Breaking News

ಬೆಂಗಳೂರು

ಡಿ ಕೆ ಶಿವಕುಮಾರ್ ಅವರಿಗೆ ಈಗ ಗೋಲ್ಡನ್ ‌ ಅವಕಾಶ ಇದೆ….

ಬೆಂಗಳೂರು: ಡಿ ಕೆ ಶಿವಕುಮಾರ್ ಅವರಿಗೆ ಈಗ ಗೋಲ್ಡನ್ ‌ ಅವಕಾಶ ಇದೆ. ಡಿ ಕೆ ಶಿವಕುಮಾರ್ ಅವರು ತಾವು ಸತ್ಯ ಹರಿಶ್ಚಂದ್ರರು ಅಂತ ಸಾಬೀತು ಮಾಡುವ ಅವಕಾಶ ಇದೆ. ಜನತೆಯ ಮುಂದೆ ನೀವು ತಪ್ಪು ಮಾಡಿಲ್ಲ ಅಂತ ತನಿಖೆ ಎದುರಿಸಿ ತೋರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ …

Read More »

ಈ ವರ್ಷ ಕನ್ನಡ ಸಿನಿಮಾಗಳಿಗೆ ನಿರಾಸೆ ಮೂಡಿಸಿದ ವರ್ಷ….

ಇನ್ನೇನು 2023 ಮುಗೀತಾ ಬಂತು. ಇನ್ನೊಂದು 40 ದಿನ ಕಳೆದರೆ, ಹೊಸ ವರ್ಷಕ್ಕೆ ಕಾಲಿಡುತ್ತೇವೆ. 2024 ಅನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳುತ್ತೇವೆ. ಆದರೆ, ಈ ವರ್ಷ ಕನ್ನಡ ಸಿನಿಮಾಗಳಿಗೆ ನಿರಾಸೆ ಮೂಡಿಸಿದ ವರ್ಷ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಒಂದೇ ಒಂದು ಸಿನಿಮಾ ದೊಡ್ಡ ಮಟ್ಟಕ್ಕೆ ಸದ್ದು ಮಾಡಲಿಲ್ಲ.ಕಳೆದ ವರ್ಷ ಹೀನಾಯ ಸ್ಥಿತಿಯಲ್ಲಿ ಬಾಲಿವುಡ್ ಮಂದಿಗೆ 2023 ಲಕ್ಕಿ ಅಂತ ಸಾಬೀತಾಗಿದೆ. ಆದರೆ, ದಕ್ಷಿಣ ಭಾರತದ ಯಾವುದೇ ಭಾಷೆಯ ಸಿನಿಮಾಗಳು ಪ್ಯಾನ್ …

Read More »

ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇದೆ ರಾಜ್ಯ ಬಿಜೆಪಿ ಹೇಳಿದೆ….

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವರ್ಗಾವಣೆ ದಂದೆ ಸೇರಿದಂತೆ ಭ್ರಷ್ಟಚಾರ ವಿಚಾರವಾಗಿ ಆಡಳಿತ ಪಕ್ಷದ ವಿರುದ್ದ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಸರಣಿ ಆರೋಪಗಳನ್ನ ಮಾಡುತ್ತಿದ್ದು, ಇದೀಗ ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇದೆ ಎಂದು ರಾಜ್ಯ ಬಿಜೆಪಿ ಹೇಳಿದೆ. ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ಕರ್ನಾಟಕ ಬಿಜೆಪ, ನಾಮಕಾವಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೇ ನಿರುಪಯುಕ್ತ ಸಿಎಂ ಎನ್ನುವುದನ್ನು ಒಪ್ಪಿಕೊಂಡು ಜವಾಬ್ದಾರಿಗಳನ್ನು …

Read More »

ಕಾಸಿಗಾಗಿ ಹುದ್ದೆ& ಕಾಂಗ್ರೆಸ್‌ ಹುಂಡಿ ಎಂಬ ಸಿನಿಮಾವನ್ನೂ ಮಾಡಿ…

ಬೆಂಗಳೂರು: ಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. ‘ವರ್ಗಾವರ್ಗಿ ಬಜೆಟ್‌’ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರೀಯʼ ಅಟ್ಟಹಾಸ!! ‘ಕಾಸಿಗಾಗಿ ಹುದ್ದೆ& ಕಾಂಗ್ರೆಸ್‌ ಹುಂಡಿ’ ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-TCM ನಿರ್ಮಾಪಕ, ಡೂಪ್ಲಿಕೇಟ್‌ ಸಿಎಂ-DCM ನಿರ್ದೇಶಕ.. ಹೇಗಿದೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಅಬ್ಬಬ್ಬಾ.. ಬಾಯಿ …

Read More »

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರೆಸಾರ್ಟ್‌ ಪಾಲಿಟಿಕ್ಸ್ ಆರಂಭ…

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರೆಸಾರ್ಟ್‌ ಪಾಲಿಟಿಕ್ಸ್ ಆರಂಭಿಸಿದ್ದಾರೆ. ಜೆಡಿಎಸ್ ಶಾಸಕರ ಜೊತೆ ಚಿಕ್ಕಮಗಳೂರಿನ ರೆಸಾರ್ಟ್‌ನಲ್ಲಿ ಅವರು ವಾಸ್ತವ್ಯ ಹೂಡಲಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೆಡಿಎಸ್‌ನ ಹಿರಿಯ ಶಾಸಕರ ಸಭೆ ನಡೆಸಿದ ಹಿನ್ನಲೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಎಚ್. ಡಿ. ಕುಮಾರಸ್ವಾಮಿ ರೆಸಾರ್ಟ್‌ ರಾಜಕೀಯ ಆರಂಭಿಸಿದ್ದಾರೆ. …

Read More »

ನಟ ಯೋಗಿ ಬೆಂಗಳೂರಿನಲ್ಲಿ ತಮಿಳು ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿ….

ಲೂಸ್ ಮಾದ ಯೋಗಿ ನಟನೆಯ ‘ರೋಸಿ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ತಮಿಳು ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ ಖಡಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಿ ಫಸ್ಟ್ ಲುಕ್ ರಿವೀಲ್ ಆಗಿತ್ತು. ಇದೆಲ್ಲದರ ಮಧ್ಯೆ ನಟ ಯೋಗಿ ಬೆಂಗಳೂರಿನಲ್ಲಿ ತಮಿಳು ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಂದ್ಕಾಲದಲ್ಲಿ ಲೂಸ್ ಮಾದ ಯೋಗಿ ಸಿನಿಮಾಗಳಿಗೆ ಭಾರೀ ಕ್ರೇಜ್ ಇತ್ತು. ಆದರೆ ಈಗ ಅಷ್ಟಾಗಿ ಯೋಗಿ ಸಿನಿಮಾಗಳು ಸದ್ದು ಮಾಡ್ತಿಲ್ಲ. ಅವರ …

Read More »

ವರ್ಗಾವಣೆ ದಂಧೆ ಮಾಡಿದ್ದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ: ಡಾ. ಯತೀಂದ್ರ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಅವರು ನಾನು ನೀಡಿದ ಲಿಸ್ಟ್​​ನದ್ದು ಮಾತ್ರ ಮಾಡಿ ಎಂದು ಸಿಎಂ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಅವರಿಗೆ ಸೂಚಿಸಿರುವ ವಿಡಿಯೋ ವೈರಲ್ ಆಗಿದ್ದು, ಈ ಕುರಿತು ಸಿದ್ದರಾಮಯ್ಯ ಯತೀಂದ್ರ ಅವರು ವರ್ಗಾವಣೆ ಬಗ್ಗೆ ಮಾತಾಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಹೇಳಿದ್ದಾರೆ. ಶಾಲಾ ಕಟ್ಟಡಗಳನ್ನು …

Read More »

ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ…

ಬೆಂಗಳೂರು: ಕರ್ನಾಟಕ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಒಟ್ಟು ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹಾವೇರಿಗೆ ನೂತನ ಎಸ್ಪಿ ನೇಮಕ ಮಾಡಲಾಗಿದೆ.ಸರ್ಕಾರ ಹಾವೇರಿ ಎಸ್‌ಪಿಯಾಗಿದ್ದ ಡಾ. ಶಿವಕುಮಾರ್ ವರ್ಗಾವಣೆ ಮಾಡಿದೆ. ಅನೂಷ್ ಕುಮಾರ್‌ ಅವರನ್ನು ನೂತನ ಎಸ್ಪಿಯಾಗಿ ನೇಮಕ ಮಾಡಿದೆ. ರಶ್ಮಿ ಬಿ. ಪರಡ್ಡಿ ಅವರಿಗೆ ಸಹ ಸ್ಥಳ ನಿಯೋಜನೆ ಮಾಡಲಾಗಿದೆ.

Read More »

ತುಮಕೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಹಲವು ಕಡೆಗಳಲ್ಲಿ ವಾರಾಂತ್ಯದಲ್ಲಿ ನಿಗದಿತ ವಿದ್ಯುತ್ ಕಡಿತಕ್ಕೆ ಸಾಕ್ಷಿ…

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿರುವುದರಿಂದ ಬೆಂಗಳೂರು, ತುಮಕೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಹಲವು ಕಡೆಗಳಲ್ಲಿ ವಾರಾಂತ್ಯದಲ್ಲಿ ನಿಗದಿತ ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ನವೆಂಬರ್ 11 ಮತ್ತು 12ರಂದು ಶನಿವಾರ ಮತ್ತು ಭಾನುವಾರ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 4 …

Read More »

ರಾಜ್ಯ ಕಾಂಗ್ರೆಸ್‌ ನಲ್ಲಿ ಸರ್ಕಾರ ರಚನೆಯ ಬಳಿಕ ಅಸಮಾಧಾನ…

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಲ್ಲಿ ಸರ್ಕಾರ ರಚನೆಯ ಬಳಿಕ ಅಸಮಾಧಾನ ಭುಗಿಲೆದಿದ್ದು, ಪಕ್ಷದಲ್ಲಿನ ಅಸಮಾಧಾನವನ್ನ ಶಮನಗೊಳಿಸಲು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮುಂದಾಗಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 10ರಿಂದ 10.30ರವರೆಗೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಭೇಟಿಗೆ ಸಮಯ ನೀಡುತ್ತೇನೆ. ತಮ್ಮ ಕ್ಷೇತ್ರದಲ್ಲಿನ ಕೆಲಸ ಹಾಗೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವರಿಗೆ ಅವಕಾಶ ನೀಡಲಾಗುವುದು. ಹೊರಗಡೆ ಹೋಗುವ ದಿನ ಹೊರತಾಗಿ ಬೆಂಗಳೂರಿನಲ್ಲಿರುವ ಎಲ್ಲಾ ದಿನ ಸಮಯಾವಕಾಶ ನೀಡಲಾಗುವುದು …

Read More »