Breaking News

ಧಾರವಾಡ

ಮಳೆಹಾನಿಗೆ ಒಳಗಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ಟ ಸಂತ್ರಸ್ಥರಿಗೆ ಮೂಲಭೂತ ಸಾಮಗ್ರಿಗಳನ್ನು ವಿತರಣೆ

ಧಾರವಾಡ: ಜಿಲ್ಲೆಯಲ್ಲಿ ಮಳೆಹಾನಿಗೆ ಒಳಗಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸಂತ್ರಸ್ಥರಿಗೆ ಮೂಲಭೂತ ಸಾಮಗ್ರಿಗಳನ್ನು ವಿತರಿಸಿದರು.ಜಿಲ್ಲೆಯ ಹನುಮನಾಳ ಗ್ರಾಮದಲ್ಲಿ ಬಿದ್ದ ಮನೆಗಳಿಗೆ ಭೇಟಿ ನೀಡಿ, ನಿರಾಶ್ರಿತರಿಗೆ ಮೂಲಭೂತ ವಸ್ತುಗಳನ್ನು ವಿತರಿಸಿದರು. ಮತ್ತು ಗ್ರಾಮದ ಸೇತುವೆ ಮತ್ತು ದೇವಾಲಯಗಳಿಗೆ ಭೇಟಿ ನೀಡಿ ಸುರಕ್ಷತೆಯನ್ನು ಪರೀಕ್ಷಿಸಿದರು. ಈ ವೇಳೆ ಕೇಂದ್ರ ಸರ್ಕಾರ ನಿಮ್ಮ ಜೊತೆ ಇದೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ …

Read More »

ಧಾರವಾಡದಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನರನ್ನು ರಕ್ಷಿಸಲು ಜಿಲ್ಲಾಡಳಿತ ವಿಫಲ: ಆರೋಪ

ಧಾರವಾಡ: ನಗರದ ಚಪ್ಪರಬಂದ ಕಾಲೋನಿಯಲ್ಲಿರುವ ತಮ್ಮನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಸಂತ್ರಸ್ತ ದಂಪತಿ ಆರೋಪಿಸಿದ್ದಾರೆ.ಚಪ್ಪರಬಂದ ಕಾಲೋನಿಯ ದ್ರಾಕ್ಷಾಯಿಣಿ ಹಾಗೂ ಮಂಜುನಾಥ ದಂಪತಿ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿದ್ದಾರೆ. ಕೇವಲ 6 ಅಡಿ ಜಾಗದಲ್ಲಿ ಇವರು ವಾಸವಾಗಿದ್ದು, ‌ಭಾರಿ ಮಳೆ ಹಿನ್ನೆಲೆ ಗಟಾರ ಪಕ್ಕದಲ್ಲಿರುವ ಮನೆ ಗೋಡೆ ಕುಸಿತವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಪ್ರವಾಹದ ಹಿನ್ನೆಲೆ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ ನಮ್ಮತ್ತ ಗಮನ ಹರಿಸಿಲ್ಲವೆಂದು ದೂರಿದ್ದಾರೆ. ಪ್ರವಾಹದ ಮುನ್ಸೂಚನೆಯಿದ್ದರೂ ಯಾಕೆ ನಮ್ಮನ್ನು ಸ್ಥಳಾಂತರಿಸಿಲ್ಲ …

Read More »

ಮಹಾಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ ನಿರಾಶ್ರಿತರಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ಜೆ.ಜಿ ಕಾಲೇಜ್ ಆಫ್ ಕಾಮರ್ಸ್ ನ 2008-09.ಸಾಲಿನ ವಿದ್ಯಾರ್ಥಿಗಳು

ಧಾರವಾಡ: ಕಳೆದ ಹಲವಾರು ದಿನಗಳಿಂದ ಉತ್ತರ ಕರ್ನಾಟಕ ಮಹಾಮಳೆಗೆ ತತ್ತರಿಸಿ ಹೋಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಹಾಮಳೆಯ ಹಾವಳಿಯಿಂದಾಗಿ ಧಾರವಾಡ ಜಿಲ್ಲೆಯ ಹಲವು ಗ್ರಾಮಸ್ಥರೂ ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಬೆಣ್ಣೆ ಹಳ್ಳ, ಉಣಕಲ್ ಕೆರೆ, ಸೇರಿದಂತೆ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ವರುಣನ ಆರ್ಭಟಕ್ಕೆ ಹಲವಾರು ಕುಟುಂಬಗಳು ನಿರಾಶ್ರಿತರನ್ನಾಗಿಸಿದೆ.ಈ ಹಿನ್ನೆಲೆಯಲ್ಲಿ ನಗರದ ಜೆ.ಜಿ ಕಾಲೇಜ್ ಆಫ್ …

Read More »

ಪ್ರವಾಹ ಕುರಿತು ಸಿಎಂ ಜೊತೆ ಚರ್ಚಿಸುವದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ.

ಧಾರವಾಡ:ಜಿಲ್ಲೆಯಲ್ಲಿ ಪ್ರವಾಹದಿಂದ ಕೆರೆ ಒಡೆದು ನೂರಾರು ಎಕರೆ ಭೂಮಿ ಮತ್ತು ಬೆಳೆ ಹಾನಿಯಾಗಿದೆ. ಆದ್ದರಿಂದ ಇರುವ ನಿಯಮಗಳಲ್ಲಿಯೇ ಹೆಚ್ಚು ಜನರಿಗೆ ಸಹಾಯವಾಗುವ ರೀತಿಯಲ್ಲಿ ಪರಿಹಾರಕ್ಕೆ ಪರಿಗಣಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಮಯದಲ್ಲಿ ಮಾತನಾಡಿದ ಅವರು, ಒಂದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಎರಡು ಗೋಡೆ ಬಿದ್ದರೆ ಅದನ್ನು ಶೇ‌ 50 ಪ್ರತಿಶತ ಮಾಡುತ್ತಿದ್ದಾರೆ. ಆದರೆ ಎರಡು ಗೋಡೆ ಬಿದ್ದರೂ ಅದನ್ನು …

Read More »

ಸಂತ್ರಸ್ಥರಿಗೆ ಪರಿಹಾರ ನೀಡಲು ಇಂದಿರಮ್ಮನ ಕೆರೆಗೆ ಅಪರ ಮುಖ್ಯ ಕಾರ್ಯದರ್ಶಿ ವಿ.ಮಂಜುಲ ಭೇಟಿ

ಧಾರವಾಡ:ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಅವಘಡಗಳು ಸಂಭವಿಸುತ್ತಿವೆ.ಕೊಟಬಾಗಿ – ಜಿರಗೆವಾಡ ಗ್ರಾಮಕ್ಕೆ ತೆರಳುವ ಬಸ್​​ವೊಂದು ಇಕ್ಕಟ್ಟಾದ ರಸ್ತೆಯಲ್ಲಿ ದಾಟಲು ಹೋಗಿ ಮರಕ್ಕೆ‌ ಡಿಕ್ಕಿ ಹೊಡೆದಿದೆ. ಧಾರವಾಡ ತಾಲೂಕಿನ ಹಂಗರಕಿ ರಸ್ತೆ ಬಳಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್​​ ಬಸ್​​ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭೂ ಕೊರೆತ ಉಂಟಾಗಿದೆ. …

Read More »

ವರುಣನ ಆರ್ಭಟಕ್ಕೆ ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿ

ಧಾರವಾಡ: ಜಿಲ್ಲೆಯ ಅಳ್ನಾವರ ಭಾಗದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿಯಾಗಿ ಕೋಡಿ ಒಡೆದು ನೀರು ತುಂಬಿ ಹರಿಯುತ್ತಿದೆ.ಕೆರೆ ತುಂಬಿ ಹರಿಯುತ್ತಿರುವುದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕುಸಿತವಾಗಿದೆ.ನಿನ್ನೆ ಜಿಲ್ಲಾಡಳಿತ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಮಳೆ ನಿರಂತರವಾಗಿ ಮುಂದುವರಿದ ಕಾರಣ ನೀರು ಇನ್ನೂ ‌ಹೆಚ್ಚಾಗುವ ಸಾಧ್ಯತೆ ಇದೆ.

Read More »

ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿರುವ ಪುರಾತನ ಹೊನ್ನಮ್ಮ ಕೆರೆ

ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ 24 ಗಂಟೆಗಳ ಕಾಲ ಸುರಿದ ಮಳೆಗೆ ಧಾರವಾಡ ತಾಲ್ಲೂಕಿನ ಮುಗದ ಗ್ರಾಮದ ಪುರಾತನ ಹೊನ್ನಮ್ಮನ ಕೆರೆ ಕಳೆದ 18 ವರ್ಷಗಳ ಬಳಿಕ ಭಾರೀ ಪ್ರಮಾಣದ ನೀರು ಹರಿದು ಬಂದಿರುವುದು ರೈತರಲ್ಲಿ ಸಂತಸ ಮೊಡಿಸಿದೆ. ಸೋಮವಾರ ದಿಂದ ಸತತವಾಗಿ ಸುರಿದ ಬಾರಿ ಮಳೆಗೆ ಈ ಗ್ರಾಮದ ಜನರಲ್ಲಿ ಸಂತೋಷ ಮನೆ ಮಾಡಿದೆ.2001ರಲ್ಲಿ ಸುರಿದ ಮಳೆಗೆ ಈ ಗ್ರಾಮದ ಐತಿಹಾಸಿಕ ಕೆರೆ ತುಂಬಿ ಕೋಡಿ ಬಿದ್ದಿತ್ತು. ಅದರ ನಂತರ …

Read More »

ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ

ಧಾರವಾಡ: ಕಳೆದ ಒಂದು ತಿಂಗಳುಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೇ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಕೆಲವು ಕಡೆ ಮರಗಳು ನೆಲಕ್ಕುರುಳುತ್ತಿವೆ. ಇದಕ್ಕೆ ಪೂರಕ ಎಂಬಂತೆ ಬುಧವಾರ ನಗರದ ಗಾಂಧಿನಗರದ ಮನೆ ಮೇಲೆ ಮರ ಬಿದ್ದಿದೆ.ಯಾವುದೇ ಹಾನಿ ಸಂಭವಿಸಿಲ್ಲ,ಇನ್ನೊಂದೆಡೆ ಹಲವು ಗ್ರಾಮಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಗ್ರಾಮದಲ್ಲಿ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಘಟನೆ ನಡೆದಿವೆ. ಮಂಗಳವಾರವೂ ಸಹ ಧಾರವಾಡ ತಾಲೂಕಿನ ಮನಸೂರ ಗ್ರಾಮದ ಜನತಾ ಪ್ಲಾಟ್ ನಲ್ಲಿರುವ ಬಸವರಾಜ್ …

Read More »

ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ

ಧಾರವಾಡ:ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಧಾರವಾಡ ನಗರ, ಅಳ್ನಾವರ ಪಟ್ಟಣ ಮತ್ತು ತಾಲೂಕಿನ ಕೆಲ ಭಾಗಗಳ ಸಂಪರ್ಕ ಕಡಿತಗೊಂಡಿದೆ.ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ದೇಸಾಯಿ ಚಾಳ ಮತ್ತು ಎಂ.ಸಿ. ಹಿರೇಮಠ ಪ್ಲಾಟ್ ಎರಡು ಬಡಾವಣೆಗಳಿಗೆ ನೀರು ಆವರಿಸಿದೆ. ಅಳ್ನಾವರ ಬಳಿಯ ಪುರ ಮತ್ತು ಗುಂಡೊಳ್ಳಿ ಗ್ರಾಮಗಳ ರಸ್ತೆಗಳು ಜಲಾವೃತಗೊಂಡು ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.ಮಳೆ ಹಿನ್ನೆಲೆ ಜಿಲ್ಲೆಯಲ್ಲಿ‌ ಅಲ್ಲಲ್ಲಿ ನುಗ್ಗಿದ ನೀರುಅದಷ್ಟೇ ಅಲ್ಲದೇ ಧಾರವಾಡ ಹೊಯ್ಸಳ ನಗರದ ಹತ್ತಿರ ಮಧ್ಯರಾತ್ರಿ …

Read More »

ಧಾರವಾಡದಲ್ಲಿ ಮನೆ ಮಾಡಿದ ರೊಟ್ಟಿ ಹಬ್ಬದ ಸಂಭ್ರಮ

ಧಾರವಾಡ: ಪಂಚಮಿ ಹಬ್ಬ ಬಂದೈತ ಸನಿಹಕ.., ಅಣ್ಣ ಯಾಕೋ ಬರಲ್ಲಿಲ್ಲ ಕರಿಲಾಕ,ನನ್ನ ತವರೂರು ಧಾರವಾಡ ಜಿಲ್ಲೆ ನನ್ನ ಅಣ್ಣಯ್ಯ ದೊಡ್ಡ ಸಾಹುಕಾರ,ಮನಿ ಎಂಥದ್ದು ರಾಜಮಂದಿರಹ್ಯಾಂಗ ಆದೀತ ಬಿಟ್ಟು ಇರಲಾಕ ಹೀಗೆ ಉತ್ತರ ಕರ್ನಾಟಕದ ಜನಪದ ಸಾಹಿತ್ಯದಲ್ಲಿ ಈ ಪಂಚಮಿ ಹಬ್ಬದ ಕುರಿತು ಹಲವು ಹಾಡುಗಳನ್ನು ಕಾಣಬಹುದಾಗಿದೆ.ಈ ರೀತಿ ನಾಗರ ಪಂಚಮಿಗೆ ಅಣ್ಣ ಕರಿಯಲಿಕ್ಕೆ ಬರುವುದು ತಡವಾದರೆ ತನ್ನ ತವಕವನ್ನು ನೆರೆ ಹೊರೆಯ ತನ್ನ ಸ್ನೇಹಿತೆಯ ಜೊತೆಯಲಿ ಅಣ್ಣನ ಬರುವಿಕೆಗೆ ತಂಗಿ …

Read More »