Breaking News

ಸುದ್ದಿ

ಗ್ರಾ.ಪಂ. ದುರಾಡಳಿತಕ್ಕೆ ಬೇಸತ್ತು ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ.

ಆನೇಕಲ್ :ಗ್ರಾಮ ಪಂಚಾಯಿತಿಯಲ್ಲಿ‌ ನಡೆಯುತ್ತಿರುವ ದುರಾಡಳಿತ ಹಾಗು ಅಕ್ರಮಗಳಿಗೆ ಬೇಸತ್ತು ಗ್ರಾಮಸ್ಥರು ಹಾಗು ಪಂಚಾಯಿತಿ‌ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸಿದಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್‌ ತಾಲ್ಲೂಕಿನ ಕರ್ಪೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಕರ್ಪೂರು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರು ಹಾಗು ಪಿಡಿಓ ಬಸವರಾಜ್ ದುರಾಡಳಿತ ‌ದಿಂದ ಗ್ರಾಮಸ್ಥರು ಹಾಗು ಸದಸ್ಯರು ಬೇಸತ್ತು ಹೋಗಿದ್ದು ಇಂದು ಉಪವಾಸ ಸತ್ಯಾಗ್ರಹ ನಡೆಸಿ‌ ಪಂಚಾಯತಿ ಕಚೇರಿ ಮುಂಬಾಗ ಧರಣಿಯನ್ನು ಹಮ್ಮಿಕೊಂಡಿದ್ದರು. ಇನ್ನು ಇದೆ ಕರ್ಪೂರ …

Read More »

ನೀರಸಾಗರ ಜಲಾಶಯ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭ

ಹುಬ್ಬಳ್ಳಿ: ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ನೀರಸಾಗರ ಜಲಾಶಯದ ಕೆಳಭಾಗದ ಸುತ್ತಮುತ್ತ ಒತ್ತುವರಿಯಾಗಿದ್ದ ಸುಮಾರು 23.5 ಎಕರೆ ಭೂಮಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಇಂದು ಪ್ರಾರಂಭವಾಯಿತು.ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಸೂಚನೆಯಂತೆ, ಕಾರ್ಯಾಚರಣೆ ಕೈಗೊಳ್ಳಲಾಗಿದೆ.ಒತ್ತುವರಿ ತೆರವುಗೊಳಿಸಿ ತಗ್ಗು ತೋಡಿ ಗಡಿಯುದ್ದಕ್ಕೂ ತಂತಿಬೇಲಿ ನಿರ್ಮಿಸಲಾಗುವುದು.ಜಲಾನಯನ ಪ್ರದೇಶದಲ್ಲಿ ಗಿಡನೆಡಲಾಗುವುದು ಎಂದು ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ತಿಳಿಸಿದರು.ಧಾರವಾಡ ತಹಸೀಲ್ದಾರ ಪ್ರಕಾಶ ಕುದರಿ, ಕಲಘಟಗಿ ತಹಸೀಲ್ದಾರ ಅಶೋಕ ಶಿಗ್ಗಾಂವ್ ಸೇರಿದಂತೆ, ನಗರ ನೀರು ಸರಬರಾಜು ಮಂಡಳಿ, …

Read More »

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಒತ್ತಾಯ

ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇ ಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ .ಮಂಗಳೂರು ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು ಎಂಬುದು ನನ್ನ ಆಗ್ರಹವಾಗಿದೆ .ಈಗ ಕೇಂದ್ರ ಸರಕಾರಕ್ಕೆ ಲೋಕ ಸಭೆಯಲ್ಲಿ ಸಂಖ್ಯಾ ಬಲವಿದೆ .ಕೆಲವೇ ತಿಂಗಳುಗಳಲ್ಲಿ ರಾಜ್ಯ ಸಭೆಯಲ್ಲಿ ಬಹುಮತ ದೊರೆಯಲಿದೆ .ಆ ಬಳಿಕ ಸಂಸತ್ತಿನಲ್ಲಿ ಈ …

Read More »

ಕಾರ್ಕಳ ಮಾಜಿ ಶಾಸಕರ ಗೋಪಾಲ್ ಭಂಡಾರಿ ಹೃದಯಾಘಾತದಿಂದ ನಿಧನ.

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಬಸ್ ನಲ್ಲಿಯೇ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.ಬೆಂಗಳೂರಿನಿಂದ ಮಧ್ಯಾಹ್ನ 2 ಘಂಟೆಗೆ ಹೊರಟಿದ್ದ ವೋಲ್ವೋ ಬಸ್ ನಲ್ಲಿದ್ದ ಗೋಪಾಲ್ ಭಂಡಾರಿಯವರು ಮಂಗಳೂರಿನ ಬಸ್ ನಿಲ್ದಾಣ ತಲುಪಿದ ನಂತರವೂ ಇಳಿಯದ್ದನ್ನು ಕಂಡ ನಿರ್ವಾಹಕರು ಪೊಲೀಸ್ ರಿಗೆ ತಿಳಿಸಿದ್ದಾರೆ. ‌ಇದೀಗ ವೆನ್ಲೋಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Read More »

ಕಾಮುಕ‌ ತಂದೆಯಿಂದ ಮಗಳ ಮೇಲೆ ಅತ್ಯಾಚಾರ. ‌

ಚಿಕ್ಕಬಳ್ಳಾಪುರ: ಕುಡಿದ ಮತ್ತಿನಲ್ಲಿ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾಲೂಕಿನಲ್ಲಿ ನಡೆದಿದೆ.ತಂದೆಯ ಹೇಯ ಕೃತ್ಯದಿಂದ 5 ವರ್ಷದ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತನ್ನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಗ್ರಾಮದಿಂದ ಪರಾರಿಯಾಗಿದ್ದು ಕುಡಿದ ಅಮಲಿನಲ್ಲಿ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ಮಾಡಿರುವುದಾಗಿ ತಿಳಿದು ಬಂದಿದೆ. ತಂದೆಯೇ ಅತ್ಯಾಚಾರ ನಡೆಸಿದ್ದಾನೆ ಎಂದು ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣೆಗೆ …

Read More »

ಬಡ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಗೆ ಆಗ್ರಹಿಸಿ ಪ್ರತಿಭಟನೆ.

ಚಿತ್ರದುರ್ಗ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಬಡ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ ನಲ್ಲಿ ಉಚಿತ ಪಾಸ್ ನೀಡುವಂತೆ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ಮಾಡಿದರು. ‌ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಮತ್ತು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಯನ್ನು ಕೈಗೊಂಡು ಸರಕಾರದ ಗಮನ ಸೆಳೆದರು.ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗೆ ಮನವಿ ನೀಡುವ ಮೂಲಕ ಕೊನೆಗೊಂಡಿತು.

Read More »

ಕಿಡಿಗೇಡಿಗಳಿಂದ ರೇಷ್ಮೆ ಬೆಳೆಗೆ ಬೆಂಕಿ

ಕೋಲಾರ: ಕಿಡಿಗೇಡಿಗಳಿಂದ ರೇಷ್ಮೆ ಬೆಳೆದ ಮನೆಗೆ ಬೆಂಕಿ, ರೈತನಿಗೆ ಲಕ್ಷಾಂತರ ನಷ್ಟವಾಗಿರುವ ಘಟನೆ ಮುಳಬಾಗಲು ತಾಲೂಕಿನ ಬೇವಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.ಗ್ರಾಮದ ರೈತ ರಾಮಕೃಷ್ಣಪ್ಪ ಎಂಬುವರಿಗೆ ಸೇರಿದ ರೇಷ್ಮೆ ಮನೆ ಸುಟ್ಟು ಭಸ್ಮವಾಗಿದೆ.‌ಕಿಡಿಗೇಡಿಗಳು 600 ಚಂದ್ರಂಕಿಯಲ್ಲಿ ರೇಷ್ಮೆ ಬೆಳೆ ಸಮೇತ ಬೆಂಕಿ ಹಾಕಿ ಸುಟ್ಟಿದ್ದಾರೆ.‌ಚಂದ್ರಂಕಿ, ರೇಷ್ಮೆ ಬೆಳೆ, ಮನೆ ಸೇರಿ 15 ಲಕ್ಷ ಕ್ಕೂ ಹೆಚ್ಚು ನಷ್ಟ ಉಂಟಾಗಿದೆ.ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮುಖ್ಯ ಶಿಕ್ಷಕರ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ.

ಮೊಳಕಾಲ್ಮುರು: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು ಹಾಗೂ ಬದಲಿನ ಶಿಕ್ಷಕರ ನೇಮಕ ನಡೆಸಬೇಕೆಂದು ಆಗ್ರಹಿಸಿ ಮೊಣಕಾಲ್ಮೂರು ತಾಲ್ಲೂಕಿನ ಗಡಿ ಭಾಗವಾದ ಹುಚ್ಛಂಗಿ ದುರ್ಗದ ಸ್ಥಳೀಯರು ಪ್ರತಿಭಟನೆ ನಡೆಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಗಿಲು ಹಾಕಿ ಊರಿನ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಶಾಲೆಗೆ ಸಂಪೂರ್ಣ ಶಿಕ್ಷಕರು ಬರುವರೆಗೂ ಹಾಗೂ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡುವರೆಗೂ ಶಾಲೆಯ ಬಾಗಿಲು ತೆಗೆಯುವದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಹಾಗೂ …

Read More »

07ಕ್ಕೆ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಹುಬ್ಬಳ್ಳಿ; ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾ ಘಟಕದ ಹಾಗೂ ಧಾರವಾಡ ಜಿಲ್ಲೆಯ ಎಲ್ಲ ತಾಲೂಕಿನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇದೇ 07ರಂದು ವಿದ್ಯಾನಗರದಲ್ಲಿ ಭಾರತಿ ಮರಾಠಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷತ್ರಿಯ ಸಮಾಜದ ಮುಖಂಡರಾದ ಅಶೋಕ ಕಾಟವೆ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷತ್ರಿಯ ಸಮಾಜ ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ರಾಜಕೀಯವಾಗಿ ಕ್ಷತ್ರಿಯ ಸಮಾಜವನ್ನು ಅಡುಗೆಯಲ್ಲಿ ಕರಿಬೇವಿನ ಹಾಗೇ ಬಳಕೆ ಮಾಡಿಕೊಂಡು ಊಟ ಮುಗಿದ ಮೇಲೆ …

Read More »

ಯುವ ಸ್ಪಂದನ ಜಾಗೃತಿ ಕಾರ್ಯಕ್ರಮ

ಮಂಡ್ಯ: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಯುವಜನ ಕೌಶಲ್ಯ ಮತ್ತು ಯುವಸ್ಪಂದನ ಜಾಗೃತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಮಂಡ್ಯ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಮಾಜಿಅಧ್ಯಕ್ಷ ಹಾಗೂ ಚಿಂತಕರಾದ ಡಾ.ಕೆ.ಕಾಳೇಗೌಡ ಮಾತನಾಡಿ ಯುವಜನರು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು‌ ಎಂದರು.‌ಇಂದಿನ ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚದಲ್ಲಿ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು. ಪರೋಪಕಾರ ಹಾಗೂ ಸೇವಾ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಿ …

Read More »