ಮಂಗಳೂರು: ಪುತ್ತೂರು ತಾಲೂಕಿನ ಅರ್ಲಪದವು ಸಮೀಪದ ಕಲ್ಲ ಪದವು ಎಂಬಲ್ಲಿ ನವ ವಿವಾಹಿತೆಯನ್ನು ಚೂರಿಯಿಂದ ಇರಿದು ಬರ್ಭರವಾಗಿ ಹತ್ಯೆಗೈಯಲಾಗಿದೆ.ಅಕ್ಷತಾ (22) ಹತ್ಯೆಗೀಡಾದ ದುರ್ದೈವಿ.ಜು 18ರಂದು ರಾತ್ರಿ ಈ ಕೃತ್ಯ ನಡೆದಿದೆ.ಆಕೆಯ ಪತಿ ಗಣೇಶ್ (35) ಚೂರಿಯಿಂದ ಇರಿದು ಆಕೆಯನ್ನು ಕೊಲೆಗೈದುದಾಗಿ ತಿಳಿದು ಬಂದಿದೆ.ವರ್ಷಗಳ ಹಿಂದೆಯಷ್ಟೇ ಅವರಿಬ್ಬರ ವಿವಾಹ ನಡೆದಿದ್ದು ಎಂದು ತಿಳಿದು ಬಂದಿದ್ದು , ಕ್ಷುಲಕ ಕಾರಣಕ್ಕೆ ಅವರಿಬ್ಬರ ನಡುವೆ ನಡೆದ ಜಗಳ ತಾರಕಕ್ಕೆರಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಜು 18 ರ ರಾತ್ರಿ ಸುಮಾರು 9 .30ರ ಸುಮಾರಿಗೆ ಇವರಿಬ್ಬರ ನಡುವೆ ಯಾವುದೋ ಸಣ್ಣ ವಿಷಯಕ್ಕೆ ಜಗಳ ಆರಂಭವಾಗಿದ್ದು , ಬಳಿಕ ಪತಿ ಗಣೇಶ್ ಚೂರಿಯಿಂದ ಇರಿದು ಆಕೆಯನ್ನು ಕೊಲೆಗೈದಿದ್ದಾನೆ.ಮೃತ ಅಕ್ಷತಾಳ ಪತಿ ಕೂಲಿ ಕಾರ್ಮಿಕನಾಗಿದ್ದು ಸ್ಥಳೀಯವಾಗಿ ಕೂಲಿ ಕೆಲಸಕ್ಕೆ ಹೋಗುತಿದ್ದ.ಆತ ಜಿಗುಟು ಸ್ವಭಾವದ ವ್ಯಕ್ತಿಯಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ ಘಟನೆಯ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.ಹತ್ಯೆ ಬಳಿಕ ಆರೋಪಿ ಗಣೇಶ್ ಸ್ಥಳದಿಂದ ಪರಾರಿಯಾಗಿದ್ದು ಇಂದು ಬೆಳಿಗ್ಗೆ ಬಂಧಿಸಲಾಗಿದೆ . ಪ್ರಕರಣವೂ ಪುತ್ತೂರು ಗ್ರಾಮಂತರ ಸ್ಟೇಶನ್ ವ್ಯಾಪ್ತಿಯಲ್ಲಿ ನಡೆದಿದ್ದು , ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





