Breaking News

ಧಾರವಾಡ

ಟವೇರಾ, ಬೈಕ್ ನಡುವೆ ಮುಖಾಮುಖಿ ಡಿಕ್ಕಿ

ನವಲಗುಂದ:ಗುಡಿಸಾಗರ-ನವಲಗುಂದ ರಸ್ತೆಯಲ್ಲಿ ಟವೇರಾ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗುಡಿಸಾಗರ ಗ್ರಾಮದ ಮಡಿವಾಳಪ್ಪ ಬಸಪ್ಪ ಕಡೆಮನಿ ನವಲಗು೦ದದಿಂದ ಗುಡಿಸಾಗರಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯವಾದ ಮಡಿವಾಳಪ್ಪ ಅವರಿಗೆ ಹುಬ್ಬಳ್ಳಿ ಕಿಮ್ಸ್‌ಗೆ ರವಾನಿಸಲಾಗಿದೆ. ಸವಾರನ ಸ್ಥಿತಿ ಚಿಂತಾಜನಕವಾಗಿದೆ. ಟವೇರಾ ರೋಣದಿಂದ ಕಿರೇಸೂರ ಗ್ರಾಮಕ್ಕೆ ಹೋಗುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Read More »

ಸಚಿವ ಸಂತೋಷ ಲಾಡ ಅವರಿಂದ ಶ್ರೀಗಳ ಬೇಟಿ ಸನ್ಮಾನ ಸಮಾರಂಭ

ಧಾರವಾಡ ರಾಜ್ಯ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾದ ಸಂತೋಷ ಲಾಡ ಅವರು ಇಂದು ಧಾರವಾಡದ ಮುರುಘಾಮಠಕ್ಕೆ ಬೇಟಿ ನೀಡಿದ್ದಾರೆ, ಈ ಹಿನ್ನಲೆಯಲ್ಲಿರಾಜ್ಯದ ಕಾಮಿ೯ಕ ಸಚಿವರಾದ ಸಂತೋಷ್ ಲಾಡ್ ಅವರು ಸಚಿವರಾದ ಮೇಲೆ ಪ್ರಥಮಬಾರಿಗೆ ಧಾರವಾಡಕ್ಕೆ ಇಂದು ಆಗಮಿಸಿದ್ದು ಅವರು ಶ್ರೀ ಮುರುಘಾಮಠಕ್ಕೆ ಭೇಟಿ ನೀಡಿದ ಸಂದಭ೯ದಲ್ಲಿ ಅವರನ್ನು ಶ್ರೀ ಡಾ ಮಲ್ಲಿಕಾಜು೯ನ ಮಹಾಸ್ವಾಮಿಗಳು ಗೌರವಿಸಿ ಸನ್ಮಾನಿಸಿದರು. ಅಭಿನಂದಿಸಿದ್ದಾರೆ ಕಲಘಟಗಿ ಮತಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ರಾಜ್ಯ ಸಚಿವ ಸಂಪುಟದಲ್ಲಿ ಕಾರ್ಮಿಕ …

Read More »

ರಸ್ತೆ ಅಪಘಾತದಿಂದ ಸ್ಥಳದಲ್ಲೇ ಸಾವು

ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಎದುರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಗರದ ಮಂಜುನಾಥ ನಗರ ನಿವಾಸಿ 34 ವಯಸ್ಸಿನ ರಾಮಲಿಂಗಪ್ಪ ಮಲ್ಲೇಶಪ್ಪನಿಂಬಣ್ಣವರ ಎಂಬಾತ ಮೃತ ದುರ್ದೈವಿ. ರಸ್ತೆ ದಾಟುವಾಗ ಭಾರಿ ಗಾತ್ರದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತನ ಕೈ ತುಂಡಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರಾತ್ರೋ ರಾತ್ರಿ ಮನೆಗೆ ಕನ್ನ ಹಾಕಿದ ಖದೀಮರು

ಧಾರವಾಡ: ರಾತ್ರೋರಾತ್ರಿ ಮನೆಗೆ ಕನ್ನ ಹಾಕಿರುವ ಖದೀಮರು ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಧಾರವಾಡದ ಚೈತನ್ಯನಗರ ಬಡಾವಣೆಯಲ್ಲಿ ನಡೆದಿದೆ. ಚೈತನ್ಯನಗರದ ಚಿದಾನಂದ ಹೊಟ್ಟೆಪ್ಪನವರ ಎಂಬುವವರ ಮನೆಗೆ ಕನ್ನ ಹಾಕಿರುವ ಕಳ್ಳರು, ಮನೆಯಲ್ಲಿದ್ದ ಅಂದಾಜು 120 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಚಿದಾನಂದ ಅವರ ಕುಟುಂಬ ಕಳೆದ ಎರಡು ದಿನಗಳಿಂದ ಮನೆಯಲ್ಲಿರಲಿಲ್ಲ. ಇದೇ ಸಮಯ ನೋಡಿದ ಕಳ್ಳರು ಮನೆಯ ಕೀಲಿ ಮುರಿದು ಒಳನುಗ್ಗಿ …

Read More »

ಸರಕಾರಿ ನೌಕರ ಹಿತಾಸಕ್ತಿ ಕಾಪಾಡಲು ಬದ್ದ; ಸಾರ್ವಜನಿಕರಿಗೆ ಉತ್ತಮ ಸೇವೆಯೊಂದಿಗೆ ಸರಕಾರದ ಯೋಜನೆ ತಲುಪಿಸಿ: ಶಾಸಕ ಎನ್.ಎಚ್.ಕೋನರಡ್ಡಿ

ಧಾರವಾಡ : ಸರಕಾರಿ ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವದರೊಂದಿಗೆ ರಾಜ್ಯ ಸರಕಾರದ ಜನಕಲ್ಯಾಣ ಯೋಜನೆಗಳನ್ನು ಅರ್ಹರಿಗೆ, ಪ್ರಾಮಾಣಿಕವಾಗಿ ಮುಟ್ಟಿಸಬೇಕು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಧಾರವಾಡ ಗೃಹ ಕಚೇರಿಯಲ್ಲಿ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಘಟಕವು ನೀಡಿದ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ರಾಜ್ಯ ಸರಕಾರಿ ನೌಕರರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಅರ್ಹ ಫಲಾನಿಭವಿಗಳಿಗೆ ಸರಕಾರದ ಯೋಜನೆಗಳು ತಲುಪುತ್ತವೆ. …

Read More »

ಪ್ರಾಚಾರ್ಯರಾಗಿ ನೂತನವಾಗಿ ನೇಮಕವಾದ ಡಾ|| ಜೆ.ಎಲ್‌ ಕಲ್ಯಾಣ ಅವರಿಗೆ DSS ಸಂಘಟನೆ ವತಿಯಿಂದ ಸನ್ಮಾನ

ಪ್ರಾಚಾರ್ಯರಾಗಿ ನೂತನವಾಗಿ ನೇಮಕವಾದ ಡಾ|| ಜೆ.ಎಲ್‌ ಕಲ್ಯಾಣ ಅವರಿಗೆ DSS ಸಂಘಟನೆ ವತಿಯಿಂದ ಸನ್ಮಾನ ಧಾರವಾಡ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಡಾಕ್ಟರ್ ಜೆ ಎಲ್ ಕಲ್ಯಾಣ ಅವರನ್ನು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಲಕ್ಷ್ಮಣ್ ಬ ದೊಡ್ಡಮನಿ,ನಾರಾಯಣ್ ಮಾದರ ಶಬ್ಬೀರ್ ಅತ್ತಾರ್,ಹನುಮಂತ್ ಮೋರಬ್, ಸಾಬಣ್ಣ ಹಟ್ಟಿ,ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು

Read More »

ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ಹೆಬ್ಬಳ್ಳಿ ಹಾಗೂ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ವತಿಯಿಂದ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರಗಳ ವಿತರಣೆ.

ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ಹೆಬ್ಬಳ್ಳಿ ಹಾಗೂ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ವತಿಯಿಂದ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರಗಳ ವಿತರಣೆ. ಹೆಬ್ಬಳ್ಳಿ :ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಮತ್ತು ಜನತಾ ಪ್ಲಾಟನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೆ, ಸ್ಥಳೀಯ ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ಹಾಗೂ ಧಾರವಾಡದ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ …

Read More »

ಜೂನ್ 3 ರಂದು ನಗರದಲ್ಲಿ ಸೈಕಲ್ ಜಾಥಾ ಆಯೋಜನೆ

ಜೂನ್ 3 ರಂದು ನಗರದಲ್ಲಿ ಸೈಕಲ್ ಜಾಥಾ ಆಯೋಜನೆ ಧಾರವಾಡ : ಅಸಾಂಕ್ರಾಮಿಕ ರೋಗಗಳ ಮತ್ತು ವಾಯು ಮಾಲಿನ್ಯ ಕುರಿತು ಜಾಗೃತಿ ಮೂಡಿಸಲು ಜೂನ್ 3 ರಂದು ವಿಶ್ವ ಬೈಸಿಕಲ್ ದಿನಾಚಾರಣೆ ಅಂಗವಾಗಿ ಆರೋಗ್ಯ ಇಲಾಖೆಯಿಂದ ಸೈಕಲ್ ಜಾಥಾ ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಪ್ರತಿವರ್ಷದಂತೆ ಬರುವ ಜೂನ್ 3 ರಂದು ಎಲ್ಲೆಡೆ ವಿಶ್ವ ಬೈಸಿಕಲ್ …

Read More »

ರೈತನ ಬದುಕನ್ನೇ ಕೊಳ್ಳಿ ಇಟ್ಟ ಬಿರುಗಾಳಿ ನೆಲಕ್ಕೂರುಳಿದ ಬಾಳೆ ಬೆಳೆ

ರೈತನ ಬದುಕನ್ನೇ ಕೊಳ್ಳಿ ಇಟ್ಟ ಬಿರುಗಾಳಿ, ನೆಲಕ್ಕೂರುಳಿದ ಬಾಳೆ ಬೆಳೆ ಹುಬ್ಬಳ್ಳಿ ರೈತ ತಾನು ಬೆಳೆದ ಬೆಳೆಯನ್ನು ಬಿರುಗಾಳಿ ಎಂಬ ಭೂತ ಬಂದು ಕೊಚ್ಚಕೊಂಡು ಹೋಗಿದೆ.. ವರ್ಷವಿಡಿ ಬೆಳೆದ ಬಾಳಿ ಗಿಡಗಳು ಬಿರುಗಾಳಿ ರಬಸಕ್ಕೆ ನೆಲಸಮವಾದ ಘಟನೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ. ರೈತ ಅಪ್ಪಯ್ಯ ವಸ್ತ್ರದ ಎಂಬುವರ ಹೊಲದಲ್ಲಿ ಸಂಜೆಹೊತ್ತಿಗೆ ಬಿಸಿದ ಬಿರುಗಾಳಿ ಹೊಡೆತಕ್ಕೆ ಬಾಳೆಗಿಡಗಳು ಸಂಪೂರ್ಣ ನಾಶವಾಗಿ ನೆಲಸಮವಾಗಿ ಬಿಟ್ಟಿವೆ. ಸುಮಾರು ಒಂದೂವರೆ ಎಕ್ರೆ ಬಾಳೆಬೆಳೆ …

Read More »

ಮನೆಯೊಡೆಯನಿಗೂ 2000 ಸಾವಿರ ರೂಪಾಯಿ ಕೊಡಲು ಒತ್ತಾಯ

ಮನೆಯೊಡೆಯನಿಗೂ 2000 ಸಾವಿರ ರೂಪಾಯಿ ಕೊಡಲು ಒತ್ತಾಯ ಧಾರವಾಡ: ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲೊಂದಾದ ಮನೆಯೊಡತಿಗೆ 2 ಸಾವಿರ ರೂಪಾಯಿ ಕೊಡುವ ಯೋಜನೆ ಅತ್ತೆಗೆ ನೀಡಬೇಕೋ ಅಥವಾ ಸೊಸೆಗೆ ನೀಡಬೇಕೋ ಎಂಬ ಗೊಂದಲ ಶುರವಾದ ಬೆನ್ನಲ್ಲೇ ಕಾಂಗ್ರೆಸ್‌ಗೆ ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಮತ ಹಾಕಿದ್ದಾರೆ. ಮನೆಯೊಡೆಯನಿಗೂ ಮಾಸಿಕ 2 ಸಾವಿರ ರೂಪಾಯಿ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪಾಸ್ ಅಂತಾ …

Read More »