Breaking News

ಕರ್ನಾಟಕ

ಅಂತ್ಯಕ್ರಿಯೆಗೆ ಸಿಎಂ ಬರಲೇಬೇಕು ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ರೈತ

ಮಂಡ್ಯ: ಸಾಲ ಬಾಧೆ ತಾಳಲಾರದೆ ರಾಜೇಶ್ ಎಂಬ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ, ಮದ್ದೂರಿನ ಮಾಳಗಾರನಹಲ್ಲಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.  ಐದು ಎಕರೆ ಜಮೀನು ಹೊಂದಿದ್ದ ರಾಜೇಶ್ ಬ್ಯಾಂಕ್ ಮತ್ತು ಕೈ ಸಾಲ ಸೇರಿ ಸುಮಾರು 5 ಲಕ್ಷದವರೆಗೆ ಸಾಲ ಮಾಡಿದ್ದರು. ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಶರಣಾಗಿರುವ ರೈತ ರಾಜೇಶ್, ನನ್ನ ಅಂತ್ಯಕ್ರಿಯೆಗೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್‌, …

Read More »

ಆಟವಾಡುತ್ತಾ ಸುಣ್ಣದ ಡಬ್ಬಿ ನುಂಗಿ ಮಗು ಸಾವು

ವಿಜಯಪುರ: ಮನೆಯಲ್ಲಿ ಆಟವಾಡುತ್ತಿದ್ದ ಮಗುವೊಂದು ಸುಣ್ಣದ ಡಬ್ಬಿ ನುಂಗಿ ಸಾನ್ನಪ್ಪಿದ ಧಾರುಣ ಘಟನೆ ವಿಜಯಪುರದ ತಿಕೋಟಾದಲ್ಲಿ ಸೋಮವಾರ ರಾತ್ರಿ ನಡೆದಿದೆ.  ತಿಕೋಟಾ ನಿವಾಸಿ ವಿಶ್ವನಾಥ ತಾಳಿಕೋಟೆ ಎಂಬುವರ 9 ತಿಂಗಳ ಗಂಡು ಮಗು ಮಲ್ಲು ಮೃತಪಟ್ಟ ದುರ್ದೈವಿ. ಮನೆಯಲ್ಲಿ ಸೋಮವಾರ ಆಟ ಆಡುತ್ತಿದ್ದ ಮಗು ಆಕಸ್ಮಿಕವಾಗಿ ಸುಣ್ಣದ ಡಬ್ಬಿ ನುಂಗಿದೆ. ನಂತರ ಉಸಿರಾಟದ ತೊಂದರೆ ಮತ್ತು ನೋವಿನಿಂದ ಮಗೂ ಅಳಲಾರಂಭಿಸಿದೆ. ಇದನ್ನು ಕಂಡ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. …

Read More »

ಯಾರು ಏನೇ ಹೇಳಿದರೂ ಸಮ್ಮಿಶ್ರ ಸರ್ಕಾರ ಸುರಕ್ಷಿತ- ಜೆಡಿಎಸ್ ಸಾರಥಿ ಹೆಚ್. ವಿಶ್ವನಾಥ ಹೇಳಿಕೆ

ಕಾಂಗ್ರೆಸ್ ನ ಅತೃಪ್ತ ಶಾಸಕರು ಬಿಜೆಪಿ ಸೇರಲಿದ್ದಾರೆ. ಆ ನಂತರ ಸಮ್ಮಿಶ್ರ  ಪತನವಾಗಲಿದೆ ಎಂಬುದೆಲ್ಲಾ ಕೇವಲ ಊಹಾಪೋಹ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ನಸು ನಕ್ಕರು. ಯಾವುದೇ ರಾಜಕೀಯ ಪಕ್ಷಗಳಲ್ಲಿ ವ್ಯತ್ಯಾಸಗಳಾಗೋದು ಸಹಜ. ಅದನ್ನು ಸರಿಮಾಡಿಕೊಳ್ಳುವುದೂ ಅಷ್ಟೇ ಸಹಜ. ಏನೇ ವ್ಯತ್ಯಾಸಗಳಾದ್ರೂ ಸರಿಯಾಗುತ್ತವೆ. ಇಂಥ ಏರುಪೇರುಗಳಿಂದ ಸರಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗದು ಎಂದರು. ಬಿಜೆಪಿಯ ಶ್ರೀರಾಮುಲು …

Read More »

ಜಾರಕಿಹೊಳಿ ಸಹೋರರು ನಮ್ ಫ್ರೆಂಡ್ಸ್, ಅವರ್ಯಾಕೇ ಬಿಜೆಪಿ ಹೋಗ್ತಾರೆ.. – ಸಚಿವ ಕಾಶಂಪೂರ್ ಪ್ರಶ್ನೆ

ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯುತ್ತಿದೆ ಎಂಬ ಸುದ್ದಿ ಹಿನ್ನಲೆ ಈ ಬಗ್ಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಸ್ಪಷ್ಟನೆ ಕರ್ನಾಟಕದಲ್ಲಿ ಆಪರೇಶನ್ ಕಮಲ ಇಲ್ಲ.. ಯಾವುದೇ ರೀತಿಯ ಆಪರೇಶನ್ ಇಲ್ಲ  ಅದು ಓನ್ಲಿ ಒನ್ ಡೆವಲಪ್ಮೆಂಟ್, ಡೆವಲಪ್ಮೆಂಟ್, ಡೆವಲಪ್ಮೆಂಟ್ ಜಾರಕಿಹೊಳಿ ಸಹೋದರರನ್ನು ಬಿಜೆಪಿ ಸಂಪರ್ಕ ಮಾಡಿರೋ ಹಿನ್ನಲೆ ಜಾರಕಿಹೊಳಿ ಸಹೋಹದರರನ್ನ ಪಾಪಾ ಇದರಲ್ಲಿ ಯಾಕರಿ ಅವರನ್ನ ಇದರಲ್ಲಿ ತರ್ತಿರಾ..? ಅವರು ನಮಗೆ ಒಳ್ಳೆಯ ಸ್ನೇಹಿತರು ಅವರು ತಮ್ಮ …

Read More »

ಮಾದಕ ವ್ಯಸನಿಯಾಗಿ ಇತರರನ್ನೂ ಬಲೆಗೆ ಕೆಡವುತ್ತದ್ದವಳಿಗೆ ಯರ್ರಾಬಿರ್ರೀ ಏಟು

ಪತಿಯನ್ನು ಕಳೆದುಕೊಂಡ, ಪತಿಯಿಂದ ದೂರವಾಗಿರುವ  ಮಹಿಳೆಯರನ್ನು ಸಲಿಂಗಕಾಮಕ್ಕೆ ಬಳಸಿಕೊಳ್ಳುತ್ತಿದ್ದಳು ಎನ್ನಲಾದ ಮಹಿಳೆಯೊಬ್ಬರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಮಂಟೂರ ರಸ್ತೆಯ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ. ಲೀನಾ ಫರ್ನಾಂಡೀಸ್ ಎಂಬ ಮಹಿಳೆಯೇ ಸಾರ್ವಜನಿಕರಿಂದ ಗೂಸಾ ತಿಂದವರು. ಮಾದಕ ವ್ಯಸನಿಯಾಗಿರುವ ಲೀನಾ ಮಹಿಳೆಯೊಬ್ಬರನ್ನು ಬಲೆಗೆ ಹಾಕಿಕೊಂಡು ಕಳೆದು ಒಂದು ವಾರದಿಂದ ತನ್ನ ವಶದಲ್ಲಿಟ್ಟುಕೊಂಡಿದ್ದಳು. ಇತರೆ ಮಹಿಳೆಯರನ್ನು ಮಾದಕ ವ್ಯಸನಿ ಜಾಲಕ್ಕೆ ತಳ್ಳುತ್ತಿದ್ದ ಈಕೆ ಈಗಾಗಲೇ ಮೂವರು ಮಹಿಳೆಯರನ್ನು ಮಧ್ಯ ವ್ಯಸನಿಯನ್ನಾಗಿ …

Read More »

ನಾಳೆ ಭಾರತ್ ಬಂದ್ ಗೆ ಬಹುತೇಕ ಸಂಘಟನೆಗಳ ಸಾಥ್..

ಇಂಧನ ಸೇರಿ ಜೀವನಾಂಶ ವಸ್ತುಗಳ ಮೇಲಿನ ಬೆಲೆ ಏರಿಕೆಯನ್ನ ಖಂಡಿಸಿ ನಾಳೆ ದೇಶದಾದ್ಯಂತ ಕರೆ ನೀಡಿರೋ ಭಾರತ್ ಬಂದ್ ಗೆ ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಬೆಂಬಲ ವ್ಯಕ್ತವಾಗಿದೆ. ನಾಳೆಯ ಬಂದ್ ಹಿನ್ನೆಲೆಯಲ್ಲಿ ಇವತ್ತು ಕಾಂಗ್ರೆಸ್ ಕಾರ್ಯಕರ್ತರು ಹುಬ್ಬಳ್ಳಿಯ ದುರ್ಗದ್ ಬೈಲ್ ನಲ್ಲಿ ವಿಶಿಷ್ಟ ರ್ಯಾಲಿ ನಡೆಸಿದ್ರು. ದ್ವಿಚಕ್ರ ವಾಹನ ಹಾಗೂ ಆಟೋಗಳನ್ನ ತಾವೇ ತಳ್ಳುತ್ತಾ, ಅಂಗಡಿ ಮುಂಗಟ್ಟು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದ್ರು. …

Read More »

ಕನ್ನಡಿಗರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಬೆಂಗಳೂರಿನಲ್ಲೇ ಏರ್ ಷೋ ಫಿಕ್ಸ್ !

ಬೆಂಗಳೂರು: ಕನ್ನಡಿಗರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಈಗ ಏಷ್ಯಾದ ಅತಿ ದೊಡ್ಡ ವಿಮಾನ ಪ್ರದರ್ಶನವನ್ನು ಬೆಂಗಳೂರಿನಲ್ಲೇ ನಡೆಸಲು ತಿರ್ಮಾನಿಸಿದೆ. ಈ ಕುರಿತಾಗಿ ಪ್ರಕಟನೆ ಹೊರಡಿಸಿರುವ ಸರ್ಕಾರ ” ಸರ್ಕಾರ ಏರೋ ಇಂಡಿಯಾ 2019ರ ಕಾರ್ಯಕ್ರಮವನ್ನು ಫೆಬ್ರುವರಿ 20ರಿಂದ 24ರವರೆಗೆ ಬೆಂಗಳೂರಿನಲ್ಲೆ ನಡೆಸಲು ತಿರ್ಮಾನಿಸಿದೆ.ಈ ಐದು ದಿನಗಳ ಈ ಏರ್ ಷೋ ಕಾರ್ಯಕ್ರಮವು ರಕ್ಷಣೆ ಮತ್ತು ವಿಮಾನಕ್ಕೆ ಸಂಬಂಧಿಸಿದ ಪ್ರದರ್ಶನವನ್ನು ಒಳಗೊಂಡಿರುತ್ತದೆ” ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ …

Read More »

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಸ್ಪರ್ಧೆ?

ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ.  ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಅವರನ್ನು ಕಣಕ್ಕಿಳಿಸಲು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವ ಬಿಜೆಪಿ, ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯದಲ್ಲಿ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಚಿಂತನೆ ನಡೆಸಿದ್ದು, ಪೂರ್ವಸಿದ್ಧತೆ ನಡೆಸಿದೆ ಎನ್ನಲಾಗಿದೆ.  ಈ ಹಿಂದೆ ಯದುವೀರ್ ಅವರನ್ನು ಕರ್ನಾಟಕ ವಿಧಾನಸಭೆ ಚುನಾವಣೆ …

Read More »

ಪತಿ ಮತ್ತು ಮಗ ಬಿರಿಯಾನಿ ತಿಂದದ್ದಕ್ಕೆ ಮಹಿಳೆ ಮಾಡಿದ್ದೇನು ಗೊತ್ತೇ?

ಬೆಂಗಳೂರಿನಲ್ಲಿ ನಡೆದಿದೆ.  ಬೆಂಗಳೂರು: ಗಂಡ ಮತ್ತು ಮಗ ಬಿರಿಯಾನಿ ತಿಂದರು ಎಂಬ ಕಾರಣಕ್ಕೆ ಗರ್ಭಿಣಿಯೊಬ್ಬರು ಮನೆಯನ್ನೇ ಬಿಟ್ಟು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಕಳೆದ 8 ವರ್ಷಗಳಿಂದ ಬೆಂಗಳೂರಿನ ಕಮ್ಮನಗೊಂಡನಹಳ್ಳಿಯಲ್ಲಿ ವಾಸವಿರುವ ಮದ್ಯಪ್ರದೇಶ ಮೂಲದ ರಾಜು ಸರ್ಕಾರ್-ಅನಿತಾ ಸರ್ಕಾರ್ ದಂಪತಿ ನಡುವೆ ಬಿರಿಯಾನಿ ವಿಚಾರವಾಗಿ ಜಗಳವಾಗಿದೆ ಎನ್ನಲಾಗಿದ್ದು, ಆ ಕ್ಷುಲ್ಲಕ ಕಾರಣಕ್ಕಾಗಿ ಆಕೆ ಮನೆ ಬಿಟ್ಟು ತವರಿಗೆ ಹೋಗಿದ್ದು, ಇನ್ನೆಂದೂ ಹಿಂತಿರುಗುವುದಿಲ್ಲ ಎಂದು ಹೇಳಿರುವುದಾಗಿ ಪತಿ ರಾಜು ಪೊಲೀಸರಿಗೆ …

Read More »

ಬೀದಿ ನಾಯಿಗಳ ಹಾವಳಿ; ಮತ್ತೆ ಐವರ ಮೇಲೆ ದಾಳಿ

ಬೆಂಗಳೂರು:ಬೀದಿನಾಯಿಗಳ ಹಾವಳಿ ನಗರದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ನಿನ್ನೆ ರಾಜಾಜಿನಗರದ 6ನೇ ಬ್ಲಾಕ್ ನ ಗುಬ್ಬಣ್ಣ ಲೇಔಟ್ ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ವ್ಯಕ್ತಿಗಳಿಗೆ ಬೀದಿನಾಯಿ ಕಚ್ಚಿ ಗಾಯಗೊಳಿಸಿದೆ. ಗುಬ್ಬಣ್ಣ ಲೇ ಔಟ್ ನ ಸೈಂಟ್ ಮರಿಯಾ ಶಾಲೆಯ ಯುಕೆಜಿ ಬಾಲಕಿ ಮತ್ತು 9ನೇ ತರಗತಿ ಬಾಲಕ ನಿನ್ನೆ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದಾಗ ಬೀದಿನಾಯಿ ಕಚ್ಚಿದೆ. 5 ವರ್ಷದ ಬಾಲಕಿ ಸಾಯಿಸಿರಿಯ ಬೆನ್ನಹಿಂದೆ ಮತ್ತು ಕಾಲಿಗೆ ನಾಯಿ ಕಚ್ಚಿತು. ಆಸ್ಪತ್ರೆಗೆ …

Read More »