Breaking News

ಸುದ್ದಿ

ಗೊರೂರು ಜಲಾಶಯದಿಂದ ಕೆ.ಆರ್.ಪೇಟೆ ತಾಲ್ಲೂಕಿನ ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸುವಂತೆ ರೈತ ಮುಖಂಡರ ಆಗ್ರಹ

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಒಣಗುತ್ತಿರುವ ಕಬ್ಬು, ಬಾಳೆ, ಅಡಿಕೆ ಮತ್ತು ಇತರೆ ಬೆಳೆಗಳಿಗೆ ಹೇಮಾವತಿ ಜಲಾಶಯ ಯೋಜನೆಯ ಗೊರೂರು ಜಲಾಶಯದಿಂದ ನೀರು ಹರಿಸಿ ರೈತರನ್ನು ಸಂಕಷ್ಠದಿಂದ ಪಾರು ಮಾಡುವಂತೆ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ ಅವರ ಕಛೇರಿಗೆ ಮುತ್ತಿಗೆ ಹಾಕಿಒತ್ತಾಯಿಸಿದ ರೈತ ಮುಖಂಡರು ಕೃಷ್ಣರಾಜಸಾಗರ ಜಲಾಶಯದಿಂದ ಮಾತ್ರ ನೀರನ್ನು ಹರಿಸಿ ಗೊರೂರು ಜಲಾಶಯದ ವ್ಯಾಪ್ತಿಯ ರೈತರನ್ನು ಮಲತಾಯಿ ಮಕ್ಕಳಂತೆ ಕಾಣುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ರೈತಮುಖಂಡರಾದ ಮುದುಗೆರೆ ರಾಜೇಗೌಡ, …

Read More »

ವೀರಶೈವಲಿಂಗಾಯತ ಎನ್ನುವುದು ಒಂದು ಜಾತಿಯಲ್ಲ, ಅದು ಧಾರ್ಮಿಕ ಸಂಸ್ಕೃತಿ: ವಿರೂಪಾಕ್ಷ ರಾಜಯೋಗಿಗಳ ಅಭಿಮತ.

ಮಂಡ್ಯ: ಜಿಲ್ಲೆಯ ಶ್ರೀ ಚನ್ನಬಸವೇಶ್ವರ ಕಲ್ಲುಮಠದ ಶ್ರೀ ಡಾ.ವಿರೂಪಾಕ್ಷರಾಜಯೋಗಿಗಳು ವೀರಶೈವ ಲಿಂಗಾಯತರತ್ನ ಸಂಶೋಧನಾ ಕೃತಿಯನ್ನು ಹೊರತಂದಿದ್ದು ವೀರಶೈವ ಲಿಂಗಾಯತ ಒಂದೇ ಧರ್ಮವಾಗಿದ್ದು ಧರ್ಮವಿಭಜನೆಗೆ ಮುಂದಾಗಿರುವ ದ್ರೋಹಿಗಳು ಬಹಿರಂಗ ಚರ್ಚೆಗೆ ಬಂದರೆ ದಾಖಲೆಗಳ ಸಮೇತವಾಗಿ ಒಂದೇ ಧರ್ಮವೆಂದು ಸಾಬೀತು ಪಡಿಸುತ್ತೇನೆ ಎಂದು ಶ್ರೀವಿರೂಪಾಕ್ಷ ರಾಜಯೋಗಿಗಳು ಸವಾಲು ಹಾಕಿದ್ದಾರೆ. ವೀರಶೈವ ಧರ್ಮದ ಬಗ್ಗೆ ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ನಿರ್ಧಾರವನ್ನು ಸ್ವಾಗತಿಸಿರುವ ರಾಜಯೋಗಿಗಳು ಮಾಜಿಸಚಿವ ಎಂ.ಬಿ.ಪಾಟೀಲ್ ಧರ್ಮದ್ರೋಹಿಯಾಗಿದ್ದಾರೆ. ವೀರಶೈವ ಧರ್ಮವನ್ನು ವೀರಶೈವ ಲಿಂಗಾಯತ …

Read More »

ಮಂಡ್ಯ ಐಎಎಸ್ ಪ್ರೊಬೇಷನರಿ ಅಧಿಕಾರಿ ಡಾ. ನಾಗಾರ್ಜನಗೌಡರಿಗೆ ಸನ್ಮಾನ.

ಮಂಡ್ಯ: ಮೈಸೂರಿನ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ವತಿಯಿಂದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಐ.ಎ.ಎಸ್. ಅಧಿಕಾರಿಯಾಗಿ ಆಯ್ಕೆಯಾದ ಮಂಡ್ಯ ಮಿಮ್ಸ್ ನ ಯುವವೈದ್ಯ ಡಾ. ನಾಗಾರ್ಜುನಗೌಡ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಉತ್ತಮ ಸೇವಾ ಸಾಧನೆ ಮಾಡಿದ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, ವಿಶ್ರಾಂತ ಐ.ಎಫ್.ಎಸ್. ಅಧಿಕಾರಿ ಎ.ಎಂ. ಅಣ್ಣಯ್ಯ, ಆಹಾರ ವಿಜ್ಞಾನಿ …

Read More »

ಸಿದ್ದಯ್ಯನಹಟ್ಟಿಯನ್ನು ಗುಡಿಸಲು ಮುಕ್ತ ಗ್ರಾಮವನ್ನಾಗಿಸಲು ಒತ್ತಾಯ

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಯ್ಯನಹಟ್ಟಿ ಗ್ರಾಮವನ್ನು ಗುಡಿಸಲು ಮುಕ್ತ ಗ್ರಾಮವನ್ನಾಗಿಸಬೇಕೆಂದು ವಂದೇಮಾತರಂ ಜಾಗೃತಿ ವೇದಿಕೆ ತಾಲೂಕು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.ಈ ಸಂಬಂಧಿಸಿದಂತೆ ಶಾಸಕರು ಸಂಸದರು ಶೀಘ೯ವೇ ಸೂಕ್ತ ಕ್ರಮಗಳನ್ನು ಜಾರಿಗೆ ತರಬೇಕೆಂದು ಗ್ರಾಮಸ್ಥರು ವಂದೇಮಾತರಂ ಜಾಗೃತಿವೇದಿಕೆ ನೇತೃತ್ವದಲ್ಲಿ ಈ ಮೂಲಕ ಒತ್ತಾಯಿಸಿದ್ದಾರೆ.ಗ್ರಾಮದಲ್ಲಿ ತೀರಾ ಹಿಂದುಳಿದ ಜನಾಂಗದ ಕುಟುಂಬಗಳಿದ್ದು.ಆಥಿ೯ಕ ಸಂಕಷ್ಟದಲ್ಲಿರುವ ಸಮುದಾಯದವರೇ ವಾಸವಿದ್ದು ಬಹುತೇಕ ಕುಟುಂಬಗಳು ವಸತಿಸೌಲಭ್ಯ ಹೊಂದಿಲ್ಲ ಗುಡಿಸಲುವಾಸಿಯಾಗಿವೆ. ಮೂಲಭೂತ ಸೌಕಯ೯ಗಳು ಮರೀಚಿಕೆಯಾಗಿರುವ ಕುಗ್ರಾಮಇದಾಗಿದ್ದು. ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು …

Read More »

ಪೋಲಿಸ್ ಠಾಣೆಯ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಚಿಕ್ಕೋಡಿ: ಯುವಕನೊಬ್ಬ ಪೋಲಿಸ್ ಠಾಣೆಯ ಎದುರು ಚಾಕುವಿನಿಂದ ಕತ್ತು ಕೂಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ ಘಟನೆ ಇಲ್ಲಿನ ಅಥಣಿ ಪೊಲೀಸ್ ಠಾಣೆ ಎದುರು ನಡೆದಿದೆ. ಶಂಕರ್ ಮಾರುತಿ ಕಾಂಬಳೆ ೨೫ ಆತ್ಮಹತ್ಯೆ ಯತ್ನಿಸಿದ ಯುವಕ. ಯಾವ ಕಾರಣಕ್ಕೆ ಆತ್ಮಹತ್ಯೆ ಯತ್ನ ಮಾಡಿಕೊಂಡ ಬಗ್ಗೆ ಮಾಹಿತಿ ದೊರೆತಿಲ್ಲ. ಅಸ್ವಸ್ಥ ಯುವಕನನ್ನು ಅಥಣಿ ಪೊಲೀಸರು ಅಥಣಿ ಸರ್ಕಾರಿ ಆಸ್ಪತ್ರೆ ಗೆ ದಾಖಲು ಮಾಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆ ಗಾಗಿ ಮಹಾರಾಷ್ಟ್ರ ದ ಮಿರಜ್ ಆಸ್ಪತ್ರೆಗೆ …

Read More »

ಅಪ್ರತಿಮ ಕಲಾವಿದನ ಕುಂಚದಲ್ಲಿ ಅರಳಿದ ಅದ್ಭುತ ಕಲಾಕೃತಿಗಳು..

ಮಂಡ್ಯ: ಜಿಲ್ಲೆಯ ಕಿಕ್ಕೇರಿ ಗ್ರಾಮದವರಾದ ಪರಮೇಶ್ ರವರು ಸಮಾಜದ ಅಪ್ರತಿಮ ಕಲಾವಿದರು. ಇವರು ಕೆ.ಆರ್.ಪೇಟೆ ತಾಲ್ಲೂಕಿನ ವಳಗೆರೆಮೆಣಸದಲ್ಲಿ ಕಲಾ ಶಿಕ್ಷಕರಾಗಿ ಸರ್ಕಾರಿ ಫ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಕಲಾ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ.ಇವರ ಅದ್ಬುತ ಕಲಾ ಕುಂಚದಿಂದ ನಾಡಿನ ಉದ್ದಗಲಕ್ಕೂ ಇವರ ಕೆತ್ತನೆಯ ಮೂಲಕ ನಿರ್ಜೀವ ಕಲ್ಲುಗಳಿಗೆ ಜೀವಕಳೆ ತುಂಬಿದ್ದಾರೆ. ಇಂತಹ ಅದ್ಬುತ ಕಲೆಗಾರನನ್ನು ನಮ್ಮ ಜನಾಂಗದವರು ಕುರುಹಿನಶೆಟ್ಟಿ ಸಮಾಜದಂತಹ ಸಣ್ಣ ಸಮುದಾಯದಲ್ಲಿ ಹುಟ್ಟಿರುವ ಕಾರಣಕ್ಕೋ ಏನೋ ಇದುವರೆವಿಗೆ ಬೆಳಕಿಗೆ ಬಾರದೇ …

Read More »

ಎಡೆಬಿಡದೇ ಸುರಿಯುತ್ತಿರುವ ಮಳೆರಾಯನಿಂದ ಶಾಲಾ ಕಾಲೇಜು ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು,ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಒಂದು ದಿನದ ರಜೆ ನೀಡಲಾಗಿದೆ.ಪದವಿ ಮತ್ತು ನಂತರದ ತರಗತಿಗಳು ಎಂದಿನಂತೆ ನಡೆಯಲಿವೆ . ಬಂಟ್ವಾಳ ತಾಲ್ಲೂಕಿನ …

Read More »

ಮಹಾಮಳೆಗೆ ಗ್ರಾಮ ಪಂಚಾಯತಿ ಕಚೇರಿ ನೀರುಪಾಲು

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮುಂದುವರೆದ ಬಾರೀ ಮಳೆಯಿಂದಾಗಿ ಚಿಕ್ಕೋಡಿ ಭಾಗದ ಜನ ತತ್ತರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿಗ್ರಾಮ ಪಂಚಾಯತಿ ಒಳಗಡೆ ನೀರು ನುಗ್ಗಿದೆ.ಎಸ್ ಡಿ ಆರ್ ಎಪ್, ಭಾರತೀಯ ಸೇನೆ, ಪೊಲೀಸ್ ಇಲಾಖೆ ಸೇರಿ ಕಾರ್ಯಾಚರಣೆ ಮುಂದುವರೆದಿದ್ದು,ಬಾವನ ಸೌಂದತ್ತಿಯಲ್ಲಿ ೨೦ ಕ್ಕೂ ಹೆಚ್ಚು ಕುಟುಂಬಗಳನ್ನು ರಕ್ಷಣೆ ಮಾಡಿದ್ದಾರೆ.

Read More »

ಡೆಂಗ್ಯೂ ಜ್ವರಕ್ಕೆ ಅಗಸರಹಳ್ಳಿ ಗ್ರಾಮದ ಶಾಲಾ ಬಾಲಕಿ ಸಾವು ಮತ್ತೊಬ್ಬ ಬಾಲಕಿ ಅಸ್ವಸ್ಥ

ಮಂಡ್ಯ: ಜಿಲ್ಲೆಯ ಅಗಸರಹಳ್ಳಿ ಗ್ರಾಮದ ರವಿಕುಮಾರ್ ರಾಣಿ ದಂಪತಿಗಳ ಪುತ್ರಿ ಕೆ.ಆರ್.ಪೇಟೆ ಪಟ್ಟಣದ ಪ್ರಿಯದರ್ಶಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಾವತಿ(7) ಮೃತ ದುರ್ದೈವಿಯಾಗಿದ್ದಾರೆ.ಈಕೆಯ ಸಹೋದರಿ ಪ್ರೇರಣ(5)ಕೂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜೆಎಸ್ ಎಸ್ ಆಸ್ಪತ್ರೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹೇಮಾವತಿ ಮತ್ತು ಪ್ರೇರಣಾ ಸಹೋದರಿಯರು ಚಿಕಿತ್ಸೆ ಪಡೆಯುತ್ತಿದ್ದರು.ವೈದ್ಯರ ಸಲಹೆ ಮೇರೆಗೆ ಅಪೋಲೋ ಆಸ್ಪತ್ರೆಯಲ್ಲಿ ಸ್ಥಳಾಂತರಿಸಿ ಚಿಕಿತ್ಸೆ ಪಡೆಯುತ್ತಿದ್ದರು.ಇಂದು ಮುಂಜಾನೆ ಹೇಮಾವತಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆ …

Read More »

ಕಂದಕೂರ ಗ್ರಾಮದ ಕೊಂಡೆಮಾಯಿ ಜಾತ್ರೆಯಲ್ಲಿ ಚೇಳು ಹಿಡಿದ ಶಾಸಕ ನಾಗನಗೌಡ ಕಂದಕೂರ

ಯಾದಗಿರಿ‌ ಗುರುಮಠಕಲ್ :ನನ್ನ ಸ್ಚಗ್ರಾಮವಾಗಿರುವ ಕಂದಕೂರು ಗ್ರಾಮದಲ್ಲಿ ಜರುಗುವ ಕೊಂಡ್ಯೆಮ್ಮಾಯಿ ಜಾತ್ರೆಯು ತುಂಬಾವಿಶಿಷ್ಟವಾಗಿದೆ, ಆದ್ದರಿಂದ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದು ಶಾಸಕನಾದ ನಾನು ಗ್ರಾಮದ ಅಭಿವೃದ್ಧಿಗೆ ಬದ್ಧನಾಗಿದ್ದೆÃನೆ ಎಂದು ಶಾಸಕ ನಾಗನಗೌಡ ಕಂದಕೂರ ಬರವಸೆ ನೀಡಿದರು.ಹತ್ತಿರದ ಕಂದಕೂರಿನಲ್ಲಿ ಸೋಮವಾರ ಜರುಗಿದ ಗ್ರಾಮದೇವತೆ ಕೊಂಡ್ಯೆಮ್ಮಾಯಿಒ ಜಾತ್ರೆಯಲ್ಲಿ ರ‍್ಶನಪಡೆದು ಮಾತನಾಡಿದ ಅವರು, ಈಗಾಗಲೆ ದೇವಸ್ಥಾನದ ಅಭಿವೃದ್ಧಿಗಾಗಿ ರೂ.೧ ಕೋಟಿ ಅನುದಾನವನ್ನು ನೀಡಲಾಗಿದೆ, ಪ್ರವಾಸಿ ಕೇಂದ್ರವಾಗಿ ಬೆಟ್ಟವನ್ನು ಅಬಿವೃದ್ಧಿಪಡಿಸುವುದು, ಮೂಲಸೌರ‍್ಯಗಳನ್ನು ಕಲ್ಪಿಸುವುದು, ಉದ್ಯಾನವನದ ನರ‍್ಮಾಣ, …

Read More »