Breaking News

ಸುದ್ದಿ

ವೈಭವದಿಂದ ಜರುಗಿದ ಶ್ರೀ ಚಾಮುಂಡೇಶ್ವರಿ ಅಮ್ಮನವರ 9ನೇ ವರ್ಷದ ಕರಗ ಮಹೋತ್ಸವ

ಮಂಡ್ಯ: ನೇಕಾರ ತೊಗಟವೀರ ಕುಲಬಾಂಧವರಿಂದ. ಶ್ರೀ ಚಾಮುಂಡೇಶ್ವರಿ ಅಮ್ಮನವರ 9ನೇ ವರ್ಷದ ಕರಗ ಮಹೋತ್ಸವಅದ್ದೂರಿಯಾಗಿ ನೆರವೇರಿತು.ಕರಗವು ಜಾನಪದ ಕಲಾತಂಡಗಳ ವೈಭವದ ಮೆರವಣಿಗೆ ಮೂಲಕ ಭಕ್ತರ ಮನಸೂರೆಗೊಂಡಿತು.ಕುಲಬಾಂಧವರಿಂದ 9ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವನ್ನು ಆಚರಿಸಲಾಯಿತು.ಪಟ್ಟಣದ ಇತಿಹಾಸ ಪ್ರಸಿದ್ಧವಾದ ದೇವೀರಮ್ಮಣ್ಣಿ ಕೆರೆಯಿಂದ ಕರಗವನ್ನು ಬಾಲಕಿಯರ ತಲೆಯ ಮೇಲೆ ಹೊರಿಸಿ ನಡೆಮುಡಿಯ ಮೇಲೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯ ಮೂಲಕ ಚನ್ನಬಸವೇಶ್ವರ ದೇವಸ್ಥಾನದ ಪಕ್ಕದ ಸ್ವಸ್ಥಾನಕ್ಕೆ …

Read More »

ಬತ್ತಿದ ಪುಷ್ಕರಣಿ ಸ್ವಚ್ಛತೆಗೆ ಮುಂದಾದ ನಗರಸಭೆ ಮತ್ತು ಜಿಲ್ಲಾಡಳಿತ.

ಚಿತ್ರದುರ್ಗ: ನಗರದ ಮಧ್ಯದಲ್ಲಿನ ಕೆಂಚಮಲ್ಲಪ್ಪನ ಬಾವಿಯನ್ನು ಸ್ವಯಂ ಸೇವಕ ಸಂಘದ ಜೊತೆಗೂಡಿ ಸ್ವಚ್ಚತೆಯನ್ನು ಮಾಡಲಾಯಿತು.ನಗರಸಭೆಯ ವತಿಯಿಂದ ನಡೆದ ಈ ಕೆಲಸಕ್ಕೆ ಶಾಲಾ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು.ಕಳೆಯ ಕೊರತೆಯಿಂದ ಪುಷ್ಕರಣಿಯು ಬತ್ತಿದ್ದು, ಕಸ ತುಂಬಿಕೊಂಡು ದುರ್ವಾಸನೆ ಆರಂಭವಾಗಿತ್ತು. ಈ ಹಿನ್ನಲೆಯಲ್ಲಿ ಸ್ವಛತಾ ಕಾರ‍್ಯಾ ಮಾಡಲಾಗುತ್ತಿದೆ.

Read More »

ರಾಜ್ಯ ರಾಜಕೀಯ ಕುರಿತು ರೈತರಲ್ಲಿ ಬೇಸರವಾಗುತ್ತಿರುವುದನ್ನು ಬಿಚ್ಚಿಟ್ಟ ಯುವಕ

ಮಂಡ್ಯ: ರಾಜ್ಯದ ಜನ ನಿಮ್ಮನ್ನು ನೋಡುತಿದ್ದಾರೆ ಎನ್ನುವುದನ್ನು ಮರೆತಿದ್ದೀರಾ ದಯಮಾಡಿ ಒಳ್ಳೆ ಕೆಲಸಗಳನ್ನು ಮಾಡಿ ಎಂದು ಸಂತೇಬಾಚಳ್ಳಿ ಹೋಬಳಿ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ.ಮಂಡ್ಯ ಜಿಲ್ಲೆಯ ಮಂಡ್ಯ ಸಂತೇಬಾಚಳ್ಳಿ ಹೋಬಳಿಯ ರೈತನ ಪುತ್ರನಾದ ಈ ಯುವಕಸರ್ಕಾರದಿಂದ ರೈತರಿಗೆ ನಯಾಪೈಸೆ ಉಪಯೋಗವಿಲ್ಲ ನಮ್ಮ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಎಂದು ಬೇಸರ ವೆಕ್ತಪಡಿಸಿದ್ದಾನೆ. ಈ ಹಿನ್ನೆಲೆಯಲ್ಲಿರೈತರಿಗೆ ಉಪಯೋಗವಾಗುವಂತೆ ಸರ್ಕಾರ ಕೆಲಸ ಮಾಡಲಿ ಎಂಬುದಾಗಿ …

Read More »

ದಂಪತಿಯ ಬರ್ಭರ ಹತ್ಯೆ

ಮಂಡ್ಯ: ದಂಪತಿಗಳನ್ನು ಅವರ ಮನೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ರಾಯಸಮುದ್ರ ಗ್ರಾಮದಲ್ಲಿ ನಡೆದಿದೆ.ರಾಯಸಮುದ್ರ ಗ್ರಾಮದ ಗುಂಡಣ್ಣ(50) ಮತ್ತು ಲಲಿತಮ್ಮ(45) ಕೊಲೆಯಾಗಿರುವ ದುದೈ್ವಿ ದಂಪತಿಗಳಾಗಿದ್ದಾರೆ.ಕಳೆದ ಎರಡು ದಿನಗಳಿಂದ ಮನೆಗೆ ಬೀಗ ಹಾಕಿದ ಸ್ಥಿತಿಯಲ್ಲಿದ್ದಾಗ ಅಕ್ಕಪಕ್ಕದ ಮನೆಯವರು ಕಿಟಕಿಯಲ್ಲಿಮನೆಯೊಳಗೆ ಏನಸಗಿದೆ ಎಂದು ನೋಡಿದಾಗ ದಂಪತಿಗಳು ಬರ್ಬರವಾಗಿ ಕೊಲೆಯಾಗಿ ಇರುವುದು ಕಂಡುಬಂದಿದೆ .ಕೂಡಲೇ ಪಟ್ಟಣ ಪೊಲೀಸರಿಗೆ ರಾಯಸಮುದ್ರ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆಸ್ಥಳಕ್ಕೆ ಸರ್ಕಲ್ …

Read More »

ಶ್ರೀಮಂತ ಪಾಟೀಲ್ ಭೇಟಿಗೆ ಯತ್ನಿಸಿದ ಮಹಾ ಕಾಂಗ್ರೆಸ್ ಶಾಸಕಿ ಯಶೋಮತಿ

ಚಿಕ್ಕೋಡಿ: ಕಲಾಪದಲ್ಲಿ ಭಾಗವಹಿಸದೆ ರಾತ್ರೋರಾತ್ರಿ ನಾಪತ್ತೆಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಭೇಟಿಗೆ ಆಗಮಿಸಿದ ಕಾಂಗ್ರೆಸ್‌ ಶಾಸಕಿ ಯಶೋಮತಿ ಅವರನ್ನು ಪೋಲೀಸ್ ಅಧಿಕಾರಿಗಳು ಭೇಟಿಗೆ ಅವಕಾಶ ನೀಡದೇ ತಡೆದಿದ್ದಾರೆ.ಈ ವೇಳೆ ಯಶೋಮತಿ ಅವರು ಪೋಲಿಸ್ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಎದೆನೋವು ಎಂಬ ಕಾರಣದಿಂದ ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಗೆ ಶಾಸಕ‌ ಶ್ರೀಮಂತ ಪಾಟೀಲ್ ದಾಖಲಾಗಿದ್ದಾರೆ. ಈ ವೇಳೆ ನಮ್ಮ ಎಂ ಎಲ್ …

Read More »

ಕೊನೆಗೂ ಪೋಲೀಸರ ಬಲೆಗೆ ಬಿದ್ದ ಮನ್ಸೂರ್

ಬೆಂಗಳೂರು: ಐ ಎಮ್ ಎ ಕಂಪನಿಯ ಮಾಲೀಕ ಬಹುಕೋಟಿ ಹಗರಣದ ಪ್ರಮುಖ ಆರೋಪಿಯಾದ ಮನ್ಸೂರ್ ಖಾನ್ ನೆನ್ನೆ ತಡ ರಾತ್ರಿ ದೆಹಲಿಯಲ್ಲಿ ಬಂಧನವಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ ಕಳೆದ ನಾಲ್ಕು ದಿನಗಳ ಹಿಂದೆ ವಿಡಿಯೋ ಮೂಲಕ ಭಾರತಕ್ಕೆ ಬರುತ್ತೇನೆಂದು ತಿಳಿಸಿದ ಮನ್ಸೂರು ಖಾನ್ ಈಗ ಪೋಲೀಸರ ಅತಿಥಿ ಯಾಗಿದ್ದಾನೆ ಸಾವಿರಾರು ಕುಟುಂಬಗಳು ಈ ಪ್ರಕರಣದಿಂದ ಬೀದಿಗೆ ಬಿದ್ದಿದ್ದು ಈಗಲಾದರು ಹೂಡಿಕೆದಾರರ ಹಣ ವಾಪಸ್ ಸಿಗುತ್ತಾ ಕಾದು ನೋಡೋಣ..

Read More »

ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿದ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆ

ಮಂಡ್ಯ: ಕೆ.ಆರ್.ಪೇಟೆ ಪಾಂಡುಪುರ ರೈತರ ಜೀವನಾಡಿಯಾಗಿ ಆತ್ಮೀಯ ಬಂಧುವಿನಂತೆ ಕೆಲಸ ಮಾಡುತ್ತಿರುವ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ಯು ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ವಿಶೇಷ ಪೂಜೆ ಪುರಸ್ಕಾರ ಹಾಗೂ ಹೋಮಹವನವನ್ನು ನಡೆಸಿ ಅಧಿಕೃತವಾಗಿ ಚಾಲನೆ ನೀಡಿದರು…ಕಳೆದ ಸಾಲಿನಲ್ಲಿ ಏಳೂವರೆ ಲಕ್ಷ ಟನ್ ಕಬ್ಬು ಅರೆದು ಮಂಡ್ಯ ಜಿಲ್ಲೆಯಲ್ಲಿ ದಾಖಲೆ ನಿರ್ಮಾಣ ಮಾಡಿದ್ದ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿನಲ್ಲಿ ಎಂಟು ಲಕ್ಷ …

Read More »

ಚಾಕುವಿನಿಂದ ಇರಿದು ನವವಿವಾಹಿತೆಯ ಹತ್ಯೆ

ಮಂಗಳೂರು: ಪುತ್ತೂರು ತಾಲೂಕಿನ ಅರ್ಲಪದವು ಸಮೀಪದ ಕಲ್ಲ ಪದವು ಎಂಬಲ್ಲಿ ನವ ವಿವಾಹಿತೆಯನ್ನು ಚೂರಿಯಿಂದ ಇರಿದು ಬರ್ಭರವಾಗಿ ಹತ್ಯೆಗೈಯಲಾಗಿದೆ.ಅಕ್ಷತಾ (22) ಹತ್ಯೆಗೀಡಾದ ದುರ್ದೈವಿ.ಜು 18ರಂದು ರಾತ್ರಿ ಈ ಕೃತ್ಯ ನಡೆದಿದೆ.ಆಕೆಯ ಪತಿ ಗಣೇಶ್ (35) ಚೂರಿಯಿಂದ ಇರಿದು ಆಕೆಯನ್ನು ಕೊಲೆಗೈದುದಾಗಿ ತಿಳಿದು ಬಂದಿದೆ.ವರ್ಷಗಳ ಹಿಂದೆಯಷ್ಟೇ ಅವರಿಬ್ಬರ ವಿವಾಹ ನಡೆದಿದ್ದು ಎಂದು ತಿಳಿದು ಬಂದಿದ್ದು , ಕ್ಷುಲಕ ಕಾರಣಕ್ಕೆ ಅವರಿಬ್ಬರ ನಡುವೆ ನಡೆದ ಜಗಳ ತಾರಕಕ್ಕೆರಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ. …

Read More »

ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ಪ್ರತಿಭಟನೆ

ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯು ಮಂಗಳೂರಲ್ಲಿ ಪಕ್ಷದ ಕಚೇರಿಯ ಎದುರು ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಘೋರವಾಲ ಎಂಬಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಗಲಭೆ ನಡೆದಿತ್ತು. ಈ ವೇಳೆ ಹತ್ಯೆಗೀಡಾದ ಹತ್ತು ಮಂದಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಹೋದ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿ …

Read More »

ಶಾಸಕ ಶ್ರೀಮಂತ ಅವರ ವಿಚಾರಣೆ ಕೈಗೊಂಡ ಪೋಲಿಸರು

ಚಿಕ್ಕೋಡಿ: ಡಿ ಕೆ ಶಿವಕುಮಾರ್ ಅವರಿಂದ ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಕಾಗವಾಡ ಶಾಸಕರನ್ನು ಅಕ್ರಮವಾಗಿ ಬಂಧಿಸಿರುವ ಆರೋಪದ ಹಿನ್ನೆಲೆಯಲ್ಲಿ ಹಾಗೂ ಸ್ಪೀಕರ್ ರಮೇಶ್ ಕುಮಾರ ಆದೇಶದ ಹಿನ್ನಲೆಯಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅಪಹರಣ ಆರೋಪದ ಕುರಿತು ಪೊಲೀಸರಿಂದ ತನಿಖೆ ಆರಂಭಗೊಂಡಿದೆ. ‌ ಮಹಾರಾಷ್ಟ್ರದ ಸಾಂಗಲಿ ಪಟ್ಟಣದಲ್ಲಿರುವ ಮನೆಗೆ ತೆರಳಿದ ಅಥಣಿ ಡಿ.ವೈ.ಎಸ್.ಪಿ ರಾಮಣ್ಣ ಬಸರಗಿ ಸಿ ಪಿ ಐ ಎಚ್ ಶೆಖರಪ್ಪ ನೇತೃತ್ವದಲ್ಲಿ ಪೊಲೀಸರ ತಂಡ …

Read More »