ಹುಬ್ಬಳ್ಳಿ:-ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇಂದು ಜನ ಜೀವನ ಅತಂತ್ರವಾಗಿದೆ. ಇನ್ನೂ ನಗರದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಮಳೆಗೆ ರಸ್ತೆಯ ಬದಿ ನಿಂತಿದ್ದ ವಾಹನಗಳು ತೇಲುತ್ತಿವೆ. ನಗರದ ಪ್ರಮುಖ ಭಾಗವಾದ ಮಾರುಕಟ್ಟೆ ಪ್ರದೇಶದಲ್ಲಿ ಬೈಕ್ ಗಳು ಮಳೆ ನೀರಿನ ರಬಸಕ್ಕೇ ತೇಲುತ್ತಿವೆ. ಇನ್ನೂ ನಗರದ ಪ್ರಮುಖ ತೆಗ್ಗು ಪ್ರದೇಶದಲ್ಲಿ ಮನೆಯೊಳಗೆ ನೀರು ನುಗ್ಗಿದ್ದು, ದವಸ ಧಾನ್ಯಗಳು , ಕುರ್ಚಿಗಳು ಕೊಚ್ಚಿ ಹೊಗಿದೆ. ಮಳೆಗಾಲದ ಆರಂಭದಲ್ಲೇ ಎಚ್ಚೆತ್ತು ಕೊಳ್ಳಬೇಕಾದ ಮಹಾನಗರ ಪಾಲಿಕೆ ಈಗಾಲಾದ್ರೂ ಎಚ್ಚೆತ್ತು ಮಳೆ ನೀರು, ಸುಗಮವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





