Breaking News

ಹುಬ್ಬಳ್ಳಿ-ಧಾರವಾಡ

ಸದನದಲ್ಲಿ ರಮೇಶಕುಮಾರ ಹೇಳಿಕೆ ಸರಿಯಲ್ಲ.ಈ ಬಗ್ಗೆ ಸ್ಪಷ್ಟೀಕರಣ ಕೋಡಬೇಕು- ಜಗದೀಶ ಶೆಟ್ಟರ್

ಹುಬ್ಬಳ್ಳಿ: ಸದನದಲ್ಲಿ ಮಾಜಿ ಸಚಿವ ರಮೇಶ ಕುಮಾರ್ ವಿವಾದಾತ್ಮಕ ಹೇಳಿಕೆ ವಿಚಾರ.ಸದನದಲ್ಲಿ ರಮೇಶ್ ಕುಮಾರ ಅವರಂತಹ ಹಿರಿಯರು ಆ ರೀತಿ ಹೇಳಬಾರದಾಗಿತ್ತು.ಅವರು ಯಾಕೆ ಹೇಳಿದ್ರು ಅಂತ ಅರ್ಥ ಆಗಲಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಪ್ರತಿಕ್ರಿಯೆ ನೀಡಿದರು. ಈ ರೀತಿ ಶಬ್ದ ಪ್ರಯೋಗ ಅಥವಾ ಮಹಿಳೆಯರ ಬಗ್ಗೆ ಮಾತನಾಡೋದು ಸರಿ ಅಲ್ಲ.ರಮೇಶ್ ಕುಮಾರ್ ಈ ಬಗ್ಗೆ ಸ್ಪಷ್ಟಿಕರಣ ಕೊಡಬೇಕು.ನಿನ್ನೆಯೇ ಆ ಬಗ್ಗೆ ಕ್ಷಮೆ ಕೇಳಬೇಕಿತ್ತು, ಇವತ್ತು ಕೇಳಿದ್ದಾರೆ‌.ಒಳ್ಳೆ ರೀತಿಯ …

Read More »

ಅಖಿಲ ಭಾರತ ರೈಲ್ವೆ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ : ನೈರುತ್ಯ ರೈಲ್ವೆಗೆ ದ್ವಿತೀಯ ಸ್ಥಾನ

ಹುಬ್ಬಳ್ಳಿ : ಪಶ್ಚಿಮ ರೈಲ್ವೆ ವತಿಯಿಂದ ಮುಂಬೈನಲ್ಲಿ ಇದೇ ತಿಂಗಳು 7 ರಿಂದ 10ರವರೆಗೆ 17ನೇ ಅಖಿಲ ಭಾರತ ರೈಲ್ವೆ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ನೈರುತ್ಯ ರೈಲ್ವೆಯು 1 ಚಿನ್ನ, 3 ಬೆಳ್ಳಿ ಮತ್ತು 2 ಕಂಚಿನ ಪದಕವನ್ನು ಗೆದ್ದು ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಹುಬ್ಬಳ್ಳಿ ವಿಭಾಗದಲ್ಲಿ ಜ್ಯೂನಿಯರ್‌ ಕ್ಲರ್ಕ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಮುದಾಸರ್‌ ಖಾನ್‌ ಮತ್ತು ಶ್ರೀರಾಜ್‌ ಪಿ.ಎಸ್‌ ಅವರು ಕ್ರಮವಾಗಿ …

Read More »

ರಾಷ್ಟೀಯ ಜಾನುವಾರು ರೋಗನಿಯಂತ್ರಣ ಕಾರ್ಯಕ್ರಮಕ್ಕೆ ಶಾಸಕಿ ಕುಸುಮಾ ಶಿವಳ್ಳಿ ಚಾಲನೆ

ಹುಬ್ಬಳ್ಳಿ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮಕ್ಕೆ ಇಂದು ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಗೋವಿಗೆ ಪೂಜೆ ಮಾಡುವ ಮೂಲಕ ಶಾಸಕಿ ಕುಸುಮಾ ಶಿವಳ್ಳಿ ಚಾಲನೆ ನೀಡಿದರು. ಕಾಲುಬಾಯಿ ರೋಗ ಲಸಿಕಾ‌ ಅಭಿಯಾನದಲ್ಲಿ ಪಶು ಪ್ರಾಣಿಗಳಿಗೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಪಶು ಆಸ್ಪತ್ರೆ ಸಹಾಯಕ ನಿರ್ದಶಕರಾದ ಡಾ.ಅವಾರಿ ಸೇರಿದಂತೆ‌ ಗ್ರಾಮದ ಪ್ರಗತಿ ಪರ ರೈತರು‌ ಗ್ರಾಮಸ್ಥರು ಉಪಸ್ಥಿತರಿದ್ದರು.

Read More »

ಅತಿವೃಷ್ಠಿ ( ಮಳೆ ಹಾನಿ) ಹಾನಿ ಕುರಿತು ಪೋಟೊ ಗ್ಯಾಲರಿ ಹಾಗೂ ಪ್ರಾತ್ಯಕ್ಷೀಕೆ ಮೂಲಕ ವಿವರಿಸಿದ ಧಾರವಾಡ ಡಿಸಿ…

ಹುಬ್ಬಳ್ಳಿ: ಕಳೆದ ನವಂಬರ್ ತಿಂಗಳಿನ‌ ಕೊನೆಯಲ್ಲಿ ಸುರಿದ ಮಳೆಗೆ ಸಾಕಷ್ಟು ಬೆಳೆ ಹಾನಿ‌ಸಂಭವಿಸಿದೆ. ಹೀಗಾಗಿಧಾರವಾಡ ಜಿಲ್ಲೆಗೆ ಇಂದು ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿದ್ದು, ನವೆಂಬರ್‌ನಲ್ಲಿ ಉಂಟಾದ ಮಳೆ ಹಾನಿ ಪರಿಶೀಲನೆ ನಡೆಸಲಿದೆ. ಬೆಳೆ, ಮನೆ ಮತ್ತು ರಸ್ತೆ ಹಾನಿಯನ್ನು ವೀಕ್ಷಣೆ ಮಾಡಲಿದೆ‌. ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಕುಂದಗೋಳ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕೇಂದ್ರ ನೆರೆ ಅಧ್ಯಯನ ತಂಡದ ಪರಿಶೀಲನೆಗೂ ಮುನ್ನ ಧಾರವಾಡ ಡಿಸಿ …

Read More »

ಮಾದ್ಯಮದವರಿಂದ ಅಂತರ ಕಾಯ್ದುಕೊಳ್ಳುತ್ತಿರುವ ಸಿಎಂ – ಮಾದ್ಯದವರಿಗೆ ಪ್ರತಿಕ್ರಿಯೆ ನೀಡದೆ ನಕಾರ

ಹುಬ್ಬಳ್ಳಿ :ಇಂದು ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ ನಿವಾಸದದಿಂದ ಬೆಳಗಾವಿಗೆ ಹೊರಟ ವೇಳೆ ಮಾದ್ಯದವರಿಗೆ ಪ್ರತಿಕ್ರಿಯೆ ನೀಡದೇ ಹೊರಟು ಹೋಗಿದ್ದು,ಎಲ್ಲೋ ಒಂದು ಕಡೆ ಸಿಎಂ ಮಾದ್ಯದವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗ್ತಿದೆ. ಬೆಳಗಾವಿ ಹೊರಟವೇಳೆ ಮಾದ್ಯವದವರಿಗೆ ವಿಧಾನಸಭೆಗೆ ಹೋಗಬೇಕಾಗಿದೆ ಎಂದು ಮಾತ್ರ ಹೇಳಿ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋದರು..

Read More »
Featured Video Play Icon

ಕುಮಾರಸ್ವಾಮಿ ಹುಟ್ಟು ಹಬ್ಬ 101 ತೆಂಗಿನಕಾಯಿ ಒಡೆದ ಜೆಡಿಎಸ್ ಕಾರ್ಯರ್ತರು

Read More »

ಲವ್ ಜಿಹಾದ್ ಕುರಿತು ಸಮಗ್ರ ತನಿಖೆ ಆಗಲಿ- ಧಾರವಾಡದಲ್ಲ ಹಿಂದೂ ಪರಿಷತ್ ವತಿಯಿಂದ ಮನವಿ

ಹುಬ್ಬಳ್ಳಿ :ಧಾರವಾಡದಲ್ಲಿ ನೆಡೆದ ಲವ್ ಜಿಹಾದ್ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿ ಇಂದು ಹಿಂದೂ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು. ಹಿಂದೂ ಯುವತಿಯಾದ ಪ್ರೀಯಾ ಪವಾರ ಎಂಬ ಯುವತಿಯನ್ನು ಹಜೀಮ್ ನದಾಫ್ ಎಂಬ ಮುಸ್ಲಿಂ ಯುವಕನು ಮದುವೆಯಾಗಿ ನಂತರ ಇಸ್ಲಾಂ‌ ಧರ್ಮಕ್ಕೆ ಮತಾಂತರ ಮಾಡಿದ್ದಾನೆ.ಜಿಲ್ಲೆಯಲ್ಲಿ ಅನೇಕ ಹಿಂದೂ ಯುವತಿಯರು ಲವ್ ಜಿಹಾದ್ ಮತಾಂತರಕ್ಕೆ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ.ಈ ಮತಾಂತರ ಚಟುವಟಿಕೆಯಲ್ಲಿ ಒಂದು ಸಂಘ ಕಾರ್ಯ ಮಾಡುತ್ತಿರುವುದ ನಮ್ಮ ಗಮನಕ್ಕೆ ಬಂದಿದ್ದು …

Read More »

ರಾಜೀವ್ ಗಾಂಧಿ ವಿ.ವಿ.ಕಾಯ್ದೆಗೆ ವಿರೋಧಿಸಿ ಎಬಿವಿಪಿ ಪ್ರೋಟೆಸ್ಟ್

ಹುಬ್ಬಳ್ಳಿ : ಗೋಕುಲ ರಸ್ತೆ ಸಂಜೀವಿನ್ ಆರ್ಯುವೇದಿಕ್ ಕಾಲೇಜು ಎದುರು ಪ್ರತಿಭಟನೆ ನೆಡೆಸಿದರು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೆಡೆದ ಈ ಪ್ರತಿಭಟನೆಯಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಕಾಯ್ದೆ ತಿದ್ದುಪಡಿಯಿಂದ ಸರ್ಕಾರದ ಕೈಗೊಂಬೆಯಾಗುತ್ತದೆ ವಿವಿ ಸರ್ಕಾರ ಕೂಡಲೇ ಈ ನಿರ್ಧಾರ ತೆಗೆದುಕೊಳ್ಳಲು ಮುಂದಾಗಲಿ.ಸಾಕಷ್ಟು ವಿದ್ಯಾರ್ಥಿಗಳ ಹಿತಾಸಕ್ತಿ ಧಕ್ಕೆ ಬರುತ್ತದೆ. ಯಾವುದೇ ಸಾಧಕ ಬಾಧಕ ಕುರಿತು ಚರ್ಚೆ ಮಾಡದೇ ಈ ನಿರ್ಧಾರ ಸರಿಯಲ್ಲ

Read More »
Featured Video Play Icon

ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಪ್ರಕ್ರಿಯೆ ಕೈಬಿಡಿ- ದಯಾನಂದ ಸ್ವಾಮೀಜಿ

Read More »

ಪೇಢಾನಗರಿಯಲ್ಲಿ ಸರಣಿಗಳ್ಳತನ- ಚಿನ್ನಾಭರಣ ಎಗರಿಸಿದ ಖದೀಮರು

ಧಾರವಾಡ : ಧಾರವಾಡದ ವಿಜಯಾನಂದನಗರ ಹಾಗೂ ಭಾವಿಕಟ್ಟಿ ಪ್ಲಾಟ್‌ನಲ್ಲಿ ಮೂರು ಮನೆಗಳಿಗೆ ಕನ್ನ ಹಾಕಿರುವ ಖದೀಮರು ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಭಾವಿಕಟ್ಟಿ ಪ್ಲಾಟ್‌ನ ಕಲ್ಲಪ್ಪ ಜೋಡಳ್ಳಿ, ವಿಜಯಾನಂದನಗರದ ನಿರ್ಮಲಾ ಬಂಕಾಪುರ ಹಾಗೂ ವೆಂಕಟೇಶ ಟಿಕಾನದಾರ ಎಂಬುವವರ ಮನೆಗೆ ಕನ್ನ ಹಾಕಿರುವ ಕಳ್ಳರು ಅಪಾರ ಪ್ರಮಾಣದ ಚಿನ್ನದ ವಸ್ತು ಹಾಗೂ ನಗದು ದೋಚಿಕೊಂಡು ಹೋಗಿದ್ದಾರೆ. ಈ ಮೂರೂ ಮನೆಯವರು ಊರಿಗೆ ಹೋದ ಸಂದರ್ಭವನ್ನು ಬಳಕೆ ಮಾಡಿಕೊಂಡ ಕಳ್ಳರು, ಮನೆಯ …

Read More »