ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಯ್ಯನಹಟ್ಟಿ ಗ್ರಾಮವನ್ನು ಗುಡಿಸಲು ಮುಕ್ತ ಗ್ರಾಮವನ್ನಾಗಿಸಬೇಕೆಂದು ವಂದೇಮಾತರಂ ಜಾಗೃತಿ ವೇದಿಕೆ ತಾಲೂಕು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.ಈ ಸಂಬಂಧಿಸಿದಂತೆ ಶಾಸಕರು ಸಂಸದರು ಶೀಘ೯ವೇ ಸೂಕ್ತ ಕ್ರಮಗಳನ್ನು ಜಾರಿಗೆ ತರಬೇಕೆಂದು ಗ್ರಾಮಸ್ಥರು ವಂದೇಮಾತರಂ ಜಾಗೃತಿವೇದಿಕೆ ನೇತೃತ್ವದಲ್ಲಿ ಈ ಮೂಲಕ ಒತ್ತಾಯಿಸಿದ್ದಾರೆ.ಗ್ರಾಮದಲ್ಲಿ ತೀರಾ ಹಿಂದುಳಿದ ಜನಾಂಗದ ಕುಟುಂಬಗಳಿದ್ದು.ಆಥಿ೯ಕ ಸಂಕಷ್ಟದಲ್ಲಿರುವ ಸಮುದಾಯದವರೇ ವಾಸವಿದ್ದು ಬಹುತೇಕ ಕುಟುಂಬಗಳು ವಸತಿಸೌಲಭ್ಯ ಹೊಂದಿಲ್ಲ ಗುಡಿಸಲುವಾಸಿಯಾಗಿವೆ. ಮೂಲಭೂತ ಸೌಕಯ೯ಗಳು ಮರೀಚಿಕೆಯಾಗಿರುವ ಕುಗ್ರಾಮಇದಾಗಿದ್ದು. ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಒಮ್ಮೆಯೂಬೆಟ್ಟಿಕೊಡದ. ಜನಪ್ರತಿನಿಧಿಗಳಿಂದ ತಾಲೂಕು ಮಟ್ಟದ ಅಧಿಕಾರಿಗಳಿಂದ ತೀರಾ ನಿಲ೯ಕ್ಷಕೊಳಗಾದ ಗ್ರಾಮವಾಗಿದೆ.ಕಾರಣ ಶೀಘ೯ವೇ ತಾಲೂಕು ಆಡಳಿತ ಗ್ರಾಮಕ್ಕೆ ಬೆಟ್ಟಿಕೊಟ್ಟು ಗುಡಿಸಲು ನಿವಾಸಿಗಳಿಗೆ ಮನೆಗಳನ್ನು ಮಂಜೂರು ಮಾಡಬೇಕೆಂದು ಹಾಗೂ ಬೀದಿ ದೀಪ.ಶುದ್ಧ ಕುಡಿಯೋ ನೀರು.ರಸ್ಥೆ ನಿಮಾ೯ಣ.ಕಾಲುವೆಗಳ ನಿಮಾ೯ಣ.ನೈಮ೯ಲ್ಯತೆ ಸೇರಿದಂತೆ ಪಡಿತರ ಚೀಟಿ.ಪಡಿತರ ಸಾಮಾಗ್ರಿ ಒದಗುಸುವುದು.ವಿವಿದ ಮೂಲಭೂತ ಸೌಕಯ೯ಗಳನ್ನು ಒದಗಿಸಬೇಕಾಗಿದೆ.ಈ ಕುರಿತು ಸ್ಥಳೀಯ ಆಢಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಾಲೂಕು ಅಧಿಕಾರಿಗಳು ಕ್ರಮಜರುಗಿಸಬೇಕಿದೆ ಎಂದು ವೇದಿಕೆ ಒತ್ತಾಯಿಸಿದೆ. ನಿಲ೯ಕ್ಷಿಸಿದ್ದಲ್ಲಿ ಗ್ರಾಮಸ್ಥರ ನೇತೃದಲ್ಲಿ ವಂದೇ ಮಾತರಂ ಜಾಗೃತಿ ವೇದಿಕೆಯಿಂದ ತಾಲೂಕು ಕಛೇರಿಮುತ್ತಿಗೆ ಕಾಯ೯ಕ್ರಮ ಹಮ್ಮಿಕೊಳ್ಳ ಲಾಗುವುದೆಂದು ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಹಾಗೂ ಪದಾಧಿಕಾರಿಗಳು ಈ ಮೂಲಕ ಎಚ್ಚರಿಸಿದ್ದಾರೆ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428
bigtvnews | Hubli Dharwad News | Kannada News | Karnataka News Hubli News | News In Hubli | Local news





