Breaking News

ತುಂಬಿ ಹರಿದ ತುಂಗಭದ್ರಾ ನಿರಾಶ್ರಿತ ಕೇಂದ್ರಕ್ಕೆ ಡಿಸಿ ಭೇಟಿ. ನಿರಾಶ್ರಿತರ ಹೈಡ್ರಾಮ.

ದಾವಣಗೆರೆ : ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಉಂಟಾದ ತುಂಗಭದ್ರಾ ನದಿಯ ಪ್ರವಾಹದಿಂದ ಸುಮಾರು 25 ಕ್ಕು ಹೆಚ್ಚು ಮನೆಗಳು ಹಾನಿಯಾಗಿದೆ‌. ಗಂಗಾನಗರದಲ್ಲಿ ನೆರೆಹಾನಿಯಾಗಿದ್ದು ಸ್ಥಳೀಯರಿಗಾಗಿ ಜಿಲ್ಲಾಡಳಿತ ಗಂಜಿಕೇಂದ್ರ ತೆರೆದಿದೆ. ಇವತ್ತು ಗಂಜಿಕೇಂದ್ರ ಹಾಗೂ ಹೊಳೆ ವೀಕ್ಷಣೆಗೆ ಜಿಲ್ಲಾಧಿಕಾರಿ ಬರುತ್ತಿದ್ದಂತೆ ಹೈಡ್ರಾಮ ನಡೆಯಿತು. ಗಂಜಿಕೇಂದ್ರದಲ್ಲಿ ಪರಿಹಾರಕ್ಕಾಗಿ ಕಿತ್ತಾಟ ಉಂಟಾಯಿತು. ಹೊರಗಿನ ವ್ಯಕ್ತಿಗಳು ಗಂಜಿಕೇಂದ್ರದಲ್ಲಿ ಬರ್ತಿದ್ದಾರೆ ಅಂತ ಸ್ಥಳೀಯರಲ್ಲಿ ಗಲಾಟೆ ನಡೆಯಿತು. ಇನ್ನು ಗಂಗಾನಗರದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶಿವಮೂರ್ತಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ನಂತರ ಪರಿಹಾರ ನೀಡುತ್ತೇವೆ ಅಂತ ಭರವಸೆ ನೀಡಿದರು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *