Breaking News

ಜಿಲ್ಲೆ

ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಬಿದ್ದ 3 ವರ್ಷದ ಗಂಡು ಚಿರತೆ

ರೈತರ ಮನೆಗಳು ಹಾಗೂ ಕೊಟ್ಟಿಗೆಯ ಮೇಲೆ ದಾಳಿ ನಡೆಸಿ ಆಡು ಕುರಿಗಳು ಸೇರಿದಂತೆ ದನಕರುಗಳನ್ನು ತಿಂದು ಪರಾರಿಯಾಗಿ ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯು ಇಂದು ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಇಟ್ಟಿದ್ದ ಬೋನಿಗೆ ಬಿದ್ದು ಸೆರೆಯಾಗಿದೆ. ಮಂಡ್ಯ ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ಪುಣ್ಯಕ್ಷೇತ್ರ ಶ್ರೀ ಭೂವರಹಾನಾಥ ದೇವಸ್ಥಾನಕ್ಕೆ ಕೇವಲ ಎರಡು ಕಿ.ಮೀ ದೂರದಲ್ಲಿ ಈ ಘಟನೆಯು ನಡೆದಿದೆ. ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಬಿದ್ದಿರುವ ಚಿರತೆಯನ್ನು ಮಲೈ ಮಹದೇಶ್ವರ ವನ್ಯಜೀವಿ …

Read More »

ಆಸ್ತಿಗಾಗಿ ಬಿಳುತ್ತಿದ್ವು ಎರಡು ಹೆಣ, ಅದೃಷ್ಟಾವಶ ಪ್ರಾಣಾಪಾಯದಿಂದ ಪಾರು.

ಆಸ್ತಿ ವಿವಾದದ ಹಿನ್ನಲೆಯಲ್ಲಿ ಇಬ್ಬರ ರೈತರ ಜೊತೆಗೆ ಮಾಜಿ ಯೋದನ ಕೊಲೆಗೆ ಯತ್ನ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ, ನಿನ್ನೆ ಸಂಜೆ ಹೊಲದಲ್ಲಿ ಎಂದಿನಂತೆ ಕೆಲಸ ಮಾಡುವಾಗ ಮಾರಕಾಸ್ತ್ರಗಳಿಂದ ಉಳಪ್ಪ ಮುಕಾಶಿ, ಅಶೋಕ ಮುಕಾಶಿ, ಮಡಿವಾಳ ಮುಕಾಶಿ, ಅಶೋಕ ಸೇರಿದಂತೆ ೧೫ ಜನರ ಗುಂಪು ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿ‌ಆರೋಪಿಗಳು ಪರಾರಿಯಾಗಿದ್ದರು, ಹಲ್ಲೆಗೊಳಗಾದ ಅಶೋಕ ಪಾಟೀಲ, ಶಿವನಗೌಡ ಪಾಟೀಲ ಇಬ್ಬರು ಇಗ ಬೆಳಗಾವಿಯ …

Read More »

ರಾಷ್ಟ್ರೀಯ ಪಕ್ಷಿ ನವಿಲನ್ನು ಭೇಟೆಯಾಡುತ್ತಿದ್ದವರ ಬಂಧನ

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಜಾಗಿನಕೆರೆ ಬಳಿ ಕ್ತಾಟರ್ ಬಿಲ್ಲನ್ನು ಬಳಸಿ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಭೇಟೆಯಾಡುತ್ತಿದ್ದ ನಾಗಮಂಗಲ ತಾಲ್ಲೂಕಿನ ಶಿಕಾರಿಪುರದ ನಾಲ್ವರು ಯುವಕರ ಪೈಕಿ ಇಬ್ಬರನ್ನು ಕೆ.ಆರ್.ಪೇಟೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಮತ್ತು ಸಿಬ್ಬಂಧಿಗಳು ಮೃತ ನವಿಲು, ಟಿವಿಎಸ್ ಸ್ಕೂಟರ್ ಸಮೇತವಾಗಿ ಬಂಧಿಸಿದ್ದಾರೆ. ಶಿಕಾರಿಪುರದ ಎಲ್ಲೇಶ್(19) ಮತ್ತು ಪ್ರಭು(20) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಬಲೆ ಬೀಸಿದ್ದಾರೆ.

Read More »

ವಿವಿಧ ಇಲಾಖೆಗಳಿಂದ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ

ಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್. ಪೇಟೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ 32ನಿರ್ದೇಶಕರ ನೂತನ ಕಾರ್ಯಕಾರಿ ಮಂಡಳಿಗೆ ಪಶುಸಂಗೋಪನೆ ಮತ್ತು ಶಿಕ್ಷಣ ಇಲಾಖೆಯನ್ನು ಹೊರತುಪಡಿಸಿ 25 ಸದಸ್ಯರು ವಿವಿಧ ಇಲಾಖೆಗಳಿಂದ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಡಾ.ನಾರಾಯಣಗೌಡ ಅವರು ನೂತನ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಿದರು. ಜೂನ್ 13ರಂದು ನಡೆಯುವ ಚುನಾವಣೆಯಲ್ಲಿ ಉಳಿದ ಏಳು ಸ್ಥಾನಗಳಿಗೆ ಆಯ್ಕೆಯು ನಡೆಯಲಿದೆ.ಕೃಷ್ಣರಾಜಪೇಟೆ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘವು ಸಂಘದ ಅಧ್ಯಕ್ಷ ಎನ್.ಜಯರಾಮು ಅವರ …

Read More »

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟಿಸಿದವರ ಬಂಧನ.

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟಿಸಿದವರನ್ನು ಕೋಲಾರದಲ್ಲಿ ಪೋಲಿಸರು ಬಂಧನ ಮಾಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಚೆನ್ನೈ 75 ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ತಿದ್ದುಪಡಿ ನಿರ್ಧಾರವನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸುತ್ತಿದ್ದ ನೂರಾರು ರೈತರನ್ನು ಪೊಲೀಸರು ಬಂಧಿಸಿದ್ದಾರೆ.

Read More »

ರಾಮನಗರದಲ್ಲಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗೆ ವಿರೋಧ

ರಾಮನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಲಕ್ಷ್ಮಣ್ ಸ್ವಾಮಿ ನೇತೃತ್ವದಲ್ಲಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಲವು ರೈತರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮೈಸೂರು- ಬೆಂಗಳೂರು ಹೆದ್ದಾರಿ‌ ತಡೆದು ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಿದ್ದುಪಡಿ ವಾಪಸ್ಸು ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಪ್ರತಿಭಟಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಕೆಲ ಗಂಟೆಗಳ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

Read More »

ದೇವರನ್ನು ರಕ್ಷಿಸಿ ಕೊಡಿ ಎಂದು ಬಿಕ್ಕಿ ಬಿಕ್ಕಿ ಅತ್ತ ನಿವೃತ್ತ ಎಎಸೈ

ಜನರು ತಮ್ಮ ರಕ್ಷಣೆಗಾಗಿ ದೇವರ ಮೊರೆ ಹೋಗೋದು ಕಾಮನ್. ಆದರೆ ಇಲ್ಲೊಬ್ಬ ನಿವೃತ್ತ ಪೊಲಿಸ್ ಅಧಿಕಾರಿ ದೇವರ ರಕ್ಷಣೆಗಾಗಿ ಜನರ ಮೊರೆ ಹೋಗಿದ್ದಾನೆ. ತನ್ನ ದೇವರನ್ನ ರಕ್ಷಿಸಿ ಕೊಡಿ ಎಂದು ಅಂಗಲಾಚುತಿದ್ದಾನೆ. ತನ್ನ ಆರಾಧ್ಯ ದೇವತೆ ” ಸಂತೋಷಿ ಮಾತೆ”ಯನ್ನ ಕಾಪಾಡಿ ಎಂದು ಬಿಕ್ಕಿ ಬಿಕ್ಕಿ ಅಳುತಿದ್ದಾನೆ. ಅಂದಹಾಗೆ ಈ ಅಪರೂಪದ ಘಟನೆ ನಡೆದಿರೋದು ತುಮಕೂರು ಜಿಲ್ಲೆ ತಿಪಟೂರಿನ ಆದಿನಾಯಕನಹಳ್ಳಿಯಲ್ಲಿ. ನಿವೃತ್ತ ಎ.ಎಸ್.ಐ ರಾಮ್ ಪ್ರಸಾದ್ ಎನ್ನುವವರೇ ದೇವರ ರಕ್ಷಣೆಗಾಗಿ …

Read More »

ಪ್ರೀತಿಸಿದ್ದ ಯುವತಿಗೆ ಮದುವೆ ನಾಟಕ ಮಾಡಿ ಕೈ ಕೊಟ್ಟ ಪ್ರೇಮಿ

ಯುವಕನೊಬ್ಬ ಪ್ರೀತಿಸಿ ಮದುವೆಯಾದ ಯುವತಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದು ಕೈಕೊಟ್ಟು ಹುಬ್ಬಳ್ಳಿಯಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷ ದಿಂದ ಯುವತಿಯನ್ನು ಲವ್ ಮಾಡುತ್ತಿದ್ದ ನವಲಗುಂದ ನಿವಾಸಿ ಕಲ್ಮೇಶ ಬೋರಶೆಟ್ಟಿ ಎಂಬುವ ಯುವಕ ಕಾಡಿ ಬೇಡಿ ಯುವತಿಯನ್ನ ಲವ್ ಮಾಡಿದ್ದ. ಮದುವೆಯಾಗುವದಾಗಿ ನಂಬಿಸಲಿಕ್ಕೆ ವಿಷ ಸಹಿತ ಕುಡಿದಿದ್ದ. ಅಲ್ಲದೇ ಬೇರೆ ಹುಡುಗರ ಜತೆಗೆ ಯುವತಿ ಮದುವೆಯಾಗಲು ಬಿಡುತ್ತಿರಲಿಲ್ಲ ಎಂಬುವಂತ ಮಾಹಿತಿಯನ್ನು ನೊಂದ ಯುವತಿ ಸಾಮಾಜಿಕ …

Read More »

ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ನಿನ್ನೆ ಬೈಕ್ ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ದಂಪತಿ ಸೇರಿ 3ಜನ ದುರ್ಮರಣ ಹೊಂದಿದ್ದರು. ಚಿತ್ರದರ್ಗ ಜಿಲ್ಲೆಯ ಹಿರೆಗುಂಟನೂರು ಗ್ರಾಮದ ಬಳಿ ಅಪಘಾತಸಂಭವಿಸಿತ್ತು. ಮೈನ್ಸ್ ತುಂಬಿದ ಲಾರಿ ಹರಿದ ಕಾರಣ ಮಾಂತೇಶ್ ನಾಯ್ಕ್ (30), ಪತ್ನಿ ದೀಪಾಬಾಯಿ (23), ಚೇತನ್ (10).ಮೃತ ಪಟ್ಟಿದ್ದರು. ಅಪಘಾತ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಸರಕಾರಿ ನೌಕರಿ ನೀಡಲು ಓತ್ತಾಯಿಸಿ ಇಂದು ಭೀಮಸಮುದ್ರ ಲಂಭಾಣಿ ಹಟ್ಟಿ ಗ್ರಾಮ ನಿವಾಸಿಗಳು ಮತ್ತು ಸಂಬಂದಿಕರಿಂದ ಜಿಲ್ಲಾಧಿಕಾರಿಯ …

Read More »

ಚಿರತೆ ದಾಳಿಗೆ ಮೂರು ಮೇಕೆ ಬಲಿ

ಚಿರತೆ ದಾಳಿಗೆ ಮೂರು ಮೇಕೆ ಬಲಿಯಾಗಿರುವ ಘಟನೆ ತುಮಕೂರು‌ ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿದೆ. ಕಳೆದ ರಾತ್ರಿ ಚಿಕ್ಕಣ್ಣ ಎಂಬ ರೈತನ ಕೊಟ್ಟಿಗೆ ನುಗ್ಗಿದ ಚಿರತೆ ಮೂರು ಮೇಕೆಗಳನ್ನ ಕೊಂದು ಹಾಕಿದ. ಹೊಲ ಗದ್ದೆ ತೋಟಗಳಲ್ಲಿ‌ ದಾಳಿ ಮಾಡುತ್ತಿದ್ದ ಚಿರತೆಗಳು ಇದೀಗ ಗ್ರಾಮಕ್ಕೆ ಲಗ್ಗೆ ಇಡುತ್ತಿವೆ. ಇದರಿಂದ ಗ್ರಾಮಸ್ಥರು ಭಯಬೀತರಾಗಿದ್ದಾರೆ..ಅರಣ್ಯದಲ್ಲಿ ಆಹಾರ ಸಿಗದೆ ಪ್ರಾಣಿಗಳು ಹಳ್ಳಿ,ಪಟ್ಟಣಗಳತ್ತ ಲಗ್ಗೆ ಇಡುತ್ತಿವೆ. ಅರಣ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read More »