admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಜಿಲ್ಲಾ ವಿಶ್ವ ಹಿಂದುಪರಿಷತ್ ಸಂಚಾಲಕ ರುದ್ರೇಶ್ ಮತ್ತು ಕಾರ್ಯಕರ್ತರು ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದರು.ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಳ್ಳಿಯಿಂದ ಆಂದ್ರದ ಹಿಂದುಪುರಕ್ಕೆ ಅಕ್ರಮವಾಗಿ ಸಾಗಿಸಲಾಗುತಿದ್ದ 100 ಜಾನುವಾರುಗಳು ಎಮ್ಮೆ ಮತ್ತು ಹಸುಗಳನ್ನು ರಕ್ಷಿಸಲಾಯಿತು.ಸರಿಯಾದ ಮಾಹಿತಿ ನೀಡಲು ವಿಫಲವಾದ ಹಿನ್ನಲೆಯಲ್ಲಿ ಜಾನುವಾರುಗಳನ್ನು ಚಳ್ಳಕೆರೆ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.ಜಾನುವಾರುಗಳನ್ನು ಗೋಶಾಲೆಗೆ ಒಪ್ಪಿಸಲಾಗಿದ್ದು, ಲಾರಿ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಕೃಷ್ಣರಾಜಸಾಗರ ಮತ್ತು ಗೊರೂರು ಅಣೆಕಟ್ಟೆಗಳಿಂದ ಒಣಗುತ್ತಿರುವ ಕಬ್ಬಿನ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ ಕೆ.ಆರ್.ಪೇಟೆ ಪಟ್ಟಣದ ಮಿನಿವಿಧಾನಸೌಧಕ್ಕೆ ತಮ್ಮ ಸಾಕು ಪ್ರಾಣಿಗಳೊಂದಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ರೈತನಾಯಕರಾದ ನಂದಿನಿಜಯರಾಮ್, ಮುದುಗೆರೆ ರಾಜೇಗೌಡ, ಮರುವನಹಳ್ಳಿ ಶಂಕರ್, ಲಕ್ಷ್ಮೀಪುರ ಜಗಧೀಶ್, ಮುದ್ದುಕುಮಾರ್, ನಾರಾಯಣಸ್ವಾಮಿ, ಬೂಕನಕೆರೆ ನಾಗರಾಜು, ಕರೋಟಿತಮ್ಮಯ್ಯ, ಕಾರಿಗನಹಳ್ಳಿ ಕುಮಾರ್, ಜಿ.ಪಂ ಮಾಜಿಸದಸ್ಯರಾದ ಡಾ.ಎಸ್.ಕೃಷ್ಣಮೂರ್ತಿ, ಎ.ಎಲ್.ಕೆಂಪೂಗೌಡ ಸೇರಿದಂತೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಟಿ ಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ಮಾನನಷ್ಟ ಮೊಕದ್ದಮೆ ಪ್ರಕರಣ .ಉಡುಪಿ: ಕಳೆದ ವಿಧಾನಸಭಾ ಚುನಾವಣಾ ಸಂಧರ್ಭ ಬೆಂಗಳೂರಿನ ಸಮಾಜಿಕ ಕಾರ್ಯಕರ್ತ ಟಿಜಿ ಅಬ್ರಾಹಂ, ಪ್ರಮೋದ್ ಮಧ್ವರಾಜ್ ವಿರುದ್ದ 193 ಕೋಟಿ ರೂಪಾಯಿ ವಂಚನೆ ಆರೋಪಕ್ಕೆ ಸಂಭಂಧಿಸಿ ಪ್ರಮೋದ್ ಮಧ್ವರಾಜ್ ಉಡುಪಿ ನ್ಯಾಯಲಯದಲ್ಲಿ ಟಿಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.ಪ್ರಕರಣಕ್ಕೆ ಸಂಭಂಧಿಸಿದಂತೆ ಇಂದು ವಿಚಾರಣೆ ಪ್ರರಾಂಭವಾಗಿದೆ.ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನ್ಯಾಯಲಕ್ಕ ಹಾಜರಾಗಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕಬಳ್ಳಾಪುರ: ಮೈತ್ರಿ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ರಾಜೀನಾಮೆ ಸಲ್ಲಿಸಿದರೆ ಸ್ಪೀಕರ್ ಅಂಗೀಕಾರ ಮಾಡಬೇಕಾಗುತ್ತದೆ.ಮುಂದೆ ಗವರ್ನರ್ ಯಾವ ರೀತಿ ಕ್ರಮ ವಹಿಸ್ತಾರೆ ಕಾದು ನೋಡೋಣ ಎಂದು ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ಮಟ್ಟದಲ್ಲಿ ರಾಜೀನಾಮೆ ನನಗೆ ಆಶ್ಚರ್ಯ ಆಗುತ್ತಿದೆ.ರಾಜಕಾರಣದಲ್ಲಿ ಯಾವ ರೀತಿಯ ಪರಿಸ್ಥಿತಿ ಬಂದರೂ ನಾವು ಎದುರಿಸಬೇಕಾಗುತ್ತದೆ ಎಂದರು.ಮತ್ತೊಂದು ಸರ್ಕಾರ ರಚನೆ ಮಾಡೋಕೆ ಆಹ್ವಾನ …
Read More »
admin
September 12, 2019
ಕರ್ನಾಟಕ, ಸುದ್ದಿ
ಆನೇಕಲ್: ಗ್ರಾಮ ಪಂಚಾಯತಿ ಸದಸ್ಯರ ಪತಿರಾಯರ ದರ್ಬಾರ್ ನಿಂದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸೇರಿದಂತೆ ಇಬ್ಬರು ಸದಸ್ಯರನ್ನು ವಜಾಗೊಳಿಸುವ ಮೂಲಕ ಇಂದು ಗ್ರಾಮ ಪಂಚಾಯತಿಯಲ್ಲಿ ನಡೆಯಬೇಕಿದ್ದ ಉಪಾಧ್ಯಕ್ಷರ ಚುನಾವಣಾಗೆ ಮೂವರ ಸದಸ್ಯರನ್ನು ವಜಾಗಿಳಿಸಿ ಆದೇಶ ಹೊರಡಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.ಹೌದು ಕೆಲ ದಿನಗಳ ಹಿಂದೆ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಹಾಕಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಅಧಿಕಾರಿಗಳಿಗೆ ಜೀವ ಬೆದರಿಕೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ: ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದು, ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ ದೂಧಗಂಗಾ ನದಿಗಳ ಒಳ ಹರಿವು ಹೆಚ್ಚಳವಾಗಿದೆ. ಕೃಷ್ಣಾ ನದಿಗೆ ಸುಮಾರು ೨೨೦೦೦ ಸಾವಿರ ಕ್ಯೂಸೆಕ್ಸ ನೀರು ಹರಿದು ಬರುತ್ತಿದೆ. ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆಳ ಹಂತದ ಬೋಜ- ಕಾರದಗಾ, ಭೋಜವಾಡಿ- ಕಣ್ಣೂರ- ಮಲಿಕವಾಡ ದತವಾಡ ಸೇತುವೆಗಳು ಜಲಾವೃತಗೊಂಡಿವೆ. ೩ ಸೇತುವೆಗಳು ಸಹ ದೂಧಗಂಗಾ ನದಿಗೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ: ಕಳೆದ ಎರಡು ಮೂರು ದಿನಗಳಿಂದ ಕೃಷ್ಣಾ ನದಿಯ ನೀರಿನ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಎರಡು ಎತ್ತುಗಳು ಮೃತಪಟ್ಟ ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ನಡೆದಿದೆ. ಗುಂಡು ಲಾಲಸಿಂಗೆ ಎಂಬುವರಿಗೆ ಸೇರಿದ ಎತ್ತುಗಳು ಇವಾಗಿದ್ದು ನದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳಕ್ಕೆ ಅಥಣಿ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಯಾದಗಿರಿ: ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಪುತ್ರನ ಬರ್ಬರ ಹತ್ಯೆ ಮಾಡಿರುವ ಘಟನೆಯಾದಗಿರಿ ಸಮೀಪದ ಹತ್ತಿಕುಣಿ ಗ್ರಾಮದ ಬಳಿ ನಡೆದಿದೆ.ಕಾಂಗ್ರೆಸ್ ಪಕ್ಷದ ಮುಖಂಡ, ಹತ್ತಿಕುಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶರಣಪ್ಪ ಗಡ್ಡೀಮನಿ ಪೂಜಾರಿ (55), ಪುತ್ರ ಮಹಾದೇವಪ್ಪ (29) ಕೊಲೆಯಾದ ದುರ್ದೈವಿಗಳು.ಯಾದಗಿರಿ ಸಮೀಪದ ಹತ್ತಿಕುಣಿ ಸಮೀಪದ ಹತ್ತಿಕುಣಿ ಭಾಗದಸರಕಾರಿ ತೋಟಗಾರಿಕೆ ಪ್ರದೇಶ ಹಾಗೂ ರಕ್ಷಿತ ಅರಣ್ಯ ಪ್ರದೇಶ ಬಳಿ ಕೊಲೆ ಸಂಭವಿಸಿದೆ.ಕೊಲೆಯಾದ ಶರಣಪ್ಪಗೆ ನಾಲ್ವರು ಪುತ್ರು ಹಾಗೂ …
Read More »
admin
September 12, 2019
ಕರ್ನಾಟಕ, ಸುದ್ದಿ
ಯಾದಗಿರಿ: ಜಿಲ್ಲೆಯ ಶಹಾಪುರ ನಗರದ ಸಾರ್ವಜನಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಮಾನತಿಗಾಗಿ ಆಗ್ರಹಿಸಿ ಬಹುಜನ ಅಂಬೇಡ್ಕರ್ ಸಂಘದ ವತಿಯಿಂದ ಶಹಾಪುರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 2018 -19 ನೆ ಸಾಲಿನ ಸೇರ್ಪಡೆ ಮತ್ತು ಲೆಕ್ಕ ಶೀರ್ಷಿಕೆ ಕ್ರಿಯೆ ಯೋಜನೆಯಲ್ಲಿ ತಾಲೂಕಿನ ಚಟ್ನಲ್ಲಿ, ಮದ್ದರಕಿ, ನಗನಟಗಿ, ತುಮಕುರು, ಹತ್ತಿಗೂಡುರೂ, ಹೀಗೆ ಹಲವಾರು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಕಿಟಕಿ,ಬಾಗಿಲು,ನೆಲಸಮ ಹೀಗೆ ಹಲವಾರು ಕಾಮಗಾರಿಗಳಲ್ಲಿ 20 ಲಕ್ಷ ರೂಪಾಯಿ ಮೊತ್ತದ ಬಾರಿ ಗೋಲ್ಮಾಲ್ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ಮಾದಕ ದ್ರವ್ಯ ಸಾಗಟ ಮಾಡುತ್ತಿದ್ದ . 7 ಜನರನ್ನು ಮಹತ್ವದ ಕಾರ್ಯಾಚರಣೆ ಮೂಲಕ ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಗೆ ಮುಂಬೈ ಯಿಂದ ಮಾದಕ ದ್ರವ್ಯ ಪೂರೈಕೆ ಮಾಡಲಾಗುತಿತ್ತು.ಬಂಧಿತ ಆರೋಪಿಗಳಿಂದ 10 ಗ್ರಾಂ ಎಂ ಡಿ ಎಂ, 400 ಗ್ರಾಂ ಗಾಂಜಾ ಹಾಗೂ 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
Read More »