ಘಟನೆ ಇಲ್ಲಿನ ದೊಡ್ಡಮನಿ ಕಾಲೇನಿಯಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಕ್ರಿಶ್ಚಿಯನ್ ಕಾಲೋನಿಯ ನದೀಮ್ಹು 8ವರ್ಷ ಎಂಬಾತನೇ ಸಾವನ್ನಪ್ಪಿದ ಬಾಲಕನಾಗಿದ್ದು, ಈತ ಗುರುವಾರ ಮನೆಯಿಂದ ಹೊರಹೋಗಿದ್ದ, ನಂತರ ರಾತ್ರಿಯಾದರೂ ಮರಳಿ ಮನೆಗೆ ಬಂದಿದ್ದಿಲ್ಲ. ಹೀಗಾಗಿ ಮೃತ ನದೀಮ್ ಪೋಷಕರು ಬೆಂಡಿಗೇರಿ ಪೋಲಿಸ್ ಠಾಣೆಯಲ್ಲಿ ನಾಪತ್ತೆಯ ದೂರು ನೀಡಿದ್ದರು. ಆದರೆ ಇಂದು ನದೀಮ್ ಶವವಾಗಿ ದೊಡ್ಡಮನಿ …
Read More »
BigTv News
March 30, 2023
ಕರ್ನಾಟಕ, ಧಾರವಾಡ
ಕುಂದಗೋಳ : ಲೋಕೋಪಯೋಗಿ ಇಲಾಖೆ ಕುಂದಗೋಳ ಪಟ್ಟಣದ ಅಭಿವೃದ್ಧಿಗಾಗಿ ನಿರ್ಮಿಸುತ್ತಿರುವ ಕಾಮಗಾರಿಯೊಂದು ಸದ್ಯ ಸ್ಥಳೀಯ ಜನರಿಗೆ ಬೇಸರ ತಂದಿದ್ದು, ಜನ ಕಾಮಗಾರಿ ಕಳಪೆ ಆಗಿದೆ ಎಂದು ಆರೋಪ ಮಾಡ್ತಾ ಇದ್ದಾರೆ. ಕುಂದಗೋಳ ಪಟ್ಟಣದ ಮಾರ್ಕೇಟ್ ರಸ್ತೆಯ ಅಕ್ಕಪಕ್ಕದ ಚರಂಡಿಗಳು ವಾಸದ ಮನೆಗಳಿಗಿಂತ ಎತ್ತರವಾಗಿವೆ, ಇದಲ್ಲದೆ ರಸ್ತೆ ಎತ್ತರಕ್ಕೆ ತಕ್ಕಂತೆ ಚರಂಡಿ ನಿರ್ಮಿಸದೇ ಕಿರಿದಾಗಿ ಚರಂಡಿ ನಿರ್ಮಿಸಿರುವುದರಿಂದ ನಮ್ಮ ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುವ ಭೀತಿ ಇದೆ ಎನ್ನುತ್ತಿದ್ದಾರೆ ಸ್ಥಳೀಯ ನಿವಾಸಿಗಳು. …
Read More »
BigTv News
March 29, 2023
ಕರ್ನಾಟಕ, ಧಾರವಾಡ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಹಿರಿಯ ಪತ್ರಕರ್ತ ಮೆಹಬೂಬ್ ಮುನವಳ್ಳಿ ಅವರನ್ನು ವಿಚಾರಣೆ ನೆಪದಲ್ಲಿ ದಾವಣಗೆರೆ ಜಿಲ್ಲಾ ಪೋಲಿಸರು ಕರೆದೊಯ್ದು ಬಂಧನ ಮಾಡಿರುವುದನ್ನು ಖಂಡಿಸಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮೌನಪ್ರತಿಭಟನೆ ನಡೆಸಿದರು. ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯ ಪತ್ರಕರ್ತರ ಭವನದಿಂದ ನೂರಾರು ಪತ್ರಕರ್ತರು ತಹಶಿಲ್ದಾರರ ಕಚೇರಿವರೆಗೆ ಮೌನ ಮೆರವಣಿಗೆ ಹೋಗಿ ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಸಂಗಮೇಶ ಮೆಣಸಿನಕಾಯಿ ಮಾತನಾಡಿ, ರಾಜ್ಯದಲ್ಲಿ …
Read More »
BigTv News
March 28, 2023
ಕರ್ನಾಟಕ, ಧಾರವಾಡ
ಧಾರವಾಡ: ದಾಖಲೆ ಇಲ್ಲದೇ ಸಾಗಾಟ ಮಾಡಲಾಗುತ್ತಿದ್ದ ಅಂದಾಜು 25 ಲಕ್ಷ ರೂಪಾಯಿ ಮೌಲ್ಯದ 12 ಸಾವಿರ ಸೀರೆಗಳನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ, ಧಾರವಾಡ ಬೈಪಾಸ್‌ನಲ್ಲಿರುವ ಇಟಿಗಟ್ಟಿ ಬಳಿ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ವೇಳೆ ಲಾರಿ ಚಾಲಕ ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಲಾರಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅದನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ದಾಖಲೆ …
Read More »
BigTv News
March 28, 2023
ಕರ್ನಾಟಕ, ಧಾರವಾಡ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಚುನಾವಣೆ ಘೋಷಣೆಯಾದ ನಂತರ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುತ್ತದೆ. ಚುನಾವಣೆಗೂ ಮುನ್ನವೇ ನಮ್ಮಲ್ಲಿ ಟಿಕೆಟ್ ಘೋಷಣೆ ಮಾಡಲ್ಲ. ಪ್ರತಿ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟ ಉದಾಹರಣೆ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ಕೊಡಲ್ಲ ಅನ್ನೋ ಮಾತು ಯಾಕೆ ಕ್ರಿಯೇಟ್ ಆಗಿದೆ ಗೊತ್ತಿಲ್ಲ. ವಯಸ್ಸು, ಗೆಲ್ಲುವ ಮಾನದಂಡ ಇತ್ಯಾದಿ ಕಾರಣಗಳಿಂದಾಗಿ …
Read More »