admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್. ವಿನೋತ್ ಪ್ರಿಯ ಇವರನ್ನು ವರ್ಗಾವಣೆಗೊಳಿಸಿ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದ ಆರ್. ಗಿರೀಶ್ ಇವರನ್ನು ಚಿತ್ರದುರ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.ಇವರು ಆರ್. ವಿನೋತ್ ಪ್ರಿಯ ಅವರಿಗಿಂತ ಮೊದಲು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.ಆರ್. ವಿನೋತ್ ಪ್ರಿಯ ಇವರನ್ನು ಕಾರ್ಮಿಕ ಇಲಾಖೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕಬಳ್ಳಾಪುರ: ಬೆ ಳಂಬೆಳಗೆ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಕ್ಷೇತ್ರದಲ್ಲಿ ನಡೆದಿದೆ.ಜಿಲ್ಲೆಯ ಪ್ರಮುಖ ಯಾತ್ರ ಸ್ಥಳವಾದ ಕೈವಾರ ಬೆಟ್ಟದ ಮೇಲೆ ಕಳೆದ ಎರಡು ತಿಂಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿದ್ದು ಪ್ರವಾಸಿಗರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದರು. ಇನ್ನೂ ಚಿರತೆಯನ್ನು ಸೆರೆಹಿಡಿಯುವುದರಲ್ಲಿ ಅರಣ್ಯ ಇಲಾಖೆಯೂ ಸಹ ಸಾಕಷ್ಟು ಶ್ರಮವಹಿಸಿದ್ದು ಚಿರತೆ ಮಾತ್ರ ಕಣ್ಣಾಮುಚ್ಚಾಲೇ ಆಟವಾಡಿ ತಪ್ಪಿಸಿಕೊಳ್ಳುತ್ತಿತ್ತು. ಇದುವರೆಗೂ ಎರಡು ಬಾರೀ ಪ್ರತ್ಯಕ್ಷವಾದ ಚಿರತೆ ಪ್ರವಾಸಿಗರು ಸೇರಿದಂತೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಕಳೆದ ಒಂದು ತಿಂಗಳ ಹಿಂದೆ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ನರಸೇಗೌಡ ಎತ್ತಿನಗಾಡಿ ಮಗುಚಿ ಮೃತಪಟ್ಟದ್ದ ಹಿನ್ನೆಲೆಯಲ್ಲಿ ಇಂದು ಕೃಷ್ಣರಾಜಪೇಟೆ ಎ ಪಿ ಎಂ ಸಿ ನಿರ್ದೇಶಕ ರಾದ ಐನೋರಹಳ್ಳಿ ಮಲ್ಲೇಶ್ ಹಾಗೂ ಮಹೇಶ್ವರಿ ನರಸೇಗೌಡ ರವರು ಮೃತ ಕುಟುಂಬಕ್ಕೆ ರೈತ ಸಂಜೀವಿನಿ ಯೋಜನೆಯಡಿ ಮೃತ ಕುಟುಂಬದ ಮನೆಗೆ ಬೇಟಿ ನೀಡಿ ಮೃತನ ಪತ್ನಿ ಚಂದ್ರಮ್ಮ ರವರಿಗೆ ಒಂದು ಲಕ್ಷ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಸೋಲಿನ ಪರಾಮರ್ಶೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶ ನಡೆಯಿತು.ಚಾಮರಾಜನಗರದ ಅಂಬೇಡ್ಕರ್ ಭವನದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆ ಮತ್ತು ಪಕ್ಷದ ಕಾರ್ಯಕರ್ತರ ಕೃತಜ್ನತಾ ಸಮಾವೇಶವನ್ನ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.ಕಾರ್ಯಕ್ರಮದ ಕೇಂದ್ರ ಬಿಂದು ಮಾಜಿ ಸಂಸದ ಆರ್.ದೃವನಾರಾಯಣ್ ಮೊದಲಿಗೆ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ನತೆಗಳನ್ನ ಅರ್ಪಿಸಿದರು. ಸೋಲಿನಿಂದ …
Read More »
admin
September 12, 2019
ಕರ್ನಾಟಕ, ಸುದ್ದಿ
ಬಾಗಲೂರು: ಇಂದಿನ ದಿನಮಾನದಲ್ಲಿ ಕುಟುಂಬದವರನ್ನೇ ಕಡೆಗಣಿಸುವಂತ ಜನರು ಇದ್ದಾರೆ. ಅಂತವರ ನಡುವೆ ಅಪರಿಚಿತ ವ್ಯಕ್ತಿಯ ಶವಕ್ಕೆ ಅಂತ್ಯಸಂಸ್ಕಾರ ಕಾರ್ಯ ನೆರವೇರಿಸುವ ಮೂಲಕ ಬಾಗಲೂರು ಪೋಲೀಸರು ಮಾನವೀಯತೆ ಮೆರೆದಿದ್ದಾರೆ.ಬಾಗಲೂರು ಪೊಲೀಸ್ ಠಾಣೆಯ ಯುಡಿಆರ್ ನಂ 28/2019 ಕಲಂ 174 ಸಿ.ಆರ್.ಪಿ.ಸಿ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹವನ್ನು ಬಾಗಲೂರು ಪೊಲೀಸರು ಅಂತಿಮ ಸಂಸ್ಕಾರ ನೆರವೇರಿಸಿದರು. ಮಾನವೀಯತೆ ಎತ್ತಿಹಿಡಿದಿರುವ ನಮ್ಮ ಕರ್ನಾಟಕ ಪೊಲೀಸ್ ರವರ ಈ ಕಾರ್ಯಕ್ಕೆ ಹ್ಯಾಟ್ಸಪ್ ಹೇಳಲೇಬೇಕು.
Read More »
admin
September 12, 2019
ಕರ್ನಾಟಕ, ಸುದ್ದಿ
ಆನೇಕಲ್: ಕಾಡಿನಿಂದ ಆಹಾರ ಹಾಗೂ ನೀರನ್ನು ಅರಸಿ ಕರ್ನಾಟಕ ತಮಿಳುನಾಡು ಗಡಿ ಆನೇಕಲ್ ಸಮೀಪದ ಅವಲಹಳ್ಳಿ ಡ್ಯಾಂಗೆಕಾಡಾನೆಗಳು ಲಗ್ಗೆ ಇಟ್ಟಿರುವ ಪ್ರಕರಣ ನಡೆದಿದೆ.ರಾತ್ರಿ ವೇಳೆ ಎರಡು ಕಾಡಾನೆಗಳು ಗ್ರಾಮದಲ್ಲಿ ಕಾಣಿಸಿಕೊಂಡಿವೆ. ಹಾಗೂ ಡ್ಯಾಂನಲ್ಲೆ ಕಾಲ ಕಳೆಯುತ್ತಾ ವಿಶ್ರಾಂತಿ ಪಡೆಯುತ್ತಿವೆ.ಕಾಡಾನೆಗಳು ಕೋಲಾರ ದಿಂದ ತಮಿಳುನಾಡಿನ ಭಾಗಕ್ಕೆ ಬಂದಿರಬಹುದು ಎನ್ನಲಾಗಿದೆ.ಈ ವೇಳೆ ಗ್ರಾಮದ ಜನರು ಆನೆಗಳನ್ನು ನೋಡಲು ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು.ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಿಬ್ಬಂದಿಸಂಜೆಯ ವೇಳೆಗೆ ಕಾಡಿಗೆ ಓಡಿಸುವದಾಗಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಮಂಡ್ಯ ಪಟ್ಟಣದ ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ನೂತನವಾಗಿ ಆರಂಭವಾದ ಎಸ್.ಎಲ್.ವಿ ಫರ್ನೀಚರ್ಸ್ ಮತ್ತು ಇಂಟೀರಿಯರ್ ಮಾರಾಟ ಮಳಿಗೆಯನ್ನು ಪುರಸಭೆಯ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ಉದ್ಘಾಟಿಸಿದರು. ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಗೆ ಅನುಕೂಲವಾಗಲಿರುವ ಎಸ್.ಎಲ್.ವಿ ಫರ್ನೀಚರ್ಸ್ ಮತ್ತು ಇಂಟೀರಿಯರ್ ಮಾರಾಟ ಮಳಿಗೆಯಲ್ಲಿ ಸೋಫಾಸೆಟ್ ಗಳು, ಡೈನಿಂಗ್ ಟೇಬಲ್ ಗಳು, ಡ್ರೆಸ್ಸಿಂಗ್ ಟೇಬಲ್, ಕ್ಯಾಶ್ ಟೇಬಲ್, ಟಿವಿ ಸ್ಟ್ಯಾಂಡ್, ಮಂಚಗಳು ಸೇರಿದಂತೆ ಅತ್ಯಾಧುನಿಕ ಶೈಲಿಯ ಗೃಹೋಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು ಸಾರ್ವಜನಿಕರು …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆ ನಾಗಮಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಖಜಾನೆ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಂಕರ ಕಲ್ಲುದೇವನಹಳ್ಳಿ ಅವರು ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಶಂಕರ ಅವರಿಗೆ ಸನ್ಮಾನಿಸಿ ಅಭಿನಂದಿಸುವ ಮೂಲಕ ಬಿಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರು, ಸಾರ್ವಜನಿಕರು ,ಎಲ್ಲಾ ಚಾಲನ ತರಬೇತಿ ಶಾಲೆಯ ಮುಖ್ಯಸ್ಥರು , ವಾಹನ ಬಳಕೆದಾರರ ಪ್ರತಿನಿಧಿಗಳು, ವಾಹನ ಮಾರಾಟ ಮಳಿಗೆಯ ಮುಖ್ಯಸ್ಥರು ಹಾಜರಿದ್ದು ಶುಭ ಹಾರೈಸಿದರು .
Read More »
admin
September 12, 2019
ಧಾರವಾಡ, ಸುದ್ದಿ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಸತತವಾಗಿ ಜಿಟಿ ಜಿಟಿ ಮಳೆ ಸುರಿಯುತಿದ್ದು, ಒಂದು ಕಡೆ ಮಳೆ ಇಲ್ಲದೇ ಕಂಗಾಲಾಗಿದ್ದ ರೈತರು ಸಂತಸಪಟ್ಟರೆ, ಇನ್ನೊಂದು ಕಡೆ ಮಳೆಯಿಂದ ಮನೆಗಳು ನೆಲಸಮವಾಗಿರುವದರಿಂದ ಜನರು ಆತಂಕ ಪಡುವ ವಾತಾವರಣ ನಿರ್ಮಾಣವಾಗಿದೆ.ಶನಿವಾರದಿಂದ ಪ್ರಾರಂಭವಾಗಿರುವ ಜಿಟಿ ಜಿಟಿ ಮಳೆಯಿಂದ ಜನ ಪರದಾಡುವಂತಾಗಿದ್ದು, ಜನರು ಮನೆಯಿಂದ ಹೊರಬೀಳಲು ಹಿಂದೇಟು ಹಾಕುತ್ತಿದ್ದಾರೆ. ಶನಿವಾರ ರಾತ್ರಿ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ನಗರದ ಬಂಕಾಪುರ ಚೌಕದ ನಿವಾಸಿ ಮಲ್ಲಿಕಾರ್ಜುನ ಮೋಟಗಿ ಎಂಬುವರ ಮನೆಯ …
Read More »
admin
September 12, 2019
ಕರ್ನಾಟಕ, ಸುದ್ದಿ
ಆನೇಕಲ್: ಚಲಿಸುತ್ತಿದ್ದ ಕಾರಿನ ಎಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಭಸ್ಮವಾಗಿರುವ ಘಟನೆ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ನಡೆದಿದೆ.ಹುಂಡೈ ಕಂಪನಿಯ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಸಂಪೂರ್ಣ ಕಾರು ಹೊತ್ತಿ ಉರಿದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಇಬ್ಬರು ಇಳಿದು ಅಪಾಯದಿಂದ ಪಾರಾಗಿದ್ದಾರೆ.ಘಟನಾ ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ನಿರತರಾದರು.ಹೊತ್ತಿ ಉರಿಯುತ್ತಿದ್ದ …
Read More »