ಆನೇಕಲ್: ಕೆಎಸ್ಆರ್ಟಿಸಿ ಬಸ್ ಲೇಡಿ ಕಂಡಕ್ಟರ್ನ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕದಿಮನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ,ಹೌದು ಇಂದು ಸಂಜೆ ಆನೇಕಲ್ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳಲು ಸಿದ್ದವಾಗಿದ್ದ ಕೆಎಸ್ಆರ್ ಟಿಸಿ ಎಕ್ಸ್‌ಪ್ರೆಸ್ ಬಸ್ನ ಲೇಡಿ ಕಂಡಕ್ಟರ್ ಬಸ್ ನಿಲ್ದಾಣದ ಕಚೇರಿಗೆ ಹೋಗಿ ಎಂಟ್ರಿ ಮಾಡಿಸಿಕೊಳ್ಳಲು ಹೋದ ಸಂಧರ್ಭದಲ್ಲಿ ಬಸ್ ನಲ್ಲಿ ಇಟ್ಟಿದ್ದ ಬ್ಯಾಗ್ ಅನ್ನು ಗಮನಿಸಿದ ಕದಿಮನೊಬ್ಬ ಬ್ಯಾಗ್ ಕದ್ದು ಎಸ್ಕೇಪ್ ಆಗುವಾಗ ಲೇಡಿ ಕಂಡಕ್ಟರ್ ಗಮಿನಿಸಿ ಅವನನ್ನು ಹಿಂಬಾಲಿಸಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಕಪಾಲ ಮೋಕ್ಷ ಮಾಡಿದ್ದಾರೆ, ಇನ್ನು ಬ್ಯಾಗ್ ನಲ್ಲಿ ಮೊಬೈಲ್ ಪೋನ್ ಸೇರಿದಂತೆ ಬೆಲೆ ಬಾಳುವ ವಸ್ತುಗಳಿದ್ದು ಕಳ್ಳ ಸಂಜೆ ಶಾಲಾ ಕಾಲೇಜು ಹಾಗು ಕೆಲಸ ಬಿಟ್ಟ ಸಂಧರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಹೆಚ್ಚು ಜನರಿರುವುದನ್ನು ಗಮನಿಸಿ ಬ್ಯಾಗ್ ಕದ್ದು ಎಸ್ಕೇಪ್ ಆಗಲು ಮುಂದಾಗಿದ್ದು ಘಟನೆ ಆನೇಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





