Breaking News

ಬೆಂಗಳೂರು

ಹಿಜಾಬ್ ವಿವಾದ : ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ರಾಜ್ಯದ ಶಾಲಾ ಕಾಲೇಜುಗಳ ಹಿಜಾಬ್- ಕೇಸರಿ ಶಾಲು ಪ್ರಕರಣದ ಕುರಿತು ಸೋಮವಾರ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ನ ತ್ರಿಸದಸ್ಯ ವಿಸ್ತ್ರತ ಪೀಠ ವಿಚಾರಣೆಯನ್ನು ಮಂಗಳವಾರ ಮಧಾಹ್ನ 2.30 ಕ್ಕೆ ಮುಂದೂಡಿದೆ. ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ಫೆ 14 ಮಧ್ಯಾಹ್ನ 2.30ಕ್ಕೆ ಆರಂಭಿಸಿ ಸುದೀರ್ಘ ವಾದವನ್ನು ಆಲಿಸಿತು. ಆರ್ಟಿಕಲ್ 25 ಪ್ರಕಾರ ಶಿರವಸ್ತ್ರ ಧರಿಸುವುದು ತಪ್ಪಲ್ಲ …

Read More »

ಇಂದಿನಿಂದ 10 ದಿನಗಳ ಕಾಲ ವಿಧಾನ ಮಂಡಲದ ಅಧಿವೇಶ ಬಜೆಟ್ ಪ್ರಾರಂಭ

ಬೆಂಗಳೂರು: ಸೋಮವಾರದ ಇಂದಿನಿಂದ 10 ದಿನಗಳ ಕಾಲ ವಿಧಾನ ಮಂಡಲದ ಅಧಿವೇಶ ಬಜೆಟ್ ನಡೆಯಲಿದೆ. ಮೊದಲ ದಿನದ ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಈ ಬಾರಿ 2026 ಪ್ರಶ್ನೆಗಳು, ಸರ್ಕಾರದಿಂದ ಎರಡು ವಿಧೇಯಕಗಳು ಮಂಡನೆಯಾಗಲಿವೆ. ಈ ಕುರಿತು ಮಾಹಿತಿ ನೀಡಿದಂತ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನದ ವೇಳೆ ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಇಂದು ಭಾಷಣ …

Read More »

ಹಿಜಾಬ್ ವಿವಾದ : ಇಂದಿನಿಂದ 9, 10ನೇ ತರಗತಿಗಳು ಪ್ರಾರಂಭ

ಬೆಂಗಳೂರು: ಹಿಜಾಬ್ ಮತ್ತು ಕೇಸರಿ ಸಂಘರ್ಷದಿಂದಾಗಿ ಮೂರು ದಿನಗಳ ಕಾಲ ಪ್ರೌಢ ಶಾಲೆಗಳು ಸೇರಿದಂತೆ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಇದೀಗ ರಜೆಯ ಬಳಿಕ ಇಂದಿನಿಂದ 9, 10ನೇ ತರಗತಿಯ ಪ್ರೌಢ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 9 ಮತ್ತು 10ನೇ ತರಗತಿಗಳಿಗೆ ನೀಡಲಾಗಿದ್ದ ಮೂರು ದಿನಗಳ ರಜೆ ಮುಕ್ತಾಯಗೊಳಿಸಲಾಗಿದ್ದು, ಸೋಮವಾರದ ಇಂದಿನಿಂದ ಎಂದಿನಂತೆ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿಯವರು ಈಗಾಗಲೇ …

Read More »

‌ಕೋರ್ಟ್ ನಲ್ಲಿ ಗಲಾಟೆ ಪ್ರಕರಣ : 14 ದಿನಗಳು ವಕೀಲ ಜಗದೀಶ್ ನ್ಯಾಯಾಂ ಬಂಧನ

ಬೆಂಗಳೂರು: ಕೋರ್ಟ್‌ ಅಂಗಳದಲ್ಲಿ ಗಲಾಟೆ ಆರೋಪಕ್ಕೆ ಸಂಬಂದಪಟ್ಟಂತೆ ಪೋಲಿಸರು ವಶಕ್ಕೆ ಪಡೆದಿದ್ದ ವಕೀಲ ಜಗದೀಶ್‌ ಅವರನ್ನುಇದರ ಅನ್ವಯ ವಕೀಲ ಜಗದೀಶ್ ಅವರನ್ನು 14 ದಿನಗಳ ಕಾಲ ನ್ಯಾಯಾಮೂರ್ತಿಗಳು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಶನಿವಾರ ಪ್ರಕರಣವೊಂದರ ಸಂಬಂಧ ಜಗದೀಶ್‌ ಅವರು ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ನ್ಯಾಯಾಲಯಕ್ಕೆ ಆಗಮಸಿದ್ದರು, ಈ ವೇಳೆಯಲ್ಲಿ ಕೋರ್ಟ್ ಅಂಗಳದಲ್ಲಿ ಗಲಾಟೆಯಾಗಿತ್ತು, ಈ ಗಲಾಟೆಗೆ ಸಂಬಂಧಪಟ್ಟಂತೆ ವಕೀಲ ಜಗದೀಶ್‌ ತಮ್ಮ ಫೇಸ್‌ಬುಕ್‌ ನಲ್ಲಿ ಕೆಲವರ ಬಗ್ಗೆ ಆರೋಪಿಸಿದ್ದರು, …

Read More »

ರಾಜ್ಯದಲ್ಲಿ ಮತ್ತಷ್ಟು ಇಳಿಮುಖ ಕಂಡ ಕೊರೋನಾ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಮುಖವಾಗಿದ್ದು, ಇಂದು ಪಾಸಿಟಿವಿಟಿ ದರ ಶೇಕಡ 3 ಕ್ಕಿಂತ ಕಡಿಮೆಯಾಗಿದೆ. ರಾಜ್ಯದಲ್ಲಿ 3202 ಹೊಸ ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವಿಟಿ ದರ ಶೇಕಡ 2.95 ರಷ್ಟು ಇದೆ. 38,747 ಸಕ್ರಿಯ ಪ್ರಕರಣಗಳಿವೆ.38 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇವತ್ತು ಒಂದೇ ದಿನ 1,08,534 ಪರೀಕ್ಷೆ ನಡೆಸಲಾಗಿದೆ. 8988 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 1293 ಹೊಸ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರ ಶೇಕಡ 2.49 ರಷ್ಟು …

Read More »

ಅವಾಚ್ಯಶಬ್ದಗಳಿಂದ ನಿಂಧನೆ : ವಕೀಲ ಜಗದೀಶ್‌ ಬಂಧನ

ಬೆಂಗಳೂರು: ಪೋಲಿಸ್ ರು ಮಹಾದೇವ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನ್ಯಾಯಾಧೀಶರ ಮುಂದೆ ಸಂಜೆ ಅವರನ್ನು ಹಾಜರುಪಡಿಸುವ ನಿರೀಕ್ಷೆ ಇದೆ. ಶುಕ್ರವಾರ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ವಕೀಲ ಜಗದೀಶ್‌ ಬಂಧಿಸಲಾಗಿದೆ. ಗಲಾಟೆ ಪ್ರಕರಣದ ಬಗ್ಗೆ ಎರಡು ದಿನದಿಂದ ಭಾರೀ ಚರ್ಚೆ ನಡೆಯುತ್ತಿತ್ತು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ವಕೀಲರನ್ನು ಅವಾಚ್ಯಶಬ್ದಗಳಿಂದ ನಿಂದಿಸಿದ ಕೆ. ಎನ್. ಜಗದೀಶ್ ಮಹಾದೇವ್ ವಿರುದ್ಧ ಶನಿವಾರ ಬೆಂಗಳೂರು ಪೊಲೀಸ್ …

Read More »

ಸಿಡಿ ಪ್ರಕರಣ : ಮತ್ತೇ ಸಂಕಷ್ಟಕ್ಕೆ ಸಿಲುಕಿದ ರಮೇಶ್ ಜಾರಕಿಹೊಳಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ಬಗ್ಗೆ ಎಸ್‌ಐಟಿ ನೀಡಿರುವ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ನೀಡಿದ ಅನುಮತಿ ಆದೇಶ ಪ್ರಶ್ನಿಸಿ ಸಂತ್ರಸ್ತ ಯುವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್, ಅರ್ಜಿ ವಿಚಾರಣೆಯನ್ನು ಫೆ.14 ರ ಸೋಮವಾರದಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಆರೋಪಿ ರಮೇಶ್ ಜಾರಕಿಹೊಳಿ ಕೋರಿಕೆ ಮೇರೆಗೆ ಎಸ್‌ಐಟಿ ರಚಿಸಿರುವುದು ಅಸಿಂಧು, …

Read More »

ಮೇಘನಾ ಕಣ್ಣೀರಿಗೆ ಗರಂ ಆದ ಅಭಿಮಾನಿಗಳು

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಿರ್ಮಾಪಕ ಸೃಜನ್ ಲೋಕೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತೀರ್ಪುಗಾರರಲ್ಲೊಬ್ಬರಾದ ಮೇಘನಾ ರಾಜ್‍ ಪತಿ ಚಿರು ನೆನಪಲ್ಲಿ ಕಣ್ಣೀರು ಹಾಕುವ ದೃಶ್ಯವನ್ನು ಪ್ರಕಟಿಸಿದ್ದು. ಚಿರು ಮೊದಲನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಕೊಟ್ಟ ಉಡುಗೊರೆ ಮತ್ತು ಚಿರು ಧ್ವನಿಯನ್ನು ಕಾರ್ಯಕ್ರಮದಲ್ಲಿ ಕೇಳಿಸಿದಾಗ ಮೇಘನಾ ಕಣ್ಣೀರು ಹಾಕುತ್ತಾರೆ. ಈ ಪ್ರೋಮೋ ನೋಡಿದ ನೆಟ್ಟಿಗರು ನಿಮ್ಮ ಟಿಆರ್ ಪಿಗಾಗಿ ಆಕೆಗೆ ಪದೇ ಪದೇ ಚಿರು …

Read More »

ಮಾ. 4 ರಂದು ಸಿಎಂ ಚೊಚ್ಚಲ ಬಜೆಟ್ ಮಂಡನೆ ಸಾಧ್ಯತೆ

ಬೆಂಗಳೂರು: ಸಿಎಂ ಫೆಬ್ರವರಿ 9 ರಿಂದ ಸಿಎಂ ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಇದಾದ ನಂತರ ಸಂಘ ಸಂಸ್ಥೆಗಳ ಜೊತೆಗೆ ಸಭೆ ನಡೆಸಿ ಪ್ರಸ್ತಾವನೆ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ 4 ರಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ. ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ಫೆಬ್ರವರಿ 25ರವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ನಡೆಯಲಿದ್ದು, ಮಾರ್ಚ್ 4ರಂದು ಬಜೆಟ್ ಅಧಿವೇಶನ ಶುರುವಾಗಲಿದೆ …

Read More »

ರಾಜ್ಯದಲ್ಲಿ ಇಳಿಕೆ ಕಂಡ ಕೋವಿಡ್

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಒಟ್ಟು 5,019 ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದು, ಬೆಂಗಳೂರಿನಲ್ಲಿ 2,315 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ ಎಂದಿದ್ದಾರೆ.

Read More »