Breaking News

ಹುಬ್ಬಳ್ಳಿ-ಧಾರವಾಡ

ಚಿಂಚೋಳಿಯಲ್ಲಿ ಬಿಜೆಪಿಗೆ ಗೆಲುವು ಖಚಿತ: ಬಿಎಸ್‌ವೈ..

ಹುಬ್ಬಳ್ಳಿ: ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಚುನಾವಣೆಗಾಗಿ ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ ಎಂದು ಆರೋಪಿಸಿದ ಯಡಿಯೂರಪ್ಪ, ತಾವು ಜನರ ವಿಶ್ವಾಸ ಮತ್ತು ಪ್ರೀತಿ ಗಳಿಸಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ.ಸಮ್ಮಿಶ್ರ ಸರ್ಕಾರದಲ್ಲಿ ಸಚಿವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಗೃಹ ಸಚಿವರ ಒತ್ತಡದಿಂದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಹಿಂಸೆ ನೀಡಲಾಗುತ್ತಿದೆ. ಇದನ್ನು …

Read More »

ಶಿವಳ್ಳಿ ಅವರ ಒಳ್ಳೆಯ ಕೆಲಸಗಳು ಮುಂದುವರಿಯಬೇಕೆಂದರೆ ಅವರ ಪತ್ನಿಗೆ ಮತ ಹಾಕಿ: ಸಿದ್ದರಾಮಯ್ಯ

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಗೆ ಪ್ರತಿಷ್ಠೆಯ ವಿಷಯವಾಗಿದೆ, ಹೀಗಾಗಿ ನೀವೆಲ್ಲರೂ ಕುಸಮ ಶಿವಳ್ಳಿ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನಲೆಯಲ್ಲಿ ಸಂಶಿ ಗ್ರಾಮದಲ್ಲಿ ಇಂದು ಆಯೋಜಿಸಲಾಗಿದ್ದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಳ್ಳಿ ಅವರ ಪರಂಪರೆ ಮುಂದುವರಿಯಬೇಕಾದರೇ ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಮನವಿ ಮಾಡಿದ್ದಾರೆ.ಮೇ 14 ರಿಂದ ನಾಲ್ಕು ದಿನಗಳ ಕಾಲ …

Read More »

ಶಿವಳ್ಳಿ ನೆನೆದು ಕಣ್ಣೀರಿಟ್ಟ ಸಚಿವ ಡಿ.ಕೆ.ಶಿವಕುಮಾರ್​

​ಹುಬ್ಬಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಶಿವಳ್ಳಿ ಪತ್ನಿ, ಕುಸುಮಾ ಶಿವಳ್ಳಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಅದ್ರಂತೆ ಇಂದು ಇಂಗಳಗಿ ಗ್ರಾಮದಲ್ಲಿ ಪ್ರಚಾರ ನಡೆಸ್ತಿದ್ದಾಗ ಸಚಿವ ಡಿ.ಕೆ.ಶಿವಕುಮಾರ್, ಸಿಎಸ್​ ಶಿವಳ್ಳಿಯನ್ನ ನೆನೆದು ಭಾವುಕರಾದರು.ಪ್ರಚಾರದ ವೇಳೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಸಿ.ಎಸ್.ಶಿವಳ್ಳಿ ಜಾತಿ ಧರ್ಮ ಭೇದ ಭಾವ ಮಾಡಿಲ್ಲ. ಆತ ನಿಮಗೆ ಯಾವತ್ತೂ ಕಿರುಕುಳ ನೀಡಿದ್ನಾ ಅಂತಾ ನೀವೇ ಹೇಳಿ. ಪಾಪ ಶಿವಳ್ಳಿ …

Read More »

ಹುಬ್ಬಳ್ಳಿಯಲ್ಲಿ ರತ್ನಮಂಜರಿ ಚಿತ್ರ ತಂಡದಿಂದ ಪತ್ರಿಕಾಗೋಷ್ಠಿ

ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ರತ್ನಮಂಜರಿ ಚಿತ್ರ ತಂಡದಿಂದ ಪತ್ರಿಕಾಗೋಷ್ಠಿ ನಡೆಸಿದ ತಂಡ ಇದೊಂದು ಎನ್ ಆರ್ ಐ ಕನ್ನಡಿಗರೇ ಸೇರಿ ನಿರ್ಮಾಣ ಮಾಡಿದ ಸಸ್ಪೆನ್ಸ್,ಥ್ರಿಲ್ಲರ್,ಕಥಾಹಂದರವನ್ನು ಒಳಗೊಂಡಿರುವ ಚಿತ್ರ ಇದೆ ಮೇ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು..

Read More »

ಪಕ್ಷಗಳು ಒಗ್ಗಟ್ಟಾಗಿರಬೇಕೆಂಬುದು ನಮ್ಮ ಅಪೇಕ್ಷೆ: ಬಿ.ಎಸ್‌ ಯಡಿಯೂರಪ್ಪ

ಹುಬ್ಬಳ್ಳಿ: ಸಮ್ಮಿಶ್ರ ಸರಕಾರವನ್ನ ಅಸ್ಥಿರಗೊಳಿಸುವ ಪ್ರಯತ್ನ ನಾವು ಮಾಡ್ತಿಲ್ಲ. ಮೈತ್ರಿ ಪಕ್ಷಗಳು ಒಗ್ಗಟ್ಟಾಗಿರಬೇಕೆಂಬುದು ನಮ್ಮ ಅಪೇಕ್ಷೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅವರವರಲ್ಲಿ ಬಡಿದಾಡಿದರೆ ನಾವ್ಯಾಕೆ ಜವಾಬ್ದಾರಿ ಆಗ್ತೀವಿ. ನಮಗೆ ಸಂಬಂಧ ಇಲ್ಲದ ವಿಷಯ ಅದು. ಉಪಚುನಾವಣೆಯಲ್ಲಿ ನಾವೇ ಗೆಲ್ತೇವೆ ಎಂದು ಬಿಎಸ್‌ವೈ ಹೇಳಿದರು. ಕ್ಷೇತ್ರದಲ್ಲಿ ಜನ ಬೆಂಬಲ ಇದೆ. ಹಣದ ಬಲ, ತೋಳ್ಬಲ ಇಲ್ಲಿ ನಡೆಯಲ್ಲ. ಯಾವ ವೇಣುಗೋಪಾಲ್ ಬಂದ್ರೂ ಏನೂ …

Read More »

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರೆ: ಜಮೀರ್ ಅಹ್ಮದ್

ಹುಬ್ಬಳ್ಳಿ: ಕುಮಾರಸ್ವಾಮಿಯೇ ಐದು ವರ್ಷ ಸಿಎಂ ಆಗ್ತಾರೆ. 2022ಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರೆ. ಅವರನ್ನ ನಾವು ಸಿಎಂ ‌ಮಾಡುತ್ತೆೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಅಂದರೂ ಸಿದ್ದರಾಮಯ್ಯ ಅವರನ್ನು ನಾವು ಕರೆದುಕೊಂಡು ಬಂದು ಸಿಎಂ ಮಾಡುತ್ತೆೇವೆ ಎಂದರು.ನಮ್ಮ ಜೊತೆಯೂ ಬಿಜೆಪಿಯ ಹತ್ತು ಜನ ಶಾಸಕರು ಸಂರ್ಪಕದಲ್ಲಿದ್ದಾರೆ. ಅವರ ಸಂರ್ಪಕದಲ್ಲಿ 20 ಜನ ಇದ್ರೆ, ನಮ್ಮ ಜೊತೆನೂ …

Read More »

19ಕ್ಕೆ ಉಪ್ಪಾರ ಸಮಾಜದ ವಧು-ವರರ ಸಮಾವೇಶ ಹಾಗೂ ನೂತನ ವೆಬ್ ಸೈಟ್ ಉದ್ಘಾಟನೆ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘದ ವತಿಯಿಂದ ರಾಜ್ಯ ಮಟ್ಟದ ವಧು-ವರರ ಬೃಹತ್ ಸಮಾವೇಶವನ್ನು ಇದೇ 19ರಂದು ನಗರದ ನೆಹರು ಸ್ಟೇಡಿಯಂ ಹತ್ತಿರದ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮುಖಂಡರಾದ ಲೋಕೇಶ್ ಕಮ್ಮಾರ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ್ಪಾರ ಸೇವಾ ಸಂಘದಿಂದ ಪ್ರಥಮ ಬಾರಿಗೆ ವಧು-ವರರ ಹಾಗೂ ಪಾಲಕರ ಮುಖಾಮುಖಿ ಸಮಾವೇಶವನ್ನು ಆಯೋಜಿಸಲಾಗಿದ್ದು, ರಾಜ್ಯದ ಉಪ್ಪಾರ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ …

Read More »

ಎಟಿಎಂದಲ್ಲಿ ಹಣ ಡ್ರಾ ಮಾಡುವ ಹಿನ್ನೆಲೆಯಲ್ಲಿ ವ್ಯಕ್ತಿಗಳಿಬ್ಬರ ಹೊಡೆದಾಟ

ಹುಬ್ಬಳ್ಳಿ: ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಸಂಬಂಧಿಸಿದಂತೆ ವ್ಯಕ್ತಿಗಳಿಬ್ಬರು ಪರಸ್ಪರ ಹೊಡೆದಾಡುತ್ತಿರುವ ಘಟನೆ ನಗರದ ಚನ್ನಮ್ಮ ವೃತ್ತದ ಬಳಿ ಇರುವ ಎಕ್ಸಿಸ್ ಬ್ಯಾಂಕ್ ಏಟಿಎಂ ಬಳಿ ಇಂದು ಮಧ್ಯಾಹ್ನ ನಡೆದಿದೆ.ಎಟಿಎಂನಿಂದ ಹಣ ಡ್ರಾಮಾಡಲು ಸರದಿಯಲ್ಲಿ ನಿಲ್ಲುವ ಕುರಿತಂತೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಬಳಿಕ ಇಬ್ಬರಲ್ಲಿ ಪರಸ್ಪರ ಹೊಡೆದಾಟ ನಡೆದಿದೆ. ಸರದಿ ಸಾಲಿನಲ್ಲಿ ನಿಲ್ಲುವ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.‌ ಎಟಿಎಂನಲ್ಲಿ ವ್ಯವಸ್ಥಿತ ಭದ್ರತೆ ಹಾಗೂ …

Read More »

ಬಿ ಎಚ್ ಕೆ ಫಿಶ್ ಮಾಲ ಮಾಲೀಕ ಇರ್ಷಾದ ಕುಸುಗಲ್ ನೇತೃತ್ವದಲ್ಲಿ ರಂಜಾನ ತಿಂಗಳದ ಪ್ರತಿದಿನ ಇಪ್ತಿಯಾರ್ ಕೂಟ.

ಹುಬ್ಬಳ್ಳಿ: ಇಸ್ಲಾಂ ಧರ್ಮದ ಪವಿತ್ರ ರೋಜಾ ಆಚರಣೆಯ ಮೂಲಕ ಧಾರ್ಮಿಕ ಪರಂಪರೆಯನ್ನು ವೃದ್ಧಿಸುವ ಹಿನ್ನೆಲೆಯಲ್ಲಿ ಬಿಎಚ್ ಕೆ ಫಿಶ್ ಮಾಲ್ ಮಾಲೀಕರಾದ ಇರ್ಷಾದ ಕುಸುಗಲ ಅವರು ಸುಮಾರು ಏಳು ನೂರು ರೋಜಾ ಆಚರಿಸುವ ಬಡ ಜನರಿಗೆ ಇಪ್ತಿಯಾರ್ ಕೂಟವನ್ನು ಎರಡು ವರ್ಷದಿಂದ ಆಚರಿಸುವ ಮೂಲಕ ರಂಜಾನ ತಿಂಗಳಲ್ಲಿ ಪ್ರತಿದಿನ ಸಂಜೆ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಶಾನ್ ರಾಯಭಾಗ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿ ಹೊರಡಿಸಿ ಮಾತನಾಡಿದ ಅವರು, ಮುಸಲ್ಮಾನರ ಪವಿತ್ರ ಹಬ್ಬವಾದ …

Read More »

ಆಚರಿಸದಂತೆ ಸಚಿವ ಡಿ.ಕೆ ಶಿವಕುಮಾರ್​ ಮನವಿ

ಹುಟ್ಟುಹಬ್ಬ ಆಚರಿಸದಂತೆ ಅಭಿಮಾನಿಗಳಿಗೆ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್​ ಮನವಿ ಮಾಡಿದ್ದಾರೆ. ಮೇ 15ರ ಬುಧವಾರ ಡಿ.ಕೆ ಶಿವಕುಮಾರ್ ಅವರ 58 ನೇ ಜನ್ಮದಿನ. ಈ ಹಿನ್ನೆಲೆ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್​ ಕರ್ಯಕರ್ತರು ಹುಟ್ಟು ಹಬ್ಬ ಆಚರಣೆಗೆ ಮುಂದಾಗಿದ್ರು. ಆದ್ರೆ, ರಾಜ್ಯದಲ್ಲಿ ಬರಗಾಲ ಇರುವ ಹಿನ್ನೆಲೆಯಲ್ಲಿ ಯಾರೂ ಕೂಡಾ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಬಾರದು ಅಂತಾ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಅಲ್ಲದೇ ಶಿವಕುಮಾರ್​ ಸದ್ಯ, ಕುಂದಗೋಳ …

Read More »