Breaking News

ಸುದ್ದಿ

ಸಿಬಿಐ ಬೇಗುದಿ: 2 ವಾರದಲ್ಲಿ ವರ್ಮಾ ವಿಚಾರಣೆ ಮುಗಿಸುವಂತೆ ಸಿವಿಸಿಗೆ ಸುಪ್ರೀಂ ಆದೇಶ

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ವಿಚಾರಣೆಯನ್ನು ಎರಡು ವಾರಗಳಲ್ಲಿ ಮುಗಿಸುವಂತೆ ಸುಪ್ರೀಂಕೋರ್ಟ್​ ಸಿವಿಸಿ(ಕೇಂದ್ರ ಜಾಗೃತಿ ಆಯೋಗ)ಗೆ ಆದೇಶಿಸಿದೆ. ಅಲ್ಲದೇ ಸಿವಿಸಿ ನಡೆಸುವ ವಿಚಾರಣೆಯ ಮೇಲ್ವಿಚಾರಕರನ್ನಾಗಿ ಸುಪ್ರೀಂ ಕೋರ್ಟ್​​ ನಿವೃತ್ತ ನ್ಯಾಯಾಮೂರ್ತಿ ಎ.ಕೆ ಪಟ್ನಾಯಕ್​ ಅವರನ್ನು ನೇಮಿಸಿದೆ. ಹಂಗಾಮಿ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ್​ ರಾವ್​ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲವೆಂದು ತಿಳಿಸಿದೆ. ಪ್ರಕರಣದ ವಿಚಾರಣೆಯನ್ನು ದೀಪಾವಳಿ ಮುಗಿದ ನಂತರ ನವೆಂಬರ್​​ 12 ಕ್ಕೆ ನಡೆಸುವುದಾಗಿ ಹೇಳಿದೆ.ವಿಚಾರಣೆ ನಡೆಸಿದ …

Read More »

ಸರ್ಜಾ ಅಕೌಂಟ್​​ ಹ್ಯಾಕ್: ಇಂದು ಶ್ರುತಿ ಹರಿಹರನ್​​​​​​ ವಿಚಾರಣೆಗೆ ಹಾಜರಾಗೋ ಸಾಧ್ಯತೆ

ಬೆಂಗಳೂರು: ಇಂದು ನಟಿ ಶ್ರುತಿ ಹರಿಹರನ್​​​​ ಸೈಬರ್ ಕ್ರೈಂ ಠಾಣೆಗೆ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ. ನಟ ಅರ್ಜುನ್​ ಸರ್ಜಾ ವಿರುದ್ಧ ಶೃತಿ#MeToo ಆರೋಪ ಮಾಡಿದ ಹೊತ್ತಲ್ಲೇ ಸರ್ಜಾ ಅವರ ಇ-ಮೇಲ್, ಫೇಸ್​​ಬುಕ್ ಹಾಗೂ ಟ್ವಿಟರ್​​ ಅಕೌಂಟ್ ಹ್ಯಾಕ್ ಆಗಿರೋ ಬಗ್ಗೆ, ಅವರ ಮಾನೇಜರ್ ಶಿವಾರ್ಜುನ್ ದೂರು ನೀಡಿದ್ದರು. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಶ್ರುತಿಹರಿಹರನ್ ವಿರುದ್ಧ FIR ದಾಖಲಾಗಿತ್ತು. ವಿಚಾರಣೆಗೆ ಹಾಜರಾಗಲು ಶೃತಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ …

Read More »

ಕಾಂಗ್ರೆಸ್​​ ಅಭ್ಯರ್ಥಿಗಳ ಪರ ಸಿಎಂ ಕುಮಾರಸ್ವಾಮಿ…

ಬೆಂಗಳೂರು: ರಾಜ್ಯದಲ್ಲಿ 3 ಲೋಕಸಭಾ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಪ್ರಚಾರ ಜೋರಾಗಿದೆ. ಆದ್ರೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೋಸ್ತಿ ಪಕ್ಷವಾದ ಕಾಂಗ್ರೆಸ್​​ನ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವುದು ಸಂಶಯ ಎನ್ನಲಾಗ್ತಿದೆ. ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮಾತ್ರ ಅಖಾಡಕ್ಕೆ ಇಳಿದಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರದಲ್ಲೇ ಇವತ್ತು ಮತಯಾಚಿಸಲಿರುವ ಕುಮಾರಸ್ವಾಮಿ, ನಾಳೆಯಿಂದ ಅಕ್ಟೋಬರ್​ 31ರ ವರೆಗೂ ಶಿವಮೊಗ್ಗ ಉಪಸಮರದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಕ್ಯಾಂಪೇನ್ ಮಾಡಲಿದ್ದಾರೆ.31 …

Read More »

ಕಾರ್​ಗೆ ಪ್ರವಾಸಿ ವಾಹನ ಡಿಕ್ಕಿ, ಕೇಸ್​ ದಾಖಲಿಸದಂತೆ ಡಿಸಿ ಆದೇಶ..!

ಚಿಕ್ಕಮಗಳೂರು: ಅಧೀನ ಅಧಿಕಾರಿಗಳೊಂದಿಗೆ ದತ್ತ ಪೀಠಕ್ಕೆ ತೆರಳುತ್ತಿದ್ದ ಜಿಲ್ಲಾಧಿಕಾರಿಗಳ ಕಾರ್​ಗೆ ಪ್ರವಾಸಿ ವಾಹನವೊಂದು ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯ ಹಾಗಲ್​ಖಾನ್ ಬಳಿ ಘಟನೆ ನಡೆದಿದೆ.ಜಿಲ್ಲಾಧಿಕಾರಿ ಶ್ರೀರಂಗಯ್ಯ ಸಂಚರಿಸುತ್ತಿದ್ದ ಕಾರ್​ನ ಹಿಂಬದಿಯ ಬಂಪರ್​ಗೆ, ಹಾಸನ ಮೂಲದ ಪೊರ್ಡ್ ಐಕಾನ್ ಕಾರ್​ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್​ನ ಬಂಪರ್ ​ಹಾಗೂ ಇಂಡಿಕೇಟರ್​ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಜಿಲ್ಲಾಧಿಕಾರಿಗಳು ಅಪಾಯದಿಂದ‌ ಪಾರಾಗಿದ್ದಾರೆ. ಹಾಸನ ಮೂಲದ ಯುವಕರು ಸಂಚರಿಸುತ್ತಿದ್ದ KA 04 Z …

Read More »

ಸಿವಿಸಿ ತನಿಖೆಗೆ ಸಹಕರಿಸದ ಅಲೋಕ್ ವರ್ಮಾ: ಕೇಂದ್ರ ಸರ್ಕಾರ.

ನವದೆಹಲಿ: ಬುಧವಾರ, ರಜೆಯಲ್ಲಿ ಕಳುಹಿಸಲಾದ ಅಲೋಕ್ ವರ್ಮಾ ಅವರು ಕೇಂದ್ರೀಯ ಜಾಗೃತ ಆಯೋಗದೊಂದಿಗೆ (ಸಿವಿಸಿ) ಸಹಕರಿಸುತ್ತಿರಲಿಲ್ಲ ಎಂದು ಸರ್ಕಾರ ಹೇಳಿದೆ. ಅಲ್ಲದೆ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳುಹಿಸಿರುವುದನ್ನು ಸಹ ಸಮರ್ಥಿಸಿಕೊಂಡಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರುದ್ಧ ‘ಭ್ರಷ್ಟಾಚಾರದ ಗಂಭೀರ ಆರೋಪಗಳ’ ಕಾರಣದಿಂದಾಗಿ, ‘ಅಸಾಮಾನ್ಯ ಮತ್ತು ಅಭೂತಪೂರ್ವ’ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ …

Read More »

18 ಶಾಸಕರ ಅನರ್ಹ ಪ್ರಕರಣದ ತೀರ್ಪು ಇಂದು ಪ್ರಕಟ..

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ವಿಲೀನದ ಬಳಿಕ, ದಿನಕರನ್ ಜೊತೆ ಗುರುತಿಸಿಕೊಂಡಿದ್ದ 18 ಶಾಸಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ವಿಲೀನದ ಬಳಿಕ, ದಿನಕರನ್ ಜೊತೆ ಗುರುತಿಸಿಕೊಂಡಿದ್ದ ಎಐಎಡಿಎಂಕೆ ಪಕ್ಷದ 18 ಶಾಸಕರನ್ನು ಅನರ್ಹಗೊಳಿಸಿದ್ದ ಪ್ರಕರಣದ ತೀರ್ಪು ಇಂದು ಪ್ರಕಟಗೊಳ್ಳಲಿದ್ದು, 18 ಶಾಸಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.1986ರ ಪಕ್ಷಾಂತರ ವಿರೋಧಿ ಕಾಯಿದೆಯ …

Read More »

ಪ್ರತೀಕ್​ ಸಾವು ಪ್ರಕರಣ: ನಟಿ ರಶ್ಮಿ ಪೋನ್​ FSL​ಗೆ ಕಳಿಸಿದ ಪೊಲೀಸ್

ಬೆಂಗಳೂರು: ನಟಿ ದುನಿಯಾ ರಶ್ಮಿ ಅವರ ಮನೆಯಲ್ಲಿ ಸಂಭವಿಸಿದ ಪ್ರತೀಕ್ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ರಶ್ಮಿ ಅವರ ಮೊಬೈಲ್​ ವಶಕ್ಕೆ ಪಡೆದು ಎಫ್​​​ಎಸ್​​​ಎಲ್ ಪರೀಕ್ಷೆ​ಗೆ ಕಳುಹಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಿದ್ದು ಪ್ರತೀಕ್​​​ ಸಾವಿಗೀಡಾಗಿದ್ದಾನೆ ಎಂದು ರಶ್ಮಿ ಹೇಳಿದ್ದಾರೆ. ಆದರೆ ಮೃತ ಪ್ರತೀಕ್ ಹಾಗೂ ನಟಿ ರಶ್ಮಿ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಹೀಗಾಗಿ ಇವರಿಬ್ಬರ ನಡುವೆ ಪ್ರೀತಿ, ಪ್ರೇಮ ಏನಾದ್ರು ಇತ್ತಾ? ಈ ಕಾರಣಕ್ಕೆ ಗಲಾಟೆ …

Read More »

ಅರ್ಜುನ್ ಸರ್ಜಾ ಇ-ಮೇಲ್, ಫೇಸ್​​ಬುಕ್​​, ಟ್ವಿಟರ್ ಖಾತೆ ಹ್ಯಾಕ್

ಬೆಂಗಳೂರು: ತನ್ನ ಇ-ಮೇಲ್‌, ಫೇಸ್​​ಬುಕ್​​​​ ಹಾಗೂ ಟ್ವಿಟರ್ ಅಕೌಂಟ್​​ ಹ್ಯಾಕ್ ಆಗಿದೆ ಎಂದು ಬಹುಭಾಷಾ ನಟ ಅರ್ಜುನ್ ಸರ್ಜಾ ಪೊಲೀಸರಿಗೆ ದೂರು ನೀಡಿದ್ದಾರೆ. ಮೀ ಟೂ ಅಭಿಯಾನದ ಹಿನ್ನೆಲೆಯಲ್ಲಿ ನಟಿ ಶೃತಿ ಹರಿಹರನ್​ ಅರ್ಜುನ್​ ಸರ್ಜಾ ಅವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಹೊತ್ತಲ್ಲೇ ಸರ್ಜಾ ಅವರ ಇ-ಮೇಲ್​ ಹ್ಯಾಕ್ ಆಗಿರೋ ವಿಚಾರ ಬೆಳಕಿಗೆ ಬಂದಿದೆ. ಇ-ಮೇಲ್​ ಹ್ಯಾಕ್ ಮಾಡಿ ನಾನಾ ಮೇಲ್ ಕಳಿಸಲಾಗ್ತಿದೆ ಎಂದು ಅರ್ಜುನ್​ ಸರ್ಜಾ …

Read More »

ಶೃತಿ ಹರಿಹರನ್​​ ವಿರುದ್ಧ ₹5 ಕೋಟಿ ಮಾನನಷ್ಟ ಕೇಸ್​​..

ಬೆಂಗಳೂರು: ಬಹುಭಾಷಾ ನಟ ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿರುವ ನಟಿ ಶೃತಿ ಹರಿಹರನ್​​ಗೆ ಇದೀಗ ಸಂಕಷ್ಟ ಎದುರಾಗಿದೆ. ಶೃತಿ ಹರಿಹರನ್ ವಿರುದ್ಧ ಅರ್ಜುನ್​ ಸರ್ಜಾ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ. ₹5 ಕೋಟಿಗೆ ಮಾನನಷ್ಟ ಮೊಕದ್ದಮೆ ಹೂಡಲು ಸರ್ಜಾ ನಿರ್ಧರಿಸಿದ್ದಾರೆ. ಇಂದು ಸಂಜೆ ಸುದ್ದಿಗೋಷ್ಟಿಯ ಬಳಿಕ ಅರ್ಜುನ್​ ಸರ್ಜಾ, ಧೃವ ಸರ್ಜಾ ಮೂಲಕ ಸಿವಿಲ್ ಕೋರ್ಟ್​​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಿದ್ದಾರೆ.

Read More »

ಬಿಬಿಎಂಪಿಗೂ ಕಾಲಿಟ್ಟ.. #MeToo

ಬೆಂಗಳೂರು: ಚಂದವನದಲ್ಲಿ ಬಿರುಗಾಳಿ ಎಬ್ಬಿಸಿರುವ ಮೀ ಟೂ ಅಭಿಯಾನ ಬಿಬಿಎಂಪಿಗೂ ಕಾಲಿಟ್ಟಿದೆ. ಕೆಲಸದ ಜಾಗದಲ್ಲಿ ನಡೆಯುವ ಲೈಂಗಿಕ ಕಿರುಕುಳ ಅನುಭವವನ್ನು ಪೌರಕಾರ್ಮಿಕರು ತೆರೆದಿಟ್ಟಿದ್ದಾರೆ. ಈ ದೌರ್ಜನ್ಯಕ್ಕೆ ಕೊನೆ ಯಾವಾಗ ಎಂದು ಅಳಲು ತೋಡಿಕೊಂಡಿದ್ದಾರೆ. ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು, ಪೌರಕಾರ್ಮಿಕರಾಗಿ ಕೆಲಸ ಮಾಡುವ ತನ್ನ ಅತ್ತೆಗೆ ಪಾಲಿಕೆ ಅಧಿಕಾರಿಗಳಿಂದ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಫೇಸ್ ಬುಕ್​​​ನಲ್ಲಿ ಬರೆದುಕೊಂಡಿದ್ದಾರೆ.ಬಡವರು ಪೌರಕಾರ್ಮಿಕ ಕೆಲಸಕ್ಕಾಗಿ ಬರುತ್ತಾರೆ. ನೀಚ ಅಧಿಕಾರಿಗಳು ಅವರಿಗೆ ಲೈಂಗಿಕ ಕಿರುಕುಳ …

Read More »