Breaking News

ಕರ್ನಾಟಕ

ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಜಾಗ ಗುರ್ತಿಸಿ: ಮುಖ್ಯಮಂತ್ರಿ ಕುಮಾರಸ್ವಾಮಿ

ಪ್ರತಿಯೊಬ್ಬ ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಯಾವುದೇ ಕಾರಣಕ್ಕೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರಬಾರದು, ಆ ನಿಟ್ಟಿನಲ್ಲಿ ಕರ್ತವ್ಯ ಪ್ರಜ್ಞೆ ಅರಿತು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು- ಸಿಎಂ ಕುಮಾರಸ್ವಾಮಿ ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಪ್ರಥಮ ಆದ್ಯತೆಯಲ್ಲಿ ಸರ್ಕಾರಿ ಭೂಮಿ ಗುರ್ತಿಸುವಂತೆ ಜಿಲ್ಲಾಧಿಕಾರಿಯವರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ …

Read More »

ಕೊಳ್ಳೇಗಾಲದಲ್ಲಿ ಕಾವೇರಿ ಅಬ್ಬರ, ಬದುಕು ಹರೋಹರ..

ಆಂಕರ್: ಕಾವೇರಿ,ಕಬಿನಿಯ ಪ್ರ ವಾಹಕ್ಕೆ ಸಂಪೂರ್ಣ ಜಲಾವೃತ್ತ ಗೊಂಡಿರುವ ನದಿ ಅಂಚಿನ ಆ ಗ್ರಾಮಗಳಲ್ಲಿ ಉದ್ಬವಿಸಿರುವ ಸ ಮಸ್ಯೆ ಹಾಗೂ ಮೊದಲ ಬಾರಿಗೆ ಕಾವೇರಿಯ ಪ್ರವಾಹಕ್ಕೆ ಸಂಪೂ ರ್ಣ ಮುಳುಗಿ ಅಪಾಯದ ಹಂ ತ ತಲುಪಿರುವ ಆ ಸೇತುವೆಯ ನ್ನು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆ ಗ್ರಾ ಮಕ್ಕೆ ಹಾಗೂ ಸೇತುವೆ ಬಳಿ ತೆ ರಳಿ ಪರಿಶೀಲಿಸಿದ್ರು. ವಾ.ಓ-1:ಹೌದು. ಚಾಮರಾಜನ ಗರ ಜಿಲ್ಲೆಯ ಕೊಳ್ಳೇಗಾಲ ತಾ ಲೂಕಿನ ದಾಸನಪುರ, …

Read More »

ಈಗಲೂ ಮಾಡಲೇಬೇಕಾ ರಾಜಕೀಯ..

ಕೊಡಗು ಜಿಲ್ಲೆಯ ಅತಿವೃಷ್ಟಿ ಸಂತ್ರಸ್ತರ ಸಮಸ್ಯೆ ಆಲಿಸಿದ ಬಿಎಸ್ ಯಡಿಯೂರಪ್ಪ. ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟ ಸಂತ್ರಸ್ತರು. ಸರ್ಕಾರ ನಮಗೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಎಂದು ದೂರಿದ ಜನತೆ. ಕೊಡಗಿನ ಕಣ್ಣೀರ ಕತೆ ಕೇಳಲು ಬಂದಿದ್ದೇನೆ. ರಾಜ್ಯ ಸರ್ಕಾರ ಸಂತ್ರಸ್ತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸುಂಟಿಕೊಪ್ಪದಲ್ಲಿ ಬಿಎಸ್‌ವೈ ಆರೋಪ. ಪರಿಹಾರ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸುತ್ತೇನೆ. Bay. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ.

Read More »

ಭಾರೀ ಮಳೆಗೆ ಬೆಂಗಳೂರು – ಮಂಗಳೂರು ರೈಲು 30 ದಿನ ಬಂದ್

ಬೆಂಗಳೂರು-ಮಂಗಳೂರು ರೈಲ್ವೆ ಹಳಿಯ ಮೇಲೆ ಸುಮಾರು 50ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮುಂದಿನ 30 ದಿನಗಳ ಕಾಲ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.  50 ಕಡೆ ಗುಡ್ಡ ಕುಸಿದುಬಿದ್ದಿದ್ದು, ಕೆಲವು ರೈಲ್ವೇ ಹಳಿಗಳ ಮೇಲೆ ಬೃಹತ್ ಆಕಾರದ ಬಂಡೆಗಳು ಉರುಳಿ ಬಿದ್ದಿವೆ. ಹೀಗಾಗಿ ಕನಿಷ್ಟ 30 ದಿನಗಳ ಕಾಲ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಆಗಲಿದೆ ಎಂದು ಹೇಳಲಾಗುತ್ತಿದೆ.  ಸಕಲೇಶಪುರ …

Read More »

ನನ್ನ ತಾಯಿ ಕಾಪಾಡಿ, ಕಾಪಾಡಿ

ಮಡಿಕೇರಿ: ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಉಂಟಾಗಿರುವ  ಪ್ರವಾಹದಲ್ಲಿ ಸುಮಾರು 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೊಡಗು ಜಿಲ್ಲಾಡಳಿತ ಘೋಷಿಸಿದೆ. ಪ್ರವಾಹದಲ್ಲಿ ಕಣ್ಣೆದುರೇ ತನ್ನ ತಾಯಿ ಕೊಚ್ಚಿಹೋದ ಮನಕಲಕುವ ಘಟನೆ ನಡೆದಿದೆ. ಹೆಬ್ಬಟ್ಟಗೇರಿಯಲ್ಲಿ ಮಿಟ್ಟು ಗಣಪತಿ ಎಂಬುವರ ತಾಯಿ ಮಿನ್ನಂಡ ಉಮ್ಮವ್ವ ತನ್ನನ್ನು ರಕ್ಷಿಸುವಂತೆ ಮಗನ ಸಹಾಯ ಕೋರಿದರು, ಆದರೆ ಭೂಕುಸಿತದಿಂದ ಉಂಟಾದ ಪ್ರವಾಹದಲ್ಲಿ ಅವರ ಮನೆಯ ಜೊತೆ ತಾಯಿಯೂ ಕೊಚ್ಚಿ ಹೋಗಿದ್ದಾರೆ. ಭೂಕುಸಿತದ ಅವಶೇಷಗಳಡಿ ಸಿಲುಕಿದ ಆಕೆ ಸಹಾಯ …

Read More »

ಕೊಡಗು ಪ್ರವಾಹ: ಮನೆ ಕಳೆದುಕೊಂಡವರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣವೇ 2 ಲಕ್ಷ ರೂ.ಗಳವರೆಗೆ ಪರಿಹಾರ ಒದಗಿಸಲು ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.  ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡವರಲ್ಲಿ 3500 ಮಂದಿಯನ್ನು ಈಗಾಗಲೇ ರಕ್ಷಣೆ ಮಾಡಲಾಗಿದ್ದು, ಪರಿಹಾರ ಕಾರ್ಯಕ್ಕೆ 200 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.  ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ …

Read More »

ಕರ್ನಾಟಕದ ಹಲವು ಅಣೆಕಟ್ಟೆಗಳಲ್ಲಿ ಬಿರುಕು! ಕಾದಿದೆಯೇ ಭಾರೀ ಅನಾಹುತ?

ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರುತ್ತಿದ್ದು, ನೀರಿನ ಒತ್ತಡ ಹೆಚ್ಚಾಗಿರುವ ಕಾರಣ ಅಲ್ಲಲ್ಲಿ ಬಿರುಕು ಕಂಡುಬಂದಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.  ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರುತ್ತಿದ್ದು, ನೀರಿನ ಒತ್ತಡ ಹೆಚ್ಚಾಗಿರುವ ಕಾರಣ ಅಲ್ಲಲ್ಲಿ ಬಿರುಕು ಕಂಡುಬಂದಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.  ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ಸುರಿಯುತ್ತಿರುವ …

Read More »

ಭೀಕರ ಪ್ರವಾಹಕ್ಕೆ ನಾಮಾವಶೇಷವಾದ ಕೊಡಗಿನ ಗ್ರಾಮ ಯಾವುದು ಗೊತ್ತೇ?

ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಎದುರಾಗಿದ್ದು, ಗ್ರಾಮವೊಂದು ಸಂಪೂರ್ಣ ಕೊಚ್ಚಿಹೋಗಿದೆ.  ಬೆಂಗಳೂರು: ಕಳೆದ ಕೆಲ ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಎದುರಾಗಿದ್ದು, ಗ್ರಾಮವೊಂದು ಸಂಪೂರ್ಣ ಕೊಚ್ಚಿಹೋಗಿದೆ.  ಕೊಡಗು ಜಿಲ್ಲೆಯ ಕಲ್ಲೂರು ಗ್ರಾಮವೇ ಇಂದು ಹೇಳಹೆಸರಿಲ್ಲದಂತಾಗಿದೆ. ಇಡೀ ಗ್ರಾಮವೇ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಈ ಗ್ರಾಮದ ನಿವಾಸಿಗಳ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. ಅಲ್ಲದೆ, ಈ ಗ್ರಾಮದಲ್ಲಿ ಮನೆಗಳು ಇದ್ದವು ಎಂದು ಹೇಳುವುದೂ …

Read More »

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದೆ ಕೊಡಗು; ರಕ್ಷಣೆಗೆ ಧಾವಿಸಿದ ಸೇನೆ- 6 ಮಂದಿ ಸಾವು.

ವರುಣನ ರುದ್ರ ನರ್ತನಕ್ಕೆ ನಲುಗಿದ ಜನ, ಜೀವ ಉಳಿಸಿಕೊಳ್ಳಲು ಗ್ರಾಮವನ್ನೇ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.  ಬೆಂಗಳೂರು/ಕೊಡಗು: ವರುಣನ ರುದ್ರ ನರ್ತನಕ್ಕೆ ರಾಜ್ಯದ ಕೊಡಗು ಜಿಲ್ಲೆ ತತ್ತರಿಸಿಹೋಗಿದೆ. ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಭಾರೀ ಮಳೆಗೆ ಕೊಡಗು ಸಂಪೂರ್ಣ ಕೊಚ್ಚಿ ಹೋಗಿದ್ದು, ಸಂಕಷ್ಟದಲ್ಲಿರುವ ಜನರ ನೆರವಿಗೆ ಸೇನಾ ತಂಡ ಧಾವಿಸಿದೆ.  ಪ್ರವಾಹದಿಂದ 6 ಮಂದಿ ಸಾವು ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದ್ದು, ಇನ್ನೂ ಹಲವರ ಪತ್ತೆಯಾಗಿಲ್ಲ. ಕೊಡಗಿನ ಮಕ್ಕಂದೂರು, …

Read More »

ಮಂಗಳೂರು ರೈಲು ನಿಲ್ದಾಣ ಸಂಪರ್ಕಿಸುವ ಐದು ರೈಲುಗಳ ಸಂಚಾರ ರದ್ದು

ಮಂಗಳೂರು: ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಭಾರೀ ಮಳೆ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಮಂಗಳೂರು ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಇನ್ನೂ ಕೆಲವು ರೈಲುಗಳ ಸಂಚಾರ ಸಹ ರದ್ದಾಗುವ ಸಾಧ್ಯತೆ ಇದೇ ಎಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ರದ್ದಾಗಿರುವ ರೈಲುಗಳ ವಿವರ ಮಂಗಳೂರು-ಚೆನ್ನೈ ಎಗ್ಮೋರ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್- ನಾಗರಕೊಯ್ಲ್ ಜಂಕ್ಷನ್ ನಡುವೆ ಸಂಚರಿಸಬೇಕಿದ್ದ ಎರ್ನಾಡ್ ಎಕ್ಸ್ ಪ್ರೆಸ್ ರೈಲು …

Read More »