Breaking News

ಕರ್ನಾಟಕ

ಉತ್ತರ ಕರ್ನಾಟಕದಲ್ಲಿ ಜಲ ಪ್ರಳಯ ತಾರತಮ್ಯ ತೋರದೇ ಸಹಾಯಹಸ್ತ ಚಾಚಲು ಶಿವಾಚಾರ್ಯ ಸ್ವಾಮೀಜಿ ಮನವಿ

ಚಿಕ್ಕೋಡಿ: ಪ್ರವಾಹ ಪೀಡಿತ ಜನರಿ ಸಾರ್ವಜನಿಕರು ಸಹಾಯ ಮಾಡುವಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೀರೆಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿಕೊಂಡರು. ಉತ್ತರ ಕರ್ನಾಟಕದ ಧಾರಾಕರ ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ಉತ್ತರ ಕರ್ನಾಟಕದ ವಿಚಾರದಲ್ಲಿ ತಾರತಮ್ಯ ಮನೋಭಾವ ಬೇಡಾ. ಎಲ್ಲರೂ ಈ ಕೆಲಸದಲ್ಲಿ ಮುಕ್ತವಾಗಿ ಬಂದು ಸಹಾಯಹಸ್ತ ತೋರಿಕಷ್ಟಗಳನ್ನ ನೋಡಿ ಸುಮ್ಮನಾಗಬೇಡಿ ಜನರ ಕಣ್ಣಿರನ್ನ ವರೆಸಿ ಎಂದರು. ಬೆಂಗಳೂರಿನ ಎಲ್ಲಾ ಸಂಸ್ಥೆ ಸಂಘಟನೆಗಳು ಸಹಾಯ ಹಸ್ತ ಚಾಚುವ ಅವಶ್ಯಕತೆ …

Read More »

ತುಂಬಿ ಹರಿದ ತುಂಗಭದ್ರಾ ನಿರಾಶ್ರಿತ ಕೇಂದ್ರಕ್ಕೆ ಡಿಸಿ ಭೇಟಿ. ನಿರಾಶ್ರಿತರ ಹೈಡ್ರಾಮ.

ದಾವಣಗೆರೆ : ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಉಂಟಾದ ತುಂಗಭದ್ರಾ ನದಿಯ ಪ್ರವಾಹದಿಂದ ಸುಮಾರು 25 ಕ್ಕು ಹೆಚ್ಚು ಮನೆಗಳು ಹಾನಿಯಾಗಿದೆ‌. ಗಂಗಾನಗರದಲ್ಲಿ ನೆರೆಹಾನಿಯಾಗಿದ್ದು ಸ್ಥಳೀಯರಿಗಾಗಿ ಜಿಲ್ಲಾಡಳಿತ ಗಂಜಿಕೇಂದ್ರ ತೆರೆದಿದೆ. ಇವತ್ತು ಗಂಜಿಕೇಂದ್ರ ಹಾಗೂ ಹೊಳೆ ವೀಕ್ಷಣೆಗೆ ಜಿಲ್ಲಾಧಿಕಾರಿ ಬರುತ್ತಿದ್ದಂತೆ ಹೈಡ್ರಾಮ ನಡೆಯಿತು. ಗಂಜಿಕೇಂದ್ರದಲ್ಲಿ ಪರಿಹಾರಕ್ಕಾಗಿ ಕಿತ್ತಾಟ ಉಂಟಾಯಿತು. ಹೊರಗಿನ ವ್ಯಕ್ತಿಗಳು ಗಂಜಿಕೇಂದ್ರದಲ್ಲಿ ಬರ್ತಿದ್ದಾರೆ ಅಂತ ಸ್ಥಳೀಯರಲ್ಲಿ ಗಲಾಟೆ ನಡೆಯಿತು. ಇನ್ನು ಗಂಗಾನಗರದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶಿವಮೂರ್ತಿ ಭೇಟಿ ನೀಡಿ ವೀಕ್ಷಣೆ …

Read More »

ಬೋರ್ಗರೆಯುತ್ತಾ ಹರಿಯುತ್ತಿರುವ ಹೇಮೆಯನ್ನು ಕಣ್ತುಂಬಿಕೊಳ್ಳಲು ಜನಜಂಗುಳಿ.

ಮಂಡ್ಯ: ಜಿಲ್ಲೆ ಹೇಮಾವತಿ ನದಿಯ ಜಲಸಾಯ ಹೇಮಗಿರಿ ಅಣೆಕಟ್ಟೆಯ ಮೇಲೆ ಹೇಮಾವತಿ ನದಿಯು ಬೋರ್ಗರೆಯುತ್ತಾ ಹರಿಯುತ್ತಿದೆಗೊರೂರು ಜಲಾಶಯದಿಂದ 60ಸಾವಿರ ಕ್ಯೂಸೆಕ್ಸ್ ನೀರನ್ನು ಹೇಮಾವತಿ ನದಿಗೆ ಹರಿಯ ಬಿಟ್ಟಿರುವುದರಿಂದ ಗದ್ದೇಹೊಸೂರಿನ ಖುರಾವು ನಡುಗಡ್ಡೆಯಂತಾಗಿದೆ.ಬೋರ್ಗರೆಯುತ್ತಾ ಹರಿಯುತ್ತಿರುವ ಹೇಮಾವತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಜಂಗುಳಿ ನೆರೆದಿದೆ.ನದಿಯ ಬಳಿ ಬಿಗಿ ಪೋಲಿಸ್ ಭದ್ರತೆ ನೀಡಲಾಗಿದೆ.ತಾಲ್ಲೂಕು ಆಡಳಿತದ ವತಿಯಿಂದ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡರು.

Read More »

ಭಾರೀ ಮಳೆಗೆ ನಂಜನಗೂಡು ದೇವಾಲಯ ಸಂಪೂರ್ಣ ಜಲಾವೃತ

ಮೈಸೂರು- ಕೇರಳ ಹೆದ್ದಾರಿ ಬದಲಿ ಮಾರ್ಗಕ್ಕೆ ಸೂಚನೆ ನೀಡಲಾಗಿದ್ದು, ಸಂಪೂರ್ಣ ನಂಜನಗೂಡಿನ ದೇವಾಲಯಗಳು ಜಲಾವೃತಗೊಂಡಿವೆ ಕಬಿನಿ ಜಲಾಶಯದಿಂದ 90,000 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ ಚಿಕ್ಕಮಗಳೂರು ಹಾಸನ ದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಗೊರು ಡ್ಯಾಮ್ ನಿಂದ 50000 ಕ್ಯುಸೆಕ್ ನೀರನ್ನು ಕೆಆರ್ ಎಸ್ ಮುಖಾಂತರ ಕಾವೇರಿನದಿಗೆ ಬಿಡಲಾಗಿದೆ ಹೇಮಾವತಿ ಹೊಳೆಯ ತಗ್ಗು ಪ್ರದೇಶ ಹಾಗೂ ಕಾವೇರಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ

Read More »

ಮಲಪ್ರಭೆಯ ಮುನಿಸಿನಲ್ಲಿ ಗಮನಾರ್ಹ ಇಳಿಕೆ,ಘಟಪ್ರಭಾ ಏರಿಳಿಕೆ

ಬೆಳಗಾವಿ :ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದ್ದು ಹೊರಹರಿವು 85 ಸಾವಿರ ಕ್ಯೂಸೆಕ್ಸದಿಂದ ಹತ್ತು ಸಾವಿರಕ್ಕೆ ಇಳಿದಿದೆ.ಖಾನಾಪುರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಕಡಿಮೆಯಾಗಿದ್ದರಿಂದ ಒಳಹರಿವು 45 ಸಾವಿರ ಕ್ಯೂಸೆಕ್ಸಕ್ಕೆ ಇಳಿದಿದೆ.37.7 ಟಿ ಎಮ್ ಸಿ ಸಾಮರ್ಥ್ಯದ ಡ್ಯಾಮಿನಲ್ಲಿ ಈಗ 35 ಟಿ ಎಮ್ ಸಿ ನೀರು ಸಂಗ್ರಹವಾಗಿದೆ. ಹೊರಹರಿವು 85 ಸಾವಿರದಿಂದ ಒಂದು ಲಕ್ಷದವರೆಗೂ ತಲುಪಿದ್ದರಿಂದ ಮುನವಳ್ಳಿ,ಬಸರಗಿ,ಶಿಂಧೋಗಿ,ಅರಟಗಲ್,ತೊರಗಲ್ಲ,ಹಾಲೊಳ್ಳಿ,ಸುನ್ನಾಳ,ತೊರಗಲ್ಲ,ರಾಮದುರ್ಗ ನಗರದ …

Read More »

ಹಾಲಿನ ಪ್ಯಾಕೆಟ್ ಗಳಲ್ಲಿ ನೀರು ಪೂರೈಕೆ- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

ಬೆಳಗಾವಿ: ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರಿಗೆ ಆಹಾರ ಪೊಟ್ಟಣಗಳ ಜತೆ ಬಾಟಲ್ ಗಳ ಬದಲಿಗೆ ನಂದಿನಿ ಹಾಲಿನ ಖಾಲಿ ಪ್ಯಾಕೆಟ್ ಗಳಲ್ಲಿ ಕುಡಿಯುವ ಶುದ್ಧ ನೀರು ತುಂಬಿಸಿ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.ಹೆಲಿಕಾಪ್ಟರ್ ಮೂಲಕ ಆಹಾರ ಪೊಟ್ಟಣಗಳ ಜತೆ ನೀರಿನ ಬಾಟಲ್ ಗಳನ್ನು ವಿತರಿಸಲಾಗುತ್ತಿತ್ತು. ಬಾಟಲ್ ಭಾರವಾಗಿರುವುದರಿಂದ ಮೇಲಿನಿಂದ ಎಸೆದಾಗ ಜನರಿಗೆ ಗಾಯಗಳಾಗುವ ಸಾಧ್ಯತೆಗಳು ಕಂಡುಬಂದವು. ಆದ್ದರಿಂದ ಬಾಟಲ್ ಗಳ ಬದಲು ಪ್ಯಾಕೆಟ್ ಗಳಲ್ಲಿ ನೀರು ಪೂರೈಸಲಾಗುತ್ತಿದೆ.ಪ್ರವಾಹದಲ್ಲಿ ಸಿಲುಕಿರುವ ಜನರಿಗೆ …

Read More »

ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಕುಮಾರಧಾರ – ನೇತ್ರಾವತಿಗಳ ಸಂಗಮ

ಮಂಗಳೂರು: ಕಳೆದ ಹಲವಾರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಿರೀಕ್ಷೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಗಯಾಪದ ಕ್ಷೇತ್ರ ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಕುಮಾರಧಾರ – ನೇತ್ರಾವತಿಗಳ ಸಂಗಮವಾಗಿದೆ. ಉಪ್ಪಿನಂಗಡಿ ದೇಗುಲದಲ್ಲಿ ನದಿಗಳ ಸಂಗಮವಾಗಿದ್ದು, ನೆರೆದ ಸಹಸ್ರಾರು ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮವಾಗಿದ್ದು, ಸಂಗಮದ ಬಳಿಕ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಲಾಯಿತು ಗಂಗಾಪೂಜೆ ಬಳಿಕ ಸಹಸ್ರಲಿಂಗೇಶ್ವರ ದೇವರಿಗೆ ಸಂಗಮ …

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರದಿಂದ ಇದ್ದಕ್ಕಿದ್ದಂತೆ ನೇತ್ರಾವತಿ ನೀರಿನ ಮಟ್ಟ ಹೆಚ್ಚಳವಾಗಿದೆ.ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀ. ಆಗಿದೆ.ಬೆಳಗ್ಗೆ 10ರ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 8.7 ಮೀಟರ್ ಇತ್ತು. ಸದ್ಯ ನೇತ್ರಾವತಿ ನದಿ10.0 ಮೀ. ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.‌ ಉಪ್ಪಿನಂಗಡಿ ನೇತ್ರಾವತಿ 31.5 MTR, ಉಪ್ಪಿನಂಗಡಿ 26.5 ಮೀ, ಕುಮಾರಧಾರ ನದಿ ಹಾಗೂ ಗುಂಡ್ಯ ನದಿಗಳು 5.0 ಮೀ. ಅಪಾಯ …

Read More »

ಮಳೆ ಸಂತ್ರಸ್ಥರನ್ನು ಸಂತೈಸಿದ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ

ಕೂಡ್ಲಿಗಿ: ಬಳ್ಳಾರಿ ಸಂಸದರಾದ ವೈ. ದೇವೇಂದ್ರಪ್ಪನವರು ತುಂಗಭದ್ರಾ ನದಿಯ ಪ್ರವಾಹ ಪೀಡಿತ ಪ್ರದೇಶಗಳಾದ ಹಡಗಲಿ ತಾಲ್ಲೂಕಿನ ಮಾಗಳ,ಅಂಗುರು,ಕೋಟಿಹಾಳ,ಮಕರಬ್ಬಿ,ಕಾಂತೆ ಬೆನ್ನೂರು, ಮೈಲಾರ, ಹರವಿ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಬೇಟಿ ನೀಡಿ ನೆರೆ ಸಂತ್ರಸ್ಥರನ್ನು ಸಂತೈಸಿದರು.ಸ್ಥಳದಲ್ಲಿಯೇ ಅಗತ್ಯ ಪರಿಹಾರ ವದಗಿಸುವಲ್ಲಿ ಮುತುವಜಿ೯ವಹಿಸಿದರು.ನೆರೆ ನಿರಾಶ್ರಿತ ರಿಗೆ ಸೂಕ್ತಸೌಕಯ೯ಗಳನ್ನು ಸಮಪ೯ಕವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆದು ಆಹಾರ ಆರೋಗ್ಯ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತಾಧಿಕಾರಿಗಳಿಗೆ ಸೂಚಿಸಿದರು.ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಆದೇಶಿಸಿದರು.ಹಡಗಲಿ …

Read More »

ಉಕ್ಕಿ ಹರಿಯುತ್ತಿರುವ ಹಳ್ಳವನ್ನೆ ಈಜಿ ದಾಟಿದ ಶ್ವಾನ

ದಾವಣಗೆರೆ : ಅಪಾರ ಪ್ರಮಾಣದ ಮಳೆಯಿಂದ ತುಂಗಭದ್ರಾ ಬದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ಬಂಡಿಹಳ್ಳದಲ್ಲಿ ಸಾರಥಿ ಚಿಕ್ಕಬಿದರೆ ಗ್ರಾಮದ ಸಂಪರ್ಕ ಕಡಿತಗೊಂಡಿದೆ.ಸುರಕ್ಷಿತ ಸ್ಥಳಕ್ಕೆ ತೆರಳಲು ಗ್ರಾಮಸ್ಥರು ಹರಸಾಹಸ ಪಡುತ್ತಿರುವದು ಒಂದು ಕಡೆಯಾದರೆ,ತುಂಬಿ ಹರಿಯುತ್ತಿರುವ ಬಂಡಿಹಳ್ಳದಿಂದ ಶ್ವಾನ ಒಂದು ದಡದಿಂದ ಮತ್ತೊಂದು ದಡಕ್ಕೆ ಈಜಿ ದಡ ಸೇರುವ ಮೂಲಕ ಅಚ್ಚರಿ ಮೂಡಿಸಿತು.ಶ್ವಾನವೇನೋ ಈಜಿ ದಡ ಸೇರಿದೆ ಆದರೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನದಿ …

Read More »