admin
September 12, 2019
ಕರ್ನಾಟಕ, ಸುದ್ದಿ
ಬೆಳಗಾವಿ: ಖಾನಾಪುರ ತಾಲೂಕಿನ ಮಲಪ್ರಭೆಯ ಉಗಮ ಸ್ಥಾನದ ಸುತ್ತಲೂ ಹಾಗೂ ತಾಲೂಕಿನಾದ್ಯಂತೆ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಸೇತುವೆಗಳ ಜಲಾವೃತ, ಬೆಳೆಯ ಗದ್ದೆಗಳು ಮುಳುಗಡೆ ಜೋತೆಗೆ ಇಂದು ಮಧ್ಯಾಹ್ನದ ವರೆಗೆ ಬರೊಬ್ಬರಿ 139ಕ್ಕೂ ಅಧಿಕ ಮನೆಗಳು ಗೋಡೆ ಕುಸಿದು ಜನ ಜೀವನಕ್ಕೆ ಅಡಚಣೆ ಉಂಟು ಮಾಡಿದೆ.ತಾಲೂಕಿನ ಹೀರೆ ಅಂಗ್ರೋಳ್ಳಿ, ಮಂಗೆನಮಕೊಪ್ಪ, ಲಿಂಗನಮಠ, ಚುಂಚವಾಡ, ದೇವಲತ್ತಿ, ಸಾವರಗಾಳಿ ಹೀಗೆ ಹಲವಾರು ಗ್ರಾಮಗಳಲ್ಲಿ ಮಳೆಯ ರಭಸಕ್ಕೆ ಮನೆಯ ಗೋಡೆಗಳು …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಆರ್ಭಟಕ್ಕೆ ಜನರು ತತ್ತರಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ತಾಲೂಕಿನ ಅಲ್ಲಾಪುರ, ಗುಡೇನಕಟ್ಟಿ ಭಾಗದಲ್ಲಿ ಅಧಿಕ ಹಾನಿ ಉಂಟಾಗಿದೆ. ಮಳೆಯ ರಭಸಕ್ಕೆ ಕುಂದಗೋಳ ತಾಲೂಕಿನಲ್ಲಿ ನಿಂಗಪ್ಪ ಮಡಿವಾಳರ ಎಂಬುವವರಿಗೆ ಸೇರಿದ ಮನೆ ಕುಸಿತಗೊಂಡಿದೆ. ಇದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಅಷ್ಟೇ ಅಲ್ಲದೇ ಗುಡೇನಕಟ್ಟಿ ಭಾಗದಲ್ಲಿ ಜಮೀನಿಗೆ ಮಳೆ ನುಗ್ಗಿದ ನೀರು ನುಗ್ಗಿದ ಪರಿಣಾಮ …
Read More »
admin
September 12, 2019
ಕರ್ನಾಟಕ, ಸುದ್ದಿ
ಆನೇಕಲ್: ಕೆಎಸ್ಆರ್ಟಿಸಿ ಬಸ್ ಲೇಡಿ ಕಂಡಕ್ಟರ್ನ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕದಿಮನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ,ಹೌದು ಇಂದು ಸಂಜೆ ಆನೇಕಲ್ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳಲು ಸಿದ್ದವಾಗಿದ್ದ ಕೆಎಸ್ಆರ್ ಟಿಸಿ ಎಕ್ಸ್‌ಪ್ರೆಸ್ ಬಸ್ನ ಲೇಡಿ ಕಂಡಕ್ಟರ್ ಬಸ್ ನಿಲ್ದಾಣದ ಕಚೇರಿಗೆ ಹೋಗಿ ಎಂಟ್ರಿ ಮಾಡಿಸಿಕೊಳ್ಳಲು ಹೋದ ಸಂಧರ್ಭದಲ್ಲಿ ಬಸ್ ನಲ್ಲಿ ಇಟ್ಟಿದ್ದ ಬ್ಯಾಗ್ ಅನ್ನು ಗಮನಿಸಿದ ಕದಿಮನೊಬ್ಬ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಅಂಗನವಾಡಿ ಕೇಂದ್ರದಲ್ಲಿ ಹೋಬಳಿಯ ಎಲ್ಲಾ ಪಲಾನುಭಾವಿಗಳಿಗೆ ಬಾಂಡ್ ವಿತರಿಸುವುದಾಗಿ ಎಲ್ಲರೂ ಮಕ್ಕಳೊಂದಿಗೆ ಅಂಗನವಾಡಿ ಕೇಂದ್ರಕ್ಕೆ 9 ಗಂಟೆಗೆ ಹಾಜರಾಗಬೇಕು ಎಂದು ಅಧಿಕಾರಿಗಳು ತಿಳಿದಿದ್ದಾರೆ.ಆದರೆ ಜಿಡಿ ಜಿಡಿ ಮಳೆಯಲ್ಲಿಯೋ ಮಕ್ಕಳೊಂದಿಗೆ ಬಂದಿರುವ ತಾಯಿ ಮಕ್ಕಳಿಗೆ ಸಕಾಲಕ್ಕೆ ಅಧಿಕಾರಿಗಳು ಬಂದು ಭಾಗ್ಯಲಕ್ಷ ಬಾಂಡ್ ವಿತ್ತರಿಸದ ಕಾರಣ ಆಕ್ರೋಷ ವ್ಯೆಕ್ತಪಡಿಸಿದರು.ಅದಿಕಾರಗಳನ್ನು ಪೋನ್ ಮೂಲಕ ಸಂಪರ್ಕಿಸಿದಾಗ ಬೇಜವ್ದಾರಿ ಉತ್ತರ ನೀಡಿ ನೀವೇನು ನಮ್ಮಗೆ ಸಂಬಳ ಕೊಡುವುದಿಲ್ಲ ಬರುವವರೆಗೂ ಕಾಯಿರಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಒಣಗುತ್ತಿರುವ ಕಬ್ಬು, ಬಾಳೆ, ಅಡಿಕೆ ಮತ್ತು ಇತರೆ ಬೆಳೆಗಳಿಗೆ ಹೇಮಾವತಿ ಜಲಾಶಯ ಯೋಜನೆಯ ಗೊರೂರು ಜಲಾಶಯದಿಂದ ನೀರು ಹರಿಸಿ ರೈತರನ್ನು ಸಂಕಷ್ಠದಿಂದ ಪಾರು ಮಾಡುವಂತೆ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ ಅವರ ಕಛೇರಿಗೆ ಮುತ್ತಿಗೆ ಹಾಕಿಒತ್ತಾಯಿಸಿದ ರೈತ ಮುಖಂಡರು ಕೃಷ್ಣರಾಜಸಾಗರ ಜಲಾಶಯದಿಂದ ಮಾತ್ರ ನೀರನ್ನು ಹರಿಸಿ ಗೊರೂರು ಜಲಾಶಯದ ವ್ಯಾಪ್ತಿಯ ರೈತರನ್ನು ಮಲತಾಯಿ ಮಕ್ಕಳಂತೆ ಕಾಣುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ರೈತಮುಖಂಡರಾದ ಮುದುಗೆರೆ ರಾಜೇಗೌಡ, …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಶ್ರೀ ಚನ್ನಬಸವೇಶ್ವರ ಕಲ್ಲುಮಠದ ಶ್ರೀ ಡಾ.ವಿರೂಪಾಕ್ಷರಾಜಯೋಗಿಗಳು ವೀರಶೈವ ಲಿಂಗಾಯತರತ್ನ ಸಂಶೋಧನಾ ಕೃತಿಯನ್ನು ಹೊರತಂದಿದ್ದು ವೀರಶೈವ ಲಿಂಗಾಯತ ಒಂದೇ ಧರ್ಮವಾಗಿದ್ದು ಧರ್ಮವಿಭಜನೆಗೆ ಮುಂದಾಗಿರುವ ದ್ರೋಹಿಗಳು ಬಹಿರಂಗ ಚರ್ಚೆಗೆ ಬಂದರೆ ದಾಖಲೆಗಳ ಸಮೇತವಾಗಿ ಒಂದೇ ಧರ್ಮವೆಂದು ಸಾಬೀತು ಪಡಿಸುತ್ತೇನೆ ಎಂದು ಶ್ರೀವಿರೂಪಾಕ್ಷ ರಾಜಯೋಗಿಗಳು ಸವಾಲು ಹಾಕಿದ್ದಾರೆ. ವೀರಶೈವ ಧರ್ಮದ ಬಗ್ಗೆ ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ನಿರ್ಧಾರವನ್ನು ಸ್ವಾಗತಿಸಿರುವ ರಾಜಯೋಗಿಗಳು ಮಾಜಿಸಚಿವ ಎಂ.ಬಿ.ಪಾಟೀಲ್ ಧರ್ಮದ್ರೋಹಿಯಾಗಿದ್ದಾರೆ. ವೀರಶೈವ ಧರ್ಮವನ್ನು ವೀರಶೈವ ಲಿಂಗಾಯತ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಮೈಸೂರಿನ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ವತಿಯಿಂದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಐ.ಎ.ಎಸ್. ಅಧಿಕಾರಿಯಾಗಿ ಆಯ್ಕೆಯಾದ ಮಂಡ್ಯ ಮಿಮ್ಸ್ ನ ಯುವವೈದ್ಯ ಡಾ. ನಾಗಾರ್ಜುನಗೌಡ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಉತ್ತಮ ಸೇವಾ ಸಾಧನೆ ಮಾಡಿದ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, ವಿಶ್ರಾಂತ ಐ.ಎಫ್.ಎಸ್. ಅಧಿಕಾರಿ ಎ.ಎಂ. ಅಣ್ಣಯ್ಯ, ಆಹಾರ ವಿಜ್ಞಾನಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಯ್ಯನಹಟ್ಟಿ ಗ್ರಾಮವನ್ನು ಗುಡಿಸಲು ಮುಕ್ತ ಗ್ರಾಮವನ್ನಾಗಿಸಬೇಕೆಂದು ವಂದೇಮಾತರಂ ಜಾಗೃತಿ ವೇದಿಕೆ ತಾಲೂಕು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.ಈ ಸಂಬಂಧಿಸಿದಂತೆ ಶಾಸಕರು ಸಂಸದರು ಶೀಘ೯ವೇ ಸೂಕ್ತ ಕ್ರಮಗಳನ್ನು ಜಾರಿಗೆ ತರಬೇಕೆಂದು ಗ್ರಾಮಸ್ಥರು ವಂದೇಮಾತರಂ ಜಾಗೃತಿವೇದಿಕೆ ನೇತೃತ್ವದಲ್ಲಿ ಈ ಮೂಲಕ ಒತ್ತಾಯಿಸಿದ್ದಾರೆ.ಗ್ರಾಮದಲ್ಲಿ ತೀರಾ ಹಿಂದುಳಿದ ಜನಾಂಗದ ಕುಟುಂಬಗಳಿದ್ದು.ಆಥಿ೯ಕ ಸಂಕಷ್ಟದಲ್ಲಿರುವ ಸಮುದಾಯದವರೇ ವಾಸವಿದ್ದು ಬಹುತೇಕ ಕುಟುಂಬಗಳು ವಸತಿಸೌಲಭ್ಯ ಹೊಂದಿಲ್ಲ ಗುಡಿಸಲುವಾಸಿಯಾಗಿವೆ. ಮೂಲಭೂತ ಸೌಕಯ೯ಗಳು ಮರೀಚಿಕೆಯಾಗಿರುವ ಕುಗ್ರಾಮಇದಾಗಿದ್ದು. ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಪರಿಶಿಷ್ಠಜಾತಿ ಮತ್ತು ಪರಿಶಿಷ್ಠ ವರ್ಗಗಳ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕಮಕಾಕ್ಷಿ ಉಪಾಧ್ಯಕ್ಷ ಸ್ಥಾನಕ್ಕೆ ಸಿ.ರವಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪಾತ್ರವನ್ನು ಸಲ್ಲಿಸದ ಕಾರಣಚುನಾವಣಾಧಿಕಾರಿಗಳಾದ ಎನ್.ಎನ್.ರವಿ ಅವರುಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಸಿದರು. ಸಂಘದ ನೂತನ ಅಧ್ಯಕ್ಷೆಯಾಗಿ ವನಜಾಕ್ಷಿ ನಾಗರಾಜು ಅವಿರೋಧವಾಗಿ ಆಯ್ಕೆಯಾದರು.ಉಳಿದಂತೆ ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ ಐಕನಹಳ್ಳಿ ಚೆಲುವರಾಜು, ಮಲ್ಲೇನಹಳ್ಳಿ ಮಲ್ಲೇಶ್, ಚೌಡೇನಹಳ್ಳಿ ಜ್ಯೋತಿಲಕ್ಷ್ಮಿ, ನಾಟನಹಳ್ಳಿ ಕವಿತ, …
Read More »
admin
September 12, 2019
ಕರ್ನಾಟಕ, ಸುದ್ದಿ
ಜೈ ಶ್ರೀ ಗುರುದೇವ್ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಾಗರಪಂಚಮಿ ಹಬ್ಬದ ಪ್ರಯುಕ್ತ ಇಂದು ಬೆಳಗ್ಗೆ ಅಭಿಷೇಕ, ಹೋಮ ವಿಶೇಷ ಪೂಜೆಯು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.
Read More »