Breaking News

ಎಸ್.ಎಲ್.ವಿ ಫರ್ನೀಚರ್ಸ್ ಮಳಿಗೆಗೆ ಚಾಲನೆ ನೀಡಿದ ಕೆ.ಎಸ್.ಸಂತೋಷ್

ಮಂಡ್ಯ: ಮಂಡ್ಯ ಪಟ್ಟಣದ ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ನೂತನವಾಗಿ ಆರಂಭವಾದ ಎಸ್.ಎಲ್.ವಿ ಫರ್ನೀಚರ್ಸ್ ಮತ್ತು ಇಂಟೀರಿಯರ್ ಮಾರಾಟ ಮಳಿಗೆಯನ್ನು ಪುರಸಭೆಯ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ಉದ್ಘಾಟಿಸಿದರು.
ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಗೆ ಅನುಕೂಲವಾಗಲಿರುವ ಎಸ್.ಎಲ್.ವಿ ಫರ್ನೀಚರ್ಸ್ ಮತ್ತು ಇಂಟೀರಿಯರ್ ಮಾರಾಟ ಮಳಿಗೆಯಲ್ಲಿ ಸೋಫಾಸೆಟ್ ಗಳು, ಡೈನಿಂಗ್ ಟೇಬಲ್ ಗಳು, ಡ್ರೆಸ್ಸಿಂಗ್ ಟೇಬಲ್, ಕ್ಯಾಶ್ ಟೇಬಲ್, ಟಿವಿ ಸ್ಟ್ಯಾಂಡ್, ಮಂಚಗಳು ಸೇರಿದಂತೆ ಅತ್ಯಾಧುನಿಕ ಶೈಲಿಯ ಗೃಹೋಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಿಮ್ಮ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಂತೋಷ್ ಮನವಿ ಮಾಡಿ ಕೆ.ಆರ್.ಪೇಟೆ ಪಟ್ಟಣದಲ್ಲಿ ನೂತನ ಉಧ್ಯಮವನ್ನು ಆರಂಬಿಸಿರುವ ಮೈಸೂರಿನ ಶ್ಯಾಂಸುಂದರ್ ಅವರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನೋಟರಿಗಳಾದ ಬಿ.ಜಿ.ಗಣೇಶ್, ವಕೀಲರಾದ ಪ್ರವೀಣ್ ಕುಮಾರ್, ನಾಗೇಗೌಡ, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ಸದಸ್ಯರಾದ ಶೋಭಾದಿನೇಶ್, ಡಿ.ಪ್ರೇಮಕುಮಾರ್, ಕೆ.ಎಸ್.ಹರಪ್ರಸಾದ್, ಕೆ.ಬಿ.ನಂದೀಶ್, ಮುಖಂಡರಾದ ಟಿ.ವೈ.ಆನಂದ್, ವಿ.ಡಿ.ಹರೀಶ್, ರಂಗಸ್ವಾಮಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು….

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *