Breaking News

ಧಾರವಾಡ

30 ರಂದು ಕಾರಟಗಿ ಆಸ್ಪತ್ರೆ ನೂತನ ಕಟ್ಟಡುದ್ಘಾಟನೆ ಹಾಗೂ ಪ್ರಾರಂಭೋತ್ಸವ

ಹುಬ್ಬಳ್ಳಿ: ಸುಮಾರು ಒಂದು ದಶಕದಿಂದ ಹುಬ್ಬಳ್ಳಿಯ ‌ರಾಜಧಾನಿ ಕಾಲೋನಿಯ ಕೇಶವಕುಂಜದಲ್ಲಿ‌ ಕಾರ್ಯ ನಿರ್ವಹಿಸುತ್ತಿರುವ ಪ್ರತಿಷ್ಠಿತ ಕಾರಟಗಿ‌ ಆಸ್ಪತ್ರೆಯನ್ನು ನೂತನವಾಗಿ ಗೋಕುಲ ರಸ್ತೆಯ ಆರ್‌. ಎಸ್. ಎಸ್. ಕಚೇರಿ ಬಳಿ ಸ್ಥಳಾಂತರಿಸಲಾಗಿದ್ದು, ಇದೇ ಜೂನ್ 30 ರಂದು ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರಟಗಿ ಆಸ್ಪತ್ರೆಯ ವೈದ್ಯರಾದ ರಾಮಚಂದ್ರ ಕಾರಟಗಿ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಆಸ್ಪತ್ರೆಯನ್ನು ಶ್ರೀ ಸಿದ್ದಾರೂಢ ಮಠದ ಅಂಧ ಮಕ್ಕಳು ಉದ್ಘಾಟಿಸುತ್ತಿರುವದು ವಿಶೇಷವಾಗಿದೆ‌.ಬಡವರ …

Read More »

ಜೂ. 30 ರಂದು ಜಾನಪದ ಪರಂಪರಾ ಉತ್ಸವ -2019 ಕಾರ್ಯಕ್ರಮ.‌

ಹುಬ್ಬಳ್ಳಿ: ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹು – ಧಾ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನೃತ್ಯ ಸಂಸ್ಥೆಯ ಯಶಸ್ವಿ 16 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಾನಪದ ಪರಂಪರಾ ಉತ್ಸವ -2019 ಕಾರ್ಯಕ್ರಮವನ್ನು ಇದೇ ಜೂ. 30 ರಂದು ಸಂಜೆ 6 ಕ್ಕೆ ನಗರದ ಜಗದ್ಗುರು ಮೂರು ಸಾವಿರ ಮಠದ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ನೃತ್ಯ ನಿರ್ದೇಶಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ …

Read More »

ಮಳೆಯ ರಬಸಕ್ಕೆ ತೇಲುತ್ತಿವೆ ಬೈಕ್ ಗಳು

ಹುಬ್ಬಳ್ಳಿ:-ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇಂದು ಜನ ಜೀವನ ಅತಂತ್ರವಾಗಿದೆ. ಇನ್ನೂ ನಗರದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಮಳೆಗೆ ರಸ್ತೆಯ ಬದಿ ನಿಂತಿದ್ದ ವಾಹನಗಳು ತೇಲುತ್ತಿವೆ. ನಗರದ ಪ್ರಮುಖ ಭಾಗವಾದ ಮಾರುಕಟ್ಟೆ ಪ್ರದೇಶದಲ್ಲಿ ಬೈಕ್ ಗಳು ಮಳೆ ನೀರಿನ ರಬಸಕ್ಕೇ ತೇಲುತ್ತಿವೆ. ಇನ್ನೂ ನಗರದ ಪ್ರಮುಖ ತೆಗ್ಗು ಪ್ರದೇಶದಲ್ಲಿ ಮನೆಯೊಳಗೆ ನೀರು ನುಗ್ಗಿದ್ದು, ದವಸ ಧಾನ್ಯಗಳು , ಕುರ್ಚಿಗಳು ಕೊಚ್ಚಿ ಹೊಗಿದೆ. ಮಳೆಗಾಲದ ಆರಂಭದಲ್ಲೇ …

Read More »

ಜೂನ್ 24 ರಿಂದ ಜೂನ್ 30 ರವರೆಗೆ " ಕಡತ ವಿಲೇವಾರಿ ಸಪ್ತಾಹ "

ಕಂದಾಯ ಇಲಾಖೆಯಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಜೂನ್ 24 ರಿಂದ ಜೂನ್ 30 ರವರೆಗೆ ” ಕಡತ ವಿಲೇವಾರಿ ಸಪ್ತಾಹ ” ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.ಸಪ್ತಾಹದ ಅವಧಿಯಲ್ಲಿ ಸಾಮಾನ್ಯ ಕಡತಗಳ ಜೊತೆಗೆ ವಿಶೇಷವಾಗಿ ದೀರ್ಘ ಕಾಲದಿಂದ ಬಾಕಿ ಉಳಿದ ಕಡತಗಳನ್ನು ವಿಲೇವಾರಿ ಮಾಡಲಾಗುವುದು.ಕಡತಗಳ ಶೀಘ್ರ ವಿಲೇವಾರಿಯಲ್ಲಿ ಪಾರದರ್ಶಕತೆ ನಿಯಮ ಕಾಯ್ದುಕೊಳ್ಳುವ ಕುರಿತು ಇಲಾಖಾ ಮುಖ್ಯಸ್ಥರು,ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ತಮ್ಮ ಅಧೀನ …

Read More »

ಕೊಟ್ಟ ಮಾತು ಉಳಿಸಿಕೊಳ್ಳುವುದು, ಋಣ ತೀರಿಸುವುದು ನನ್ನ ಕರ್ತವ್ಯ: ಸಚಿವ ಡಿಕೆಶಿ

ಹುಬ್ಬಳ್ಳಿ:ಕುಂದಗೋಳದ ಎಲ್ಲ ವರ್ಗದ ಜನರು ನಮಗೆ ಆಶೀರ್ವಾದ ಮಾಡಿ ಕೆಲಸ ಮಾಡಲು ಶಕ್ತಿ ನೀಡಿದ್ದಾರೆ. ಅವರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುವುದು ಹಾಗೂ ಅವರ ಋಣವನ್ನು ತೀರಿಸುವುದು ನನ್ನ ಕರ್ತವ್ಯ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಕುಂದಗೋಳ ತಾಲೂಕು ವಿವಿಧ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಕ್ಕೆ ಆಗಮಿಸಿದ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ, ಕುಂದಗೋಳ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ …

Read More »

ಸರ್ಕಾರ ಗಟ್ಟಿಯಾಗಿದೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ ಎಂಬ ದೇವೇಗೌಡರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿಕೆ ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ ನಮ್ಮ ಸರ್ಕಾರ ಸುಭದ್ರ ಸರ್ಕಾರ. ನಮ್ಮ ಪಕ್ಷ ಕುಮಾರಸ್ವಾಮಿ ಅವರನ್ನು ಐದು ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡಲು ತೀರ್ಮಾನಿಸಿ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಯವರು ನಮ್ಮ ಸರ್ಕಾರವನ್ನು ತೆಗೆಯಲು ಪಾಪ ಬಹಳ ಪ್ರಯತ್ನ ಪಡುತ್ತಿದ್ದಾರೆ. ಈಗ ಇತ್ತೀಚೆಗೆ ಯಡಿಯೂರಪ್ಪನವರು ನಾವು ಸರ್ಕಾರ ಬೀಳಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ …

Read More »

ನೀರು ವಿನಿಮಯ ಕುರಿತು ಮಹಾರಾಷ್ಟ್ರ ಸಚಿವರ ಜತೆ ಚರ್ಚೆಗೂ ಮುನ್ನ ಪರಿಸ್ಥಿತಿ ಖುದ್ದು ಅಧ್ಯಯನ: ಸಚಿವ ಡಿಕೆಶಿ

ಹುಬ್ಬಳ್ಳಿ : ‘ನೀರಿಗೆ ನೀರು’ ಎಂಬ ಷರತ್ತು ಮುಂದಿಟ್ಟಿರುವ ಮಹಾರಾಷ್ಟ್ರ ಸಚಿವರ ಜತರ ಚರ್ಚಿಸುವ ಮೊದಲು ವಸ್ತುಸ್ಥಿತಿಯನ್ನು ನಾಳೆ ತಾವೇ ಖುದ್ದು ಅಧ್ಯಯನ ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಉಭಯ ರಾಜ್ಯಗಳ ಜಲ ಸಂಪನ್ಮೂಲ ಸಚಿವರು ಚರ್ಚೆ ನಡೆಸಬೇಕು ಎನ್ನುವುದು ಮಹಾರಾಷ್ಟ್ರ ಸಿಎಂ ಸಲಹೆ. ಜತೆಗೆ ಕರ್ನಾಟಕ ಈಗಾಗಲೇ ಕುಡಿಯುವ ಉದ್ದೇಶಕ್ಕೆ ಬಿಡುಗಡೆ ಮಾಡಿರುವ ನೀರು ತಲುಪಿಲ್ಲ ಎನ್ನುವುದು ಅದರ ದೂರು. ಹೀಗಾಗಿ ಖುದ್ದು ಸ್ಥಳ ಪರಿಶೀಲನೆ …

Read More »

ಖೈದಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸುವ ಕಾರ್ಯಶುರು

ಹುಬ್ಬಳ್ಳಿಯ ನೂತನ ನ್ಯಾಯಾಲಯದಲ್ಲಿ ಇಂದು ವಿಚಾರಣಾಧೀನ ಖೈದಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರುಪಡಿಸುವ ಕಾರ್ಯಶುರುವಾಗಿದೆ. ಸಬ್ ಜೈಲಿನಲ್ಲಿರುವ ಸೆಷನ್ ಪ್ರಕರಣದ ವಿಚಾರಣಾಧೀನ ಖೈದಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಗಂಗಾಧರ ಅವರು ವಿಚಾರಣೆ ನಡೆಸಿದರು. ಖೈದಿಗಳನ್ನು ಭದ್ರತೆಯಲ್ಲಿ ನ್ಯಾಯಾಲಯಗಳಿಗೆ ಹಾಜರು ಪಡಿಸಬೇಕು. ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಗಳು ಲಭ್ಯವಿಲ್ಲದಿದ್ದಾಗ ಅವರನ್ನು ಕೋರ್ಟ್ ಗೆ ಹಾಜರು ಪಡಿಸಲಾಗುದಿಲ್ಲ. ಇದರಿಂದಾಗಿ ವಿಚಾರಣೆ ತೊಂದರೆಯಾಗುತ್ತದೆ. ಕೆಲವೊಮ್ಮ ಸಾಕ್ಷೀಗಳನ್ನು ಸಹ …

Read More »

ಗಂಡನನ್ನು ಹುಡುಕಿಕೊಡುವಂತೆ ಮನವಿ ಮಾಡಿದ ಪ್ರಕರಣಕ್ಕೆ ಹೊಸ ತಿರುವು

ಪ್ರೀತಿಸಿ ಮದುವೆಯಾದ ಯುವಕ ವಂಚಿಸಿ ಪರಾರಿಯಾಗಿದ್ದಾನೆಂದು ಯುವತಿಯೊಬ್ಬರು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲೂ ನನ್ನ ಗಂಡನನ್ನು ಹುಡುಕಿಕೊಡುವಂತೆ ಮನವಿ ಮಾಡಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿ ಹೆಚ್ಚು ವೈರಲ್ ಆಗಿತ್ತು. ಆದರೆ ಮಂಗಳವಾರ ತಡರಾತ್ರಿ ಯುವತಿ ಕಾವೇರಿ ನವಲಗುಂದ ಪೊಲೀಸ್ ಠಾಣೆಗೆ ಬಂದು ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಯುವತಿ ನಾನು ಮತ್ತು ಕಲ್ಮೇಶ ಬೋರಶೆಟ್ಟಿ ಪ್ರೀತಿಸಿ ಮದುವೆಯಾಗಿದ್ದೇವು. ಆದರೆ ಅವರ …

Read More »

ಹುಬ್ಬಳ್ಳಿಯಲ್ಲಿ ಅಮರ್ ಚಲನಚಿತ್ರ ತಂಡದಿಂದ ವಿಜಯಯಾತ್ರೆ

ಹುಬ್ಬಳ್ಳಿಯಲ್ಲಿ ಅಮರ್ ಚಲನಚಿತ್ರ ತಂಡದಿಂದ ವಿಜಯಯಾತ್ರೆ ನಡೆಯಿತು. ಕೆಎಲ್‌ಇ ಸಂಸ್ಥೆಯ ಬಿವಿಬಿ ಕಾಲೇಜಿನ ಆಡಿಟೋರಿಯಂನಲ್ಲಿ ಚಿತ್ರ ತಂಡದೊಂದಿಗೆ ವಿದ್ಯಾರ್ಥಿಗಳ ಸಂವಾದ ಏರ್ಪಡಿಸಲಾಗಿತ್ತು. ಸಂಸದೆ ಸುಮಲತಾ, ಚಿತ್ರದ ನಾಯಕ ನಟ ಅಭಿಷೇಕ, ರಾಕ್‌ಲೈನ್ ವೆಂಕಟೇಶ್, ನಾಗಶೇಖರ್, ದೊಡ್ಡಣ್ಣ ಮತ್ತು ಯೋಗರಾಜ್‌ ಭಟ್ ಉಪಸ್ಥಿತರಿದ್ದರು. ಚಿತ್ರದ ಟ್ರೈಲರ್ ವೀಕ್ಷಿಸಿದ ವಿದ್ಯಾರ್ಥಿಗಳು ಅಭಿಷೇಕ್‌ ಮತ್ತು ಅಂಬರೀಷ್ ನಟನೆಯ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ರು. ಸಂಸದೆ ಸುಮಲತಾ ಅವರು ವೇದಿಕೆಗೆ ಬರುತ್ತಿದ್ದಂತೆ, ನಿಖಿಲ್ ಎಲ್ಲಿದೀಯಪ್ಪ, ನಿಖಿಲ್ ಎಲ್ಲಿದೀಯಪ್ಪ …

Read More »