Breaking News

ಬೆಂಗಳೂರು

2025-26ರ ಬಜೆಟ್ ಗಾಗಿ ಇಲಾಖಾವಾರು ಪರಿಶೀಲನಾ ಸಭೆ ಆರಂಭಿಸಲು ಸಿಎಂ ಸಿದ್ಧತೆ

ಬೆಂಗಳೂರು: 2025-26ರ ಬಜೆಟ್‌ಗಾಗಿ ಇಲಾಖಾವಾರು ಪರಿಶೀಲನಾ ಸಭೆಗಳನ್ನು ಆರಂಭಿಸಲು ಸಿದ್ಧರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದಿಂದ ಆದಾಯ ಕೊರತೆ ಅನುದಾನವನ್ನು ಪಡೆಯಲು 16 ನೇ ಹಣಕಾಸು ಆಯೋಗದ ಗಮನ ಸೆಳೆಯಲು ಯೋಜನೆಯನ್ನು ನಿಖರವಾಗಿ ರೂಪಿಸುವ ಸಾಧ್ಯತೆಯಿದೆ. ಅವರು ಹೆಚ್ಚುವರಿ ಬಜೆಟ್ ಮಂಡಿಸಲು ಅಂಟಿಕೊಳ್ಳದೇ ಇರಬಹುದು, ಆದರೆ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಕೇಂದ್ರದಿಂದ ಆದಾಯ ಕೊರತೆ ಅನುದಾನವನ್ನು ಪಡೆಯಲು ಸಹಾಯ ಮಾಡಲು ರಾಜ್ಯದ ಆದಾಯ ಮತ್ತು ವೆಚ್ಚದಲ್ಲಿನ ಅಂತರವನ್ನು ತೋರಿಸುತ್ತಾರೆ …

Read More »

ಆಸ್ತಿ ಘೋಷಣೆ ಮಾಡದ 6 ಗ್ರಾ.ಪಂ.ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ ರಾಜ್ಯ ಚುನಾವಣಾ ಆಯೋಗ

ಬೆಂಗಳೂರು: ಆಸ್ತಿ ಘೋಷಣೆ ಮಾಡದ 6 ಗ್ರಾಪಂ ಸದಸ್ಯರ ಸದಸ್ಯತ್ವವನ್ನು ರಾಜ್ಯ ಚುನಾವಣಾ ಆಯೋಗ ರದ್ದುಗೊಳಿಸಿದೆ ಸದಸ್ಯತ್ವ ರದ್ದುಗೊಂಡ ಸದಸ್ಯ ಸ್ಥಾನಗಳನ್ನು ಖಾಲಿ ಎಂದೂ ಘೋಷಿಸಿದೆ. ಚಿಕ್ಕಮಗಳೂರು ಜಿಲ್ಲೆ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿಯ ಚೈತ್ರಾ ರಘು, ಅಜ್ಜಂಪುರ ತಾಲೂಕು ಸೊಕ್ಕೆ ಗ್ರಾಮ ಪಂಚಾಯಿತಿಯ ಎಸ್.ಎಚ್.ಚಂದ್ರಶೇಖರ್, ಕಲಬುರಗಿ ಜಿಲ್ಲೆ ಅಳಂದ ಆಲೂಕು ಅಳಂಗಾ ಗ್ರಾಮ ಪಂಚಾಯಿತಿಯ ಗಣಪತಿ, ಕಮಲಾಪೂರ ತಾಲೂಕು ವ್ಹಿ.ಕೆ.ಸಲಗರ ಗ್ರಾಮ ಪಂಚಾಯಿತಿಯ ಇಸ್ಮಾಯಿಲ್ ಸಾಬ್, ಹಾವೇರಿ ಜಿಲ್ಲೆ ಹಾನಗಲ್ …

Read More »

ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಈ ಬಾರಿ ಮಾರ್ಚ್ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ಆದರೆ ಬಜೆಟ್ ಮಂಡನೆ ದಿನಾಂಕ ಇನ್ನು ನಿಗದಿಯಾಗಿಲ್ಲ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬರುವ ಮಾರ್ಚ್ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ ಆದರೆ ಬಜೆಟ್ ಮಂಡನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆಯವರು ರಾಜಿನಾಮೆ ನೀಡಬೇಕೆಂಬ …

Read More »

ಹೊಸ ವರ್ಷದ ಸಂಭ್ರಮಾಚರಣೆ: ಅಬಕಾರಿ ಇಲಾಖೆಗೆ ದಾಖಲೆಯ ಆದಾಯ

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯು ರಾಜ್ಯ ಸರಕಾರಕ್ಕೆ (ಅಬಕಾರಿ ಇಲಾಖೆ) ಭರ್ಜರಿ ಆದಾಯ ಹರಿದು ಬಂದಿದೆ. ಮಂಗಳವಾರ ಒಂದೇ ದಿನದಲ್ಲಿ ಕೆಎಸ್‌ಬಿಸಿಎಲ್‌ (ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ)ನಿಂದ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟವಾಗಿದೆ. ಈ ಬಾರಿ ಅಬಕಾರಿ ಇಲಾಖೆ 250 ಕೋಟಿ ರೂ.ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ರಾಜ್ಯದಲ್ಲಿ ಡಿ.31ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದಲ್ಲೇ ಕೆಎಸ್‌ಬಿಸಿಎಲ್‌ಯಿಂದ ಬರೋಬ್ಬರಿ 308 …

Read More »

ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಐಎಎಸ್, ಐಪಿಎಸ್ ಅಧಿಕಾರಿಗಳು ಪರಿಣಾಮಕಾರಿ ಕಾರ್ಯ ನಿರ್ವಹಿಸಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಪ್ರಾದೇಶಿಕ ಅಸಮತೋಲನ, ಅಸಮಾನತೆ ತೊಡೆಯಲು ನಿಮ್ಮ ಸಹಕಾರ ಹೆಚ್ಚು ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಕರೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿ ಮಾತನಾಡಿದರು. ಬದುಕಿನಲ್ಲಿ ಏಳು ಬೀಳು ಸಹಜ ಮತ್ತು ನಿರಂತರ. ಪರಿಸ್ಥಿತಿಗಳು ಸದಾ ನಮ್ಮ ಪರವಾಗಿ ಇರುವುದಿಲ್ಲ. …

Read More »

ರಾಜ್ಯ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ನೇತೃತ್ವದ ನಿಯೋಗವು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಹಳೇ ಪಿಂಚಣಿ ಯೋಜನೆ ಜಾರಿ ಸೇರಿ ಹಲವು ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಿತು. ರಾಜ್ಯ ಸರಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಂಬಂಧ ಸರಕಾರದಿಂದ ರಚಿತವಾಗಿರುವ ಅಧಿಕಾರಿಗಳ ಸಮಿತಿಯಿಂದ ಶೀಘ್ರ ವರದಿ …

Read More »

ರಾಜ್ಯ ಸರ್ಕಾರದಿಂದ ಬಿಎಂಟಿಸಿ ಸಿಬ್ಬಂದಿಗಳಿಗೆ ವಿಮಾ ಪರಿಹಾರ ಮೊತ್ತ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಎಂಟಿಸಿ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಗುಂಪು ವಿಮಾ ಯೋಜನೆಯ ಪರಿಹಾರದ ಮೊತ್ತವನ್ನು 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 17 ಮೃತ ನೌಕರರ ಅವಲಂಬಿತರಿಗೆ ಗುಂಪು ವಿಮಾ ಯೋಜನೆಯ ಪರಿಹಾರದ ಹಣವಾಗಿ ರೂ.10.00 ಲಕ್ಷ ವಿತರಣೆಯನ್ನು ಮಾಡಿದರು. ಈ ಕುರಿತಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಂಸ್ಥೆಯಲ್ಲಿ ಸೇವೆ …

Read More »

ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯಾದ್ಯಂತ 2024 ಕ್ಕೆ ಗುಡ್ ಬೈ ಹೇಳಿದ್ದು, 2025 ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಈ ನಡುವೆ ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರೀತಿಯ ನಾಡಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಭರವಸೆ ಹಾಗೂ ಹೊಸ ಉತ್ಸಾಹದೊಂದಿಗೆ ಬರಮಾಡಿಕೊಳ್ಳೋಣ. ಜಾತಿ, ಧರ್ಮಗಳ‌ ದ್ವೇಷ ತೊರೆದು …

Read More »

ರಾಜ್ಯದಲ್ಲಿ ನದಿಗಳ ಮಾಲಿನ್ಯದ ಬಗ್ಗೆ ಮೇಲ್ವಿಚಾರಣೆ: ಜನವರಿಯಲ್ಲಿ ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳ ಜಂಟಿ ಪರಿಶೀಲನೆಗೆ ನಿರ್ದೇಶನ

ಬೆಂಗಳೂರು: ಕರ್ನಾಟಕದಲ್ಲಿನ ನದಿಗಳ ಮಾಲಿನ್ಯದ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿರುವ ತಜ್ಞರ ಸಮಿತಿಯು 2025 ರ ಜನವರಿಯಲ್ಲಿ ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳ ಜಂಟಿ ಪರಿಶೀಲನೆಗೆ ನಿರ್ದೇಶನ ನೀಡಿದೆ. ಕೇಂದ್ರ ಜಲಶಕ್ತಿ ಸಚಿವಾಲಯದ ಅಡಿಯಲ್ಲಿನ ಕೇಂದ್ರ ಮೇಲ್ವಿಚಾರಣಾ ಸಮಿತಿಯು ಸಂಸ್ಕರಿಸದ ಒಳಚರಂಡಿಯ ಹರಿವನ್ನು ತಡೆಯುವ ಮೂಲಕ 350 ಕ್ಕೂ ಹೆಚ್ಚು ಕಲುಷಿತ ನದಿಗಳನ್ನು ಪುನರುಜ್ಜೀವನಗೊಳಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಿದೆ. ನದಿಗಳಿಗೆ ಹರಿಯುವ ತ್ಯಾಜ್ಯ ನೀರನ್ನು ಸಂಸ್ಕರಿಸಲು …

Read More »

ಕರ್ನಾಟಕದಲ್ಲಿ ಹೊಸ ವರ್ಷಕ್ಕೆ ಮದ್ಯ ಮಾರಾಟದಲ್ಲಿ ದಾಖಲೆಯ ಆದಾಯ

ಬೆಂಗಳೂರು: ಹೊಸ ವರ್ಷಾಚರಣೆಗೆ ಮದ್ಯ ಇಲ್ಲವೆಂದರೆ ನಡೆಯೋದೆ ಇಲ್ಲ. ಬಹುತೇಕ ಮಂದಿ ನಶೆಯಲ್ಲಿ ಹೊಸ ವರ್ಷವನ್ನು ಸ್ವಾಗಿತಿಸುವುದು ವಾಡಿಕೆ. ಹೊಸ ವರ್ಷದ ಪ್ರಯುಕ್ತ 2024ರ ಕೊನೆ ದಿನ ಡಿಸೆಂಬರ್ 31ರಂದು ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ದಾಖಲೆ ಆಗಿದೆ. ಅಬಕಾರಿ ಇಲಾಖೆಗೆ ನಿರೀಕ್ಷೆಗೂ ಮೀರಿ ನೂರಾರು ಕೋಟಿ ರೂಪಾಯಿ ಹಣ ಕೆಲವೇ ಗಂಟೆಗಳಲ್ಲಿ ಸಂಗ್ರಹವಾಗಿದೆ. ಹೌದು, ಡಿಸೆಂಬರ್ 31ರಂದು ಬೆಳಗ್ಗೆಯಿಂದ ಮಧ್ಯಾಹ್ನದ ಹೊತ್ತಿಗೆ ‘ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ’ದಿಂದ 308 …

Read More »