Breaking News

ಹುಬ್ಬಳ್ಳಿ

ಮಟನ್ ಶಾಪ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆಯೋ ಅಥವಾ ಆತ್ಮಹತ್ಯೆಯೋ..?

ಹುಬ್ಬಳ್ಳಿ: ಮಾಂಸದಂಗಡಿಯಲ್ಲಿಯೇ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆಹುಬ್ಬಳ್ಳಿಯ ಬಾಣತಿಕಟ್ಟೆಯ ಮೆಹಬೂಬ್ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ಮುಸವದತ್ತಿ ತಾಲ್ಲೂಕಿನ ಬೆಳವಾಡಿ ಗ್ರಾಮದ ಅಸ್ಫಾಕ್ ಬೇಪಾರಿ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಮನೆಯಲ್ಲಿ ಜಗಳ ಮಾಡಿಕೊಂಡು ಹುಬ್ಬಳ್ಳಿಯಲ್ಲಿರುವ ತಮ್ಮ ಸಂಬಂಧಿಯ ಮನೆಗೆ ಬಂದಿದ್ದ. ಆದ್ರೆ ಸಂಬಂಧಿಯ ಮಟನ್ ಶಾಪ್ ನಲ್ಲಿಯೇ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಹೊಟ್ಟೆಗೆ ಹಾಗೂ ಕುತ್ತಿಗೆಗೆ ಚಾಕು ಹಾಕಿಕೊಂಡು ಸಾವನ್ನಪಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. …

Read More »

ಹಿಜಾಬ್ ಪ್ರಕರಣ ಶೀಘ್ರವೇ ಇತ್ಯರ್ಥವಾಗಲಿ : ಶೆಟ್ಟರ್

ಹುಬ್ಬಳ್ಳಿ: ಹಿಜಾಬ್ ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ದ್ವಿ ಸದಸ್ಯ ಪೀಠ ಒಬ್ಬ ನ್ಯಾಯಾಧೀಶರು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದರೇ ಮತ್ತೊಬ್ಬರು ಹೈಕೋರ್ಟ್‌ ಆದೇಶವನ್ನು ತಿರಸ್ಕಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಾಂವಿಧಾನ ಪೀಠ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತೀರ್ಪು ಹೊರಬರಬೇಕಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ದ್ವಿ …

Read More »

ಹುಬ್ಬಳ್ಳಿಯಿದ ದೆಹಲಿಗೆ ನವೆಂಬರ್​14 ರಿಂದ ನೇರ ವಿಮಾನ ಸೇವೆ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ಅವಳಿ ನಗರದ ಜನರ ಬಹುದಿನಗಳ‌ ಕನಸು ನನಸಾಗುವ ದಿನ ಹತ್ತಿರವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂಡಿಗೋ ಏರ್‌ ಲೈನ್ಸ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹುಬ್ಬಳ್ಳಿಯಿಂದ ದೆಹಲಿಗೆ ನಿತ್ಯ ನೇರ ವಿಮಾನ ಸೇವೆ ಪ್ರಾರಂಭಿಸುವಂತೆ ಕೆಲವು ದಿನಗಳ ಹಿಂದೆ ಕೋರಿಕೊಳ್ಳಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು ಇದೇ ನವೆಂಬರ್‌ 14, 2022ರಿಂದ …

Read More »

ಹುಬ್ಬಳ್ಳಿ ಯಲ್ಲಿ ಖೋಟಾ ನೋಟಿನ ಹಾವಳಿ: ಮೂವರನ್ನು ಬಂಧನ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಷ್ಟು ದಿನ ಬಂದ್ ಆಗಿದ್ದ ಖೋಟಾ ನೋಟ್ ಚಲಾವಣೆ ಮತ್ತೇ ಮುನ್ನೆಲೆಗೆ ಬಂದಿದೆ. ಪ್ರಖ್ಯಾತಿ ಮತ್ತು ಕುಖ್ಯಾತಿಗಳನ್ನು ಶ್ರೇಣೀಕೃತ ಹಂತದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ಹುಬ್ಬಳ್ಳಿಯಲ್ಲಿ ಖೋಟಾ ನೋಟಿನ ಹಾವಳಿ ಮತ್ತೇ ಸದ್ದು ಮಾಡುತ್ತಿದೆ. ಹುಬ್ಬಳ್ಳಿಯ ಚನ್ನಮ್ಮ ಬಸ್ ನಿಲ್ದಾಣದ ಬಳಿ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮೂವರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಶಿವಾನಂದ ಕಾರಜೋಳ, ವಿಜಯಪುರದ ಅಡವಿ …

Read More »

ಹುಬ್ಬಳ್ಳಿ-ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ಮತ್ತೆ ಪ್ರಾರಂಭ

ಹುಬ್ಬಳ್ಳಿ; ಹುಬ್ಬಳ್ಳಿ-ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ಮತ್ತೆ ಪ್ರಾರಂಭವಾಗಲಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅ. 11ರಂದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದು ಇದು ಸಾಪ್ತಾಹಿಕ ರೈಲಾಗಿದೆ. ಇದರೊಂದಿಗೆ ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ‘ಸವಾಯಿ ಗಂಧರ್ವರ ಸ್ಮರಣಾರ್ಥ’ ಅಂಚೆಚೀಟಿ ಬಿಡುಗಡೆ ಮಾಡುವರು. ಮಧ್ಯಾಹ್ನ 12.30ಕ್ಕೆ . …

Read More »

ಬಸ್ ಪಲ್ಟಿ : ಚಾಲಕ ಸಾವು

ಹುಬ್ಬಳ್ಳಿ: ಟೈರ್ ಸ್ಫೋಟಗೊಂಡು ಕೆಎಸ್​​ಆರ್​ಟಿಸಿ ಬಸ್ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಶೆರೆವಾಡ ಸಮೀಪ ನಡೆದಿದೆ. ಬಸ್ಸಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. KA 25 F 3097 ಸಂಖ್ಯೆಯ ಬಸ್ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾಗ ಶೆರೆವಾಡ ಗ್ರಾಮದ ಬಳಿ ಏಕಾಏಕಿ ಟೈಯರ್ ಬ್ಲಾಸ್ಟ್ ಆಗಿ ಬಸ್ ಪಲ್ಟಿಯಾಗಿದೆ‌. ಬಸ್ ಪಲ್ಟಿಯಾಗುತ್ತಿದಂತೆ ಚಾಲಕ ಬಸ್​ನಡಿ ಸಿಲುಕಿದ್ದಾರೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. …

Read More »

ಅಪಘಾತದಲ್ಲಿ ವಿದ್ಯಾರ್ಥಿ ಸಾವು :ನಾಲ್ವರ ರೋಗಿಗಳಿಗೆ ಮರುಜನ್ಮ ನೀಡಿದ ಪೋಷಕರು

ಹುಬ್ಬಳ್ಳಿ : ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ BRTS ಡಿವೈಡರ್ ಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಪವನ್ ಕಮ್ಮರ್ ಮೆದುಳು ನಿಷ್ಕ್ರಿಯಗೊಂಡು ಅಸುನೀಗಿದರು , ಹೆಲ್ಮೆಟ್ ದರಿಸಿದೆ ವೇಗವಾಗಿ ಹೋಗಿ ಆಕ್ಸಿಡೆಂಟ್ ಆಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೂಡಲೇ ಪವನ್ ಕಮ್ಮರ್ ನನ್ನು ಸ್ಥಳೀಯರು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ದಾಖಲು ಮಾಡಿದ್ದರು ಈ ವೇಳೆ ವೈದ್ಯರ ಮನವಿ ಮೇರೆಗೆ ಪವನ್ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ನಾಲ್ವರು …

Read More »

ಸಂಭ್ರಮದ ಈದ್ ಮಿಲಾದ್ ಮೆರವಣಿಗೆ: ಸೌಹಾರ್ದತೆಯಿಂದ ಹೆಜ್ಜೆ ಹಾಕಿದ ನಾಗರಿಕರು

ಹುಬ್ಬಳ್ಳಿ : ಹಳೆ ಹುಬ್ಬಳ್ಳಿಯ ವಿಶಾಲ್ ನಗರ ಜಮಾತ್ ಮಜ್ಜಿದ್ ಮುಖಂಡ ಮುನ್ನಾ ಲಕ್ಕುಂಡಿ ನೇತೃತ್ವದಲ್ಲಿ ಜರುಗಿದ ಈದ್ ಮಿಲಾದ್ ಉನ್ ನಬಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು ಹುಬ್ಬಳ್ಳಿಯ ವಿಶಾಲ್ ನಗರ ಹಾಗೂ ಸುತ್ತಮುತ್ತ ನೂರಾರು ಯುವಕರು ಶರಬತ್ ಹಾಗೂ ಸಿಹಿ ಹಂಚುತ್ತ ಸರ್ವಧರ್ಮದ ಮುಖಂಡರ ಜೊತೆಗೆ ಹೆಜ್ಜೆ ಹಾಕಿದರು. ಸ್ಥಳೀಯ ಜಮಾತ್ ನ ಮುಖಂಡ ಮುನ್ನಾ ಲಕ್ಕುಂಡಿ,ಮುಸ್ತಾಕ್ ಸೊಂಡಕೆ, ನಿಸಾರ್ ಅಹಮದ್ ಖಾಜಿ ,ನೂರ್ ಅಹ್ಮದ್ ಖತೀಬ್, ಫಾರೂಕ್ …

Read More »

3 ತಿಂಗಳ ಕಳೆದರು ಮೀನು ಮಾರುಕಟ್ಟೆ ಉದ್ಘಾಟನೆಗೆ ಭಾಗ್ಯವಿಲ್ಲ

ಹುಬ್ಬಳ್ಳಿ: ದೇವರು ವರ ಕೊಟ್ಟರೂ ಪೂಜಾರಿ ಕೊಟ್ಟಿಲ್ಲ ಎಂಬ ಗಾದೆ ಮಾತು ವಾಣಿಜ್ಯ ನಗರಿ ಹುಬ್ಬಳ್ಳಿಯ ಮೀನು ಮಾರುಕಟ್ಟೆ ಉಪಯೋಗಕ್ಕೆ ಸಂಬಂಧಿಸಿದಂತೆ ಸತ್ಯವಾಗುತ್ತಿದೆ. ಹುಬ್ಬಳ್ಳಿ ಹೈ-ಟೆಕ್ ಮೀನು ಮಾರುಕಟ್ಟೆ ನಿರ್ಮಾಣ ಆಗಿ ಬರೋಬ್ಬರಿ ಮೂರು ತಿಂಗಳು ಮುಗಿದಿದೆ. ಆದರೆ ಇದುವರೆಗೂ ಪಾಲಿಕೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಮೀನು ಮಾರುಕಟ್ಟೆಯನ್ನು ಹಸ್ತಾಂತರ ಮಾಡಿಕೊಂಡು ಉದ್ಘಾಟನೆಗೆ ಮುಂದಾಗಿಲ್ಲ. ಹೀಗಾಗಿ ನೂರಾರು ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುವಂತಾಗಿದೆ. ಸ್ಮಾರ್ಟ್ ಸಿಟಿ ಯೋಜನೆ …

Read More »

ಮಳೆ ಅಬ್ಬರಕ್ಕೆ ಸಿಲುಕಿದ ಬಸ್ : ಸ್ಥಳೀಯರಿಂದ ಪ್ರಯಾಣಿಕರ ಜೀವ ರಕ್ಷಣೆ

ಹುಬ್ಬಳ್ಳಿ : ಮಳೆಯ ಅಬ್ಬರಕ್ಕೆ ಅರ್ಧ ಬಸ್ ಸಂಪೂರ್ಣವಾಗಿ ಜಲಾವೃತವಾದ ಘಟನೆ ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಮದ ಕಡೆ ನಡೆದಿದ್ದು, ಬಸ್ ನೀರಿನಲ್ಲಿ ಸಿಲುಕಿದ್ದು, ಪ್ರಯಾಣಿಕರು ಪಾರಾಗಿದ್ದಾರೆ. ಅಣ್ಣಿಗೇರಿ ಬಳಿಯ ಸಾಸ್ವಿಹಳ್ಳಿ ಹತ್ತಿರದ ಬಸ್‌ ಕಷ್ಟಕ್ಕೆ ಸಿಲುಕಿಗೊಂಡಿದೆ. ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಸಂಕಷ್ಟಕ್ಕೆ ಸಿಲುಕಿದೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರಿಂದ ಬಸ್ ನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ. ಟ್ರ್ಯಾಕ್ಟರ್ ಮೂಲಕ ಬಸ್ ಎಳೆದು ಸ್ಥಳೀಯರು ಎಲ್ಲರನ್ನ ಸುರಕ್ಷಿತವಾಗಿಸಿದ್ದಾರೆ.

Read More »