Breaking News

ಧಾರವಾಡ

ಪೋಟೋ ವಿಡಿಯೋ ಮಾಹಿತಿ ತಂತ್ರಜ್ಞಾನದ ಅಡಿಪಾಯ- ಡಾ ವಿಶ್ವನಾಥ ಕೋಟಿ ಅಭಿಮತ.

ಧಾರವಾಡ ಡಿಜಿಟಲ್ ತಂತ್ರಜ್ಞಾನದ ಭರಾಟೆಯ ಮಧ್ಯೆಯೂ ಫೋಟೊಗ್ರಾಫರ್ ಗಳು ಹಾಗೂ ವಿಡಿಯೋಗ್ರಾಫರ್ ಗಳು ವೃತ್ತಿ ಉಳಿಸಿಕೊಳ್ಳುವುದು ದೊಡ್ಡ ಸವಾಲು ಎಂದು ಡಾ. ವಿಶ್ವನಾಥ ಕೋಟಿ ಹೇಳಿದರು. ಅವರು ಧಾರವಾಡ ಫೋಟೊ ಮತ್ತು ವಿಡಿಯೋಗ್ರಾಫರ್ ಧಾರವಾಡ ಸಂಘದ 16ನೇ ವಾರ್ಷೀಕೋತ್ಸವ, ಸಂಸ್ಥಾಪಕ ಆಡಳಿತ ಮಂಡಳಿ ಸದಸ್ಯರಿಗೆ ಅಭಿನಂದನಾ ಮತ್ತು ಹಿರಿಯರಿಗೆ ಸನ್ಮಾನ ಕಾರ್ಯಕ್ರಮವನ್ನು. ಧಾರವಾಡ ಸುವರ್ಣ ಸಾಂಸ್ಕೃತಿಕ ಭವನ, ರಂಗಾಯಣದಲ್ಲಿ ಉದ್ಘಾಟಿಸಿ ಮಾತನಾಡಿದಠು ಪ್ರತಿಯೊಬ್ಬರ ಕೈಯಲ್ಲಿರುವ ಮೊಬೈಲ್ ಕ್ಯಾಮೆರಾಮನ್ ಗಳ ಹಾಗೂ …

Read More »

ಮೇವಿನ ಗಾಡಿ ತಳ್ಳಿದ ಸಚಿವ ಸಂತೋಷ್ ಲಾಡ್-

ಹುಬ್ಬಳ್ಳಿ: ಬೆಳಗಿನ ವಾಯು ವಿಹಾರಕ್ಕೆ ಹೋಗಿದ್ದ ಸಚಿವ ಸಂತೋಷ್ ಲಾಡ್ ರೈತರೊಬ್ಬರ ಮೇವಿನ ಗಾಡಿಯಲ್ಲಿ ತಳ್ಳಿಕೊಂಡು ಊರಿಗೆ ಬಂದಿದ್ದಾರೆ. ಅಲ್ಲದೇ ರೈತನ ಮನೆವರೆಗೂ ಮೇವಿನ ಗಾಡಿಯನ್ನು ತಲುಪಿಸಿದ್ದಾರೆ. ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ರೈತ ದಂಪತಿ ಹೊಲದಿಂದ ಹುಲ್ಲು ತೆಗೆದುಕೊಂಡು ಹೋಗುತ್ತಿದ್ದರು. ಸಚಿವ ಸಂತೋಷ ಲಾಡ್ ಅವರು, ತಮ್ಮ ಕಲಘಟಗಿ ನಿವಾಸಕ್ಕೆ ಬಂದಾಗ ಎಂದಿನಂತೆ ಅದೇ ಮಾರ್ಗದಲ್ಲಿ ವಾಕಿಂಗ್ ಹೋಗುತ್ತಿದ್ದರು. ರೈತನ ಹುಲ್ಲಿನ ಬಂಡಿ ನೋಡಿ ಸ್ವತಃ ಸಂತೋಷ ಲಾಡ್ …

Read More »

ಜೈನ ಮುನಿಗಳ ಹತ್ಯೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ : ಜೈನ ಮುನಿಗಳ ಹತ್ಯೆ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಯುವ ಬಿಗ್ರೇಡ್ ಹಾಗೂ ಹಿಂದೂ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಜೈನಮುನಿಗಳಾದ ಕಾಮಕುಮಾರ ನಂದಿಮಹಾರಾಜರ ಹತ್ಯೆ ಹಾಗೂ ಟಿ ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಬರ್ಬರವಾಗಿ ಹತ್ಯೆಗೈದ ಪ್ರಕರಣ ಖಂಡನೀಯ ಎಂದು ಮೌನ …

Read More »

ಸಾಲಬಾಧೆ ತಾಳಲಾರದೇ ನೇಣು ಕುಣಿಕೆಗೆ ಕೊರಳೊಡ್ಡಿದ ರೈತ

ಧಾರವಾಡ: ಕೃಷಿ ಚಟುವಟಿಕೆಗಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೇ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ಇರುವ ಸೈಬನಕೊಪ್ಪ ಗ್ರಾಮದಲ್ಲಿ ನಡೆದಿದೆ. ಉಪ್ಪಿನ ಬೆಟಗೇರಿ ಗ್ರಾಮದ ಕಲ್ಲಪ್ಪ ಕುರಗುಂದ (55) ಎಂಬ ರೈತನೇ ಆತ್ಮಹತ್ಯೆ ಮಾಡಿಕೊಂಡವನು. ಕೃಷಿ ಚಟುವಟಿಕೆಗಾಗಿ ವಿವಿಧ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದ. ಅಲ್ಲದೇ ತನಗಿದ್ದ ಜಮೀನನ್ನು 7 ಲಕ್ಷ ರೂಪಾಯಿಗೆ ಲೀಸ್‌ನಲ್ಲಿ ಹಾಕಿಕೊಂಡಿದ್ದ. ಮಳೆಯಾಗದ ಕಾರಣ ಕೃಷಿ …

Read More »

ಚಲಿಸುತ್ತಿದ್ದ ಕಾರ್ ಟೈಯರ್ ಬ್ಲಾಸ್ಟ್

ಹುಬ್ಬಳ್ಳಿ ಯಿಂದ ಬೆಳಗಾವಿ ಕಡೆ ಹೋಗುತ್ತಿದ್ದ ಸ್ವಿಫ್ಟ್ ಕಾರೊಂದರ ಟೈಯರ್ ಬ್ಲಾಸ್ಟ್ ಆಗಿ ಅಪಘಾತಕ್ಕೆ ಒಳಗಾದ ಘಟನೆ ಹುಬ್ಬಳ್ಳಿಯ ನವನಗರದ ಆರ್.ಟಿ.ಓ ಬಳಿ ನಡೆದಿದೆ. ಚಲಿಸುತ್ತಿದ್ದ ಕಾರಿನ ಟೈಯರ್ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ, ಬಿ.ಆರ್.ಟಿಎಸ್ ಬ್ಯಾರಿಕೇಡ್ ಡಿಕ್ಕಿ ಹೊಡೆದು ಕಾರು ಜಖಂಗೊಂಡಿದೆ. ಕಾರಿನಲ್ಲಿ ಬೆಳಗಾವಿ ಮೂಲದ ವಕೀಲರೊಬ್ಬರು ಪ್ರಯಾಣಿಸುತಿದ್ದರೆನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಜಾರಿದ ಬಸ್

ಧಾರವಾಡದಿಂದ ಸವದತ್ತಿ ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆ ಬನ್ನೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಜಾರಿದ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ಸಂಭವಿಸಿದೆ. ಧಾರವಾಡದಿಂದ ಹೊರಟಿದ್ದ ಬಸ್ಸು, ಅಮ್ಮಿನಬಾವಿ ಗ್ರಾಮದ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಜಾರಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Read More »

ಅಮರನಾಥ ಯಾತ್ರೆ – ಶಾಸಕ ವಿನಯ ಕುಲಕರ್ಣಿ ಸಹಾಯಹಸ್ತ.

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿನ ವಿಠಲ ಬಾಚಗುಂಡಿ ಹಾಗೂ ಸ್ನೇಹಿತರು ಅಮರನಾಥ ಯಾತ್ರೆಗೆ ಹೋಗುವ ವೇಳೆಯಲ್ಲಿ ಗುಡ್ಡ ಕುಸಿತದ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 5 ದಿನಗಳಿಂದ ಪಂಚತರಣಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅವರು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ಫೋನ ಮೂಲಕ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸಂಕಷ್ಟದಲ್ಲಿರುವ ಸಹಾಯಕ್ಕೆ ಮುಂದಾದ ಶಾಸಕರು ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿ ಅವರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರ …

Read More »

ಕಿಮ್ಸ್‌ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯ ರೋಗಿಗಳ ಪರದಾಟ.

ಹುಬ್ಬಳ್ಳಿ, ಮಾರ್ಚ್‌, 15: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಪ್ರಖ್ಯಾತಿ ಆಗಿರುವ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಸದಾ ಒಂದಲ್ಲ ಒಂದು ಯಡವಟ್ಟು ಮಾಡಿಕೊಂಡು ಸುದ್ದಿಯಲ್ಲಿರುತ್ತದೆ. ವಾರ್ಡ್‌ಗಳಲ್ಲಿ ರೋಗಿಗಳನ್ನು ಕೆಳಮಟ್ಟದಲ್ಲಿ ನೋಡಿಕೊಳ್ಳಲಾಗುತ್ತಿದ್ದು, ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಬಡರೋಗಿಗಳು ನರಳಾಡುವಂತಾಗಿದೆ.ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ರೋಗಿಗಳು ನಿತ್ಯ ನರಕದರ್ಶನ ಅನುಭವಿಸುವಂತಾಗಿದೆ. ಮೊನ್ನೆ ನೆಲದ ಮೇಲೆ ವೃದ್ಧೆಗೆ ಚಿಕಿತ್ಸೆ ನೀಡಿ ಸುದ್ದಿಯಾಗಿದ್ದ ಕಿಮ್ಸ್ ಆಡಳಿತ ಮಂಡಳಿ, ಇದೀಗ ಮತ್ತೆ ಅಂತಹದ್ದೇ ತಪ್ಪು ಮಾಡಿ ಸಾರ್ವಜನಿಕರ …

Read More »

ವರ್ಗಾವಣೆ ಪ್ರಕ್ರೀಯೆಗಳು ಹರಾಜು ರೀತಿಯಲ್ಲಿ ನಡೆಯುತ್ತೀವೆ ; ಪ್ರಲ್ಹಾದ್‌ ಜೋಶಿ

ಹೆಚ್. ಡಿ. ಕೆ. ಪೆನ್ ಡ್ರೈವ್ ಬಾಂಬ್ ವಿಚಾರವಾಗಿ ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾತನಾಡಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ಕುಮಾರಸ್ವಾಮಿಗೆ ಯಾವುದೊಂದು ಪ್ರಕರಣ ಸಿಕ್ಕಿರಬಹುದು ಹೀಗಾಗಿ ಹಾಗೇ ಹೇಳಿಕೆ ನೀಡುತ್ತರಬಹುದು. ಹರಾಜು ರೀತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಪ್ರಮುಖ ಹುದ್ದೆಗಳಿಗೆ ಆಕ್ಷನ್ ರೀತಿಯಲ್ಲಿ ವ್ಯವಹಾರ ನಡೆಯುತ್ತಿದೆ ಇದು ಎಲ್ಲೊ ಒಂದು ಕಡೆ ಹೊರಗೆ ಬರುತ್ತೆ. ಹೆಚ್ ಡಿಕೆ ಅಧಿಕೃತ ವಿಪಕ್ಷ ನಾಯಕನ ರೀತಿ …

Read More »

ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರ ದತ್ತಿಗೆ ಶತಕದ ಸಂಭ್ರಮ.

ಧಾರವಾಡ, ಧಾರವಾಡದ ಅಕ್ಷರತಾಯಿ ದತ್ತಿದಾನಿ ಲೂಸಿ ಕೆ ಸಾಲ್ಡಾನರವರು, ತಮ್ಮ 100 ನೆಯ ದತ್ತಿಯನ್ನು ಧಾರವಾಡ ನಗರದ ನವಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ನೀಡಿದರು, ದತ್ತಿನಿಧಿ ಚೆಕ್ಕನ್ನು ಧಾರವಾಡ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಅವರ ಮೂಲಕ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ರವಿ ಕಟ್ಟಿ ಅವರಿಗೆ ಹಸ್ತಾಂತರಿಸಿದರು, ಚೆಕ್ ವಿತರಿಸಿ ಮಾತನಾಡಿದ ಬಿಇಒ ಅಶೋಕ ಸಿಂದಗಿ ಇಂದು ನನಗೆ ತುಂಬಾ ಸಂತೋಷವಾಗಿದೆ, ಕಷ್ಟಪಟ್ಟು ಬದುಕು ಕಟ್ಟಿಕೊಂಡ …

Read More »