Breaking News

ಹುಬ್ಬಳ್ಳಿ-ಧಾರವಾಡ

ಮಾರ್ವೆಲ್ ಪ್ರಾಪರ್ಟೀಸಗೆ ಮುಡಿಗೆ ISO

ಹುಬ್ಬಳ್ಳಿ: ವಿಶ್ವ ವರ್ಗದಲ್ಲಿ ಖ್ಯಾತಿ ಪಡೆದ ಮಾರ್ವೆಲ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಐಎಸ್ಒ ಪ್ರಮಾಣಿಕರಣಗೊಂಡಿದ್ದು, ರಿಯಲ್ ಎಸ್ಟೇಟ್ ಅಭಿವೃದ್ಧಿ ಯೋಜನೆಗಳಿಗೆ ಹು-ಧಾ ಮಹಾನಗರದಲ್ಲಿ ಪ್ರಸಿದ್ದಿ ಪಡೆದಿರುವ ಮಾರ್ವೆಲ್ ಪ್ರಾಪರ್ಟೀಸ್ ಐಎಸ್‌ಒ ಗರಿಯನ್ನು ಮುಡಿಗೇರಿಸಿಕೊಂಡಿರುವುದು ಖುಷಿಯ ಸಂಗತಿಯಾಗಿದೆ ಎಂದು ವ್ಯವಸ್ಥಾಪಕ ಮುಖ್ಯಸ್ಥರಾದ ಸ್ಟೀನಲ್ ಡಿಸೋಜಾ ತಿಳಿಸಿದರು.ನಗರದಲ್ಲಿಂದು ಖಾಸಗಿ ಹೋಟೆಲನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವವರ್ಗದ ರೀಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಹು-ಧಾ ಮಹಾನಗರದಲ್ಲಿ ರೀಯಲ್ ಎಸ್ಟೇಟ್ …

Read More »

ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ಬಿಜಿ ಪುಟ್ಟಸ್ವಾಮಿ

ಹುಬ್ಬಳ್ಳಿ: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಓರ್ವ ಮೂರ್ಖತನದ ಮುಖ್ಯಮಂತ್ರಿ ಅಧಿಕಾರದಲ್ಲಿದ್ದಾರೆ ಎಂದು ಬಿಜಿ ಪುಟ್ಟಸ್ವಾಮಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಹಿತಕ್ಕಿಂತ ಸಿಎಂಗೆ ಮಗನ ಗೆಲುವು ಮುಖ್ಯವಾಗಿದೆ. ಕುಮಾರಸ್ವಾಮಿ ಸ್ವಾರ್ಥ ಮುಖ್ಯಮಂತ್ರಿ. ಕಾಂಗ್ರೆಸ್-ಜೆಡಿಎಸ್ ನಾಯಕರ ಕಚ್ಚಾಟ ತಾರಕಕ್ಕೇರಿದೆ. ಮೈತ್ರಿ ಸರ್ಕಾರದ ಆಡಳಿತದಿಂದ ಅಲ್ಲಿನ ಶಾಸಕರು ಬೇಸತ್ತಿದ್ದಾರೆ ಎಂದು ಪುಟ್ಟಸ್ವಾಮಿ ಆರೋಪಿಸಿದರು. ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಗೆ ಬರಲು ಕ್ಯೂ ನಿಂತಿದ್ದಾರೆ. ರಮೇಶ್ …

Read More »

ಜಿಂದಾಲ ಸಂಸ್ಥೆಗೆ ಭೂಮಿ ಮಾರಾಟದ ನಿರ್ಧಾರವನ್ನು ಕೈ‌ ಬಿಡುಬೇಕು: ಎಸ್‌.ಆರ್.ಹಿರೇಮಠ..

ಹುಬ್ಬಳ್ಳಿ: ಬಳ್ಳಾರಿ ಜಿಲ್ಲೆ ಸೊಂಡುರು ತಾಲೂಕಿನ ತೊರಣಗಲ್ಲಿ, ಕುರೆಕುಪ್ಪೆ, ಮುಸಿನಾಯಕನಹಳ್ಳಿ, ಯರಬನಹಳ್ಳಿಯಲ್ಲಿರುವಬೆಲೆ ಬಾಳುವ 3667 ಎಕರೆ ಭೂಮಿಯನ್ನು ರಾಜ್ಯ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ ಜೆ ಎಸ್ ಡಬ್ಲೂ ಸ್ಟೀಲ್ ಕಂಪನಿಗೆ ಮಾರಾಟ ಮಾಡಲು ನಿರ್ಧಾರ ಕೈಗೊಂಡಿರುವುದು ಸಮಂಜಸವಲ್ಲ ಈ ನಿರ್ಧಾರವನ್ನು ಶೀಘ್ರವಾಗಿ ಕೈ ಬಿಡಬೇಕು ಎಂದು ಸಮಾಜ ಪರಿವರ್ತನಾ ಸಮಿತಿಯ ಮುಖಂಡರಾದ ಎಸ್.ಆರ್.ಹಿರೇಮಠ ಆಗ್ರಹಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ಈ …

Read More »

23 ನಂತ್ರ ಮೋದಿ ‘ಮಹಾನ್ ಫೇಕ್ ಮಹಾರಾಜ’ ಆಗ್ತಾರೆ; ಬಿ.ಕೆ ಹರಿಪ್ರಸಾದ್.

ಹುಬ್ಬಳ್ಳಿ: ಮೇ 23ರ ನಂತರ ಪ್ರಧಾನಿ ಮೋದಿಗೆ ಮಹಾನ್ ಫೇಕ್ ಮಹಾರಾಜ” ಅಂತಾ ಹೆಸರು ಬರಲಿದೆ ಅಂತಾ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಈಗ ವಿಜ್ಞಾನಿ ಆಗಿದ್ದಾರೆ. ಬಾಲಾಕೋಟ್ ದಾಳಿ ಸಂದರ್ಭದಲ್ಲಿ ಮೋಡದ ವಿಜ್ಞಾನಿ ಆಗಿದ್ದರು. ಹಿಂದೆ ಪ್ಲ್ಯಾಸ್ಟಿಕ್ ಸರ್ಜರಿ ವಿಜ್ಞಾನಿ ಕೂಡ ಆಗಿದ್ರು. ಅವರ ಗ್ರಾಜ್ಯುವೆಟ್ ಫೇಕ್, ಅವರು ಕೊಟ್ಟ ಕಾರ್ಯಕ್ರಮಗಳು ಕೂಡ ಫೇಕ್. ಮೊದಲು ಪ್ರಧಾನ …

Read More »

ಸಿ.ಎಸ್​.ಶಿವಳ್ಳಿ ಸಾವಿಗೆ ದೋಸ್ತಿ ಸರ್ಕಾರದ ಕಿರುಕುಳವೇ ಕಾರಣ: ಶ್ರೀರಾಮುಲು

ಹುಬ್ಬಳ್ಳಿ: ಸಿ.ಎಸ್​.ಶಿವಳ್ಳಿ ಸಾವಿಗೆ ಕಾಂಗ್ರೆಸ್-ಜೆಡಿಎಸ್​ ನೇತೃತ್ವದ ಮೈತ್ರಿ ಸರ್ಕಾರವೇ ಕಾರಣ ಅಂತಾ ಶಾಸಕ ಶ್ರೀರಾಮುಲು ಆರೋಪಿಸಿದ್ದಾರೆ. ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ್ ಪರ ಬೆಟದೂರು ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಶಾಸಕ, ಸಿಎಸ್​ ಶಿವಳ್ಳಿ ಮೈತ್ರಿ ಸರ್ಕಾರದ ಕಿರುಕುಳದಿಂದಲೇ ಮೃತಪಟ್ಟಿದ್ದಾರೆ. ಹೀಗಾಗಿ ಕುಂದಗೋಳ ಜನರಿಗೆ ಸೆಡು ತೀರಿಸಿಕೊಳ್ಳುವ ಸಮಯ ಬಂದಿದೆ ಎಂದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ದೊಡ್ಡ ಮನುಷ್ಯ, ಮತ್ತೊಮ್ಮೆ ಸಿಎಂ ಆಗಬೇಕು. ಬಹಳ ವರ್ಷಗಳಿಂದ ಹೋರಾಟ ಮಾಡಿದ್ದಾರೆ. ನಮ್ಮ …

Read More »

ನಾಳೆಯಿಂದ ನೇಪಾಳ ರುದ್ರಾಕ್ಷಗಳ ಪ್ರದರ್ಶನ, ಮಾರಾಟ

ಹುಬ್ಬಳ್ಳಿ : ಮುಂಬೈನ ರುದ್ರಶಕ್ತಿ ಸಹಯೋಗದಲ್ಲಿ ನೇಪಾಳದ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟವನ್ನು ನಾಳೆ ದಿ.16ರಿಂದ 21ರವರೆಗೆ ನಗರದ ಸರ್ಕ್ಯುಟ ಹೌಸ್ ರಸ್ತೆಯಲ್ಲಿರುವ ಹೊಟೇಲ್ ರೇವಣಕರ ಕಂಪರ್ಟ್ಸ ನಲ್ಲಿ ಏರ್ಪಡಿಸಲಾಗಿದೆ ಎಂದು ರುದ್ರಶಕ್ತಿ ರುದ್ರಾಕ್ಷ ಸಂಸ್ಥೆಯ ಸಂಸ್ಥಾಪಕರಾದ ಸುಮೀರ ಕಾಕೋಡಕರ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿಂದು ಪತ್ರಿಕಾಗೋಷ್ಢಿಯಲ್ಲಿ ಮಾತನಾಡಿದ ಅವರು, ಈ ರುದ್ರಾಕ್ಷಿಗಳ ಮಾರಾಟ ಮತ್ತು ಪ್ರದರ್ಶನವನ್ನು ಹುಬ್ಬಳ್ಳಿ ಜನತೆಗಾಗಿ ಆಯೋಜಿಸಲಾಗಿದ್ದು ಇದು ಪ್ರತಿದಿನ ಬೆಳಿಗ್ಗೆ ೧೦ರಿಂದ ರಾತ್ರಿ 08 ಗಂಟೆವರೆಗೆ …

Read More »

ರಾಜ್ಯದ ಹಾಲಿ, ಮಾಜಿ ಮಂತ್ರಿಗಳಿಗೆ ಕುಂದಗೋಳ ಕ್ಷೇತ್ರದ ಅಭಿವೃದ್ಧಿ ಕಾಳಜಿ ಇಲ್ಲ: ಸೊಪ್ಪಿನ

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆ ಪ್ರಚಾರದಲ್ಲಿ ರಾಜ್ಯದ ಎಲ್ಲ ರಾಜಕೀಯ ಮುಖಂಡರು ಹಾಗೂ ಹಾಲಿ, ಮಾಜಿ ಮಂತ್ರಿಗಳು ಅಭ್ಯರ್ಥಿ ಗೆಲ್ಲಿಸುವ ದಾವಂತದಲ್ಲಿದ್ದಾರೆ. ಅಲ್ಲದೇ ಗೆಲುವಿನ ರಣತಂತ್ರ ರೂಪಿಸುತ್ತಿದ್ದಾರೆ. ವಿನಃ ಯಾರಿಗೂ ಕೂಡ ಸ್ಥಳೀಯ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಕೇಂದ್ರ ಸಮಿತಿಯ ಸದಸ್ಯ ವಿಕಾಸ ಸೊಪ್ಪಿನ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಗೋಳ ಉಪಚುನಾವಣೆ ಪ್ರಚಾರದಲ್ಲಿ ರಾಜಕೀಯ ಪಕ್ಷದ ಮುಖಂಡರ ದಂಡು ಕುಂದಗೋಳದತ್ತ ಹರಿದು …

Read More »

ಚಿಕ್ಕನಗೌಡರ ಬೆಂಬಲಿಸಿ ಅಭಿವೃದ್ಧಿಗೆ ಕೈ ಜೋಡಿಸಿ: ಬಾಬುಗೌಡ ಪಾಟೀಲ ..

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಉಪಸಮರದಲ್ಲಿ ಅಭಿವೃದ್ಧಿ ಹರಿಕಾರ, ಭಾರತೀಯ ಜನತಾ ಪಾರ್ಟಿಯ ಜನಪ್ರೀಯ ನಾಯಕ ಎಸ್.ಐ.ಚಿಕ್ಕನಗೌಡರ ಅವರಿಗೆ ಮತ ನೀಡುವ ಮೂಲಕ ಎಸ್.ಐ.ಚಿಕ್ಕನಗೌಡರ ಅವರನ್ನು ಮತ್ತೊಮ್ಮೆ ಕುಂದಗೋಳ ಕ್ಷೇತ್ರದ ಶಾಸಕರನ್ನಾಗಿ‌ ಆಯ್ಕೆ ಮಾಡಬೇಕೆಂದು ಕುಂದಗೋಳ ತಾಲೂಕಿನ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಬಾಬುಗೌಡ ಪಾಟೀಲ ಒತ್ತಾಯಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಗೋಳ ಕ್ಷೇತ್ರಕ್ಕೆ ಅಭಿವೃದ್ಧಿ ಯೋಜನೆಗಳು ಅವಶ್ಯವಾಗಿದ್ದು, ಪೂರಕ ಯೋಜನೆಗಳಿಂದ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ನಾಯಕ ಎಸ್.ಐ.ಚಿಕ್ಕನಗೌಡರ ಅವರಿಗೆ ಕುಂದಗೋಳ …

Read More »

ಬಿಜೆಪಿಯವರು ಕಾಂಗ್ರೆಸನಿಂದ ವೀರಶೈವರನ್ನು ದೂರ ಮಾಡಲು ಷಡ್ಯಂತ್ರ ರೂಪಿಸುತ್ತಿದ್ದಾರೆ: ಬಿ.ಸಿ.ಪಾಟೀಲ

ಹುಬ್ಬಳ್ಳಿ: ಬಿಜೆಪಿಯವರು ಸುಮ್ಮನೆ ಹೇಳಿ ಹೇಳಿ ಕಾಂಗ್ರೆಸ್ ನಿಂದ ವೀರಶೈವರನ್ನು ದೂರು ಮಾಡುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಶಾಸಕ ಬಿ ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ನಗರದಲ್ಲಿಂದು ವೀರಶೈವರು ಕಾಂಗ್ರೆಸ್ ಮತ ಹಾಕಲ್ಲ ಎಂದು ಬಿಎಸ್ ವೈ ಹೇಳಿಕೆಗೆ ತಿರುಗೇಟು ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ 16 ವೀರಶೈವ, ಲಿಂಗಾಯತ ಶಾಸಕರು ಆಯ್ಕೆಯಾಗಿದ್ದೇವೆ. ನಾವು ಅಪ್ಪಟ ಬಸವಣ್ಣನ ಅನುಯಾಯಿಗಳು ಎಂದರು.ಲೋಕಸಭೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ.ನನಗೆ ಅವಕಾಶ …

Read More »

19ರಂದು ದಿ‌ ಸುಜಾತ ಸ್ಕೂಲ್ ಆಫ್ ಭರತನಾಟ್ಯಂ ಆ್ಯಂಡ್ ಕೋರಿಯೋಗ್ರಫಿ ಸಂಸ್ಥೆಯಿಂದ ರಂಗಪ್ರವೇಶ ಕಾರ್ಯಕ್ರಮ

ಹುಬ್ಬಳ್ಳಿ: ದಿ‌ ಸುಜಾತ ಸ್ಕೂಲ್ ಆಫ್ ಭರತನಾಟ್ಯಂ ಆ್ಯಂಡ್ ಕೋರಿಯೋಗ್ರಫಿ ಸಂಸ್ಥೆಯ ವತಿಯಿಂದ ಇದೇ 19ರಂದು ನಗರದ ಸವಾಯಿ ಗಂಧರ್ವ ಹಾಲನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಅನಘಾ ಶಿರಹಟ್ಟಿ ಹಾಗೂ ವಿಶಾರದಾ ಮುಳಗುಂದ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ ಎಂದು ಕರ್ನಾಟಕ ಕಲಾಶ್ರೀ ಸುಜಾತ ರಾಜಗೋಪಾಲ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ನೃತ್ಯ ಪರಂಪರೆಯನ್ನು ಅಭಿವೃದ್ಧಿಗೊಳಿಸುವ‌ ಮೂಲಕ ಹಾಗೂ ಪ್ರತಿಭೆಗಳಿಗೆ ಪೂರಕ ಅಭ್ಯಾಸ, ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. …

Read More »